ಕನ್ನಡ ಸುದ್ದಿ  /  ಮನರಂಜನೆ  /  ಸಾಲಿಗ್ರಾಮಕ್ಕೆ ಹೋಗುವುದನ್ನು ತಪ್ಪಿಸಲು ಪಿಂಕಿ ಪ್ರಾಣಕ್ಕೆ ಕುತ್ತು ತರಲು ಹೊರಟ ಮದನ್‌; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ಸಾಲಿಗ್ರಾಮಕ್ಕೆ ಹೋಗುವುದನ್ನು ತಪ್ಪಿಸಲು ಪಿಂಕಿ ಪ್ರಾಣಕ್ಕೆ ಕುತ್ತು ತರಲು ಹೊರಟ ಮದನ್‌; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

Shravani Subramanya Kannada Serial Today Episode July 3rd: ʼಶ್ರಾವಣಿ ಸುಬ್ರಹ್ಮಣ್ಯʼ ಧಾರಾವಾಹಿಯ ಬುಧವಾರದ ಎಪಿಸೋಡ್‌ನಲ್ಲಿ ಸಾಲಿಗ್ರಾಮಕ್ಕೆ ಹೋಗುವುದನ್ನ ತಪ್ಪಿಸಲು ಪಿಂಕಿ ಪ್ರಾಣಕ್ಕೆ ಕುತ್ತು ತರುವ ಯೋಚನೆ ಮಾಡುತ್ತಾನೆ ಮದನ್‌. ಬದಲಾದ ಶ್ಯಾಮಸುಂದರನ ವರಸೆ ಕಂಡು ಮನೆಯವರು ಶಾಕ್‌. ಸುಬ್ಬುಗೆ ರೆಸ್ಯೂಮ್‌ ಕೊಟ್ಲು ಪಿಎ ಆಗ್ತೀನಿ ಎಂದ ಶ್ರೀವಲ್ಲಿ.

ಸಾಲಿಗ್ರಾಮಕ್ಕೆ ಹೋಗುವುದನ್ನು ತಪ್ಪಿಸಲು ಪಿಂಕಿ ಪ್ರಾಣಕ್ಕೆ ಕುತ್ತು ತರಲು ಹೊರಟ ಮದನ್‌; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ
ಸಾಲಿಗ್ರಾಮಕ್ಕೆ ಹೋಗುವುದನ್ನು ತಪ್ಪಿಸಲು ಪಿಂಕಿ ಪ್ರಾಣಕ್ಕೆ ಕುತ್ತು ತರಲು ಹೊರಟ ಮದನ್‌; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ನಿನ್ನೆಯ (ಜುಲೈ 3) ಸಂಚಿಕೆಯಲ್ಲಿ ಸಾಲಿಗ್ರಾಮ ಹೋಗುವುದನ್ನು ತಡೆಯಲು ಹೊಂಚು ಹಾಕುತ್ತಿರುತ್ತಾರೆ ಮದನ್‌-ವಿಜಯಾಂಬಿಕಾ. ಆದರೆ ವೀರೇಂದ್ರ ಸಾಲಿಗ್ರಾಮಕ್ಕೆ ಹೋಗಲು ಪಟ್ಟು ಹಿಡಿದಿರುವುದು ಅವರಿಗೆ ತಲೆನೋವಾಗಿರುತ್ತದೆ. ಸಾಲಿಗ್ರಾಮಕ್ಕೆ ಹೋಗುವುದನ್ನು ತಪ್ಪಿಸುವುದು ಹೇಗೆ ಎಂದು ಇಬ್ಬರೂ ಚಿಂತೆ ಮಾಡುತ್ತಾ ನಿಂತಿರುವಾಗ ಹಾಲ್‌ನಲ್ಲಿ ಅಪ್ಪ-ಅಮ್ಮ ಊಟ ಮಾಡಲು ಹೇಳಿದ್ರು ಅಂತ ಓಡಿ ಬಂದು ಬೀಳುವ ಪಿಂಕಿಯನ್ನು ಓಡಿ ಗಾಬರಿಗೊಳ್ಳುತ್ತಾರೆ ವೀರೇಂದ್ರ. ತಕ್ಷಣಕ್ಕೆ ಅವಳನ್ನು ಎತ್ತಿ ಸಮಾಧಾನ ಮಾಡುತ್ತಾರೆ. ಪಿಂಕಿ ಊಟ ಮಾಡುತ್ತಿಲ್ಲ ಎಂದು ದೂರು ಹೇಳಲು ಬಂದ ವಂದನಾಗೆ ʼಪಿಂಕಿ ಈ ಮನೆಯ ಮುದ್ದು ಮಗಳು. ಅವಳಿಗೆ ಊಟ ಬೇಡ ಅಂದ್ರೆ ಅವಳಿಗೆ ಏನಿಷ್ಟ ಅದನ್ನೇ ಮಾಡಿಕೊಡು. ಅದನ್ನು ಬಿಟ್ಟು ಅವಳಿಗೆ ಬಯ್ಯೋದಲ್ಲ. ಪ್ರೀತಿಯಿಂದ ಹೇಳಿದ್ರೆ ಮಕ್ಕಳು ಖಂಡಿತ ಕೇಳ್ತಾರೆʼ ಎಂದು ಪಿಂಕಿ ಮೇಲಿನ ಪ್ರೀತಿಯನ್ನು ಹೊರ ಹಾಕಿ ಕಾಳಜಿ ತೋರುತ್ತಾರೆ. ಇದನ್ನೆಲ್ಲಾ ನೋಡುತ್ತಿಲ್ಲ ಮದನ್‌ಗೆ ಒಂದು ಐಡಿಯಾ ಬರುತ್ತದೆ. ಅವನು ಪಿಂಕಿಯನ್ನು ಕಿಡ್ನಾಪ್‌ ಮಾಡಿ ಒಂದಿಷ್ಟು ದಿನ ಬಚ್ಚಿಡುವ ಪ್ಲಾನ್‌ ಮಾಡುತ್ತಾನೆ. ಅದನ್ನ ತಾಯಿಗೂ ಹೇಳುತ್ತಾನೆ. ಅದನ್ನು ಕೇಳಿ ಕೋಪಗೊಳ್ಳುವ ವಿಜಯಾಂಬಿಕಾ ಹಾಗೆ ಮಾಡಿದ್ರೆ ಪಿಂಕಿ ಕಿಡ್ನಾಪ್‌ ಆಗೋದಲ್ಲ ನೀವು ಜೈಲಿಗೆ ಹೋಗ್ತಿಯಾ ಎಂದು ಬಯ್ಯುತ್ತಾಳೆ. ಆಗ ಮದನ್‌ ಇನ್ನೊಂದು ಪ್ಲಾನ್‌ ಮಾಡುತ್ತಾನೆ.

ಮತ್ತೆ ಹಾಳೆ ಚಾಳಿ ತೋರಿದ ಶ್ಯಾಮಸುಂದರ

ಹಿಂದಿನ ರಾತ್ರಿ ಕಂಠಪೂರ್ತಿ ಕಡಿದು ಬಂದು ತಾಯಿಗೆ ಹಿಗ್ಗಾಮುಗ್ಗಾ ಬೈದು ಹೊಡೆಯಲು ಹೋದ ಧನಲಕ್ಷ್ಮೀ ಗಂಡ ಶ್ಯಾಮಸುಂದರ ಬೆಳಿಗ್ಗೆ ಬೇಗ ಎದ್ದು ದೇವಸ್ಥಾನಕ್ಕೆ ಹೋಗಿ ವಿಭೂತಿ ಹಚ್ಚಿಕೊಂಡು ಕಿವಿಗೆಲ್ಲಾ ಹೂ ಇರಿಸಿಕೊಂಡು ತಾಯಿಗಾಗಿ ಪ್ರಸಾದ ಹಿಡಿದು ಮನೆಗೆ ಬರುತ್ತಾನೆ. ಮಮ್ಮಿ, ಮದರ್‌ ಇಂಡಿಯಾ ಎಂದು ಕೂಗುತ್ತಾ ಬರುವ ಸುಂದರನನ್ನು ನೋಡಿ ತಾಯಿ ಕಾಂತಮ್ಮ ಹೆದರಿ ನಡುಗುತ್ತಾಳೆ. ಮಗ ಆಶೀರ್ವಾದಕ್ಕಾಗಿ ಹತ್ತಿರ ಬಂದ್ರು ಓಡೋಡಿ ಹೋಗಿ ಅವಿತುಕೊಳ್ಳುತ್ತಾಳೆ. ಆಗ ಸುಬ್ಬು ತಾಯಿ ವಿಶಾಲಾಕ್ಷಿ ರಾತ್ರಿ ಕುಡಿದು ಬಂದು ತಾಯಿಗೆ ಹೊಡೆಯಲು ಹೋದ ವಿಚಾರವನ್ನು ಹೇಳುತ್ತಾರೆ. ಆದರೆ ಅದನ್ನು ನಂಬದ ಸುಂದರ ನನ್ನ ತಾಯಿ ನನ್ನ ದೇವರು ನಾನು ಅವರಿಗೆ ಹಾಗೆಲ್ಲಾ ಮಾಡ್ತೀನಾ ನೀವೆಲ್ಲಾ ತಾಯಿ ಮಗನ ಮಧ್ಯೆ ತಂದು ಇಡೋಕೆ ಹೀಗೆಲ್ಲಾ ಹೇಳ್ತಾ ಇದೀರಾ ಎಂದು ಆರೋಪ ಮಾಡುತ್ತಾನೆ. ಆ ಹೊತ್ತಿಗೆ ಕಾಂತಮ್ಮ ʼಮಗನೇ ಇದು ನಿನ್ನ ತಪ್ಪಲ್ಲ ಈ ಮನೆಯ ತಪ್ಪು, ಈ ಮನೆಯೇ ಸರಿಯಿಲ್ಲ, ದರಿದ್ರʼ ಎಂದೆಲ್ಲಾ ಬಯ್ಯಲು ಶುರು ಮಾಡ್ತಾಳೆ. ಆಗ ಅಲ್ಲಿಗೆ ಬರುವ ಸುಬ್ಬು ʼಅಲ್ಲಾ ಕಾಂತಮ್ಮತ್ತೆ, ನಿಮ್ಮ ಮಗನೇ ಈ ಮನೆಗೆ ಯಜಮಾನ, ನಿಮ್ಮ ಮಗನಿಗೆ ಮನೆಯ ಅಧಿಕಾರ ಬೇಕು ಅಂತೆಲ್ಲಾ ಹೇಳ್ತಾ ಇದ್ರಿ, ಈಗ ಈ ಮನೆಗೆ ಬಯ್ತಾ ಇದೀರಾ, ಮನೆ ಏನ್‌ ಮಾಡಿದೆ ಅತ್ತೆ ನಿಮಗೆ, ಮನೆಗೆ ಬಯ್ಯಬೇಡಿʼ ಎಂದು ಬೇಸರದಲ್ಲಿ ಹೇಳಿ ಹೋಗುತ್ತಾನೆ.

ಟ್ರೆಂಡಿಂಗ್​ ಸುದ್ದಿ

ಪಿಂಕಿಯನ್ನು ಕೊಲ್ಲಲ್ಲು ಮದನ್‌ ಸ್ಕೆಚ್‌

ಸಾಲಿಗ್ರಾಮಕ್ಕೆ ಹೋಗುವುದನ್ನು ತಪ್ಪಿಸಲು ಪಿಂಕಿ ಪ್ರಾಣಕ್ಕೆ ಕುತ್ತು ಬರುವ ಸ್ಕೆಚ್‌ ಹಾಕುತ್ತಾನೆ ಮದನ್‌. ಪಿಂಕಿಯನ್ನು ಓಲೈಸಿಕೊಳ್ಳಲು ಬಾರ್ಬಿ ಡಾಲ್‌ ತರುವ ಮದನ್‌ ಅದನ್ನು ಅವಳಿಗೆ ಕೊಟ್ಟು ಅವಳ ಜೊತೆ ಚೆನ್ನಾಗಿ ಮಾತನಾಡುತ್ತಾನೆ. ಅವಳು ಅದರ ಜೊತೆ ಆಟವಾಡಲು ಹೋಗುತ್ತೇನೆ ಎಂದಾಗ ಎಲ್ಲಿಗೆ ಆಟವಾಡಲು ಹೋಗ್ತಿಯಾ ಎಂದಾಗ ಪಿಂಕಿ ʼರೂಮ್‌ ಅಲ್ಲಿ ಶ್ರಾವಣಿ ಅಕ್ಕ ಇದ್ದಾಳೆ. ಅವಳ ಜೊತೆ ಆಟವಾಡಲು ಹೋಗ್ತೀನಿʼ ಎಂದು ಹೊರಟು ನಿಲ್ಲುತ್ತಾಳೆ. ಆಗ ಮದನ್‌ ಪಿಂಕಿಗೆ ʼಶ್ರಾವಣಿ ಅಲ್ಲಿಲ್ಲ ಟೆರೆಸ್‌ ಮೇಲಿದ್ದಾಳೆ. ಹೋಗು ಅಲ್ಲಿಯೇ ಆಟವಾಡಿಕೋʼ ಎಂದು ಟೆರೆಸ್‌ ಮೇಲೆ ಕಳುಹಿಸಿ, ನಿಧಾನಕ್ಕೆ ಪಿಂಕಿಯನ್ನು ಹಿಂಬಾಲಿಸಿ ಬರುತ್ತಾನೆ. ಪಿಂಕಿ ಮದನ್‌ ಹೇಳಿರುವ ಮಾತು ನಂಬಿ ಟೆರೆಸ್‌ ಮೇಲೆ ಶ್ರಾವಣಿಯನ್ನು ಹುಡುಕುತ್ತಾ ಟೆರೆಸ್‌ ತುದಿಗೆ ಬರುತ್ತಾಳೆ. ಇತ್ತ ರೂಮ್‌ನಲ್ಲಿ ಹೋಮ್‌ವರ್ಕ್‌ ಮಾಡಲು ಕುಳಿತಿದ್ದ ಪಿಂಕಿ ಕಾಣದೇ ಇದ್ದಾಗ ಅವಳನ್ನು ಹುಡುಕುತ್ತಾ ಬರುತ್ತಾಳೆ ವಂದನಾ. ಶ್ರಾವಣಿ ಬಳಿ ಪಿಂಕಿ ಇದ್ದಾಗ ಕೇಳಿದಾಗ ಅವಳ ಬಳಿಯೂ ಇರುವುದಿಲ್ಲ. ಇಬ್ಬರೂ ಸೇರಿ ಪಿಂಕಿಯನ್ನು ಹುಡುಕುತ್ತಾರೆ. ಎಲ್ಲಿಯೂ ಪಿಂಕಿ ಸಿಗದಿದ್ದಾಗ ಪಿಂಕಿ ಹೆಸರಿಡುದು ಕರೆಯುತ್ತಾ ಟೆರೆಸ್‌ ಮೇಲೆ ಹೋಗುತ್ತಾಳೆ ವಂದನಾ. ಆ ಹೊತ್ತಿಗೆ ಸರಿಯಾಗಿ ಟೆರೆಸ್‌ ಸೇರಿದ ಮದನ್‌ ಪಿಂಕಿಯನ್ನು ಟೆರೆಸ್‌ನಿಂದ ಕೆಳಕ್ಕೆ ದೂಡಲು ಸಿದ್ಧನಾಗುತ್ತಾನೆ. ಆದರೆ ಅಮ್ಮ ಕರೆದು ಎಂದು ಅಲ್ಲಿಂದ ತಿರುಗುವ ಪಿಂಕಿ ಮಿಸ್‌ ಆಗುತ್ತಾಳೆ. 

ಪಿಂಕಿಯನ್ನು ದೂಡಲು ಹೊರಟ ಮದನ್‌ ಆಯ ತಪ್ಪಿ ಕೆಳಗೆ ಬಿದ್ದೆ ಬಿಡುವ ಹಂತಕ್ಕೆ ತಲುಪುತ್ತಾನೆ. ಅಷ್ಟೊತ್ತಿಗೆ ವಿಜಯಾಂಬಿಕಾ ಬಂದು ಅವನ ಕೈ ಹಿಡಿದು ಎಳೆಯುತ್ತಾಳೆ. ಪಿಂಕಿ ಪ್ರಾಣಕ್ಕೆ ಕುತ್ತು ತರಲು ಹೊರಟ ಮದನ್‌ ಸೇಫ್‌ ಆಗುತ್ತಾನೆ. ಅಷ್ಟೊತ್ತಿಗೆ ಟೆರೆಸ್‌ ತಲುಪುವ ವಂದನಾಗೆ ಟೆರೆಸ್‌ ಮೇಲೆ ವಿಜಯಾಂಬಿಕಾ, ಮದನ್‌ ಇರುವುದು ನೋಡಿ ಅನುಮಾನ ಬರುತ್ತದೆ. ಅವಳು ಪಿಂಕಿಗೆ ಬೈದು ಇನ್ಮುಂದೆ ಟೆರೆಸ್‌ ಮೇಲೆ ಬರುವಂತಿಲ್ಲ ಎಂದು ಹೇಳಿ ಕರೆದುಕೊಂಡು ಹೋಗುತ್ತಾಳೆ. ಇತ್ತ ವಿಜಯಾಂಬಿಕ ಮಗನಿಗೆ ʼನಾನು ಇಷ್ಟೆಲ್ಲಾ ಮಾಡ್ತಾ ಇರೋದೇ ನಿನಗಾಗಿ. ನೀನೇ ಇಲ್ಲ ಎಂದ್ರೆ ನಾನೇನು ಮಾಡ್ಲಿ. ನಾನು ಇಲ್ಲಿಗೆ ಬರೋದು ಕೊಂಚ ತಡವಾಗಿದ್ರು ನೀನು ಶಿವನ ಪಾದ ಸೇರ್ತಾ ಇದ್ದೆ. ಇನ್ಮುಂದೆ ಈ ರೀತಿ ಯೋಚನೆ ಮಾಡೋದೆಲ್ಲಾ ಬಿಡಿ ಎಂದು ಸರಿಯಾಗಿ ಬೈದು ಕರೆದುಕೊಂಡು ಹೋಗುತ್ತಾಳೆ.

ಅತ್ತ ಸುಬ್ಬು ಪಿಎ ಆಗಲೇಬೇಕು ಎಂದು ನಿರ್ಧಾರ ಮಾಡುವ ಶ್ರೀವಲ್ಲಿ ಅಣ್ಣನಿಗೆ ಹೇಳಿ ತನ್ನ ರೆಸ್ಯೂಮೆ ಮಾಡಿಸಿಕೊಳ್ಳುತ್ತಾಳೆ. ಬೆಳಿಗ್ಗೆ ಸುಬ್ಬು ಹೊರಟ ತಕ್ಷಣ ಅಲ್ಲಿಗೆ ಬರುವ ಶ್ರೀವಲ್ಲಿ ನನ್ನನ್ನು ನಿನ್ನ ಪಿಎ ಮಾಡ್ಕೋ ಎಂದು ದಂಬಾಲು ಬೀಳುತ್ತಾಳೆ. ನನಗೆ ಕೆಲಸ ಇಲ್ಲ. ನಿನಗೆಲ್ಲಿಂದ ಕೊಡ್ಲಿ ಎಂದು ಸುಬ್ಬು ಶ್ರಾವಣಿ ಮೇಡಂ ಫೋನ್‌ ಬಂತು ಎಂದು ನೆಪ ಹೇಳಿ ಶ್ರೀವಲ್ಲಿಯಿಂದ ತಪ್ಪಿಸಿಕೊಂಡು ಹೋಗಿ ಬಿಡುತ್ತಾನೆ.

ಮಗಳನ್ನು ಕೊಲ್ಲಲು ಹೊರಟ ಮದನ್‌ ಮೇಲೆ ವಂದನಾಗೆ ಅನುಮಾನ ಶುರುವಾಗುತ್ತಾ, ಸಾಲಿಗ್ರಾಮಕ್ಕೆ ಹೋಗುವುದನ್ನು ತಪ್ಪಿಸಲು ವಿಜಯಾಂಬಿಕಾ-ಮದನ್‌ಗೆ ಸಾಧ್ಯವಾಗುತ್ತಾ, ಸುಬ್ಬು ಪಿಎ ಆಗುವ ಶ್ರೀವಲ್ಲಿ ಆಸೆ ನೆರವೇರುತ್ತಾ ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.