ಒಬ್ಬ ಅಪ್ಪನಿಗೆ ಹುಟ್ಟಿದ್ರೆ ಅಂದ್ರೆ ಅಪ್ಪನಿಗೆ ಬಯ್ಯೋದಲ್ಲ, ತಾಯಿಗೆ ಬಯ್ಯೋದು- ಕಿಚ್ಚನ ಪಂಚಾಯ್ತಿಗೆ ಬಿಗ್ ಬಾಸ್ ಸ್ಪರ್ಧಿಗಳು ಗಡಗಡ
Oct 19, 2024 05:28 PM IST
ಕಿಚ್ಚನ ಪಂಚಾಯ್ತಿಗೆ ಬಿಗ್ಬಾಸ್ ಸ್ಪರ್ಧಿಗಳು ಗಡಗಡ
- Bigg Boss: ಬಿಗ್ ಬಾಸ್ ಮನೆಯಲ್ಲಿ ಈ ವಾರದಲ್ಲಿ ಆದ ಬೆಳವಣಿಗೆಗಳನ್ನು ಗಮನಿಸಿದ ವೀಕ್ಷಕರು, ಕಿಚ್ಚನ ಪಂಚಾಯ್ತಿಗಾಗಿ ಕಾದು ಕುಳಿತಿದ್ದರು. ಇಂದಿನ ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್ನಲ್ಲಿ ಸುದೀಪ್ ಆಡಿದ ಮಾತುಗಳನ್ನು ಕೇಳಿ ಸ್ಪರ್ಧಿಗಳು ನಡುಗಿ ಹೋಗಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಈ ವಾರದಲ್ಲಿ ಆದ ಬೆಳವಣಿಗೆಗಳನ್ನು ಗಮನಿಸಿದ ವೀಕ್ಷಕರು, ಕಿಚ್ಚನ ಪಂಚಾಯ್ತಿಗಾಗಿ ಕಾದು ಕುಳಿತಿದ್ದರು. ಇಂದಿನ ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್ನಲ್ಲಿ ಸುದೀಪ್ ಮನೆಯ ಎಲ್ಲ ಸ್ಪರ್ಧಿಗಳ ಬಗ್ಗೆ ಮಾತನಾಡಿದ್ದಾರೆ. ಯಾರ್ಯಾರು ತಪ್ಪು ಮಾಡಿದ್ದಾರೆ? ಯಾರಿಂದ ಏನು ತಪ್ಪಾಗಿದೆ ಎನ್ನುವ ವಿಚಾರವನ್ನು ಹಂಚಿಕೊಂಡಿದ್ದಾರೆ. ಇನ್ನು ಕೆಲ ಸ್ಪರ್ಧಿಗಳು ಮಾಡಿದ ತಪ್ಪಿಗಾಗಿ ಖಡಕ್ ಉತ್ತರ ನೀಡಿದ್ದಾರೆ. ಮಾನಸ, ಉಗ್ರಂ ಮಂಜು ಹಾಗೂ ಚೈತ್ರಾ ಕುಂದಾಪುರ ಆಡಿದ ಮಾತುಗಳ ಬಗ್ಗೆ ಇಲ್ಲಿ ಚರ್ಚೆಯಾಗಿದೆ.
ಅಷ್ಟೇ ಅಲ್ಲದೆ ಈ ಬಾರಿ ಎರಡು ಸ್ಪರ್ಧಿಗಳನ್ನು ಮನೆಯಿಂದ ಹೊರಗಡೆ ಕಳಿಸಲಾಗಿದೆ. ಈ ವಿಚಾರವಾಗಿಯೂ ಕಿಚ್ಚನ ಪಂಚಾಯ್ತಿಯಲ್ಲಿ ಮಾತನಾಡಿದ್ದಾರೆ. ಒಬ್ಬರು ಚಪ್ಪಲಿಯನ್ನು ಎತ್ತಿ ಬಿಸಾಡ್ತಾ ಇದಾರೆ ಅಂದ್ರೆ ಅದು ಓಕೆನಾ? ಎಂದು ಉಗ್ರಂ ಮಂಜು ಅವರು ಮಾಡಿದ ತಪ್ಪಿನ ಬಗ್ಗೆ ಮಾತಾಡ್ತಾರೆ. ತಪ್ಪು ಮಾಡಿದವರು ಮನೆಯಿಂದ ಹೊರಗಡೆ ಹೋಗಿದ್ದಾರೆ ಎಂದು ಈ ಮನೆಯಲ್ಲಿರುವ ಹಲವರು ಸಂಭ್ರಮಿಸಿದ್ದೀರಿ. ಹಾಗಾದ್ರೆ ನೀವು ಮಾಡಿದ್ದು ಸರಿನಾ? ಎಂದು ಕೇಳಿದ್ದಾರೆ.
ಪ್ರಾಮಾಣಿಕತೆಯ ಪ್ರಶ್ನೆ
ಮಾತನ್ನು ಮುಂದುವರೆಸುತ್ತಾ ಪ್ರತಿಯೊಬ್ಬರಲ್ಲೂ ಪ್ರಶ್ನೆ ಕೇಳಲಾಗುತ್ತದೆ. ಆ ಪ್ರಶ್ನೆಗೆ ಹಂಸ ಅವರು ಉತ್ತರ ನೀಡುತ್ತಿರುವ ಸಂದರ್ಭದಲ್ಲಿ ಪ್ರಾಮಾಣಿಕತೆಯ ಮಾತು ಬರುತ್ತದೆ. ಪ್ರಾಮಾಣಿಕತೆ ಅನ್ನೋದೇ ಇಲ್ಲ ಈ ಮನೆಯಲ್ಲಿ ಎಂದು ಕಿಚ್ಚ ಸುದೀಪ್ ಗುಡುಗಿದ್ದಾರೆ.
ಇನ್ನು ಮಾನಸಾ ಮೇಡಂ ಎಂದು ಹೇಳುತ್ತಾ ನೀವು ಮಾತಾಡಿರುವ ಕೆಲವು ತಪ್ಪು ಮಾತುಗಳನ್ನು ಇಟ್ಟುಕೊಂಡು ನಿಮ್ಮನ್ನು ಯಾಕೆ ನಾವು ಮನೆಯೊಳಗಡೆ ಇಟ್ಟುಕೊಳ್ಳಬೇಕು ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನು ಚೈತ್ರಾ ಅವರು ಅಂದು ಜಗದೀಶ್ ಅವರಿಗೆ "ನೀನು ಒಬ್ಬ ಅಪ್ಪನಿಗೆ ಹುಟ್ಟಿದವನಾಗಿದ್ರೆ ನನ್ನ ಎದುರು ಬಂದು ಮಾತನಾಡು" ಎಂದು ಹೇಳಿರುತ್ತಾರೆ. ಆ ವಿಚಾರವಾಗಿ ಕೂಡ ಕಿಚ್ಚ ಮಾತನಾಡಿದ್ದಾರೆ. ಒಬ್ಬ ಅಪ್ಪನಿಗೆ ಹುಟ್ಟಿದ್ರೆ ಅಂದ್ರೆ ಅಪ್ಪನಿಗೆ ಬಯ್ಯೋದಲ್ಲ, ತಾಯಿಗೆ ಬಯ್ಯೋದು ಎಂದು ಹೇಳಿದ್ದಾರೆ.
ಇಂದು ರಾತ್ರಿ ಬಿಗ್ಬಾಸ್ ಕನ್ನಡ ಸೀಸನ್ 11ರ ಕಿಚ್ಚನ ಪಂಚಾಯ್ತಿ ಹೇಗಿರಲಿದೆ ಎಂಬ ಝಲಕ್ ಕಲರ್ಸ್ ಕನ್ನಡ ನೀಡಿದೆ. ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಬಿಗ್ ಬಾಸ್ ಇಂದಿನ ಸಂಚಿಕೆಯ ಪ್ರೋಮೋ ಪ್ರಕಟವಾಗಿದೆ. ಈ ಪ್ರೋಮೋದಲ್ಲಿ ಇಂದಿನ ಸಂಚಿಕೆಯ ಸಾಕಷ್ಟು ವಿವರಗಳು ದೊರಕಿವೆ.