Amruthadhaare: ಹಲ್ಲಿ ನೆಪದಲ್ಲಿ ಭೂಮಿಕಾ ಗೌತಮ್ ನಡುವೆ ಕುಚ್‌ಕುಚ್; ಕಿಸ್ ಕೊಡಿ ಅಂದ್ರೆ ಹಿಂಗ ಮಾಡೋದು ನಮ್ಮ ಡುಮ್ಮ ಸರ್
Mar 15, 2024 07:00 AM IST
Amruthadhaare: ಹಲ್ಲಿ ನೆಪದಲ್ಲಿ ಭೂಮಿಕಾ ಗೌತಮ್ ನಡುವೆ ಕುಚ್‌ಕುಚ್
- Amruthadhaare Serial Story: ಜೀ ಕನ್ನಡ ವಾಹಿನಿಯ ಅಮೃತಧಾರೆ ಸೀರಿಯಲ್‌ನ ಗುರುವಾರದ ಸಂಚಿಕೆಯಲ್ಲಿ ಗೌತಮ್ ಮತ್ತು ಭೂಮಿಕಾರ ನಡುವಿನ ಪ್ರೇಮದ ಪರಿಚಯ ವೀಕ್ಷಕರಿಗೆ ಆಗಿದೆ. ಆನಂದ್ ಹೇಳಿದಂತೆ ಮುತ್ತು ಕೊಡುವ ಟಾಸ್ಕ್ ಮಾಡಬೇಕೆಂದುಕೊಂಡಿದ್ದ ಗೌತಮ್ ಹಲ್ಲಿ ನೆಪದಲ್ಲಿ ಭೂಮಿಕಾಳ ಮನಸ್ಸಿಗೆ ಇನ್ನಷ್ಟು ಹತ್ತಿರವಾಗಿದ್ದಾನೆ.
Amruthadhaare Serial: ಅಮೃತಧಾರೆ ಸೀರಿಯಲ್‌ನಲ್ಲಿ ಮಲ್ಲಿಯ ಆಹಾರವನ್ನು ಶಕುಂತಲಾದೇವಿ ಟೇಸ್ಟ್ ಮಾಡುವುದನ್ನು ಗೌತಮ್ ನೋಡಿರುತ್ತಾರೆ. "ಮಲ್ಲಿಯ ಕಾಳಜಿಗಾಗಿ" ಎಂದು ಭೂಮಿಕಾ ಹೇಳುತ್ತಾರೆ. ಇದಾದ ಬಳಿಕ ಗೌತಮ್ ಕೂಡ ಸಂಬಂಧ, ಪ್ರೀತಿ ಬಗ್ಗೆ ಒಂದಿಷ್ಟು ಮಾತನಾಡುತ್ತಾರೆ. ಅತ್ತೆಯವರಿಗೆ ಮನೆಯವರ ಬಗ್ಗೆ ತುಂಬಾ ಕಾಳಜಿ ಎಂದು ಭೂಮಿಕಾ ಹೇಳುತ್ತಾಳೆ. ಈ ಮೂಲಕ ಅತ್ತೆಗೆ ಮಾತಿನ ಏಟು ನೀಡುತ್ತಾರೆ. ವಿಷಯ ತಿಳಿಯದ ಗೌತಮ್ "ಅಮ್ಮನ ಹೃದಯ ತುಂಬಾ ಒಳ್ಳೆಯದು" ಎಂದು ಮಾತನಾಡುತ್ತಾನೆ.
ಮಲ್ಲಿಗೆ ಆಕ್ಸಿಡೆಂಟ್ ಮಾಡೋ ಯೋಜನೆಯಲ್ಲಿ ಜೈದೇವ್
ಇನ್ನೊಂದೆಡೆ ಜೈದೇವ್ ಟೆನ್ಷನ್‌ನಲ್ಲಿ, ಕೋಪದಲ್ಲಿ ಗುರಾಯಿಸ್ತಾ ಯೋಚಿಸ್ತಾ ಇರ್ತಾನೆ. ಮನೆ ಹಾಳ ಮಾವನೂ ಅವನ ಬಳಿಗೆ ಬರುತ್ತಾನೆ. "ಏನೇ ಮಾಡೋದಾದ್ರೂ ಅಮ್ಮನಿಗೆ ಹೇಳಿ ಮಾಡು" ಎಂದು ಮಾವ ಹೇಳುತ್ತಾನೆ. "ಈ ಸಲ ಮಾಮ್‌ಗೆ ಹೇಳೋದಿಲ್ಲ, ಪ್ಲಾನ್ ಪಕ್ಕಾ ಮಾಡಿದ್ದೇನೆ. ನಾಳೆ ಮಲ್ಲಿ ಕಥೆ ಮುಗಿಸ್ತೇನೆ" ಎಂದು ಜೈದೇವ್ ಹೇಳುತ್ತಾನೆ. "ನಾಳೆ ಮಲ್ಲಿನ ಆಸ್ಪತ್ರೆಗೆ ಚೆಕಪ್‌ಗೆ ಕರೆದುಕೊಂಡು ಹೋಗಬೇಕು. ದಾರಿಯಲ್ಲಿ ಅವಳ ಕಾರಿಗೆ ಆಕ್ಸಿಡೆಂಟ್ ಮಾಡಿಸ್ಬೇಕು" ಎಂದು ಹೇಳುತ್ತಾನೆ. ಅದಕ್ಕಾಗಿ ಬೇನಾಮಿ ಹೆಸರಿನಲ್ಲಿ ಫೋನ್ ಮತ್ತು ಸಿಮ್ ಕೂಡ ಜೈದೇವ್ ತೆಗೆದುಕೊಂಡಿರುತ್ತಾನೆ.
ಇದನ್ನು ಓದಿ: ಅಮೃತಧಾರೆ ಧಾರಾವಾಹಿಯ ಎಲ್ಲಾ ಸಂಚಿಕೆಗಳು
ಅತ್ತೆ ಜತೆ ಮಹಿಮಾ ಸಣ್ಣ ಕಿರಿಕ್ಕು
ಮಹಿಮಾ ಬೇಜಾರಿನಲ್ಲಿದ್ದಾಳೆ. ಜೀವ ಸಮಧಾನ ಮಾಡೋಕ್ಕೆ ಬಂದೆ. ಅತ್ತೆ ನನ್ನ ಕಾರ್ ಕೀ ತಗೋಂಡ್ರು. ನನಗೆ ಇಷ್ಟವಾಗಲಿಲ್ಲ. ನನ್ನ ಪರ್ಸನಲ್ ಥಿಂಗ್ಸ್ ಕೇಳದೆ ತೆಗೆದುಕೊಳ್ಳುವುದು ಇಷ್ಟವಾಗುವುದಿಲ್ಲ. ಈಗ ಬೇಜಾರಾಗ್ತಾ ಇದೆ ಎಂದು ಮಹಿಮಾ ಹೇಳುತ್ತಾಳೆ. ಅನಿಸಿದ್ದು ಹೇಳಿ ಆಮೇಲೆ ಬೇಜಾರು ಮಾಡ್ಕೋತಿನಿ ಎನ್ನುತ್ತಾಳೆ. ಇನ್ನೊಬ್ಬರಿಗೆ ಬೇಜಾರು ಮಾಡಬಾರದು. ಒಂದಿನ ಕಾರ್ ಕೀ ಕೊಟ್ಟರೆ ಏನಾಗ್ತಿತ್ತು ಎಂದು ಜೀವನ್ ಹೇಳುತ್ತಾನೆ. ತನಗೆ ಕಾರ್‌ನ ಪ್ರೀತಿ ಕುರಿತು ಹೇಳುತ್ತಾಳೆ. ನನ್ನ ಮಾತು ರೂಡ್ ಆಗಿರಬಹುದು. ಆದರೆ, ನನ್ನ ಇಂಟೆನ್ಷನ್ ಅದಾಗಿರಲಿಲ್ಲ. ಎಂದು ಮಹಿಮಾ ಹೇಳುತ್ತಾಳೆ.
ಭೂಮಿಕಾಗೆ ಕಿಸ್ ನೀಡೋ ಟಾಸ್ಕು
ಇಲ್ಲಿ ಗೌತಮ್‌ಗೆ ಕಿಸ್ ಟಾಸ್ಕ್ ಟೆನ್ಷನ್. ಮನೆಯೊಳಗೆ ಶಥಪಥ ಓಡಾಡುತ್ತ ಇದ್ದಾನೆ. ಗೌತಮ್ ಅವರೇ ಎಂದು ಭೂಮಿಕಾ ಬಂದಾಗ ಬೆಚ್ಚಿ ಬೀಳುತ್ತಾನೆ. ಇನ್ನೊಂದೆಡೆ ಆನಂದ್ ಕಾಲ್ ಮಾಡಿ ಮುತ್ತಿನ ವಿಷಯ ನೆನಪಿಸ್ತಾನೆ. ಮುತ್ತು ಕೊಡದೆ ಇದ್ದರೆ ಅಜ್ಜಿಗೆ ಪಿಟ್ಟಿಂಗ್ ಇಡುವೆ ಎಂದು ಆನಂದ್ ಹೇಳುತ್ತಾನೆ. ಒಟ್ಟಾರೆ ಇವತ್ತೇ ಆ ಟಾಸ್ಕ್ ಕಂಪ್ಲಿಟ್ ಮಾಡು ಎಂದು ಆನಂದ್ ಬ್ಲಾಕ್‌ಮೇಲ್ ಮಾಡುತ್ತಾನೆ.
ಹಲ್ಲಿ ನೆಪದಲ್ಲಿ ಭೂಮಿಕಾ ಸನಿಹಕ್ಕೆ ಗೌತಮ್
ರೂಂಗೆ ಬಂದಾಗ ಭೂಮಿಕಾ ಮಲಗಿರ್ತಾರೆ. ಗೌತಮ್‌ಗೆ ಟೆನ್ಷನ್‌ನಲ್ಲಿದ್ದಾಗ ಒಂದು ಹಲ್ಲಿ ಓಡೋಡಿ ಬರುತ್ತದೆ. ಆ ಹಲ್ಲಿಯನ್ನು ಓಡಿಸಲು ಪ್ರಯತ್ನಿಸುತ್ತಾನೆ. ಆ ಸಮಯದಲ್ಲಿ ಭೂಮಿಕಾಳ ಮೇಲೆ ಇವನು ಇರುತ್ತಾನೆ. ಭೂಮಿಕಾ ಕಣ್ಣು ತೆರೆದು ನೋಡಿದಾಗ ಮೇಲೆ ಗೌತಮ್. ಬ್ಯಾಕ್‌ಗ್ರೌಂಡ್‌ನಲ್ಲಿ ಲವ್ ಮ್ಯೂಸಿಕ್ ಬರುತ್ತದೆ. ಹತ್ತಿರದಿಂದ ಗೌತಮ್‌ನನ್ನು ನೋಡಿದಾಗ ಭೂಮಿಕಾಳಿಗೆ ಏನೋ ಒಂದು ತರಹ… ಆಗುತ್ತದೆ. "ಹಲ್ಲಿ ಅನ್ನುತ್ತಾನೆ" "ಎಲ್ಲಿ ಎಲ್ಲಿ" ಎಂದು ಭಯದಿಂದ ಎದ್ದೇಳುತ್ತಾಳೆ. ಅಲ್ಲಿ ಅಲ್ಲಿ ಇಲ್ಲಿ ಇಲ್ಲಿ ಎಂದು ಮಾತಾಗುತ್ತದೆ. "ಅಲ್ಲಿ ಅಲ್ಲಿ ಹೋಯ್ತು" ಎಂದು ಗೌತಮ್ ಹೇಳುತ್ತಾನೆ. "ಹೌದು ನಾನು ನೋಡಿದೆ" ಎಂದು ಭೂಮಿಕಾ ಹೇಳುತ್ತಾಳೆ. ಮಲಕ್ಕೋಳ್ಳಿ ಗುಡ್‌ನೈಟ್ ಎಂದು ಭೂಮಿಕಾ ಮಲಗುತ್ತಾರೆ. ಇನ್ನೊಂದೆಡೆ ಗೌತಮ್ ನಿದ್ದೆ ಮಾಡಲು ಪ್ರಯತ್ನಿಸುತ್ತಾನೆ. ಇನ್ನೊಂದೆಡೆ ಭೂಮಿಕಾ ಗೌತಮ್‌ನನ್ನು ನೆನಪಿಸಿಕೊಂಡು ಖುಷಿಪಡುತ್ತಾಳೆ. ಥ್ಯಾಂಕ್ ಯು ಹಲ್ಲಿ ಎನ್ನುತ್ತಾಳೆ. ಇಬ್ಬರೂ ನಿದ್ದೆಯಿಲ್ಲದೆ ಬೇರೆಬೇರೆ ಮಲಗಿರ್ತಾರೆ.
ಪಾರ್ಥ ಅಪೇಕ್ಷಾ ಮನೆಗೆ ಬರುತ್ತಾನೆ. ಅಮ್ಮ ಮತ್ತು ಜೀವನ್ ಅಲ್ಲಿರುತ್ತಾರೆ. ಸಮಧಾನ ಹೇಳಲು ಫೋನ್ ಮಾಡಿ ಮದುವೆ ಮುರಿದ ಕುರಿತು ಮಾತನಾಡುತ್ತಾರೆ. "ನಾವಿನ್ನೂ ಇನ್ನು ಯಾವುದೇ ಕಾರಣಕ್ಕೂ ದೊಡ್ಮನೆ ಸಂಬಂಧ ಮಾಡಬಾರದು ಎಂದು ಡಿಸೈಡ್ ಮಾಡಿದ್ದೇವೆ" ಎಂದು ಅಪೇಕ್ಷಾಳ ಅಮ್ಮ ಹೇಳಿದಾಗ ಪಾರ್ಥನಿಗೆ ಟೆನ್ಷನ್ ಆಗುತ್ತದೆ.
ಐ ಲವ್ ಯು ಎಂದು ಪಿಸುಗುಟ್ಟಿದ ಭೂಮಿಕಾ
ಬೆಳಗ್ಗೆ ಭೂಮಿಕಾ ಎದ್ದೇಳುತ್ತಾಳೆ. ಗೌತಮ್ ನಿದ್ದೆಯಲ್ಲಿ ಇರುತ್ತಾನೆ. "ಮುದ್ದುಮುದ್ದಾಗಿ ಒಳ್ಳೆ ಮಗು ತರಹ ಮಲಗಿದ್ದಾರೆ. ನನ್ನ ಸುಂದ್ರ" ಎಂದು ಭೂಮಿಕಾ ಗೌತಮ್‌ನನ್ನು ನೋಡುತ್ತಾ ಕುಳಿತುಕೊಳ್ಳುತ್ತಾಳೆ. "ಕಣ್ಣಿನ ಮುಂದೆ ಇದ್ದರೂ ಮುಟ್ಟುಕ್ಕೆ ಹೋಗೋಲ್ಲ ಮುದ್ದಿಸೋಕ್ಕೂ ಆಗೋಲ್ಲ" ಎನ್ನುತ್ತಾಳೆ. "ಇವರು ಹತ್ತಿರ ಬಂದರೆ ಉಸಿರು ನಿಂತು ಹೋಗುತ್ತದೆ" ಎಂದೆಲ್ಲ ಭೂಮಿಕಾ ಕನವರಿಕೆ ಇರುತ್ತದೆ. ಮೆಲ್ಲಗೆ ಗೌತಮ್ ಕಿವಿ ಹತ್ತಿರ ಹೋಗಿ ಗುಡ್‌ಮಾರ್ನಿಂಗ್ ಐ ಲವ್‌ಯು ಅನ್ನುತ್ತಾಳೆ. ತಕ್ಷಣ ಗೌತಮ್ ಎದ್ದೇಳುತ್ತಾನೆ. ಏನಾಯ್ತು ಅನ್ನುತ್ತಾನೆ. ಹಲ್ಲಿ ಅನ್ನುತ್ತಾರೆ ಭೂಮಿಕಾ. ಏನಾದ್ರೂ ಹೇಳಿದ್ರ ಅಂತ ಕೇಳಿದಾಗ ಭೂಮಿಕಾ ಇಲ್ಲ ನಿಮಗೆ ಕನಸು ಬಿದ್ದಿರಬೇಕು. ನಿಮ್ಮ ಕನಸಲ್ಲಿ ನಮ್ಮಂಥ ಯಕಶ್ಚಿತ್ ಲೆಕ್ಚರರ್ ಬರುತ್ತಾರ ಎಂದೆಲ್ಲ ಮಾತಾಗುತ್ತದೆ. "ಪ್ರೀತಿ ಪಿಸುಮಾತು ಕಿವಿಯಲ್ಲಿ ಹೇಳಿದೆ. ನೇರವಾಗಿ ಹೇಳುವ ಸಂದರ್ಭ ಬರುತ್ತದೆ" ಎನ್ನುವ ಸ್ವಗತಗೊಂದಿಗೆ ಸೀರಿಯಲ್ ಮುಂದುವರೆಯುತ್ತದೆ.