logo
ಕನ್ನಡ ಸುದ್ದಿ  /  ಮನರಂಜನೆ  /  Tollywood News: ಅಕ್ಕಿನೇನಿ ನಾಗಾರ್ಜುನ, ತೆಲುಗು ವಾಹಿನಿಗೆ ಕೋರ್ಟ್‌ ನೋಟಿಸ್; ಕನ್ನಡ ಬಿಗ್‌ಬಾಸ್‌ಗೂ ಇನ್ಮುಂದೆ ಸೆನ್ಸಾರ್‌ ಕಡ್ಡಾಯ?

Tollywood News: ಅಕ್ಕಿನೇನಿ ನಾಗಾರ್ಜುನ, ತೆಲುಗು ವಾಹಿನಿಗೆ ಕೋರ್ಟ್‌ ನೋಟಿಸ್; ಕನ್ನಡ ಬಿಗ್‌ಬಾಸ್‌ಗೂ ಇನ್ಮುಂದೆ ಸೆನ್ಸಾರ್‌ ಕಡ್ಡಾಯ?

HT Kannada Desk HT Kannada

Jul 27, 2023 07:48 PM IST

google News

ಬಿಗ್‌ ಬಾಸ್‌ ಕಾರ್ಯಕ್ರಮದ ಆಯೋಜಕರಿಗೆ ನೋಟಿಸ್

  • ನ್ಯಾಯಾಲಯ ಬಿಗ್‌ ಬಾಸ್ ಶೋ ವಿರುದ್ಧ ದಾಖಲಾಗಿದ್ದ ಪಿಟಿಷನ್‌ ವಿಚಾರಣೆ ನಡೆಸಿದೆ. ಸದ್ಯಕ್ಕೆ ಬಿಗ್‌ ಬಾಸ್‌ ಶೋಗೆ ತಡೆ ನೀಡಲು ನ್ಯಾಯಾಲಯ ಸೂಚಿಸಿದೆ. ನೋಟಿಸ್‌ಗೆ ಸೂಕ್ತ ಉತ್ತರ ನೀಡುವಂತೆ ಬಿಗ್‌ ಬಾಸ್‌ ಪ್ರಸಾರವಾಗುವ ವಾಹಿನಿ ಹಾಗೂ ನಿರೂಪಕ ಅಕ್ಕಿನೇನಿ ನಾಗಾರ್ಜುನ ಇಬ್ಬರಿಗೂ ಸೂಚಿಸಲಾಗಿದೆ.

ಬಿಗ್‌ ಬಾಸ್‌ ಕಾರ್ಯಕ್ರಮದ ಆಯೋಜಕರಿಗೆ ನೋಟಿಸ್
ಬಿಗ್‌ ಬಾಸ್‌ ಕಾರ್ಯಕ್ರಮದ ಆಯೋಜಕರಿಗೆ ನೋಟಿಸ್

ಕಿರುತೆರೆಯ ರಿಯಾಲಿಟಿ ಶೋಗಳಲ್ಲಿ ಬಿಗ್‌ ಬಾಸ್‌ ಕೂಡಾ ಒಂದು. ಇದು ಮೊದಲು ಆರಂಭವಾದದ್ದು ಹಿಂದಿಯಲ್ಲಿ. ಅಲ್ಲಿ ಈ ಶೋಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆ ನಂತರ ಕನ್ನಡ, ತೆಲುಗು, ತಮಿಳು, ಮಲಯಾಳಂನಲ್ಲೂ ಆರಂಭವಾಯ್ತು.

ಇನ್ನು ಆರಂಭದಲ್ಲಿ ಬಿಗ್‌ ಬಾಸ್‌ ಎಂದರೆ ಮುಗಿ ಬಿದ್ದು ನೋಡುತ್ತಿದ್ದ ಜನರು ಈಗ ಈ ಕಾರ್ಯಕ್ರಮದ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ಧಾರೆ. ಇದು ಮನೆ ಮಂದಿಯೆಲ್ಲಾ ಕುಳಿತು ನೋಡುವ ಕಾರ್ಯಕ್ರಮ ಅಲ್ಲ, ಈ ಕಾರ್ಯಕ್ರಮದಲ್ಲಿ ಸ್ಪರ್ಧಿಗಳು ಅಸಭ್ಯ ವರ್ತನೆ ತೋರುತ್ತಿದ್ಧಾರೆ ಎಂದು ಆರೋಪಿಸಿದ್ದಾರೆ. ಅಷ್ಟೇ ಅಲ್ಲ, ಇದೆಲ್ಲಾ ಸ್ಕ್ರಿಪ್ಟೆಡ್‌, ಯಾರು ಗೆಲ್ಲಬೇಕೆಂದು ಮೊದಲೇ ನಿರ್ಧರಿಸುತ್ತಾರೆ ಎಂದು ಕೂಡಾ ವೀಕ್ಷಕರು ಆರೋಪ ಮಾಡುತ್ತಲೇ ಬಂದಿದ್ದಾರೆ. ಈ ಚರ್ಚೆಯ ಬೆನ್ನಲ್ಲೇ ಇದೀಗ ತೆಲುಗು ಬಿಗ್‌ ಬಾಸ್‌ಗೆ ನ್ಯಾಯಾಲಯ ನೋಟಿಸ್ ಕಳಿಸಿದೆ.

ಅಕ್ಕಿನೇನಿ ನಾಗಾರ್ಜುನ ನಡೆಸಿಕೊಡುವ ತೆಲುಗು ಬಿಗ್‌ ಬಾಸ್‌ ಸೀಸನ್‌ 7 ಶೀಘ್ರದಲ್ಲೇ ಆರಂಭವಾಗಲಿದೆ. ಈ ಸಮಯದಲ್ಲಿ ನ್ಯಾಯಾಲಯ ಶೋ ವಿರುದ್ಧ ದಾಖಲಾಗಿದ್ದ ಪಿಟಿಷನ್‌ ವಿಚಾರಣೆ ನಡೆಸಿದೆ. ಸದ್ಯಕ್ಕೆ ಬಿಗ್‌ ಬಾಸ್‌ ಶೋಗೆ ತಡೆ ನೀಡಲು ನ್ಯಾಯಾಲಯ ಸೂಚಿಸಿದೆ. ನೋಟಿಸ್‌ಗೆ ಸೂಕ್ತ ಉತ್ತರ ನೀಡುವಂತೆ ಬಿಗ್‌ ಬಾಸ್‌ ಪ್ರಸಾರವಾಗುವ ವಾಹಿನಿ ಹಾಗೂ ನಿರೂಪಕ ಅಕ್ಕಿನೇನಿ ನಾಗಾರ್ಜುನ ಇಬ್ಬರಿಗೂ ಸೂಚಿಸಲಾಗಿದೆ.

ಕಾರ್ಯಕ್ರಮದ ಆಯೋಜಕರು ನೋಟಿಸ್‌ಗೆ ಉತ್ತರ ನೀಡಿದ್ದು ಬಿಗ್‌ಬಾಸ್‌ ಶೋ ಪ್ರಸಾರವಾದ ಬಳಿಕ ದೂರುದಾರರು ಹೇಳಿದಂತೆ ಏನಾದರೂ ಆಕ್ಷೇಪಾರ್ಹ ದೃಶ್ಯಗಳಿದ್ದರೆ ನಂತರ ದೂರು ನೀಡಬಹುದು ಎಂದಿದ್ದಾರೆ. ತೆಲುಗು ಬಿಗ್‌ ಬಾಸ್‌ನಲ್ಲಿ ಅಶ್ಲೀಲತೆ ಇದೆ. ಇದು ಅತಿರೇಖ ಎಂದು ತೆಲುಗು ಯುವಶಕ್ತಿ ಅಧ್ಯಕ್ಷ ಕೇತಿರೆಡ್ಡಿ ಎಂಬುವವರು ಆರೋಪಿಸಿ ಪಿಟಿಷನ್‌ ಸಲ್ಲಿಸಿದ್ದರು.

ಒಟ್ಟಿನಲ್ಲಿ ಬಿಗ್‌ ಬಾಸ್‌ಗೆ ಸೆನ್ಸಾರ್‌ ಕಡ್ಡಾಯ ಮಾಡಲು ನ್ಯಾಯಾಲಯ ಸೂಚಿಸಲಿದೆಯಾ? ಕನ್ನಡ ಬಿಗ್‌ ಬಾಸ್‌ಗೆ ಇದು ಅನ್ವಯ ಆಗಲಿದೆಯಾ ಎಂಬುದನ್ನು ಕಾದು ನೋಡಬೇಕು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ