South Film Industry: ದಕ್ಷಿಣ ಚಿತ್ರರಂಗದ ಟಾಪ್‌ 5 ಶ್ರೀಮಂತ ಸ್ಟಾರ್‌ ನಟರು ಇವರೇ; ನಿಮ್ಮ ಫೇವರೆಟ್‌ ಹೀರೋ ಲಿಸ್ಟ್‌ನಲ್ಲಿದ್ದಾರಾ ನೋಡಿ
ಕನ್ನಡ ಸುದ್ದಿ  /  ಮನರಂಜನೆ  /  South Film Industry: ದಕ್ಷಿಣ ಚಿತ್ರರಂಗದ ಟಾಪ್‌ 5 ಶ್ರೀಮಂತ ಸ್ಟಾರ್‌ ನಟರು ಇವರೇ; ನಿಮ್ಮ ಫೇವರೆಟ್‌ ಹೀರೋ ಲಿಸ್ಟ್‌ನಲ್ಲಿದ್ದಾರಾ ನೋಡಿ

South Film Industry: ದಕ್ಷಿಣ ಚಿತ್ರರಂಗದ ಟಾಪ್‌ 5 ಶ್ರೀಮಂತ ಸ್ಟಾರ್‌ ನಟರು ಇವರೇ; ನಿಮ್ಮ ಫೇವರೆಟ್‌ ಹೀರೋ ಲಿಸ್ಟ್‌ನಲ್ಲಿದ್ದಾರಾ ನೋಡಿ

ಮೂಲತ: ಮರಾಠಿ ಕುಟುಂಬಕ್ಕೆ ಸೇರಿದ ರಜನಿಕಾಂತ್‌ ಹುಟ್ಟಿ ಬೆಳೆದದ್ದು ಕರ್ನಾಟಕದಲ್ಲಿ. ಸೂಪರ್‌ ಸ್ಟಾರ್‌ ಎಂಬ ಪಟ್ಟ ಗಳಿಸಿದ್ದು ತಮಿಳು ನಾಡಿನಲ್ಲಿ. ಜಪಾನ್‌, ಮಲೇಷ್ಯಾ ಸೇರಿದಂತೆ ಇತರ ದೇಶಗಳಲ್ಲಿ ಕೂಡಾ ಫ್ಯಾನ್‌ ಫಾಲೋಯಿಂಗ್ ಹೊಂದಿರುವ ನಟ ಇವರು.

ದಕ್ಷಿಣ ಭಾರತದ ಟಾಪ್‌ 5 ಶ್ರೀಮಂತ ಸ್ಟಾರ್‌ ನಟರು
ದಕ್ಷಿಣ ಭಾರತದ ಟಾಪ್‌ 5 ಶ್ರೀಮಂತ ಸ್ಟಾರ್‌ ನಟರು

ಸ್ಟಾರ್‌ ನಟ ನಟಿಯರು ಸಿನಿಮಾದಲ್ಲಿ ನಟಿಸಲು ಕೋಟಿಗಟ್ಟಲೆ ಸಂಭಾವನೆ ಪಡೆಯುತ್ತಾರೆ. ಒಂದು ಸಿನಿಮಾ ಹಿಟ್‌ ಆದರೆ ಸಾಕು ಸಂಭಾವನೆಯನ್ನು ಹೆಚ್ಚಿಸಿಕೊಳ್ಳುತ್ತಾರೆ. ಆದರೆ ಸಂಭಾವನೆ ಹೆಚ್ಚಿಸಿಕೊಳ್ಳಲು ಬಹಳ ಕಷ್ಟ ಪಡಬೇಕು, ಎಷ್ಟೋ ತ್ಯಾಗ ಮಾಡಬೇಕು. ಕುಟುಂಬದಿಂದ ದೂರ ಉಳಿದು ಶೂಟಿಂಗ್‌ನಲ್ಲಿ ಪಾಲ್ಗೊಳ್ಳಬೇಕು. ಹಗಲು ರಾತ್ರಿ ಎನ್ನದೆ ಕಷ್ಟಪಡಬೇಕು.

ಪಾತ್ರಕ್ಕಾಗಿ ದಪ್ಪ ಆಗಿ ಎಂದರೆ ಆಗಬೇಕು, ಸಣ್ಣ ಕೂಡಾ ಆಗಬೇಕು. ಹಾಗೇ ಸಿನಿಮಾದಲ್ಲಿ ಸಕ್ಸಸ್‌ ಆದ ನಟ ಹಾಗೂ ನಟಿಯರು ಸಿನಿಮಾವನ್ನು ಮಾತ್ರ ನಂಬದೆ ಬ್ಯುಸ್ನೆಸ್‌ ಕೂಡಾ ಮಾಡುತ್ತಾರೆ. ದಕ್ಷಿಣ ಸಿನಿಮಾ ರಂಗದಲ್ಲಿ ಕೆಲವು ನಟರು ದೊಡ್ಡ ಪ್ರಮಾಣದ ಆಸ್ತಿ ಹೊಂದಿದ್ದಾರೆ. ಅವರ ಬಗ್ಗೆ ಹೇಳುವುದಾದರೆ..

ನಾಗಾರ್ಜುನ: ಅಕ್ಕಿನೇನಿ ನಾಗಾರ್ಜುನ ಸಿನಿಮಾ ರಂಗದಲ್ಲಿ ಸೀನಿಯರ್‌. 1986ರಲ್ಲಿ ವಿಕ್ರಮ್‌ ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದ ನಾಗಾರ್ಜುನ ಇದುವರೆಗೂ 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆಕ್ಟಿಂಗ್‌ ಮಾತ್ರವಲ್ಲದೆ ಅವರು ಉದ್ಯಮಿಯಾಗಿ ಕೂಡಾ ಗುರುತಿಸಿಕೊಂಡಿದ್ದಾರೆ. ಮಾಹಿತಿ ಪ್ರಕಾರ ನಾಗಾರ್ಜುನ ಆಸ್ತಿ 3010 ಕೋಟಿ ರೂಪಾಯಿ ಎಂಬ ಮಾಹಿತಿ ಇದೆ.

ರಾಮ್‌ ಚರಣ್: ಆರ್‌ಆರ್‌ಆರ್‌ ಸಿನಿಮಾ ನಂತರ ರಾಮ್‌ ಚರಣ್‌ ಖ್ಯಾತಿ ಇನ್ನಷ್ಟು ಹೆಚ್ಚಾಗಿದೆ. ರಾಮ್‌ ಚರಣ್‌ಗೆ ವಿದೇಶದಲ್ಲಿ ಕೂಡಾ ಅಭಿಮಾನಿಗಳಿದ್ದಾರೆ. ದಕ್ಷಿಣ ಚಿತ್ರರಂಗದ ಶ್ರೀಮಂತ ಸ್ಟಾರ್‌ ಹೀರೋಗಳಲ್ಲಿ ರಾಮ್‌ ಚರಣ್‌ ಎರಡನೇ ಸ್ಥಾನದಲ್ಲಿದ್ದಾರೆ. ತೆಲುಗು ಚಿತ್ರರಂಗಕ್ಕೆ ಎಷ್ಟೋ ಸೂಪರ್‌ ಹಿಟ್‌ ಸಿನಿಮಾಗಳನ್ನು ನೀಡಿರುವ ರಾಮ್‌ ಚರಣ್‌ 1370 ಕೋಟಿ ಆಸ್ತಿಗೆ ಒಡೆಯ.

ಕಮಲ್‌ ಹಾಸನ್:‌ ಬಹುಭಾಷಾ ನಟ ಕಮಲ್‌ ಹಾಸನ್‌ ಹೆಸರಿಗೆ ತಕ್ಕಂತೆ ತಮಿಳು, ತೆಲುಗು, ಹಿಂದಿ, ಕನ್ನಡ ಸಿನಿಮಾಗಳಲ್ಲಿ ಕೂಡಾ ನಟಿಸಿ ಹೆಸರಾಗಿದ್ದರೆ. ತಮ್ಮ ವೃತ್ತಿ ಜೀವನದಲ್ಲಿ ಅನೇಕ ಸೂಪರ್‌ ಹಿಟ್‌ ಸಿನಿಮಾಗಳನ್ನು ಚಿತ್ರರಂಗಕ್ಕೆ ನೀಡಿರುವ ಅವರು ನಿರ್ದೇಶನ, ನಿರ್ಮಾಣದಲ್ಲಿ ಕೂಡಾ ಹೆಸರಾಗಿದ್ದಾರೆ. ಕಮಲ್‌ ಹಾಸನ್‌ ಆಸ್ತಿ 450 ಕೋಟಿ ರೂಪಾಯಿ.

ದಳಪತಿ ವಿಜಯ್: ದಳಪತಿ ವಿಜಯ್‌ ಕೂಡಾ ಒಂದು ಸಿನಿಮಾಗೆ ಕೋಟಿಗಟ್ಟಲೆ ಸಂಭಾವನೆ ಪಡೆಯುತ್ತಾರೆ. ವಿಜಯ್‌ ಕೂಡಾ ರಾಜಕೀಯಕ್ಕೆ ಬರಬಹುದು ಎಂಬ ಮಾತು ಬಹಳ ದಿನಗಳಿಂದ ಕೇಳಿ ಬರುತ್ತಿದೆ. ವಿಜಯ್‌ ಆಸ್ತಿ ಒಟ್ಟು 445 ಕೋಟಿ ರೂಪಾಯಿ ಇದೆ.

ರಜನಿಕಾಂತ್:‌ ಮೂಲತ: ಮರಾಠಿ ಕುಟುಂಬಕ್ಕೆ ಸೇರಿದ ರಜನಿಕಾಂತ್‌ ಹುಟ್ಟಿ ಬೆಳೆದದ್ದು ಕರ್ನಾಟಕದಲ್ಲಿ. ಸೂಪರ್‌ ಸ್ಟಾರ್‌ ಎಂಬ ಪಟ್ಟ ಗಳಿಸಿದ್ದು ತಮಿಳು ನಾಡಿನಲ್ಲಿ. ಜಪಾನ್‌, ಮಲೇಷ್ಯಾ ಸೇರಿದಂತೆ ಇತರ ದೇಶಗಳಲ್ಲಿ ಕೂಡಾ ಫ್ಯಾನ್‌ ಫಾಲೋಯಿಂಗ್ ಹೊಂದಿರುವ ನಟ ಇವರು. ತಲೈವಾ ರಜನಿಕಾಂತ್‌ 430 ಕೋಟಿ ರೂಪಾಯಿಗೆ ಒಡೆಯನಾಗಿದ್ದಾರೆ.

Whats_app_banner