logo
ಕನ್ನಡ ಸುದ್ದಿ  /  ಮನರಂಜನೆ  /  Lucky Baskhar: ದುಲ್ಕರ್ ಸಲ್ಮಾನ್ ಅಭಿನಯದ ‘ಲಕ್ಕಿ ಬಾಸ್ಕರ್’ ಸಿನಿಮಾದ ಈ ದೃಶ್ಯ ಈಗ ಎಲ್ಲೆಡೆ ವೈರಲ್

Lucky Baskhar: ದುಲ್ಕರ್ ಸಲ್ಮಾನ್ ಅಭಿನಯದ ‘ಲಕ್ಕಿ ಬಾಸ್ಕರ್’ ಸಿನಿಮಾದ ಈ ದೃಶ್ಯ ಈಗ ಎಲ್ಲೆಡೆ ವೈರಲ್

Suma Gaonkar HT Kannada

Dec 04, 2024 05:57 PM IST

google News

ದುಲ್ಕರ್ ಸಲ್ಮಾನ್ ಅಭಿನಯದ ‘ಲಕ್ಕಿ ಬಾಸ್ಕರ್’ ಸಿನಿಮಾ ದೃಶ್ಯ ವೈರಲ್

    • ದುಲ್ಕರ್ ಸಲ್ಮಾನ್ ಅಭಿನಯದ ದೃಶ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಆಭರಣದ ಅಂಗಡಿಗೆ ಬಾಸ್ಕರ್ ಕುಟುಂಬ ಹೋದಾಗ ಆಗುವ ಅವಮಾನದ ಬಗ್ಗೆ ಈ ದೃಷ್ಯ ಇದೆ. ಲಕ್ಕಿ ಬಾಸ್ಕರ್ ದುಲ್ಕರ್ ಸಲ್ಮಾನ್ ಅವರ ಇತ್ತೀಚಿನ ಚಿತ್ರವಾಗಿದ್ದು ಸಾಕಷ್ಟು ಪಾಸಿಟಿವ್ ಟಾಕ್ ಪಡೆದುಕೊಂಡಿದೆ. 
ದುಲ್ಕರ್ ಸಲ್ಮಾನ್ ಅಭಿನಯದ ‘ಲಕ್ಕಿ ಬಾಸ್ಕರ್’ ಸಿನಿಮಾ ದೃಶ್ಯ ವೈರಲ್
ದುಲ್ಕರ್ ಸಲ್ಮಾನ್ ಅಭಿನಯದ ‘ಲಕ್ಕಿ ಬಾಸ್ಕರ್’ ಸಿನಿಮಾ ದೃಶ್ಯ ವೈರಲ್

ದುಲ್ಕರ್ ಸಲ್ಮಾನ್ ಅವರ ಹೊಸ ಸಿನಿಮಾ ‘ಲಕ್ಕಿ ಬಾಸ್ಕರ್‌’ ತುಂಬಾ ಸದ್ದು ಮಾಡುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲೂ ಸಹ ಸಿನಿಮಾದ ಸಾಕಷ್ಟು ದೃಶ್ಯಗಳು ವೈರಲ್ ಆಗುತ್ತಿದೆ. ಈ ಸಿನಿಮಾ ಈಗಾಗಲೇ ಒಟಿಟಿಯಲ್ಲಿ ಪ್ರಸಾರವಾಗುತ್ತಿದೆ. ಈಗ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ. ಸಿನಿಮಾ ನೋಡಿದ ಸಾಕಷ್ಟು ಜನರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಮೀನಾಕ್ಷಿ ಚೌಧರಿ ನಾಯಕಿಯಾಗಿ ತುಂಬಾ ಉತ್ತಮವಾಗಿ ನಟನೆ ಮಾಡಿದ್ದಾರೆ. ಈ ಚಿತ್ರವನ್ನು ವೆಂಕಿ ಅಟ್ಲೂರಿ ನಿರ್ದೇಶಿಸಿದ್ದಾರೆ.

ಪಾಸಿಟಿವ್ ಟಾಕ್ ಪಡೆದ ಸಿನಿಮಾ

ಲಕ್ಕಿ ಬಾಸ್ಕರ್ ದುಲ್ಕರ್ ಸಲ್ಮಾನ್ ಅವರ ಇತ್ತೀಚಿನ ಚಿತ್ರವಾಗಿದ್ದು, ಇದು ಅಕ್ಟೋಬರ್ 31, 2024 ರಂದು ತೆರೆಕಂಡಿದೆ. ಚಿತ್ರದ ಯಶಸ್ಸಿನ ಬಗ್ಗೆ ನಿರ್ಮಾಪಕರು ತುಂಬಾ ವಿಶ್ವಾಸ ಹೊಂದಿದ್ದರು. ಅದೇ ರೀತಿ ಉತ್ತಮ ರೆಸ್ಪಾನ್ಸ್‌ ಹಾಗೂ ಪಾಸಿಟಿವ್ ಟಾಕ್ ಈ ಸಿನಿಮಾ ಬಗ್ಗೆ ಇದೆ. ಮೊದಲ ಪ್ರದರ್ಶನದಿಂದಲೇ ಉತ್ತಮ ಅಭಿಪ್ರಾಯವನ್ನು ಗಳಿಸಿಕೊಂಡಿದೆ. ಇದಕ್ಕೆ ದುಲ್ಕರ್ ಸಲ್ಮಾನ್ ಅವರ ಅಭಿನಯವೂ ಕಾರಣವಾಗಿದೆ.

ಆಭರಣ ಅಂಗಡಿಯಲ್ಲಿ ಬಂಗಾರವನ್ನು ಖರೀದಿ ಮಾಡಲು ಹೋದಾಗ ಭಾಸ್ಕರ್ ಕುಟುಂಬಕ್ಕೆ ಅವಮಾನ ಆಗುತ್ತದೆ. ಆ ಸೀನ್ ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ಅಲ್ಲಿ ಹಣ ಇಲ್ಲದವರು ಎಂದು ನಿರ್ಲಕ್ಷ್ಯ ಮಾಡುತ್ತಾರೆ. ಭಾಸ್ಕರ್ ತನಗೆ ಈ ಆಭರಣ ತೋರಿಸಿ ಎಂದು ಕೇಳಿದಾಗಲೂ ಅಲ್ಲಿರುವ ಅಂಗಡಿ ಕೆಲಸಗಾರರು ಯಾರೂ ಮುಂದಾಗುವುದಿಲ್ಲ. ಅಲ್ಲಿ ಅವರಿಗೆ ಅವಮಾನ ಆಗುತ್ತದೆ. ನಂತರ ಅದೇ ಜಾಗದಲ್ಲಿ ಅವನು ಗೌರವ ಪಡೆದುಕೊಳ್ಳುತ್ತಾನೆ. ಈ ಸೀನ್ ತುಂಬಾ ವೈರಲ್ ಆಗುತ್ತಿದೆ.

ಹಣದಿಂದ ಮಾತ್ರ ಎಲ್ಲವೂ ಸಾದ್ಯ

“ಭಾರತದಲ್ಲಿ, ನಿಮಗೆ ಗೌರವ ಬೇಕಾದರೆ, ಹಣದಿಂದ ಮಾತ್ರ ಅದನ್ನು ಪಡೆಯಲು ಸಾಧ್ಯ” ಎಂದು ನಿರೂಪಿಸುವ ದೃಷ್ಯ ಅದು. ಈ ದೃಶ್ಯ ಚಿತ್ರಮಂದಿರಗಳಲ್ಲಿ ಚಪ್ಪಾಳೆ ಗಿಟ್ಟಿಸಿಕೊಂಡಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ದುಲ್ಕರ್ ಅಭಿನಯವನ್ನು ಅಭಿಮಾನಿಗಳು ಶ್ಲಾಘಿಸಿದ್ದಾರೆ. ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ನಿರ್ಮಾಣದ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ 100 ಕೋಟಿಗೂ ಅಧಿಕ ಗಳಿಕೆ ಮಾಡಿದೆ. ದುಲ್ಕರ್ ಸಲ್ಮಾನ್ ಈಗ ತೆಲುಗು ಚಿತ್ರರಂಗದಲ್ಲಿ ಪ್ರಮುಖ ತಾರೆಯಾಗಿ ಗುರುತಿಸಿಕೊಂಡಿದ್ದಾರೆ. ಅವರು ಈಗಾಗಲೇ ಮೂರು ಹೊಸ ಟಾಲಿವುಡ್ ಪ್ರಾಜೆಕ್ಟ್‌ಗಳಿಗೆ ಸಹಿ ಹಾಕಿದ್ದಾರೆ. ಮುಂದಿನ ದಿನಗಳಲ್ಲಿ ಲಕ್ಕಿ ಬಾಸ್ಕರ್ ಯಾವ ರೀತಿ ಪ್ರದರ್ಶನ ನೀಡಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ