ಕನ್ನಡ ಸುದ್ದಿ  /  ಮನರಂಜನೆ  /  ಸುಬ್ಬು ಮನೆ ಬಾಗಿಲಿಗೆ ಬಂದ್ರು ಮಿನಿಸ್ಟರ್‌, ಶ್ರಾವಣಿ ಹವಾ ಕಂಡು ಥರಗುಟ್ಟಿ ಹೋದ ಕಾಂತಮ್ಮ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ಸುಬ್ಬು ಮನೆ ಬಾಗಿಲಿಗೆ ಬಂದ್ರು ಮಿನಿಸ್ಟರ್‌, ಶ್ರಾವಣಿ ಹವಾ ಕಂಡು ಥರಗುಟ್ಟಿ ಹೋದ ಕಾಂತಮ್ಮ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

Shravani Subramanya Kannada Serial Today Episode July 8th: ʼಶ್ರಾವಣಿ ಸುಬ್ರಹ್ಮಣ್ಯʼ ಧಾರಾವಾಹಿಯ ಸೋಮವಾರದ ಎಪಿಸೋಡ್‌ನಲ್ಲಿ ಕಾಂತಮ್ಮಂಗೆ ಹೆದರಿಸಲು ಶ್ರಾವಣಿ ಚಿಟಿಕೆ ಹೊಡೆದಿದ್ದೇ ತಡ ಸುಬ್ಬು ಮನೆಬಾಗಿಲಿಗೆ ಬಂದು ನಿಂತ ಮಿನಿಸ್ಟರ್‌ ಗಾಡಿ. ಮಿನಿಸ್ಟರ್‌ ಒಲಿಸಿಕೊಳ್ಳಲು ಶ್ರೀವಲ್ಲಿ ಮಾಡಿದ್ಲು ಖತರ್‌ನಾಕ್‌ ಪ್ಲಾನ್‌. ನಡುಗಿ ಹೋದ ಕಾಂತಮ್ಮ, ಸುಂದರ.

ಸುಬ್ಬು ಮನೆ ಬಾಗಿಲಿಗೆ ಬಂದ್ರು ಮಿನಿಸ್ಟರ್‌, ಶ್ರಾವಣಿ ಹವಾ ಕಂಡು ಥರಗುಟ್ಟಿದ ಕಾಂತಮ್ಮ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ
ಸುಬ್ಬು ಮನೆ ಬಾಗಿಲಿಗೆ ಬಂದ್ರು ಮಿನಿಸ್ಟರ್‌, ಶ್ರಾವಣಿ ಹವಾ ಕಂಡು ಥರಗುಟ್ಟಿದ ಕಾಂತಮ್ಮ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ನಿನ್ನೆಯ (ಜುಲೈ 8) ಸಂಚಿಕೆಯಲ್ಲಿ ಸುಂದರನಿಗೆ ಶ್ರಾವಣಿ ಸುಬ್ಬು ಮನೆ ಬಿಟ್ಟು ಹೋಗಿ ಬೇರೆ ಮನೆಯಲ್ಲಿ ಹೆಂಡತಿ-ಮಗಳು ಹಾಗೂ ಅಮ್ಮನೊಂದಿಗೆ ವಾಸ ಮಾಡಬೇಕು, ಕೆಲಸ ಹುಡುಕಿಕೊಳ್ಳಬೇಕು ಎಂದು ವಾರ್ನಿಂಗ್‌ ಕೊಟ್ಟಿದ್ರೂ ಅವನು ತಾಯಿಗೆ ಹೆದರಿ ಹೆಂಡತಿಯ ಮನೆಯಲ್ಲೇ ಉಳಿದುಕೊಂಡಿರುತ್ತಾನೆ. ಇದನ್ನು ನೋಡಿದ ಶ್ರಾವಣಿಗೆ ಕೋಪ ಬರುತ್ತದೆ. ಈ ಬಾರಿ ಕಾಂತಮ್ಮಂಗೆ ವಾರ್ನಿಂಗ್‌ ಕೊಡಬೇಕು ಎಂದುಕೊಂಡು ಮನೆಯ ಹಿಂಬಾಗಿಲಿಗೆ ಕರೆಸುತ್ತಾಳೆ. ಅಮ್ಮನನ್ನು ಹಿಂಬಾಗಿಲವರೆಗೆ ಕರೆದುಕೊಂಡು ಬರುವ ಸುಂದರ ಶ್ರಾವಣಿ ಕೊಟ್ಟ ಏಟಿನ ನೆನಪಾಗಿ ಅಲ್ಲಿಂದ ಎಸ್ಕೇಪ್‌ ಆಗುತ್ತಾನೆ.

ಕಾಂತಮ್ಮಂಗೆ ಶ್ರಾವಣಿ ವಾರ್ನಿಂಗ್‌

ಕಾಂತಮ್ಮ ಸುಬ್ಬು ಮನೆಯಲ್ಲೇ ಇರುವುದನ್ನ ಸಹಿಸದ ಶ್ರಾವಣಿ ಅವಳನ್ನು ಕರೆಸಿಕೊಂಡು ʼನೋಡಿ ಕಾಂತಮ್ಮ ಅವರೇ, ನಿಮ್ಮ ಮಗನಿಗೆ ಮೊದಲೇ ಹೇಳಿದ್ದೆ ಈ ಮನೆ ಬಿಟ್ಟು ಹೋಗಬೇಕು, ಕೆಲಸ ಹುಡುಕಿಕೊಳ್ಳಬೇಕು ಅಂತ, ಆದ್ರೆ ಅವರು ಈ ಮನೆ ಬಿಟ್ಟು ಹೋಗುವ ಹಾಗೆ ಕಾಣ್ತಾ ಇಲ್ಲ, ಒಬ್ಬ ತಾಯಿಯಾಗಿ ನೀವು ಅವರಿಗೆ ಬುದ್ಧಿ ಹೇಳಬೇಕುʼ ಎಂದು ಹೇಳಿದ್ದ ತಡ, ರೊಚ್ಚಿಗೇಳುವ ಕಾಂತಮ್ಮ ʼನಾವು ಹೋಗೊಲ್ಲ, ಹೋಗಲ್ಲ ಅಂದ್ರೆ ಏನ್‌ ಮಾಡ್ತೀಯಾ, ಅಷ್ಟಕ್ಕೂ ನೀನ್‌ ಮನೇಲೇ ನಿನ್ನ ಅಪ್ಪನ ನಡುವೆ ಸಂಬಂಧ ಸರಿಯಿಲ್ಲ. ಬಂದ್‌ ಬಿಟ್ಲು ನಮ್‌ ಮನೆ ಸುದ್ದಿ ಕೇಳೋಕೆ ಎಂದು ದಬಾಯಿಸುತ್ತಾಳೆ. ಆಗ ಕೋಪಗೊಳ್ಳುವ ಪದ್ಮನಾಭ ʼಕಾಂತಮ್ಮ ನಿಮ್ಮ ಬಾಯಿ ಮೇಲೆ ಹಿಡಿತ ಇರಲಿʼ ಎಂದು ಜೋರು ಮಾಡುತ್ತಾರೆ. ಕಾಂತಮ್ಮ ಸವಾಲು ಹಾಕಿದ್ದೇ ತಡ ಕೋಪಗೊಳ್ಳುವ ಶ್ರಾವಣಿ ʼನಾನು ಏನ್‌ ಮಾಡ್ತೀನಿ ಅಂತೀರಾ, ನಾನೊಂದು ಚಿಟಿಕೆ ಹೊಡೆದ್ರೆ ಸಾಕು ಮನೆ ಮುಂದೆ ಆಫೀಸರ್‌ಗಳು ಕ್ಯೂ ನಿಲ್ತಾರೆʼ ಎಂದು ಹೇಳಿ ಬಿಡುತ್ತಾಳೆ. ಆದರೆ ಅದಕ್ಕೂ ಒಗ್ಗದ ಕಾಂತಮ್ಮ ʼಹೌದಾ, ಹಾಗಾದ್ರೆ ಹೊಡಿ ಚಿಟಿಕೆ. ಚಿಟಿಕೆ ಹೊಡಿಯೇ ನೋಡೋಣ. ಅದ್‌ ಯಾರ್‌ ಬರ್ತಾರೋ ನಾನು ನೋಡೇ ಬಿಡ್ತೀನಿʼ ಎಂದು ಸವಾಲು ಹಾಕುತ್ತಾಳೆ. ಆಗ ಶ್ರಾವಣಿಗೆ ಏನು ಮಾಡಬೇಕು ಎಂದು ತಿಳಿಯುವುದಿಲ್ಲ. ಪದ್ಮನಾಭ ಅವರು ʼಶ್ರಾವಣಿ ಅಮ್ಮ, ನೀವು ನಮ್ಮ ಮನೆಗೆ ಬಂದಾಗೆಲ್ಲಾ ಏನೋ ಒಂದು ಮ್ಯಾಜಿಕ್‌ ಆಗುತ್ತೆ, ಈ ಬಾರಿಯೂ ಏನಾದ್ರೂ ಮ್ಯಾಜಿಕ್‌ ಆಗಬಹುದು. ನೀವು ಚಿಟಿಕೆ ಹೊಡಿರಿ, ನಮ್ಮ ಮನಸ್ಸು ಹೇಳ್ತಾ ಇದೆ. ಏನೋ ಆಗುತ್ತೆ ನಿಮ್ಮಿಂದ ಇವತ್ತು ಅಂತʼ ಎಂದು ಶ್ರಾವಣಿಯನ್ನು ಹುರಿದುಂಬಿಸುತ್ತಾರೆ. ಆಗ ಶ್ರಾವಣಿ ಕಿಟಿಕೆ ಹೊಡೆಯುತ್ತಾಳೆ. ಅಷ್ಟೊತ್ತಿಗೆ ಮನೆ ಮುಂದೆ ಕಾರುಗಳು ಹಾರ್ನ್‌ ಮಾಡುತ್ತಾ ಬಂದು ನಿಲ್ಲುತ್ತವೆ. ಕಾರಿನ ಶಬ್ದ ಕೇಳಿ ಕಾಂತಮ್ಮ ಮಾತ್ರವಲ್ಲ, ಶ್ರಾವಣಿ ಹಾಗೂ ಪದ್ಮನಾಭ ಕೂಡ ಶಾಕ್‌ ಆಗ್ತಾರೆ. ಯಾರು ಬಂದಿರಬಹುದು ಎಂದುಕೊಂಡು ಹಿತ್ತಿಲ ಬಾಗಿಲಿನಿಂದ ಮುಂಬಾಗಿಲಿಗೆ ಓಡಿ ಬರುತ್ತಾರೆ.

ಟ್ರೆಂಡಿಂಗ್​ ಸುದ್ದಿ

ಸುಬ್ಬು ಮನೆ ಬಾಗಿಲಲ್ಲಿ ಮಿನಿಸ್ಟರ್‌ ಕುಟುಂಬ

ಅತ್ತೆ ಲಲಿತಾದೇವಿಯವರು ಪದ್ಮನಾಭ ಅವರ ಕುಟುಂಬವನ್ನು ಸಾಲಿಗ್ರಾಮಕ್ಕೆ ಕರೆದುಕೊಂಡು ಬರಲು ಹೇಳಿದ್ದನ್ನು ಪೂರೈಸುವ ಸಲುವಾಗಿ ತಮ್ಮ ಸುರೇಂದ್ರ ಹಾಗೂ ಅಕ್ಕ ವಿಜಯಾಂಬಿಕಾ ಕರೆದುಕೊಂಡು ಪದ್ಮನಾಭ ಅವರ ಮನೆಗೆ ಕರೆಯಲು ಬರುತ್ತಾರೆ. ಮಿನಿಸ್ಟರ್‌ ತಮ್ಮ ಮನೆ ಬಾಗಿಲಿನಲ್ಲಿ ಬಂದು ನಿಂತಿರುವುದನ್ನು ನೋಡಿ ಶಾಕ್‌ ಆಗುತ್ತಾರೆ ಪದ್ಮನಾಭ ಕುಟುಂಬ. ಇತ್ತ ಮನೆಗೆ ಬರುವ ಸುಬ್ಬು ನಮ್ಮ ಮನೆ ಬಾಗಿಲಲ್ಲಿ ಮಿನಿಸ್ಟರ್‌ ನೋಡಿ ಅಚ್ಚರಿಗೊಳ್ಳುತ್ತಾನೆ, ಅಲ್ಲದೇ ಅಮ್ಮನ ಬಳಿ ಆರತಿ ಮಾಡಿ ಮನೆ ಒಳಗೆ ಕರೆದುಕೊಂಡು ಬರುವಂತೆ ಹೇಳುತ್ತಾನೆ. ಸುಬ್ಬ ಮನೆಗೆ ಬಂದ ಮಿನಿಸ್ಟರ್‌ ಕುಟುಂಬ ಮನೆಯವರ ಕ್ಷೇಮ ಸಮಾಚಾರ ವಿಚಾರಿಸಿ, ಉಭಯ ಕುಶಲೋಪರಿ ವಿಚಾರಿಸುತ್ತಿರುತ್ತಾರೆ. ಮಿನಿಸ್ಟರ್‌ ಮನೆಗೆ ಬಾಗಿಲಿಗೆ ಬಂದಿದ್ದು ನೋಡಿ ಹೆದರಿ ಹೋಗುವ ಕಾಂತಮ್ಮ ಬೆಡ್‌ಶೀಟ್‌ ಹೊದು ಮನೆಯ ಹೊರಗಡೆ ಅವಿತು ಕುಳಿತುಕೊಳ್ಳುತ್ತಾಳೆ. ತಾಯಿ ಮನೆಯೊಳಗೆಲ್ಲೂ ಕಾಣದೇ ಇದ್ದಾಗ ಹುಡುಕಿಕೊಂಡು ಬರುವ ಸುಂದರನಿಗೆ ಅವಳು ಬಚ್ಚಿಟ್ಟುಕೊಂಡಿದ್ದು ಕಾಣುತ್ತದೆ. ನಾನು ಅವಳೊಂದಿಗೆ ಬೆಡ್‌ಶೀಟ್‌ ಒಳಗೆ ಅವಿತು ಕುಳಿತು ಬಿಡುತ್ತಾನೆ ಸುಂದರ.

ಮಿನಿಸ್ಟರ್‌ಗೆ ಅಪ್ಪಾಜಿ ಅಂದ್ಲು ಶ್ರೀವಲ್ಲಿ

ಸುಬ್ಬು ಮನೆ ಮುಂದೆ ಕಾರು ಬಂದು ನಿಂತಿದ್ದನ್ನು ನೋಡಿ ಮನೆಯೊಳಗೆ ಓಡಿ ಬರುವ ಶ್ರೀವಲ್ಲಿ ಅಡುಗೆಮನೆಯಲ್ಲಿರುವ ವಿಶಾಲಾಕ್ಷಿ, ಧನಲಕ್ಷ್ಮೀ ಬಳಿ ಮನೆಗೆ ಯಾರು ಬಂದಿದ್ದಾರೆ ಎಂದು ಕೇಳಿ ತಿಳಿದುಕೊಳ್ಳುತ್ತಾಳೆ. ಮನೆಗೆ ಮಿನಿಸ್ಟರ್‌ ಬಂದಿದ್ದಾರೆ ಎಂದು ಗೊತ್ತಾಗಿದ್ದೇ ತಡ, ತಾನು ಕೆಲಸ ಕೇಳಲು ಸುಲಭವಾಗುತ್ತದೆ ಎಂದು ಅರಿತ ಅವಳು ಕಾಫಿ, ಜ್ಯೂಸ್‌ ಹಿಡಿದು ಮಿನಿಸ್ಟರ್‌ ಮುಂದೆ ಹೋಗುತ್ತಾಳೆ. ಮಾತ್ರವಲ್ಲ ಮಿನಿಸ್ಟರ್‌ಗೆ ನಮಸ್ಕಾರ ಮಾಡಿ ಆಶೀರ್ವಾದ ಮಾಡಿ ಎಂದು ಕೇಳಿಕೊಳ್ಳುತ್ತಾಳೆ. ಮಾತ್ರವಲ್ಲ ನಿಮ್ಮನ್ನ ಅಪ್ಪಾಜಿ ಎಂದು ಕರಿತೀನಿ ಎಂದು ಕೇಳಿಕೊಳ್ಳುತ್ತಾಳೆ. ಅದಕ್ಕೆ ವೀರೇಂದ್ರ ಧಾರಾಳವಾಗಿ ಕರೆಯಮ್ಮ ಎಂದು ವೀರೇಂದ್ರ ಒಪ್ಪಿಗೆ ನೀಡುತ್ತಾರೆ. ಅದನ್ನು ಕೇಳಿದ ಶ್ರಾವಣಿ ಉರಿದು ಬಿದ್ರೆ, ಸುಬ್ಬುಗೆ ಮನಸ್ಸಿನೊಳಗೆ ನಗು ಬರುತ್ತೆ. ವಿಜಯಾಂಬಿಕ ಮಾತ್ರ ಅಸಮಾಧಾನದಲ್ಲೇ ಕುಳಿತಿರುತ್ತಾಳೆ.

ಸುಬ್ಬ ಮನೆಗೆ ಬಂದ ವಿಚಾರವನ್ನು ಪ್ರಸ್ತಾಪಿಸುತ್ತಾರೆ ವೀರೇಂದ್ರ. ಅತ್ತೆಯವರು ಪುಷ್ಕರಿಣಿ ಉತ್ಸಮಕ್ಕೆ ನಿಮ್ಮನ್ನು ಕರೆದುಕೊಂಡು ಬರಲು ಹೇಳಿದ್ದಾರೆ, ಅದಕ್ಕೆ ನಾವು ಕರೆಯಲು ಬಂದಿದ್ದುʼ ಎಂದು ತಾವು ಸುಬ್ಬು ಮನೆಗೆ ಬಂದ ಕಾರಣ ವಿವರಿಸುತ್ತಾರೆ ಸುರೇಂದ್ರ. ಅದನ್ನು ಕೇಳಿ ಸುಬ್ಬು ತಂದೆ ಲಲಿತಾದೇವಿ ಅಮ್ಮೋರು ಹೇಳಿದ ಮೇಲೆ ಬರದೇ ಇರಲು ಆಗುತ್ತಾ, ಆದ್ರೂ ನೀವ್ಯಾಕೆ ನಮ್ಮನೆವರೆಗೆ ಬರೋ ತೊಂದ್ರೆ ತಗೊಂಡ್ರಿ, ಒಂದ್‌ ಫೋನ್‌ ಮಾಡಿದ್ರೆ ನಾನೇ ಬರ್ತಿದೆ ಎಂದು ಹೇಳುತ್ತಾರೆ. ಈಗ ವೀರೇಂದ್ರ ಯಾಕೆ ನಾನು ಈ ಮನೆಗೆ ಬರಬಾರದಾ, ನಾನೇನು ಇದೇ ಮೊದಲ ಬಾರಿಗೆ ಈ ಮನೆಗೆ ಬರ್ತಾ ಇರೋದಾ? ಎಂದು ಪ್ರಶ್ನೆ ಮಾಡುತ್ತಾರೆ. ಮಿನಿಸ್ಟರ್‌ ಮಾತು ಕೇಳಿ ಸುಬ್ಬು ತಲೆಯಲ್ಲಿ ಹುಳ ಕೊರೆಯಲು ಆರಂಭವಾಗುತ್ತದೆ. ಮಿನಿಸ್ಟರ್‌ ಯಾವ ಕಾರಣಕ್ಕೆ ಮೊದಲು ನಮ್ಮ ಮನೆಗೆ ಬರ್ತಾ ಇದ್ರು ನಮ್ಮ ಅಪ್ಪನಿಗೂ ಸಾಲಿಗ್ರಾಮಕ್ಕೂ ಏನು ಸಂಬಂಧ ಎಂದು ಸುಬ್ಬು ಯೋಚಿಸಲು ಆರಂಭಿಸುತ್ತಾನೆ.

ಸುಬ್ಬು ಮನಸ್ಸಿನ ಗೊಂದಲಗಳಿಗೆ ಉತ್ತರ ಸಿಗುತ್ತಾ, ಇನ್ನಾದ್ರೂ ಶ್ರಾವಣಿಗೆ ಹೆದರಿ ಬೇರೆ ಮನೆ ಮಾಡ್ತಾನಾ ಸುಂದರ, ಶ್ರೀವಲ್ಲಿಗೆ ಮಿನಿಸ್ಟರ್‌ ಮನೆಯಲ್ಲಿ ಕೆಲಸ ಸಿಗುತ್ತಾ ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.