logo
ಕನ್ನಡ ಸುದ್ದಿ  /  ಮನರಂಜನೆ  /  Prabhas Marriage: ಪ್ರಭಾಸ್‌ ಮದುವೆ ಬಗ್ಗೆ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌ ಕೊಟ್ಟ ಶ್ಯಾಮಲಾ ದೇವಿ; ದಸರಾ ಒಳಗೆ ಮಗನ ಮದುವೆ ಎಂದ ದೊಡ್ಡಮ್ಮ

Prabhas Marriage: ಪ್ರಭಾಸ್‌ ಮದುವೆ ಬಗ್ಗೆ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌ ಕೊಟ್ಟ ಶ್ಯಾಮಲಾ ದೇವಿ; ದಸರಾ ಒಳಗೆ ಮಗನ ಮದುವೆ ಎಂದ ದೊಡ್ಡಮ್ಮ

HT Kannada Desk HT Kannada

Oct 17, 2023 08:52 PM IST

google News

2024 ದಸರಾ ಒಳಗೆ ಪ್ರಭಾಸ್‌ ಮದುವೆ ನಡೆಯುತ್ತದೆ ಎಂದ ದೊಡ್ಡಮ್ಮ ಶ್ಯಾಮಲಾ ದೇವಿ

  • Prabhas Marriage: ಹೈದರಾಬಾದ್‌ನಲ್ಲಿ ಜರುಗಿದ ಅನ್ನಪೂರ್ಣ ದೇವಿ ಉತ್ಸವದಲ್ಲಿ ಭಾಗಿಯಾಗಿದ್ದ ಪ್ರಭಾಸ್‌ ದೊಡ್ಡಮ್ಮ ಕೃಷ್ಣಂರಾಜು ಪತ್ನಿ ಶ್ಯಾಮಲಾದೇವಿ ಮುಂದಿನ ದಸರಾ ಒಳಗೆ ಖಂಡಿತ ಪ್ರಭಾಸ್‌ ಮದುವೆ ನೆರವೇರಲಿದೆ ಎಂದಿದ್ದಾರೆ. 

2024 ದಸರಾ ಒಳಗೆ ಪ್ರಭಾಸ್‌ ಮದುವೆ ನಡೆಯುತ್ತದೆ ಎಂದ ದೊಡ್ಡಮ್ಮ ಶ್ಯಾಮಲಾ ದೇವಿ
2024 ದಸರಾ ಒಳಗೆ ಪ್ರಭಾಸ್‌ ಮದುವೆ ನಡೆಯುತ್ತದೆ ಎಂದ ದೊಡ್ಡಮ್ಮ ಶ್ಯಾಮಲಾ ದೇವಿ (PC: Prabhas Fans Twitter)

Prabhas Marriage: ಟಾಲಿವುಡ್‌ ನಟ ಪ್ರಭಾಸ್‌ ಸದ್ಯಕ್ಕೆ 'ಕಲ್ಕಿ' 2898 ಎಡಿ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಇತ್ತೀಚೆಗೆ ಅಮೆರಿಕದಲ್ಲಿ ಮೊಣಕಾಲಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಭಾರತಕ್ಕೆ ವಾಪಸಾಗಿದ್ದ ಪ್ರಭಾಸ್‌ ಈಗ ಮತ್ತೆ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿ ಇದ್ದಾರೆ. ಈ ನಡುವೆ ಪ್ರಭಾಸ್‌ ಮದುವೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.

ಮಗನ ಮದುವೆ ಬಗ್ಗೆ ಪ್ರಭಾಸ್‌ ದೊಡ್ಡಮ್ಮ ಪ್ರತಿಕ್ರಿಯೆ

ಪ್ರಭಾಸ್‌ ಹೋದಲ್ಲಿ, ಬಂದಲ್ಲಿ, ಕೂತಲ್ಲಿ, ನಿಂತಲ್ಲಿ ಅವರಿಗೆ ಮದುವೆ ಬಗ್ಗೆಯೇ ಪ್ರಶ್ನೆ ಎದುರಾಗುತ್ತದೆ. ಆದರೆ ಪ್ರಭಾಸ್‌ ಮಾತ್ರ ಈ ವಿಚಾರದ ಬಗ್ಗೆ ಎಲ್ಲಿಯೂ ನೇರವಾಗಿ ಉತ್ತರಿಸಿಲ್ಲ. ಅನುಷ್ಕಾ ಹಾಗೂ ಪ್ರಭಾಸ್‌ ಮದುವೆ ಆಗಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ನಾವಿಬ್ಬರೂ ಸ್ನೇಹಿತರಷ್ಟೇ, ನಮ್ಮ ನಡುವೆ ಬೇರೆ ಏನಿಲ್ಲ ಎಂದು ಒಮ್ಮೆ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು. ಆದರೆ ಅಭಿಮಾನಿಗಳು ಮಾತ್ರ ಇವರಿಬ್ಬರಿಗೂ ಮದುವೆ ಮಾಡಿಸುವವರೆಗೂ ಬಿಡುತ್ತಿಲ್ಲ. ಪ್ರಭಾಸ್‌ ಹಾಗೂ ಅನುಷ್ಕಾ ಶೆಟ್ಟಿಗೆ ಮದುವೆ ಆಗಿ ಮಕ್ಕಳಾಗಿರುವಂತೆ ಅಭಿಮಾನಿಗಳು ಎಐ ಜನರೇಟೆಡ್‌ ಫೋಟೋಗಳನ್ನು ಸೃಷ್ಟಿಸಿ ಸೋಷಿಯಲ್‌ ಮೀಡಿಯಾದಲ್ಲಿ ಹರಿಯಬಿಟ್ಟಿದ್ದರು. ಈ ಫೋಟೋ ವೈರಲ್‌ ಆಗುತ್ತಿದ್ದಂತೆ ಇದೀಗ ಪ್ರಭಾಸ್‌ ದೊಡ್ಡಮ್ಮ ಶ್ಯಾಮಲಾ ದೇವಿ ಪ್ರತಿಕ್ರಿಯಿಸಿದ್ದಾರೆ.

ಪತಿ ಕೃಷ್ಣಂರಾಜು ನೆನೆದ ಶ್ಯಾಮಲಾದೇವಿ

ಹೈದರಾಬಾದ್‌ನಲ್ಲಿ ಜರುಗಿದ ಅನ್ನಪೂರ್ಣ ದೇವಿ ಉತ್ಸವದಲ್ಲಿ ಪ್ರಭಾಸ್‌ ದೊಡ್ಡಮ್ಮ ಕೃಷ್ಣಂರಾಜು ಪತ್ನಿ ಶ್ಯಾಮಲಾದೇವಿ ಭಾಗವಹಿಸಿದ್ದರು. ಈ ವೇಳೆ ದೇವಿ ದರ್ಶನ ಪಡೆದು ಮಾತನಾಡಿದ ಅವರು, ''ಕೃಷ್ಣಂರಾಜುರವರು ಇಂದು ನಮ್ಮೊಂದಿಗೆ ದೈಹಿವಾಗಿ ಇಲ್ಲದಿದ್ದರೂ ನಮ್ಮನ್ನು ಆಶೀರ್ವದಿಸುತ್ತಿದ್ದಾರೆ. ಅವರ ಕೋರಿಕೆಯಂತೆ ಎಲ್ಲವೂ ನಡೆಯುತ್ತಿದೆ. ಅವರು ಎಂದಿಗೂ ತಮ್ಮ ಮನೆಗೆ ಬಂದವರಿಗೆ ಊಟ ನೀಡದೆ ವಾಪಸ್‌ ಕಳಿಸುತ್ತಿರಲಿಲ್ಲ. ಅವರು ಇಂದು ಇದ್ದಿದ್ದರೆ ಬಹಳ ಖುಷಿ ಪಡುತ್ತಿದ್ದರು'' ಎಂದು ಪತಿ ಬಗ್ಗೆ ಮಾತನಾಡಿದರು.

ಮುಂದಿನ ದಸರಾ ಒಳಗೆ ಪ್ರಭಾಸ್‌ ಮದುವೆ

ನಂತರ ಪ್ರಭಾಸ್‌ ಬಗ್ಗೆ ಪ್ರತಿಕ್ರಿಯಿಸಿದ ಅವರು ''ಪ್ರಭಾಸ್‌ನಂಥ ಮಗ ನಮಗೆ ದೊರೆತಿರುವುದಕ್ಕೆ ಬಹಳ ಖುಷಿಯಾಗುತ್ತದೆ. ನಾವು ಅವರ ದೊಡ್ಡಪ್ಪ, ದೊಡ್ಡಮ್ಮ ಎಂದು ಕರೆಸಿಕೊಳ್ಳುವುದು ನಮಗೆ ಬಹಳ ಸಂತೋಷ. ಪ್ರಭಾಸ್‌ ನೂರು ಕಾಲ ಸುಖವಾಗಿ ಬಾಳಬೇಕು'' ಎಂದು ಶ್ಯಾಮಲಾ ದೇವಿ ಪ್ರಭಾಸ್‌ ಅವರನ್ನು ಹಾರೈಸಿದರು. ಪ್ರಭಾಸ್‌ ಮದುವೆ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶ್ಯಾಮಲಾ ದೇವಿ. ''ಹುಡುಗಿ ಯಾರು, ಮದುವೆ ದಿನಾಂಕ ಯಾವುದು ಇನ್ನೂ ಗೊತ್ತಿಲ್ಲ. ಆದರೆ ಆದಷ್ಟು ಬೇಗ ಅಭಿಮಾನಿಗಳು ಖುಷಿ ಪಡುವ ದಿನ ಬರಲಿದೆ. ಅವರಿಗೆ ದೇವಿ ಆಶೀರ್ವಾದ ಇದೆ. ಮುಂದಿನ ದಸರಾ ವೇಳೆಗೆ ಪ್ರಭಾಸ್‌ ಮದುವೆ ಆಗಲಿದೆ'' ಎಂದು ಮಗನ ಮದುವೆ ಬಗ್ಗೆ ಭರವಸೆ ವ್ಯಕ್ತಪಡಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ