ತಲೆಕೆಳಗಾಯ್ತು ಆಟದ ನಿಯಮ, ಮನೆಯಲ್ಲಿ ಹೊತ್ತಿಕೊಂಡಿದೆ ಅಸಮಾಧಾನದ ಕಿಡಿ; ತಲೆಕೆಟ್ಟು ಕುಳಿತ ಕ್ಯಾಪ್ಟನ್ ಹಂಸ
Oct 09, 2024 12:37 PM IST
ಕ್ಯಾಪ್ಟನ್ ಹೇಳಿದ ರೂಲ್ಸ್ ಸರಿ ಇಲ್ಲ ಎಂದು ವಾದ ಮಾಡಿದ ಜಗದೀಶ್
- ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ನಡೆಯುತ್ತಿರುವ ಸಂದರ್ಭದಲ್ಲಿ ರೂಲ್ಸ್ ಬ್ರೇಕ್ ಮಾಡಲಾಗಿದೆ ಎಂದು ವಾದ ನಡೆಯುತ್ತಿದೆ. ಕ್ಯಾಪ್ಟನ್ ಆದವರು ಇದನ್ನು ನೋಡಿಕೊಳ್ಳಬೇಕಿತ್ತು, ಆದರೆ ಈಗ ಕ್ಯಾಪ್ಟನ್ ತಾವೇ ತಪ್ಪು ಮಾಡಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಹಂಸ ಈ ಬಗ್ಗೆ ತಲೆ ಕೆಡಿಸಿಕೊಂಡಿದ್ದಾರೆ.
ಮನೆಯಲ್ಲಿ 'ಗೊಬ್ಬರದ ಅಬ್ಬರ' ಎಂದು ಒಂದು ಆಟ ಇರುತ್ತದೆ. ಎರಡು ತಂಡಗಳನ್ನು ಮಾಡಲಾಗುತ್ತದೆ. ಅದರಲ್ಲಿ ಒಂದೊಂದು ತಂಡಕ್ಕೆ ಒಂದೊಂದು ಬಣ್ಣದ ಚೆಂಡುಗಳನ್ನು ನೀಡಲಾಗುತ್ತದೆ. ಒಂದು ಕವರ್ ಮೇಲೆ ಗಾರ್ಡನ್ ಏರಿಯಾದಲ್ಲಿ ಗೊಬ್ಬರದ ಉಂಡೆಗಳ ನಡುವೆ ತೆವಳಿಕೊಂಡು ತೆರಳುವಂತೆ ಸೂಚನೆ ನೀಡಲಾಗುತ್ತದೆ. ಅದೇ ಸೂಚನೆಯಂತೆ ಆಟ ಆರಂಭ ಆಗುತ್ತದೆ. ಹೀಗಿರುವಾಗ ನಿಯಮ ಸರಿಯಾಗಿ ಪಾಲನೆ ಆಗಿಲ್ಲ ಎನ್ನುವುದು ಹಲವರ ವಾದವಾಗಿದೆ. ಇನ್ನು ಆಟದ ಸೂಚನೆಯಲ್ಲಿ ಇರುವಂತೆ ಕೆಲವರು ಆಟ ಆಡಿಲ್ಲ ಎನ್ನುವುದು ನಿಜ.
ಸೂಚನೆಗೆ ಬೆಲೆ ಇಲ್ವಾ?
ಬಿಗ್ ಬಾಸ್ ನೀಡಿದ್ದ ಸೂಚನೆಯಲ್ಲಿ ಎಲ್ಲರೂ ತೆವಳಿಕೊಂಡು ತಮ್ಮ ಚೆಂಡುಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ದಾಟಿಸಿ ಆಟ ಆಡಬೇಕಿತ್ತು. ಆದರೆ ಯಾರೂ ಜಂಪ್ ಮಾಡಿ ಹೋಗಿ ಆಟ ಆಡುವಂತಿರಲಿಲ್ಲ. ಅವರಿಗೆ ಮೀಸಲಿರುವ ಸ್ಟ್ಯಾಂಡ್ ಮೇಲೆ ಚೆಂಡುಗಳನ್ನು ತೆಗೆದುಕೊಂಡು ಹೋಗಿ ಇಡುವುದು ಆಟದ ನಿಯಮವಾಗಿತ್ತು. ಕೆಂಪು ಮತ್ತು ನೀಲಿ ಬಣ್ಣದ ಚೆಂಡುಗಳನ್ನು ಆಟದಲ್ಲಿ ನೀಡಲಾಗಿತ್ತು. ಹೀಗಿರುವಾಗ ಕೆಲವರು ಜಂಪ್ ಮಾಡಿಕೊಂಡು ಹೋಗಿ ಚೆಂಡುಗಳನ್ನು ಇಟ್ಟಿದ್ದಾರೆ.
ಇದು ಜಗದೀಶ್ ಹಾಗೂ ಚೈತ್ರಾ ಅವರ ಸಿಟ್ಟಿಗೆ ಕಾರಣವಾಗಿದೆ. ಇನ್ನು ಸುರೇಶ್ ಅವರು ಕ್ಯಾಮರಾ ಎದುರಿಗೆ ಬಂದು ನಾವು ಇನ್ನು ಮೇಲೆ ಯಾವ ಆಟವನ್ನೂ ಆಡುವುದಿಲ್ಲ ಎಲ್ಲ ಮೋಸ ಎಂದು ಹೇಳಿದ್ಧಾರೆ. ಏನು ಮೋಸ ಆಗಿದೆ ಎಂದು ಅಷ್ಟು ಸ್ಪಷ್ಟವಾಗಿ ತಿಳಿಯುವುದಿಲ್ಲ. ಆದರೆ ಮನೆಯವರ ಅಸಮಾಧಾನ ಮಾತ್ರ ಎದ್ದು ತೋರುತ್ತದೆ.
ಇನ್ನು ಆಟ ಆರಂಭ ಆಗುವ ಮುನ್ನವೇ ಎಲ್ಲರನ್ನೂ ಗಟ್ಟಿಯಾಗಿ ಟೇಪ್ ಹಾಕಿ ಲಾಕ್ ಮಾಡಲಾಗುತ್ತದೆ. ಎರಡೂ ಕಾಲುಗಳನ್ನು ಮತ್ತು ಕೈಗಳನ್ನು ದೇಹಕ್ಕೆ ಅಂಟಿಕೊಂಡಿರುವಂತೆ ಕಟ್ಟಿ ಹಾಕಲಾಗುತ್ತದೆ. ಹೀಗಿರುವಾಗ ಅವರು ತೆವಳಿಕೊಂಡೇ ಹೋಗಬೇಕಾದ ಪರಿಸ್ಥಿತಿ ಇರುತ್ತದೆ. ಇನ್ನು ಯಾವುದಕ್ಕೂ ಕೈ ಅಥವಾ ಕಾಲನ್ನು ಉಪಯೋಗ ಮಾಡುವಹಾಗಿಲ್ಲ ಎನ್ನುವುದೇ ಇದರ ಉದ್ದೇಶ ಕೂಡ ಆಗಿರುತ್ತದೆ. ಆದರೂ ಕೆಲವರು ನಿಯಮ ಉಲ್ಲಂಘನೆ ಮಾಡಿದ್ದಾರೆ. ಇದರಿಂದ ಉಳಿದವರು ಸಿಟ್ಟಾಗಿದ್ದಾರೆ.
ಜಗದೀಶ್ ಕೋಪ
ಜಗದೀಶ್ ಅವರು ಕ್ಯಾಪ್ಟನ್ ಹಂಸ ಅವರಿಗೆ ಬೈದಿದ್ದಾರೆ. ನೀವು ಅವರ ಋಣ ತೀರಿಸುವ ಆಸೆ ಇದ್ದರೆ ಅವರ ಮನೆಗೆ ಹೋಗಿ ತೀರಿಸಿ. ಈ ಆಟದಲ್ಲಿ ಬೇಡ ಎಂದು ಹೇಳಿದ್ದಾರೆ. ಇನ್ನು ಚೈತ್ರಾ ಕುಂದಾಪುರ ನೀವೆಂಥಾ ಕ್ಯಾಪ್ಟನ್ ಎಂದು ಗುಡುಗಿದ್ದಾರೆ. ಉಳಿದವರು ಇಷ್ಟೆಲ್ಲ ಮಾತನಾಡುತ್ತಾ ಇದ್ದರೂ ಹಂಸ ಅವರು ಸುಮ್ಮನೆ ಕುಳಿತಿದ್ದಾರೆ. ಅವರಿಗೆ ತಾನು ಮುಂದೇನು ಮಾಡಬೇಕು ಎಂದು ತೋಚದಂತಿದೆ.
ನಾಮಿನೇಷನ್ ಭೀತಿ
ಈ ಹಿಂದೆ ಆಟದ ನಿಮಯ ಉಲ್ಲಂಘನೆ ಮಾಡಿದರೆ ಏನಾಗುತ್ತದೆ ಎಂಬುದನ್ನು ಬಿಗ್ ಬಾಸ್ ತೋರಿಸಿಕೊಟ್ಟಿದ್ದಾರೆ. ಆಟದ ನಿಯಮ ಉಲ್ಲಂಘನೆ ಮಾಡಿದಕ್ಕೆ ಬಿಗ್ ಬಾಸ್ ನೀಡಿದ ಪನಿಶ್ಮೆಂಟ್ ನಿಜಕ್ಕೂ ಶಾಕಿಂಗ್ ಆಗಿತ್ತು ಮನೆಯ ಎಲ್ಲ ಸ್ಪರ್ಧಿಗಳೂ ಒಂದೇ ಬಾರಿಗೆ ನಾಮಿನೇಟ್ ಮಾಡಿದ್ದರು ಆದರೂ ಮತ್ತೆ ಅದೇ ತಪ್ಪಾಗುತ್ತಿದೆ ಎಂದು ಹಲವರಿಗೆ ಅನಿಸಿದೆ. ಬಿಗ್ ಬಾಸ್ ಮನೆಯಲ್ಲಿ ವಾರಾಂತ್ಯ ಬಂದರೆ ಸಾಕು, ಆಟದ ಬಿಸಿ ಸುಡುವಷ್ಟಿರುತ್ತದೆ. ಅದರಲ್ಲೂ ಈ ಬಾರಿ ಮನೆಯ ಕೆಲ ಸದಸ್ಯರ ಎಡವಟ್ಟಿನಿಂದಾಗಿ ಮನೆಯ ಎಲ್ಲ ಸ್ಪರ್ಧಿಗಳೂ ಒಂದೇ ಬಾರಿಗೆ ನಾಮಿನೇಟ್ ಆಗಿದ್ದಾರೆ.
ವಿಭಾಗ