logo
ಕನ್ನಡ ಸುದ್ದಿ  /  ಮನರಂಜನೆ  /  ಎರಡನೇ ಬಾರಿಗೆ ಅಖಿಲ್ ಅಕ್ಕಿನೇನಿ ನಿಶ್ಚಿತಾರ್ಥ; ಇವರೇ ನೋಡಿ ಹುಡುಗಿ, ವೈರಲ್ ಆಯ್ತು ನಾಗಾರ್ಜುನ ಟ್ವೀಟ್

ಎರಡನೇ ಬಾರಿಗೆ ಅಖಿಲ್ ಅಕ್ಕಿನೇನಿ ನಿಶ್ಚಿತಾರ್ಥ; ಇವರೇ ನೋಡಿ ಹುಡುಗಿ, ವೈರಲ್ ಆಯ್ತು ನಾಗಾರ್ಜುನ ಟ್ವೀಟ್

Jayaraj HT Kannada

Nov 27, 2024 11:04 AM IST

google News

ಎರಡನೇ ಬಾರಿಗೆ ಅಖಿಲ್ ಅಕ್ಕಿನೇನಿ ನಿಶ್ಚಿತಾರ್ಥ; ಇವರೇ ಹುಡುಗಿ, ನಾಗಾರ್ಜುನ ಟ್ವೀಟ್ ವೈರಲ್

    • ಅಖಿಲ್ ಅಕ್ಕಿನೇನಿ ಮದುವೆ ನಿಶ್ಚಯವಾಗಿದೆ. ಝೈನಾಬ್ ರೌಜಿ ಎಂಬ ಹುಡುಗಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಅವರ ತಂದೆ ಮತ್ತು ನಟ ಅಕ್ಕಿನೇನಿ ನಾಗಾರ್ಜುನ ಟ್ವೀಟ್ ಮಾಡಿದ್ದಾರೆ. ಇದು ಅಖಿಲ್ ಅವರ ಎರಡನೇ ಎಂಗೇಜ್‌ಮೆಂಟ್‌ ಎಂಬುದು ಗಮನಾರ್ಹ.
ಎರಡನೇ ಬಾರಿಗೆ ಅಖಿಲ್ ಅಕ್ಕಿನೇನಿ ನಿಶ್ಚಿತಾರ್ಥ; ಇವರೇ ಹುಡುಗಿ, ನಾಗಾರ್ಜುನ ಟ್ವೀಟ್ ವೈರಲ್
ಎರಡನೇ ಬಾರಿಗೆ ಅಖಿಲ್ ಅಕ್ಕಿನೇನಿ ನಿಶ್ಚಿತಾರ್ಥ; ಇವರೇ ಹುಡುಗಿ, ನಾಗಾರ್ಜುನ ಟ್ವೀಟ್ ವೈರಲ್

ಅಕ್ಕಿನೇನಿ ಕುಟುಂಬದ ಕುಡಿ ಅಖಿಲ್ ಅಕ್ಕಿನೇನಿ ಅವರ ನಿಶ್ಚಿತಾರ್ಥ ಮಂಗಳವಾರ (ನವೆಂಬರ್ 26) ಸದ್ದಿಲ್ಲದೆ ನಡೆಯಿತು. ಟಾಲಿವುಡ್‌ ನಟ ಝೈನಾಬ್ ಎಂಬ ಹುಡುಗಿಯನ್ನು ಟಾಲಿವುಡ್‌ ಹೀರೋ ಮದುವೆಯಾಗಲಿದ್ದಾರೆ. ಅಖಿಲ್‌ ಎಂಗೇಜ್‌ಮೆಂಟ್‌ ಕುರಿತು ತಂದೆ ನಾಗಾರ್ಜುನ ತಮ್ಮ ಎಕ್ಸ್ (ಟ್ವಿಟರ್) ಅಕೌಂಟ್ ಮೂಲಕ ಬಹಿರಂಗಪಡಿಸಿದ್ದಾರೆ. ಈ ನಡುವೆ ನಾಗ ಚೈತನ್ಯ ಮತ್ತು ಶೋಭಿತಾ ಕೂಡಾ ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡಿರುವ ಕುರಿತು ತಿಳಿದುಬಂದಿದೆ. ಅಖಿಲ್ ಈ ಹಿಂದೆ ಒಂದು ಬಾರಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ ಮದುವೆಗೂ ಮುನ್ನವೇ ಆ ಸಂಬಂಧ ಮುರಿದು ಬಿತ್ತು.

ಟಾಲಿವುಡ್‌ನ ಯುವ ನಾಯಕ ಅಖಿಲ್ ಅಕ್ಕಿನೇನಿ ಎರಡನೇ ಬಾರಿ ಎಂಗೇಜ್‌ ಆಗಿದ್ದಾರೆ. ಈ ಕುರಿತು ಮಂಗಳವಾರ ಸಂಜೆ ನಾಗಾರ್ಜುನ ಟ್ವೀಟ್ ಮಾಡಿದ್ದು, ಆ ಟ್ವೀಟ್ ವೈರಲ್ ಆಗುತ್ತಿದೆ. “ನಮ್ಮ ಮಗ ಅಕ್ಕಿನೇನಿ ಅಖಿಲ್ ಮತ್ತು ನಮ್ಮ ಭಾವಿ ಸೊಸೆ ಝೈನಾಬ್ ರೌಜಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಹೇಳಲು ನಮಗೆ ತುಂಬಾ ಸಂತೋಷವಾಗಿದೆ” ಎಂದು ಪೋಸ್ಟ್ ಮಾಡಿದ್ದಾರೆ.

ಝೈನಬ್ ಅವರನ್ನು ನಮ್ಮ ಕುಟುಂಬಕ್ಕೆ ಸ್ವಾಗತಿಸುವುದು ತುಂಬಾ ರೋಮಾಂಚನಕಾರಿಯಾಗಿದೆ. ದಂಪತಿಗಳು ಅವರ ಜೀವನದುದ್ದಕ್ಕೂ ಸಂತೋಷವಾಗಿರಲಿ ಎಂದು ಶುಭ ಹಾರೈಸುತ್ತೇನೆ ಎಂದು ನಾಗಾರ್ಜುನ ಬರೆದುಕೊಂಡಿದ್ದಾರೆ.

ನಾಗಾರ್ಜುನ ಅಕ್ಕಿನೇನಿ ಟ್ವೀಟ್

ಝೈನಾಬ್ ಕೂಡಾ ಕಲಾವಿದೆ. ಅಖಿಲ್ ಎರಡು ವರ್ಷಗಳ ಹಿಂದೆ ಅವರನ್ನು ಮೊದಲ ಬಾರಿಗೆ ಭೇಟಿಯಾದರು. ಅವರ ಸ್ನೇಹ ಪ್ರೀತಿಗೆ ತಿರುಗಿತು. ಈಗ ಇಬ್ಬರೂ ಅಕ್ಕಿನೇನಿ ಅವರ ಮನೆಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಮುದ್ದಾದ ಜೋಡಿಯ ಮದುವೆಯ ದಿನಾಂಕ ಇನ್ನೂ ಘೋಷಿಸಿಲ್ಲ. ಶಿಘ್ರದಲ್ಲೇ ದಿನಾಂಕ ಬಹಿರಂಗವಾಗಬಹುದು. ನಾಗ ಚೈತನ್ಯ ಮತ್ತು ಶೋಭಿತಾ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬುದು ಈಗಾಗಲೇ ತಿಳಿದಿದೆ. ಮೂರು ತಿಂಗಳ ಹಿಂದೆ, ನಾಗಾರ್ಜುನ ತಮ್ಮ ನಿಶ್ಚಿತಾರ್ಥವನ್ನು ಟ್ವೀಟ್ ಮಾಡುವ ಮೂಲಕ ಆಶ್ಚರ್ಯಗೊಳಿಸಿದರು.

2017ರಲ್ಲಿ ಶ್ರೇಯಾ ಭೂಪಾಲ್ ಜೊತೆಗೆ ಎಂಗೇಜ್‌ಮೆಂಟ್

ಇದು ಅಖಿಲ್ ಅಕ್ಕಿನೇನಿಗೆ ಎರಡನೇ ನಿಶ್ಚಿತಾರ್ಥವಾಗಿದೆ. 2017ರಲ್ಲಿ ಮೊದಲ ಬಾರಿಗೆ ಶ್ರೇಯಾ ಭೂಪಾಲ್ ಎಂಬ ಹುಡುಗಿಯೊಂದಿಗೆ ಅಖಿಲ್‌ ಮದುವೆ ನಿಶ್ಚಯ ಆಗಿತ್ತು. ಆದರೆ ಮದುವೆಯವರೆಗೂ ಈ ಸಂಬಂಧ ಉಳಿಯಲಿಲ್ಲ. ಕೆಲವು ತಿಂಗಳ ಹಿಂದೆ ಮದುವೆಯನ್ನು ರದ್ದುಗೊಳಿಸಿದ್ದು, ಅಭಿಮಾನಿಗಳಿಗೆ ಅಚ್ಚರಿಯುಂಟುಮಾಡಿತ್ತು. ವಿಮಾನ ನಿಲ್ದಾಣದಲ್ಲಿ ಇಬ್ಬರೂ ಜಗಳವಾಡಿದ ಬಳಿಕ ಮದುವೆ ರದ್ದಾಗಿದೆ ಎಂದು ವರದಿಯಾಗಿದೆ.

ಅಖಿಲ್ ಅಕ್ಕಿನೇನಿ ಚಿತ್ರರಂಗಕ್ಕೆ ಕಾಲಿಟ್ಟು ಹಲವು ವರ್ಷಗಳಾಗಿವೆ. ಆದರೆ, ಹೇಳಿಕೊಳ್ಳುವಂಥಾ ಯಶಸ್ಸು ಅವರಿಗೆ ಸಿಕ್ಕಿಲ್ಲ. ಅವರು ನಟಿಸಿದ ಕೊನೆಯ ಚಿತ್ರ ಏಜೆಂಟ್ ಗಲ್ಲಾಪೆಟ್ಟಿಗೆಯಲ್ಲಿ ನಿರೀಕ್ಷಿತ ಗಳಿಕೆ ಮಾಡಲು ಸಾಧ್ಯವಾಗಲಿಲ್ಲ. ಸದ್ಯ ಎರಡು ಹೊಸ ಚಿತ್ರಗಳಿಗೆ ಪವನ್ ಸಹಿ ಹಾಕಿದ್ದಾರೆ. ಇದರ ಚಿತ್ರೀಕರಣ ಮುಂದಿನ ವರ್ಷ ಪ್ರಾರಂಭವಾಗಲಿದೆ.‌

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ