logo
ಕನ್ನಡ ಸುದ್ದಿ  /  ಮನರಂಜನೆ  /  ಚಿರಂಜೀವಿಗೆ ಪದ್ಮ ವಿಭೂಷಣ ಪ್ರಶಸ್ತಿ; ಮೂಕವಿಸ್ಮಿತನಾದೆ ಎಂದ ಮೆಗಾಸ್ಟಾರ್‌

ಚಿರಂಜೀವಿಗೆ ಪದ್ಮ ವಿಭೂಷಣ ಪ್ರಶಸ್ತಿ; ಮೂಕವಿಸ್ಮಿತನಾದೆ ಎಂದ ಮೆಗಾಸ್ಟಾರ್‌

Praveen Chandra B HT Kannada

Jan 26, 2024 10:05 AM IST

google News

ಚಿರಂಜೀವಿಗೆ ಪದ್ಮ ವಿಭೂಷಣ ಪ್ರಶಸ್ತಿ(ANI PHOTO)

    • Padma Awards 2024: ಕರ್ನಾಟಕ ಸೇರಿದಂತೆ ದೇಶದ ವಿವಿಧ ಸಾಧಕರಿಗೆ ಪದ್ಮ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ಪದ್ಮ ವಿಭೂಷಣ ಪ್ರಶಸ್ತಿಗೆ ಆಯ್ಕೆ ಮಾಡಿರುವುದಕ್ಕೆ ನಟ ಚಿರಂಜೀವಿ ಅವರು ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ತಿಳಿಸಿದ್ದಾರೆ.
ಚಿರಂಜೀವಿಗೆ ಪದ್ಮ ವಿಭೂಷಣ ಪ್ರಶಸ್ತಿ(ANI PHOTO)
ಚಿರಂಜೀವಿಗೆ ಪದ್ಮ ವಿಭೂಷಣ ಪ್ರಶಸ್ತಿ(ANI PHOTO) (Revanth Reddy-X)

ಗಣರಾಜ್ಯೋತ್ಸವದ ಹಿಂದಿನ ದಿನ "ಪದ್ಮ ಪ್ರಶಸ್ತಿ 2024" ಘೋಷಣೆಯಾಗಿದೆ. ಕರ್ನಾಟಕ ಸೇರಿದಂತೆ ದೇಶದ ವಿವಿಧ ಸಾಧಕರಿಗೆ ಪದ್ಮ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ತೆಲುಗು ನಟ ಚಿರಂಜೀವಿ ಅವರನ್ನು ಪದ್ಮ ವಿಭೂಷಣ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಚಿರಂಜೀವಿ ವಿಡಿಯೋ ಸಂದೇಶವೊಂದನ್ನು ಪ್ರಕಟಿಸಿದಾರೆ. "ಈ ಸುದ್ದಿ ಕೇಳಿ ಮೂಕವಿಸ್ಮಿತನಾಗಿರುವೆ" ಎಂದು ಮೆಗಾ ಸ್ಟಾರ್‌ ಚಿರಂಜೀವಿ ಹೇಳಿದ್ದಾರೆ.

ಚಿರಂಜೀವಿಗೆ ಎರಡನೇ ಪದ್ಮಪ್ರಶಸ್ತಿ

"ಈ ಸುದ್ದಿ ಕೇಳಿ ಮಾತುಗಳು ಬರುತ್ತಿಲ್ಲ. ನಾನು ವಿನೀತನಾಗಿದ್ದೇನೆ. ಕೃತಜ್ಞನಾಗಿದ್ದಾನೆ. ಪ್ರೇಕ್ಷಕರು, ನನ್ನ ಸ್ನೇಹಿತರು, ಬಂಧು ಬಳಗದ ಪ್ರೀತಿಯೇ ಇದಕ್ಕೆ ಕಾಋಣ. ಈ ಜೀವನ ಮತ್ತು ಈ ಕ್ಷಣಕ್ಕೆ ನಾನು ಋಣಿಯಾಗಿದ್ದೇನೆ. ನನಗೆ ಸಾಧ್ಯವಿರುವ ರೀತಿಯಲ್ಲಿ ಕೃತಜ್ಞತೆ ಸಲ್ಲಿಸಲು ಪ್ರಯತ್ನಿಸಿದ್ದೇನೆ. ಸಾಮಾಜಿಕ ಮತ್ತು ಮಾನವೀಯ ಕೆಲಸಗಳಲ್ಲಿ ಪಾಲ್ಗೊಳ್ಳುವ ಮೂಲಕ ನಿರ್ಗತಿಕರಿಗೆ ಸಹಾಯ ಮಾಡಲು ಪ್ರಯತ್ನಿಸಿದೆ" ಎಂದು ಪದ್ಮ ಪ್ರಶಸ್ತಿ ಪಡೆದ ಚಿರಂಜೀವಿ ಹೇಳಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿಗೂ ಚಿರಂಜೀವಿ ಅವರು ಧನ್ಯವಾದ ಹೇಳಿದ್ದಾರೆ. "ನಾನು ಕಡಿಮೆ ಸಾಧಿಸಿದ್ದೇನೆ. ಆದರೆ, ನನಗೆ ನೀವು ಇಂತಹ ಗೌರವ ನೀಡಿರುವಿರಿ. ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕೆ ಚಿರಋಣಿ. ಪದ್ಮ ವಿಭೂಷಣಕ್ಕೆ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ನಾನು ಭಾರತ ಸರಕಾರಕ್ಕೆ, ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಧನ್ಯವಾದ ತಿಳಿಸುವೆ. ಧನ್ಯವಾದ. ಜೈ ಹಿಂದ್‌" ಎಂದು ಅವರು ವಿಡಿಯೋ ಮಾಡಿದ್ದಾರೆ.

ಚಿರಂಜೀವಿ ಮಾತ್ರವಲ್ಲದೆ ವೈಜಯಂತಿಮಾಲಾ ಅವರಿಗೂ ಪದ್ಮ ವಿಭೂಷಣ ಪ್ರಶಸ್ತಿ ಘೋಷಣೆಯಾಗಿದೆ. ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ದು, ನಟಿ ಹಾಗೂ ಸಂಸದೆ ವೈಜಯಂತಿ ಮಾಲಾ ಬಾಲಿ, ನಟ ಚಿರಂಜೀವಿ ಕೊನಿಡೇಲ, ಕರ್ನಾಟಕ ಗಿರಿಜನ ಕಲ್ಯಾಣ ಕಾರ್ಯಕರ್ತ ಸೋಮಣ್ಣ, ಸಾಮಾಜಿಕ ಕಾರ್ಯಕರ್ತೆ ಪ್ರೇಮಾಧನರಾಜ್‌, ರೋಹನ್‌ ಬೋಪಣ್ಣ ಸೇರಿ ಹಲವರಿಗೆ ಈ ಪ್ರಶಸ್ತಿ ಲಭಿಸಿದೆ.

ಚಿರಂಜೀವಿ ಅವರು ತೆಲುಗಿನ ಸೂರ್‌ ಸ್ಟಾರ್‌ ಎಂದೇ ಫೇಮಸ್‌. 160ಕ್ಕೂ ಹೆಚ್ಚು ತೆಲುಗು, ಹಿಂದಿ, ತಮಿಳು ಮತ್ತು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. 2006ರಲ್ಲಿ ಇವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಲಾಗಿದೆ. ಈಗ ಎರಡನೇ ಪದ್ಮ ಪ್ರಶಸ್ತಿ ಘೋಷಷಣೆಯಾಗಿದೆ. ಚಿರಂಜೀವಿ ನಟನೆಯ ವಿಶ್ವಾಂಭರ ಸಿನಿಮಾ ಸದ್ಯದಲ್ಲಿಯೇ ಬಿಡುಗಡೆಯಾಗಲಿದೆ. 2008ರಲ್ಲಿ ಇವರು ಪ್ರಜಾ ರಾಜ್ಯ ಪಾರ್ಟಿ ಮೂಲಕ ರಾಜಕೀಯ ಪ್ರವೇಶೀಸಿದರು. 2017ರಲ್ಲಿ ಖಾದಿ ನಂ 150 ಸಿನಿಮಾದಲ್ಲಿ ನಟಿಸಿದ್ದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ