ಸುಬ್ಬು ಮನೆಯಲ್ಲಿ ವಿಜಯಾಂಬಿಕಾ ದರ್ಪಕ್ಕೆ ಪೆಟ್ಟು, ಶ್ರಾವಣಿ ಹುಟ್ಟಿನ ಗುಟ್ಟು ಬಯಲಾಗೋದು ಯಾವಾಗ? ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ
Jul 10, 2024 08:50 AM IST
ಸುಬ್ಬು ಮನೆಯಲ್ಲಿ ವಿಜಯಾಂಬಿಕಾ ದರ್ಪಕ್ಕೆ ಪೆಟ್ಟು, ಶ್ರಾವಣಿ ಹುಟ್ಟಿನ ಗುಟ್ಟು ಬಯಲಾಗೋದು ಯಾವಾಗ? ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ
- Shravani Subramanya Kannada Serial Today Episode July 9th: ʼಶ್ರಾವಣಿ ಸುಬ್ರಹ್ಮಣ್ಯʼ ಧಾರಾವಾಹಿಯ ಮಂಗಳವಾರದ ಎಪಿಸೋಡ್‌ನಲ್ಲಿ ಸುಬ್ಬು ಮನೆಯಲ್ಲಿ ಊಟ ಮಾಡಿದ ವೀರೇಂದ್ರ ಕುಟುಂಬ. ಮನೆಯವರಿಗೆಲ್ಲಾ ಬಡಿಸಿ, ಸುಬ್ಬು ಕಾಲು ತೊಳೆದ ವಿಜಯಾಂಬಿಕಾ. ಶ್ರಾವಣಿ ಜನ್ಮರಹಸ್ಯ ಎಂದಿಗೂ ಗುಟ್ಟಾಗಿಯೇ ಇರಲಿ ಎಂದು ಪದ್ಮನಾಭ ಬಳಿ ಹೇಳಿದ್ರು ವೀರೇಂದ್ರ.
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ನಿನ್ನೆಯ (ಜುಲೈ 9) ಸಂಚಿಕೆಯಲ್ಲಿ ವೀರೇಂದ್ರ ಹಾಗೂ ಕುಟುಂಬದವರು ಸುಬ್ಬು ಮನೆಯಲ್ಲಿ ಕುಳಿತು ಮಾತನಾಡುತ್ತಿರುವಾಗ ವಿಜಯಾಂಬಿಕಾ ತಟ್ಟೆಯಲ್ಲಿ ತುಂಬಿದ್ದ ತಿಂಡಿ ನೋಡಿ ಸುಬ್ಬು ಅಕ್ಕನ ಮಗಳು ಐಶುಗೆ ಆಸೆಯಾಗುತ್ತದೆ. ಸ್ವಲ್ಪ ನೋಡುವ ಆಕೆ ವಿಜಯಾಂಬಿಕಾ ಬಳಿಗೆ ಹೋಗಿ ʼನೀವೇನೂ ತಿಂದೇ ಇಲ್ಲʼ ಎಂದು ಪ್ರಶ್ನೆ ಮಾಡುತ್ತಾಳೆ. ಆಗ ವಿಜಯಾಂಬಿಕಾ ʼನಂಗೇನೂ ಬೇಡʼ ಎಂದು ದರ್ಪದಲ್ಲಿ ಹೇಳುತ್ತಾಳೆ. ಆಗ ಐಶು ʼಹಾಗಾದ್ರೆ ನಾನ್ ತಿನ್ಲಾʼ ಎಂದು ಮುಗ್ಧವಾಗಿ ಕೇಳುತ್ತಾಳೆ. ಇದ್ರಿಂದ ಮನೆಯವರೆಲ್ಲಾ ಮುಜುಗರಕ್ಕೆ ಒಳಗಾದ್ರೆ ವೀರೇಂದ್ರ, ಸುರೇಂದ್ರ ಧಾರಾಳವಾಗಿ ತಿನ್ನು ಎನ್ನುತ್ತಾರೆ. ಮಾತ್ರವಲ್ಲ ಸುರೇಂದ್ರ ಒಂದು ಸ್ವೀಟ್ ಎತ್ತಿ ಐಶುಗೆ ಕೊಡ್ತಾರೆ. ಆಗ ವೀರೇಂದ್ರ ʼಇವಳು ಯಾರ ಮಗಳುʼ ಎಂದು ಮನೆಯವರ ಬಳಿ ಕೇಳ್ತಾರೆ. ಅದಕ್ಕೆ ಸುಬ್ಬು ತಾಯಿ ವಿಶಾಲಾಕ್ಷಿ ʼಇವಳು ನನ್ನ ದೊಡ್ಡ ಮಗಳು ಧನಲಕ್ಷ್ಮೀ ಮಗಳು. ಇವರ ಅಪ್ಪ, ಅಜ್ಜಿ ಎಲ್ಲಾ ಇಲ್ಲೇ ಇದ್ದಾರೆʼ ಹೇಳುತ್ತಾರೆ. ಅವರು ಹಾಗೆ ಹೇಳಿದ್ದೇ ತಡ ʼಹೌದಾ, ಹಾಗಾದ್ರೆ ಅವರೆಲ್ಲಾ ಎಲ್ಲಿ?ʼ ಎಂದು ಪ್ರಶ್ನೆ ಮಾಡ್ತಾರೆ ವೀರೇಂದ್ರ. ʼಅವರು ಒಳಗಿದ್ದಾರೆ, ಇರಿ ಕರೆದು ಬರ್ತೀನಿʼ ಎಂದು ಹೊರಡುತ್ತಾರೆ ವಿಶಾಲಾಕ್ಷಿ. ಆಗ ಶ್ರಾವಣಿ ʼಬೇಡ ಅಮ್ಮ ನಾನೇ ಹೋಗ್ತೀನಿ, ನಾನೇ ಕರ್ಕೊಂಡು ಬರ್ತೀನಿʼ ಎಂದು ಅಡುಗೆಮನೆ ಒಳಗೆ ಹೋಗುತ್ತಾಳೆ.
ಕಾಂತಮ್ಮ, ಸುಂದರ್‌ಗೆ ಚಳಿ ಬಿಡಿಸುವ ಶ್ರಾವಣಿ
ಅಡುಗೆಮನೆಯಲ್ಲಿ ಕಂಬಳಿ ಹೊದ್ದು ಕುಳಿತಿರುವ ಕಾಂತಮ್ಮ ಹಾಗೂ ಸುಂದರ್ ಬಳಿ ಹೋಗುವ ಶ್ರಾವಣಿ ʼಇದ್ಯಾಕೆ ಹೀಗೆ ಕಂಬಳಿ ಹೊದ್ದು ಕುಳಿತಿದ್ದೀರಾ, ಅದು ಅಡುಗೆಮನೆಯಲ್ಲಿʼ ಎಂದು ಪ್ರಶ್ನೆ ಮಾಡುತ್ತಾಳೆ. ಅದಕ್ಕೆ ಬೆಬ್ಬೆಬ್ಬೆ ಎನ್ನುವ ಕಾಂತಮ್ಮ ʼಚಳಿ, ಚಳಿ ಆಗ್ತಾ ಇತ್ತು ಅದಕ್ಕೆ ಕಂಬಳಿ ಹೊದ್ದು ಕೂತಿದ್ದುʼ ಎಂದು ಹೇಳಿ ತಪ್ಪಿಸಿಕೊಳ್ಳಲು ನೋಡ್ತಾರೆ. ಆಗ ಶ್ರಾವಣಿ ಕಾಂತಮ್ಮಳ ಬಳಿ ʼನನ್ನ ಚಿಟಿಕೆ ಪವರ್ ಏನು ಅಂತ ಗೊತ್ತಾಯ್ತು ಅಲ್ವಾ, ಇನ್ನೇನಾದ್ರೂ ನೀವು ಸುಬ್ಬುಗೆ, ಈ ಮನೆಯವರಿಗೆ ಏನಾದ್ರೂ ತೊಂದರೆ ಮಾಡಿದ್ರೆ ಆ ಕಥೆನೇ ಬೇರೆ ಆಗುತ್ತೆʼ ಎಂದು ವಾರ್ನಿಂಗ್ ಕೊಡುತ್ತಾಳೆ. ಕಳೆದ ಬಾರಿ ಬಂದಾಗ ಶ್ರಾವಣಿ ಕೊಟ್ಟ ಏಟು ನೆನಪಿಸಿಕೊಳ್ಳುವ ಸುಂದರ ʼಮೇಡಂ, ನಾನು ನನ್ನ ಅಮ್ಮನಂಗೆ ಬುದ್ಧಿ ಹೇಳ್ತೀನಿ. ಕೇಳಿಲ್ಲ ಅಂದ್ರೆ ಬೈದು ಹೇಳ್ತೀನಿ ಎಂದು ಶ್ರಾವಣಿಯನ್ನು ಒಲಿಸಿಕೊಳ್ಳಲು ನೋಡುತ್ತಾನೆ. ಆದರೆ ಇದ್ರಿಂದ ಇನ್ನಷ್ಟು ಕೋಪಗೊಳ್ಳುವ ಶ್ರಾವಣಿ ʼಅಮ್ಮಂಗೆ ಬೈಯ್ತಿಯಾ, ಅಮ್ಮ ಅಂದ್ರೆ ದೇವರು. ಜಗತ್ತಲ್ಲಿ ತಾಯಿಗಿಂತ ದೊಡ್ಡ ದೇವರು ಯಾರೂ ಇಲ್ಲ. ಅಮ್ಮನ ಪ್ರೀತಿ ಏನು ಎನ್ನುವುದು ಅಮ್ಮ ಇಲ್ಲದವರಿಗಷ್ಟೇ ಗೊತ್ತು. ಇನ್ನೊಮ್ಮೆ ಅಮ್ಮನಿಗೆ ನಿನ್ನನ್ನು ಜೈಲಿಗೆ ಕಳುಹಿಸುತ್ತೇನೆʼ ಎಂದು ಬೈದು ಬುದ್ಧಿ ಹೇಳುತ್ತಾಳೆ. ಸುಬ್ಬು ಮನೆಯವರಿಗೆ ನಿಮ್ಮಿಂದ ಇನ್ನು ಯಾವುದೇ ತೊಂದರೆ ಬರಬಾರದು ಎಂದು ಹೇಳುವ ಕಡಕ್ ಆಗಿ ಹೇಳುವ ಶ್ರಾವಣಿ ಅವರನ್ನು ಹಾಲ್‌ಗೆ ಕರೆದುಕೊಂಡು ಬರುತ್ತಾಳೆ.
ಸುಬ್ಬು ಮನೆಯಲ್ಲಿ ಊಟ ಬಡಿಸಿ, ಕಾಲು ತೊಳೆದ ವಿಜಯಾಂಬಿಕಾ
ಸುಬ್ಬು ಹಾಗೂ ಅವರ ಮನೆಯವರನ್ನು ಸದಾ ಅವಮಾನ ಮಾಡಿ, ದರ್ಪದಲ್ಲಿ ಮೆರೆಯುತ್ತಿದ್ದ ವಿಜಯಾಂಬಿಕಾ ಅಹಂಕಾರಕ್ಕೆ ಸುಬ್ಬು ಮನೆಯಲ್ಲಿ ಸರಿಯಾಗಿಯೇ ಪೆಟ್ಟು ಬೀಳುತ್ತದೆ. ನಮ್ಮ ಮನೆಯಲ್ಲಿ ಊಟ ಮಾಡಿಕೊಂಡೇ ಹೋಗಬೇಕು ಎಂದು ಹೇಳುವ ಸುಬ್ಬು ಮನೆಯವರ ಮಾತು ತೆಗೆದು ಹಾಕದ ವೀರೇಂದ್ರ ಊಟಕ್ಕೆ ಕುಳಿತುಕೊಳ್ಳುತ್ತಾರೆ. ವಿಜಯಾಂಬಿಕಾ ಕೂಡ ಊಟಕ್ಕೆ ಕುಳಿತುಕೊಳ್ಳಲು ಬಂದಾಗ ʼಅಕ್ಕ ಇವರ ಮನೆಯವರೆಲ್ಲಾ ಖುಷಿ ಖುಷಿಯಾಗಿ ಊಟ ಬಡಿಸುವುದು ನೋಡಿ ನಿನಗೆ ಹಿಂದಿದ್ದೆಲ್ಲಾ ನೆನಪಾಗಿರಬೇಕು ಅಲ್ವಾ, ನಂಗೊತ್ತು ನಿಂಗೆಲ್ಲಾ ನೆನಪಾಗಿರುತ್ತೆ. ನೀವು ಅವರ ಜೊತೆ ಸೇರಿ ಊಟ ಬಡಿಸು ಅಕ್ಕಾ, ಇದ್ರಿಂದ ನಿಂಗೆ ಖುಷಿ ಸಿಗುತ್ತೆ ಅಂತ ನಂಗೊತ್ತು ಅಂತಾರೆ ವೀರೇಂದ್ರ. ಇದ್ರಿಂದ ಶಾಕ್ ಆದ್ರೂ ದಿಕ್ಕೇ ತೋಚದ ವಿಜಯಾಂಬಿಕಾ ಊಟ ಬಡಿಸಲು ನಿಲ್ಲುತ್ತಾಳೆ. ಸುಬ್ಬ, ಶ್ರಾವಣಿ, ಪದ್ಮನಾಭ ಒಂದು ಕಡೆ ಊಟಕ್ಕೆ ಕೂತ್ರೆ, ಅವರಿಗೆ ಎದುರಾಗಿ ವೀರೇಂದ್ರ, ಸುರೇಂದ್ರ ಮಧ್ಯದಲ್ಲಿ ಶ್ರೀವಲ್ಲಿ ಊಟಕ್ಕೆ ಕೂರುತ್ತಾರೆ. ಶ್ರೀವಲ್ಲಿ ಅಪ್ಪನ ಪಕ್ಕ ಕೂತಿದ್ದಕ್ಕೆ ಮೊದಲೇ ಉರಿದುಕೊಂಡಿದ್ದ ಶ್ರಾವಣಿ ಇನ್ನಷ್ಟು ಉರಿದುಕೊಳ್ಳುತ್ತಾಳೆ. ಸುಬ್ಬುಗೆ ಇವರನ್ನು ನೋಡಿ ನಗು ಬಂದು ಮನಸ್ಸಿನಲ್ಲೇ ನಗುತ್ತಿರುತ್ತಾನೆ.
ಊಟ ಬಿಡಿಸುವ ವಿಜಯಾಂಬಿಕಾಗೆ ತಾನು ಸುಬ್ಬು ತಂದೆ ಹಾಗೂ ಮನೆಯವರಿಗೆ ಅವಮಾನ ಮಾಡಿದ್ದು, ಸುಬ್ಬು ಬಳಿ ಚಪ್ಪಲಿ ತೊಳೆಸಿದ್ದು ಎಲ್ಲವೂ ನೆನಪಾಗುತ್ತದೆ. ಇದೇ ಸಿಟ್ಟಿನಲ್ಲಿ ಸುಬ್ಬು ಸಾರು ಬಡಿಸುವಾಗ ಕೈತಪ್ಪಿ ಸುಬ್ಬು ಕಾಲಿನ ಮೇಲೆ ಸಾರು ಚೆಲ್ಲುತ್ತಾಳೆ. ಇದನ್ನ ಗಮನಿಸಿದ ವೀರೇಂದ್ರ ʼಏನಕ್ಕ ನೋಡ್ಕೊಂಡು ಬಿಡಿಸೋದು ಅಲ್ವಾ?ʼ ಅಂತಾರೆ. ಅದಕ್ಕೆ ಸುಬ್ಬು ಪರ್ವಾಗಿಲ್ಲ ಬಿಡಿ ಯಜಮಾನ್ರೆ, ನಾನು ಹೋಗು ತೊಳ್ಕೊಂಡ್ ಬರ್ತೀನಿ ಅಂತಾನೆ. ಆಗ ವೀರೇಂದ್ರ ಅಕ್ಕಾ ನೀನು ಹೋಗು ಸುಬ್ಬುಗೆ ಹೆಲ್ಪ್ ಮಾಡು ಎಂದು ಕಳುಹಿಸುತ್ತಾನೆ. ಇದರಿಂದ ವಿಜಯಾಂಬಿಕಾಗೆ ಇನ್ನಷ್ಟು ಅವಮಾನವಾಗುತ್ತದೆ. ಸುಬ್ಬುವಿನ ಕಾಲಿಗೆ ನೀರು ಹಾಕುವ ವಿಜಯಾಂಬಿಕಾ ರೋಷ ಇನ್ನಷ್ಟು ಹೆಚ್ಚುತ್ತದೆ.
ಮಗಳ ಜನ್ಮದ ರಹಸ್ಯ ಗುಟ್ಟಾಗಿಯೇ ಇರಲಿ ಎಂದ ವೀರೇಂದ್ರ
ಊಟದ ಬಳಿಕ ಪದ್ಮನಾಭ ಅವರ ಮಾತನಾಡುವ ವೀರೇಂದ್ರ ಹಿಂದಿನ ಘಟನೆಗಳನ್ನೆಲ್ಲಾ ನೆನಪಿಸಿಕೊಂಡು ಬೇಸರ ಮಾಡಿಕೊಳ್ಳುತ್ತಾಳೆ. ಶ್ರಾವಣಿ ಬಗ್ಗೆ ನನಗೆ ಕೋಪ ಇಲ್ಲ ಆದ್ರೆ ಅವಳ ಅಮ್ಮ ನಂದಿನಿ ನನಗೆ ಮಾಡಿದ ಮೋಸ ನೆನೆಪಿಸಿಕೊಂಡಾಗೆಲ್ಲಾ ಶ್ರಾವಣಿ ಮೇಲೆ ಕೋಪ ಬರುತ್ತೆ, ನಾನು ಶ್ರಾವಣಿಗೆ ನೀನು ನನ್ನ ಮಗಳಲ್ಲ ಅಂತ ಹೇಗೆ ಹೇಳೋದು ಪದ್ಮನಾಭ ಅವರೇ ಎಂದು ನೋವಿನಲ್ಲಿ ಹೇಳಿಕೊಳ್ಳುತ್ತಾರೆ. ಆಗ ಪದ್ಮನಾಭ ಯಜಮಾನರೇ ಸತ್ಯ ಮಣ್ಣಲ್ಲಿ ಇರುವ ಚಿನ್ನದ ಥರ, ಮಣ್ಣೆಲ್ಲಾ ಕರಗಿಸಿ, ಚೆನ್ನಾಗಿ ತೊಳೆದ ಮೇಲೆ ಚಿನ್ನ ಸಿಕ್ಕೇ ಸಿಗುತ್ತೆ, ಇದು ಹಾಗೆಯೇ ಎಂದು ಹೇಳುತ್ತಾರೆ. ಆದರೆ ಅವರ ಮಾತು ತಡೆಯುವ ವೀರೇಂದ್ರ ಶ್ರಾವಣಿಗೆ ಎಂದಿಗೂ ಅವಳ ಜನ್ಮರಹಸ್ಯ ಗೊತ್ತಾಗೋದು ಬೇಡʼ ಎಂದು ಹೇಳುತ್ತಾರೆ. ಅಲ್ಲದೇ ಸಾಲಿಗ್ರಾಮಕ್ಕೆ ಹೋಗುವ ಬಗ್ಗೆ ಮಾತನಾಡುತ್ತಾರೆ.
ಸಾಲಿಗ್ರಾಮಕ್ಕೆ ಹೋಗಲು ಸಿದ್ಧರಾಗಿರುವ ಪದ್ಮನಾಭ, ವೀರೇಂದ್ರ ಕುಟುಂಬಕ್ಕೆ ಸಾಲಿಗ್ರಾಮದಲ್ಲಿ ಕಾದಿರುತ್ತಾ ಅಚ್ಚರಿ, ವಿಜಯಾಂಬಿಕಾ ಬಂಡವಾಳ ಬಯಲಾಗೋದು ಯಾವಾಗ, ಶ್ರಾವಣಿ ಅಮ್ಮ ಯಾರು, ಅವರು ನಿಜಕ್ಕೂ ತಪ್ಪು ಮಾಡಿದ್ದಾರಾ, ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.