Naga Chaitanya Sobhita Wedding: ಸಿಂಪಲ್ ಆಗಿ ಮದುವೆ ಆಗ್ತಿದ್ದಾರೆ ನಾಗ ಚೈತನ್ಯ, ಶೋಭಿತಾ ಧೂಳಿಪಾಲ; ಇಲ್ಲಿದೆ ಅತಿಥಿಗಳ ಲಿಸ್ಟ್‌
ಕನ್ನಡ ಸುದ್ದಿ  /  ಮನರಂಜನೆ  /  Naga Chaitanya Sobhita Wedding: ಸಿಂಪಲ್ ಆಗಿ ಮದುವೆ ಆಗ್ತಿದ್ದಾರೆ ನಾಗ ಚೈತನ್ಯ, ಶೋಭಿತಾ ಧೂಳಿಪಾಲ; ಇಲ್ಲಿದೆ ಅತಿಥಿಗಳ ಲಿಸ್ಟ್‌

Naga Chaitanya Sobhita Wedding: ಸಿಂಪಲ್ ಆಗಿ ಮದುವೆ ಆಗ್ತಿದ್ದಾರೆ ನಾಗ ಚೈತನ್ಯ, ಶೋಭಿತಾ ಧೂಳಿಪಾಲ; ಇಲ್ಲಿದೆ ಅತಿಥಿಗಳ ಲಿಸ್ಟ್‌

ಮೂರು ವರ್ಷಗಳಿಂದ ಡೇಟಿಂಗ್ ಮಾಡುತ್ತಿರುವ ನಾಗ ಚೈತನ್ಯ ಹಾಗೂ ಶೋಭಿತಾ ಧೂಳಿಪಾಲ ಇಂದು ಮದುವೆಯಾಗಲಿದ್ದಾರೆ. ಮದುವೆಗೆ ಯಾರೆಲ್ಲ ಅತಿಥಿಗಳಾಗಿ ಆಗಮಸಲಿದ್ದಾರೆ ಎಂಬ ಪಟ್ಟಿ ಇಲ್ಲಿದೆ ಗಮನಿಸಿ.

ನಾಗ ಚೈತನ್ಯ, ಶೋಭಿತಾ ಧೂಳಿಪಾಲ ಮದುವೆ
ನಾಗ ಚೈತನ್ಯ, ಶೋಭಿತಾ ಧೂಳಿಪಾಲ ಮದುವೆ

ಮೂರು ವರ್ಷಗಳಿಂದ ಡೇಟಿಂಗ್ ಮಾಡುತ್ತಿರುವ ನಾಗ ಚೈತನ್ಯ ಹಾಗೂ ಶೋಭಿತಾ ಧೂಳಿಪಾಲ ಈಗ ಮದುವೆಯಾಗಲಿದ್ದಾರೆ. ಅಕ್ಕಿನೇನಿ ಕುಟುಂಬವು ಶೋಭಿತಾ ಅವರನ್ನು ಸ್ವಾಗತಿಸಲು ಸಿದ್ಧವಾಗಿದೆ. ಇಂದು ಡಿಸೆಂಬರ್ 4ರಂದು ಮದುವೆಯಾಗಲಿದ್ದಾರೆ. ಆದರೆ ಸೀಮಿತ ಅತಿಥಿಗಳನ್ನು ಮಾತ್ರ ಆಹ್ವಾನಿಸಲಾಗಿದೆ. ಈ ಹಿಂದೆ ನಾಗಚೈತನ್ಯ ಅವರು ಸಮಂತಾ ಅವರನ್ನು ಮದುವೆಯಾಗಿದ್ದರು. ಸಮಂತಾ ಈಗ ತಮ್ಮ ತಂದೆಯನ್ನು ಕಳೆದುಕೊಂಡು ಬೇಸರದಲ್ಲಿದ್ದಾರೆ. ಇತ್ತ ಅಕ್ಕಿನೇನಿ ಕುಟುಂಬದಲ್ಲಿ ಮದುವೆ ಸಂಭ್ರಮ ಮನೆಮಾಡಿದೆ.

ಅತಿಥಿಗಳ ಪಟ್ಟಿ ಹೀಗಿದೆ
ಈ ಮದುವೆಯಲ್ಲಿ ಅಕ್ಕಿನೇನಿ, ಧೂಳಿಪಾಲ ಕುಟುಂಬದ ಸದಸ್ಯರು ದಗ್ಗುಬಾಟಿ ಕುಟುಂಬಗಳು ಮತ್ತು ಸೀಮಿತ ಸಂಖ್ಯೆಯ ಆಪ್ತರನ್ನು ಆಹ್ವಾನಿಸಲಾಗಿದೆ. ಇಲ್ಲಿಯವರೆಗಿನ ಸುದ್ದಿಗಳ ಪ್ರಕಾರ, ಈ ಮದುವೆಗೆ ಮೆಗಾಸ್ಟಾರ್ ಚಿರಂಜೀವಿ, ಪ್ರಭಾಸ್, ರಾಮ್ ಚರಣ್, ಉಪಾಸನಾ, ಜೂನಿಯರ್ ಎನ್ಟಿಆರ್, ಅಲ್ಲು ಅರ್ಜುನ್ ಮತ್ತು ಮಹೇಶ್ ಬಾಬು ತಮ್ಮ ಕುಟುಂಬದೊಂದಿಗೆ ಬರಲಿದ್ದಾರೆ. ಪಿವಿ ಸಿಂಧು, ನಿರ್ದೇಶಕ ಎಸ್ ಎಸ್ ರಾಜಮೌಳಿ ಕೂಡ ಬರುವ ಸಾಧ್ಯತೆ ಇದೆಯಂತೆ.

ಹೈದರಾಬಾದ್‌ನ ಅನ್ನಪೂರ್ಣ ಸ್ಟುಡಿಯೋದಲ್ಲಿ ವಿಶೇಷವಾಗಿ ಏರ್ಪಡಿಸಲಾಗಿದ್ದ ಮದುವೆ ಮಂಟಪದಲ್ಲಿ ಇಂದು ರಾತ್ರಿ 8.13 ಕ್ಕೆ ನಾಗ ಚೈತನ್ಯ ಹಾಗೂ ಶೋಭಿತಾ ಧೂಳಿಪಾಲ ಅವರ ಮದುವೆ ನಡೆಯಲಿದೆ. ಸ್ಟುಡಿಯೋದಲ್ಲಿರುವ ಅಕ್ಕಿನೇನಿ ನಾಗೇಶ್ವರ ರಾವ್ ಪ್ರತಿಮೆಯ ಮುಂಭಾಗದಲ್ಲಿ ಮದುವೆ ಮಾಡುತ್ತಾರೆ ಎಂದು ವರದಿಯಾಗಿದೆ.ನವದಂಪತಿಗಳು ಎಎನ್‌ಆರ್ ಅವರ ಆಶೀರ್ವಾದವನ್ನು ಪಡೆಯಬೇಕೆಂದು ಈ ವ್ಯವಸ್ಥೆ ಮಾಡಲಾಗಿದೆ.

ಶೋಭಿತಾ ಧೂಳಿಪಾಲ ಅವರು ಕಳೆದ ಕೆಲವು ದಿನಗಳಿಂದ ಸಾಮಾಜಿಕ ಮಾಧ್ಯಮದಲ್ಲಿ ಮದುವೆಯ ಬಗ್ಗೆ ನಿಯಮಿತವಾಗಿ ಮಾಹಿತಿಯನ್ನು ಹಂಚಿಕೊಳ್ಳುತ್ತಲೇ ಇದ್ದಾರೆ. ಮಂಗಳ ಸ್ನಾನ, ಹಳದಿ ಫೋಟೋಗಳು ಮತ್ತು ವಿಡಿಯೋಗಳು ಈಗಾಗಲೇ ವೈರಲ್ ಆಗಿವೆ. ನಾಗ ಚೈತನ್ಯ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಮಾಹಿತಿ ನೀಡುತ್ತಿಲ್ಲ. 2017ರಲ್ಲಿ ಸಮಂತಾ ಅವರನ್ನು ಮದುವೆಯಾಗಿದ್ದ ನಾಗ ಚೈತನ್ಯ 2021ರಲ್ಲಿ ವಿಚ್ಛೇದನ ಪಡೆದಿದ್ದು ಗೊತ್ತೇ ಇದೆ.

Whats_app_banner