BBK 10: ಚಾರ್ಲಿ 777 ನಟಿ ಸಂಗೀತಾ ಶೃಂಗೇರಿಗೆ ಬಿಗ್‌ ಬಾಸ್‌ ಮನೆಯಲ್ಲಿ ಸಗಣಿ ನೀರಿನ ಅಭಿಷೇಕ
ಕನ್ನಡ ಸುದ್ದಿ  /  ಮನರಂಜನೆ  /  Bbk 10: ಚಾರ್ಲಿ 777 ನಟಿ ಸಂಗೀತಾ ಶೃಂಗೇರಿಗೆ ಬಿಗ್‌ ಬಾಸ್‌ ಮನೆಯಲ್ಲಿ ಸಗಣಿ ನೀರಿನ ಅಭಿಷೇಕ

BBK 10: ಚಾರ್ಲಿ 777 ನಟಿ ಸಂಗೀತಾ ಶೃಂಗೇರಿಗೆ ಬಿಗ್‌ ಬಾಸ್‌ ಮನೆಯಲ್ಲಿ ಸಗಣಿ ನೀರಿನ ಅಭಿಷೇಕ

Bigg Boss Kannada 10: ಕಲರ್ಸ್‌ ಕನ್ನಡ ವಾಹಿನಿ ಹಂಚಿಕೊಂಡಿರುವ ಹೊಸ ಪ್ರೋಮೋದಲ್ಲಿ ಸಹ ಸ್ಪರ್ಧಿಗಳು ಸಂಗೀತಾ ಮೇಲೆ ಸಗಣಿ ನೀರು ಸುರಿಯುವ ದೃಶ್ಯವಿದೆ.

ನಟಿ ಸಂಗೀತಾ ಶೃಂಗೇರಿಗೆ ಸಹ ಸ್ಪರ್ಧಿಗಳಿಂದ ಸಗಣಿ ನೀರಿನ ಅಭಿಷೇಕ
ನಟಿ ಸಂಗೀತಾ ಶೃಂಗೇರಿಗೆ ಸಹ ಸ್ಪರ್ಧಿಗಳಿಂದ ಸಗಣಿ ನೀರಿನ ಅಭಿಷೇಕ (PC: Colors Kannada)

Bigg Boss Kannada 10: ಬಿಗ್‌ ಬಾಸ್‌ ಸೀಸನ್‌ 10 ಮೊದಲ ವಾರ ಮುಗಿದು ಎರಡನೇ ವಾರಕ್ಕೆ ಕಾಲಿಟ್ಟಿದೆ. 17 ಸ್ಪರ್ಧಿಗಳಲ್ಲಿ ಸ್ನೇಕ್‌ ಶ್ಯಾಮ್‌, ಮೊದಲ ವಾರ ಎಲಿಮಿನೇಟ್‌ ಆಗಿದ್ದು ಈಗ 16 ಮಂದಿ ಉಳಿದಿದ್ದಾರೆ. 2ನೇ ವಾರ ಗೌರೀಶ್‌, ಭಾಗ್ಯ, ತುಕಾಲಿ ಸಂತೋಷ್‌, ಸಂಗೀತ ನಾಲ್ವರನ್ನು ಸಹ ಸ್ಪರ್ಧಿಗಳು ನಾಮಿನೇಟ್‌ ಮಾಡಿದರೆ ತನಿಷಾ, ಕಾರ್ತಿಕ್‌ ಇಬ್ಬರನ್ನೂ ಕ್ಯಾಪ್ಟನ್‌ ಸ್ನೇಹಿತ್‌ ನೇರವಾಗಿ ನಾಮಿನೇಟ್‌ ಮಾಡಿದ್ದಾರೆ.

ಕಾರ್ತಿಕ್‌ಗೆ ಎಣ್ಣೆ ಮಸಾಜ್‌ ಮಾಡಿದ್ದ ಸಂಗೀತಾ

ನಾಮಿನೇಷನ್‌ನಿಂದ ಸೇವ್‌ ಆಗಲು ನಾಮಿನೇಟ್‌ ಆದವರ ಪರ, ಇತರರು ಟಾಸ್ಕ್‌ ಎದುರಿಸುವ ಚಾಲೆಂಜನ್ನು ಬಿಗ್‌ ಬಾಸ್‌ ನೀಡಿದ್ದರು. ಈ ವೇಳೆ ತುಕಾಲಿ ಸಂತೋಷ್‌ ಪರ ಆಡಿದ್ದ ರಕ್ಷಕ್‌ ಆಡಿದ್ದರು. ತನ್ನ ಪರ ಆಡುವಂತೆ ವಿನಯ್‌ ಅವರಿಗೆ ಭಾಗ್ಯಾ ಕೇಳಿದಾಗ ಆತ ನಿರಾಕರಿಸುತ್ತಾರೆ. ನಂತರ ಭಾಗ್ಯಾ ಪರ ಆಡಲು ಸಿರಿ ಒಪ್ಪುತ್ತಾರೆ. ರಕ್ಷಕ್‌ ಚಾಲೆಂಜ್‌ ಹಾಳು ಮಾಡಲು ಪ್ರಯತ್ನಿಸಿದ ಇಶಾನಿ ಹಾಗೂ ತುಕಾಲಿ ಸಂತೋಷ್‌ ನಡುವೆ ದೊಡ್ಡ ಯುದ್ಧವೇ ನಡೆದಿತ್ತು. ಮತ್ತೊಂದೆಡೆ, ತನಗಾಗಿ ಆಡಿದ್ದ ಕಾರ್ತಿಕ್‌ಗೆ ಸಂಗೀತಾ ಎಣ್ಣೆ ಮಸಾಜ್‌ ಮಾಡಿದ್ದರು. ದಿನ ಕಳೆಯುತ್ತಿದ್ದಂತೆ ಸ್ಪರ್ಧಿಗಳ ನಡುವೆ ಸಣ್ಣ ಸಣ್ಣ ವಿಚಾರಕ್ಕೂ ಜಗಳ ನಡೆಯುತ್ತಿದೆ. ತಮ್ಮನ್ನು ನಾಮಿನೇಶನ್‌ ಮಾಡಿದ್ದಕ್ಕೂ ಕೆಲವರು ಸಹ ಸ್ಪರ್ಧಿಗಳ ನಡುವೆ ಮುನಿಸು ಉಂಟಾಗಿದೆ.

ಸಂಗೀತಾಗೆ ಸಗಣಿ ನೀರು ಸುರಿದ ಸಹ ಸ್ಪರ್ಧಿಗಳು

ಇದೀಗ ವಾಹಿನಿಯು ಮತ್ತೊಂದು ಪ್ರೋಮೋ ಹಂಚಿಕೊಂಡಿದ್ದು ಇದರಲ್ಲಿ ಇತರ ಸ್ಪರ್ಧಿಗಳು ಸಂಗೀತಾಗೆ ಸಗಣಿ ನೀರು ಸುರಿಯುವ ದೃಶ್ಯವಿದೆ. ಜೊತೆಗೆ ಸ್ಪರ್ಧಿಗಳು ಜಗಳ ಮಾಡುತ್ತಿರುವುದನ್ನು ಗಮನಿಸಬಹುದು. ದೊಡ್ಮನೆ ಎರಡು ಹೋಳಾಗಿದೆ. ಸ್ವಿಮ್ಮಿಂಗ್‌ ಪೂಲ್‌ ಬಳಿ ಸ್ಪರ್ಧಿಗಳು ಸಹ ಸ್ಪರ್ಧಿಗಳ ಬಟ್ಟೆಗಳನ್ನು ನೀರಿನಲ್ಲಿ ಎಸೆದಿದ್ದಾರೆ. ವಿನಯ್‌ ಹಾಗೂ ಪ್ರತಾಪ್‌ ನಡುವೆ ಮತ್ತೆ ಜಗಳ ಶುರು ಆಗಿದೆ. ಪ್ರತಾಪ್‌ ಪರ ಸಂಗೀತಾ ನಿಂತಿದ್ದಾರೆ. ಪ್ರತಾಪ್‌ ಅವರನ್ನು ಎದುರಿಸುತ್ತಿದ್ದೀರ? ನಮ್ಮನ್ನು ಎದುರಿಸಿ ನೋಡೋಣ ಎಂದು ಸಂಗೀತಾ ವಿನಯ್‌ಗೆ ಆವಾಜ್‌ ಹಾಕುತ್ತಾರೆ. ಹಾಗೇ ಕಾರ್ತಿಕ್‌, ರಕ್ಷಕ್‌ ನಡುವೆ ಕೂಡಾ ಮಾತಿನ ಚಕಮಕಿ ನಡೆಯುತ್ತಿದೆ.

ಈ ವಾರ 6 ಮಂದಿ ನಾಮಿನೇಟ್

ದೊಡ್ಮನೆಯಲ್ಲಿ ಸ್ಪರ್ಧಿಗಳು ತಮ್ಮ ಜವಾಬ್ಧಾರಿ ಮರೆತು ವರ್ತಿಸುತ್ತಿರುವುದಕ್ಕೆ ಬಿಗ್‌ ಬಾಸ್‌ ಕೂಡಾ ಸ್ಪರ್ಧಿಗಳಿಗೆ ನೀಡಿದ ರೇಷನ್‌, ಹಣ್ಣು , ಹಂಫಲುಗಳನ್ನು ವಾಪಸ್‌ ಪಡೆದಿದ್ದರು. ಅದರ ಪ್ರಕಾರ ಸ್ಪರ್ಧಿಗಳಿಗೆ ನೀಡಿದ್ದ ಟ್ರೇಗಳಲ್ಲಿ 10ನ್ನು ವಾಪಸ್‌ ನೀಡಬೇಕಿತ್ತು. ತಾವು ಮಾಡಿದ ತಪ್ಪಿಗೆ ತಮ್ಮನ್ನೇ ಬೈದುಕೊಳ್ಳುತ್ತಾ ಸ್ಪರ್ಧಿಗಳು ತಮಗೆ ನೀಡಿದ್ದ ಅರ್ಧ ರೇಷನ್‌ ವಾಪಸ್‌ ನೀಡಿದ್ದರು. ಒಟ್ಟಿನಲ್ಲಿ ದೊಡ್ಮನೆಯಲ್ಲಿ ಸ್ಪರ್ಧಿಗಳ ನಡುವಿನ ಅಂತರ ದಿನೇ ದಿನೆ ಹೆಚ್ಚಾಗುತ್ತಿದೆ. ಮನೆ ಇಬ್ಭಾಗವಾಗಿದೆ ಈ ಬಾರಿ 6 ಮಂದಿಯಲ್ಲಿ ಯಾರು ಎಲಿಮಿನೇಟ್‌ ಆಗಿ ಮನೆಗೆ ವಾಪಸ್‌ ಹೋಗಲಿದ್ದಾರೆ ಕಾದು ನೋಡಬೇಕು.‌

Whats_app_banner