ಅಭಿಮಾನಿಗಳ ಆರಾಧ್ಯ ದೈವವನ್ನು ಮರಳಿ ಕರೆತಂದ ಟೈಮ್ ಮೆಷಿನ್!; ಪುನೀತ್ ರಾಜ್‌ಕುಮಾರ್ ಕಂಡು ಕಣ್ಣೀರಾದ ಆಂಕರ್ ಅನುಶ್ರೀ
Jul 25, 2024 06:21 AM IST
ಅಭಿಮಾನಿಗಳ ಆರಾಧ್ಯ ದೈವವನ್ನು ಮರಳಿ ಕರೆತಂದ ಟೈಮ್ ಮೆಷಿನ್!; ಪುನೀತ್ ರಾಜ್‌ಕುಮಾರ್ ಕಂಡು ಕಣ್ಣೀರಾದ ಆಂಕರ್ ಅನುಶ್ರೀ
- ಕಾಮಿಡಿ ಕಿಲಾಡಿಗಳು ಶೋನಲ್ಲಿ "ಏ ಬುಜ್ಜಿ 2021ಕ್ಕೆ ಹೋಗು" ಎಂದು ಟೈಮ್ ಮಷಿನ್‌ಗೆ ಹೇಳಿದ್ದಾರೆ ಜಗಪ್ಪ. ಅಷ್ಟೊತ್ತಿಗೆ ಕಾಲಚಕ್ರ ಹಿಂದೆ ಉರುಳಿದೆ. ತೀರ್ಪುಗಾರರು ಒಂದು ಕ್ಷಣ ಅಚ್ಚರಿಯಾಗಿದ್ದಾರೆ. ಅದರಲ್ಲೂ ಆಂಕರ್ ಅನುಶ್ರೀ ಏನ್ ಆಗ್ತಿದೆ ಅಂತ ದಿಟ್ಟಿಸಿ ನೋಡುತ್ತಿದ್ದಾರೆ. ಕತ್ತಲಾಗಿದೆ.. ಮಿನುಗು ಬೆಳಕಿನಲ್ಲಿ ಪುನೀತ್ ರಾಜ್‌ಕುಮಾರ್ ಎಂಟ್ರಿಯಾಗಿದೆ!
Comedy Khiladigalu Premier League: ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ (Puneeth Rajkumar) ಇಲ್ಲವಾಗಿ ವರ್ಷಗಳು ಉರುಳಿದವು. ಆದರೆ, ಇಂದಿಗೂ ಅವರಿಲ್ಲ ಅನ್ನೋ ಸಣ್ಣ ಭಾವ ಯಾರಲ್ಲೂ ಮೂಡುವುದಿಲ್ಲ. ಅವರು ನಟಿಸಿದ ಸಿನಿಮಾ, ಹಾಡಿದ ಹಾಡುಗಳು ಇಂದಿಗೂ ಜನಮಾನಸದಲ್ಲಿ ಹಚ್ಚ ಹಸಿರಾಗಿವೆ. ಸೋಷಿಯಲ್ ಮೀಡಿಯಾದಲ್ಲಂತೂ ಅವರ ಫ್ಯಾನ್ಸ್ ಇಂದಿಗೂ ಅವರ ಕುರಿತ ಬಗೆ ಬಗೆ ಪೋಸ್ಟ್ ಹಂಚಿಕೊಳ್ಳುತ್ತಲೇ ಇರುತ್ತಾರೆ. ಪ್ರತಿ ಸಿನಿಮಾ ಶುರುವಾಗುವುದಕ್ಕೂ ಮುನ್ನ, ಅಪ್ಪುಗೆ ನಮನ ಸಲ್ಲಿಸುವ ಕಾಯಕವೂ ಮುಂದುವರಿದಿದೆ. ರಿಯಾಲಿಟಿ ಶೋಗಳಲ್ಲಿಯೂ ಅವರನ್ನು ಆಗಾಗ ನೆನಪಿಸುವ ಕಾರ್ಯಗಳು ನಡೆಯುತ್ತಲಿವೆ. ಇದೀಗ ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್‌ಗೆ ಬಂದಿದ್ದಾರೆ ಅಪ್ಪು!
ಕಾಮಿಡಿ ಶೋಗೆ ಬಂದ ಅಪ್ಪು
ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ಶೋನ ಸಣ್ಣ ಪ್ರೋಮೋವೊಂದನ್ನು ಜೀ ಕನ್ನಡ ಬಿಡುಗಡೆ ಮಾಡಿದೆ. ಅದರಲ್ಲಿ ಜಗಪ್ಪ ಮತ್ತವರ ತಂಡ ಸ್ಕಿಟ್ ಮಾಡುತ್ತಿದೆ. ಟೈಮ್ ಮಷಿನ್ ಇಟ್ಕೊಂಡು ಎಲ್ಲರನ್ನು ನಗಿಸುವ ಕೆಲಸ ಮಾಡುತ್ತಿದ್ದಾರೆ. ಹೀಗಿರುವಾಗಲೇ "ಏ ಬುಜ್ಜಿ 2021ಕ್ಕೆ ಹೋಗು" ಎಂದು ಟೈಮ್ ಮಷಿನ್‌ಗೆ ಹೇಳಿದ್ದಾರೆ ಜಗಪ್ಪ. ಅಷ್ಟೊತ್ತಿಗೆ ಕಾಲಚಕ್ರ ಹಿಂದೆ ಉರುಳಿದೆ. ತೀರ್ಪುಗಾರರು ಒಂದು ಕ್ಷಣ ಅಚ್ಚರಿಯಾಗಿದ್ದಾರೆ. ಅದರಲ್ಲೂ ಆಂಕರ್ ಅನುಶ್ರೀ ಏನ್ ಆಗ್ತಿದೆ ಅಂತ ದಿಟ್ಟಿಸಿ ನೋಡುತ್ತಿದ್ದಾರೆ. ಕತ್ತಲಾಗಿದೆ. ಮಿನುಗು ಬೆಳಕಿನಲ್ಲಿ ಪುನೀತ್ ರಾಜ್‌ಕುಮಾರ್ ಎಂಟ್ರಿಯಾಗಿದೆ!
ಪುನೀತ್ ರಾಜ್‌ಕುಮಾರ್ ಅವರನ್ನೇ ಹೋಲುವ ವ್ಯಕ್ತಿಯೊಬ್ಬರು ಸೂಟು ಬೂಟು ಹಾಕಿಕೊಂಡು ವೇದಿಕೆ ಮೇಲೆ ಆಗಮಿಸಿದ್ದಾರೆ. "ನಿನ್ನ ಕಂಗಳ ಬಿಸಿಯ ಹನಿಗಳು ನೂರು ಕಥೆಯ ಹೇಳಿವೆ .." ಎಂಬ ಅವರ ಧ್ವನಿಯಲ್ಲಿದ್ದ ಹಾಡು ಹಿನ್ನೆಲೆಯಲ್ಲಿ ಪ್ಲೇ ಆಗಿದೆ. ತರುಣ್ ಸುಧೀರ್ ಎದ್ದು ನಿಂತರೆ, ಅನುಶ್ರೀ ಕಣ್ಣಲ್ಲಿ ನೀರು ತುಂಬಿಕೊಂಡಿದೆ. ಕುರಿ ಪ್ರತಾಪ್ ಕಣ್ಣಿಗೆ ಹಾಕಿದ ಚಾಳೀಸು ತೆಗೆದು ಒಂದು ಕ್ಷಣ ಸ್ಟನ್ ಆಗಿದ್ದಾನೆ. ಕಾಮಿಡಿ ಕಿಲಾಡಿ ನಯನಾ ಅಳಲು ಆರಂಭಿಸಿದ್ದಾರೆ. ಕಾಮಿಡಿ ಶೋಕ್ಕೆ ಪುನೀತ್ ಆಗಮನವಾಗುತ್ತಿದ್ದಂತೆ, ಎಲ್ಲರೂ ನಗುವುದ ಬಿಟ್ಟು ಅಕ್ಷರಶಃ ಕಣ್ಣೀರಾಗಿದ್ದಾರೆ.
ಜ್ಯೂನಿಯರ್ ಪುನೀತ್ ರಾಜ್‌ಕುಮಾರ್ ಥೇಟ್ ಅಪ್ಪು ರೀತಿಯ ಬಾಡಿ ಲ್ಯಾಂಗ್ವೆಜ್‌ನಿಂದಲೇ ನೋಡುಗರ ಗಮ,ನ ಸೆಳೆದರು. ಸೇಮ್ ಅಪ್ಪು ಅವರ ಆಂಗಿಕ ಶೈಲಿಯನ್ನೇ ಅನುಸರಿಸಿದರು. ಅದ್ಯಾವ ಮಟ್ಟಿಗೆ ಇತ್ತು ಎಂದರೆ, ಮತ್ತೆ ಪುನೀತ್ ಬಂದ್ರಾ ಅನ್ನೋ ರೀತಿಯಲ್ಲಿತ್ತು. ಸ್ಕಿಟ್ ಮುಂದುವರಿಸಿದ ಜಗಪ್ಪ, ನಿಮ್ಮನ್ನ ನೋಡಿ ಬಹಳ ಖುಷಿಯಾಯ್ತು ಸರ್, ಅಪ್ಪು ಸಿನಿಮಾದಿಂದ ಹಿಡಿದು ಎಲ್ಲ ಸಿನಿಮಾ ನೋಡಿದ್ದೀನಿ ಸರ್, ನಿಮ್ಮ ಒಂದೇ ಒಂದು ಫೋಟೋ ಇಲ್ಲ ಸರ್ ಎಂದಿದ್ದಾರೆ. "ಜಗ್ಗ ಅವರೇ ಮೊದಲು ನೀವು ಅಳೋದನ್ನ ನಿಲ್ಲಿಸ್ತೀರಾ?" ಎಂಬ ಪುನೀತ್ ಧ್ವನಿ ಹೊರಬೀಳುತ್ತಿದ್ದಂತೆ, ಮತ್ತೆ ಎಲ್ಲರೂ ಕಣ್ಣೀರಾಗಿದ್ದಾರೆ.
ಆಂಕರ್ ಅನುಶ್ರೀ ಕಣ್ಣೀರು
ಜೀವನದಲ್ಲಿ ಯಾವತ್ತೂ ನಗ್ ನಗ್ತಾ ಇರಬೇಕ್ರಿ. ಯಾಕಂದ್ರ ನೀವು ನಕ್ಕರೆ ಅಲ್ವಾ ಪೋಟೋದಲ್ಲಿ ಚೆನ್ನಾಗಿ ಬರ್ತೀರಾ ತಗೋಳಿ ಅನ್ನೋ ಡೈಲಾಗ್ ಬಂದಿದೆ. ಅದಾದ ಬಳಿಕ ಅಚ್ಚಕನ್ನಡದ ಕೂಸು ಅಣ್ಣಾ ಬಾಂಡ್ ಹಾಡಿಗೆ ಜೂನಿಯರ್ ಪುನೀತ್ ರಾಜ್‌ಕುಮಾರ್ ಡಾನ್ಸ್ ಮಾಡಿ ಎಲ್ಲರನ್ನು ರಂಜಿಸಿದ್ದಾರೆ. ಪ್ರತಿಯೊಬ್ಬರು ಇಲ್ಲಿ ಹುಟ್ಟೋದೆ ದೇವರಾಗೋಕೆ, ಆದರೆ ಎಲ್ಲರೂ ದೇವರಾಗಲ್ಲ. ಒಬ್ಬ ಪುನೀತ್ ರಾಜ್‌ಕುಮಾರ್ ಮಾತ್ರ ದೇವರಾಗ್ತಾರೆ ಎಂದು ಅನುಶ್ರೀ ವೇದಿಕೆ ಮೇಲೆ ಬಂದು ಕಣ್ಣೀರಾಗಿದ್ದಾರೆ.
ಮತ್ತೆ ಪುನೀತ್ ನೋಡಿ ನೆಟ್ಟಿಗರ ಕಂಬನಿ...
- ಮರೆಯಾದರು ಮರೆಯಲಾಗದ ಮಿನುಗುವ ಮಾಣಿಕ್ಯ ಅಪ್ಪು
- ಅನುಶ್ರೀ ಅವರು ಒಂದು ಅತ್ಯುತ್ತಮ ಸೆಲೆಬ್ರಿಟಿ ಆಗಿದ್ದರೂ ಕೂಡ ಪುನೀತ್ ರಾಜಕುಮಾರ್ ಅವರ ಅಪ್ಪಟ ಅಭಿಮಾನಿ ಅಂತ ಹೇಳಿ ಯಾವಾಗಲೂ ಅವರ ಮನಸ್ಸು ಹೇಳ್ತಾನೆ ಇರುತ್ತೆ
- ದೇವರೆ ಇದು ಒಂದು ಬಾರಿ ನಿಜ ಆಗಿ ಬಿಡಲಿ ದೇವರೆ
- ಊಟ ಮಾಡ್ತಿದ್ದೆ ಕಣ್ರೋ ಅಳ್ಸ್ಬಿಟ್ರಲೋ
- ಕಣ್ಣಲ್ಲಿ ನೀರು ತುಂಬಿಕೊಂಡಿತು ಗುರೂ
- ಪರಮಾತ್ಮ ಮತ್ತೆ ಧರೆಗಿಳಿದ ಪುನೀತ ಅನುಭವ...
- ಅಪ್ಪು ಕೇವಲ ಹೆಸರಲ್ಲ, ನಿನ್ನ ನೆನೆಯದ ಕ್ಷಣವಿಲ್ಲ, ಅಷ್ಟೇ ಏಕೆ ನಿನ್ನ ನೆನೆಯದವರೂ ಇಲ್ಲ, ನಗುವಿನ ಒಡೆಯ ನಿನ್ನ ನೆನೆಯದೆ ದಿನವೂ ಸಾಗುವುದಿಲ್ಲ
- ನೆನಪಿನ ಶಕ್ತಿ ಇಲ್ಲದಿರೋ ಮನುಷ್ಯ ಕೂಡ ಜ್ಞಾಪಕ ಇಟ್ಕೋಬೇಕಾದ ವ್ಯಕ್ತಿ ಮತ್ತು ವ್ಯಕ್ತಿತ್ವ