logo
ಕನ್ನಡ ಸುದ್ದಿ  /  ಮನರಂಜನೆ  /  ಅಲ್ಲು ಅರ್ಜುನ್‌ಗೆ ಬಿಗ್‌ ರಿಲೀಫ್‌; ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ವಜಾಗೊಳಿಸಿದ ಆಂಧ್ರಪ್ರದೇಶ ಹೈ ಕೋರ್ಟ್‌

ಅಲ್ಲು ಅರ್ಜುನ್‌ಗೆ ಬಿಗ್‌ ರಿಲೀಫ್‌; ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ವಜಾಗೊಳಿಸಿದ ಆಂಧ್ರಪ್ರದೇಶ ಹೈ ಕೋರ್ಟ್‌

Rakshitha Sowmya HT Kannada

Nov 07, 2024 01:12 PM IST

google News

ಅಲ್ಲು ಅರ್ಜುನ್‌ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಕೇಸ್‌ ವಜಾಗೊಳಿಸಿದ ಆಂಧ್ರಪ್ರದೇಶ ಹೈ ಕೋರ್ಟ್

  • ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆ ಸಮಯದಲ್ಲಿ ಅಲ್ಲು ಅರ್ಜುನ್‌ ವಿರುದ್ಧ ದಾಖಲಾದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಕೇಸ್‌ ವಜಾಗೊಂಡಿದೆ. ಬುಧವಾರ ಆಂಧ್ರ ಪ್ರದೇಶ ಹೈಕೋರ್ಟ್‌ ಪ್ರಕರಣವನ್ನು ವಜಾಗೊಳಿಸದ್ದು ಸ್ಟೈಲಿಷ್‌ ಸ್ಟಾರ್‌ಗೆ ಬಿಗ್‌ ರಿಲೀಫ್‌ ಸಿಕ್ಕಿದೆ. 

ಅಲ್ಲು ಅರ್ಜುನ್‌ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಕೇಸ್‌ ವಜಾಗೊಳಿಸಿದ ಆಂಧ್ರಪ್ರದೇಶ ಹೈ ಕೋರ್ಟ್
ಅಲ್ಲು ಅರ್ಜುನ್‌ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಕೇಸ್‌ ವಜಾಗೊಳಿಸಿದ ಆಂಧ್ರಪ್ರದೇಶ ಹೈ ಕೋರ್ಟ್

ಟಾಲಿವುಡ್ ಸ್ಟೈಲಿಷ್‌ ಐಕಾನ್‌ ಅಲ್ಲು ಅಭಿನಯದ ಪುಷ್ಪ 2 ಸಿನಿಮಾ ರಿಲೀಸ್‌ಗೆ ಸಿದ್ದವಾಗಿದೆ. ಚಿತ್ರತಂಡ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳಲ್ಲಿ ಬ್ಯುಸಿ ಇದ್ದು ನವೆಂಬರ್ 15 ರಂದು ಚಿತ್ರದ ಟ್ರೇಲರ್ ಬಿಡುಗಡೆಯಾಗುವ ಸಾಧ್ಯತೆ ಇದೆ. ಚಿತ್ರತಂಡ ಈಗಾಗಲೇ ಆಂಧ್ರ, ತೆಲಂಗಾಣದಲ್ಲಿ ತೆರೆ ಮರೆಯಲ್ಲಿ ಪ್ರಮೋಷನ್‌ ಕೆಲಸ ಆರಂಭಿಸಿದೆ. ಈ ನಡುವೆ ಅಲ್ಲು ಅರ್ಜುನ್‌ಗೆ ಆಂಧ್ರ ಹೈಕೋರ್ಟ್‌ನಿಂದ ಬುಧವಾರ ರಿಲೀಫ್‌ ಸಿಕ್ಕಿದೆ.‌

ರವಿಚಂದ್ರ ಕಿಶೋರ್ ರೆಡ್ಡಿಗೆ ಬೆಂಬಲ ಸೂಚಿಸಿದ್ದ ಅಲ್ಲು ಅರ್ಜುನ್‌

ಆಂಧ್ರಪ್ರದೇಶ ವಿಧಾನಸಭೆ ಚುನಾವಣೆ ಸಮಯದಲ್ಲಿ ಅಲ್ಲು ಅರ್ಜುನ್‌, ತಮ್ಮ ಸ್ನೇಹಿತರಾದ ವೈಎಸ್‌ಆರ್‌ಇಸಿಪಿ ಮಾಜಿ ಎಂಎಲ್‌ಎ ರವಿಚಂದ್ರ ಕಿಶೋರ್‌ ರೆಡ್ಡಿ ಅವರಿಗೆ ಬೆಂಬಲ ಸೂಚಿಸಲು ನಂದ್ಯಾಲಕ್ಕೆ ತೆರಳಿದ್ದರು. ಅದರೊಂದಿಗೆ ಅಪಾರ ಸಂಖ್ಯೆಯ ಅಭಿಮಾನಿಗಳು ಸ್ಥಳಕ್ಕೆ ಆಗಮಿಸಿದರು, ನಂದ್ಯಾಲ ಪೊಲೀಸರು ಅಲ್ಲು ಅರ್ಜುನ್ ಮತ್ತು ರವಿಚಂದ್ರ ಕಿಶೋರ್ ರೆಡ್ಡಿ ವಿರುದ್ಧ ಅನುಮತಿಯಿಲ್ಲದೆ ಗುಂಪು ಗೂಡಿದ್ದಕ್ಕಾಗಿ ಪ್ರಕರಣ ದಾಖಲಿಸಿದ್ದರು. ಅದು ಎಲೆಕ್ಷನ್‌ ಸಮಯವಾದ್ದರಿಂದ ಸೆಕ್ಷನ್ 144 ಜಾರಿಯಲ್ಲಿತ್ತು. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ನಂದ್ಯಾಲ ಗ್ರಾಮಾಂತರ ಉಪ ತಹಸೀಲ್ದಾರ್‌ ರಾಮಚಂದ್ರರಾವ್, ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣವನ್ನು ವಜಾ ಗೊಳಿಸುವಂತೆ ಅಲ್ಲು ಅರ್ಜುನ್ ಮತ್ತು ರವಿಚಂದ್ರಕಿಶೋರ್ ರೆಡ್ಡಿ ಆಂಧ್ರ ಪ್ರದೇಶ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್ ಬುಧವಾರ ಪ್ರಕರಣವನ್ನು ವಜಾಗೊಳಿಸಿದೆ.

ಬುಧವಾರ ಆಂಧ್ರ ಪ್ರದೇಶ ಹೈ ಕೋರ್ಟ್‌, ಅಲ್ಲು ಅರ್ಜುನ್ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಿಮ ತೀರ್ಪು ನೀಡಿದ್ದು ಅಲ್ಲು ಅರ್ಜುನ್‌ಗೆ ದೊಡ್ಡ ರಿಲೀಫ್‌ ಸಿಕ್ಕಿದೆ. ಈ ತೀರ್ಪು ಪ್ರಕಟವಾಗುತ್ತಿದ್ದಂತೆ ಅರ್ಜುನ್ ಪತ್ನಿ ಸ್ನೇಹಾ ರೆಡ್ಡಿ ತಿರುಮಲದ ಸುಪ್ರಭಾತ ಸೇವೆಯಲ್ಲಿ ಶ್ರೀಗಳ ದರ್ಶನ ಪಡೆದು ಪೂಜೆ ಸಲ್ಲಿಸಿದ್ದಾರೆ. ಅಭಿಮಾನಿಗಳು ಕೂಡಾ ಅಲ್ಲು ಅರ್ಜುನ್‌ ಮೇಲಿನ ಪ್ರಕರಣ ವಜಾ ಆಗಿರುವ ಸುದ್ದಿ ತಿಳಿದು ಸಂತೋಷ ವ್ಯಕ್ತಪಡಿಸಿದ್ದಾರೆ.

ಡಿಸೆಂಬರ್‌ 5ರಂದು ತೆರೆ ಕಾಣುತ್ತಿರುವ ಪುಷ್ಪ 2

ಅಲ್ಲು ಅರ್ಜುನ್ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಪುಷ್ಪ-2: ದಿ ರೂಲ್' ಡಿಸೆಂಬರ್ 5 ರಂದು ವಿಶ್ವಾದ್ಯಂತ ರಿಲೀಸ್‌ ಆಗಲಿದೆ. ವಿದೇಶದಲ್ಲಿ ಒಂದು ದಿನ ಮುಂಚಿತವಾಗಿ, ಅಂದರೆ ಡಿಸೆಂಬರ್ 4 ರಂದು ಬಿಡುಗಡೆಯಾಗುತ್ತಿದ್ದು ಈಗಾಗಲೇ ಪ್ರೀಮಿಯರ್ ಸೇಲ್ ಬುಕ್ಕಿಂಗ್‌ ಆರಂಭವಾಗಿದೆ. ಅಡ್ವಾನ್ಸ್‌ ಬುಕ್ಕಿಂಗ್‌ ಆರಂಭವಾದ ಕೆಲವೇ ನಿಮಿಷಗಳಲ್ಲಿ 15 ಸಾವಿರ ಟಿಕೆಟ್‌ಗಳು ಹಾಟ್‌ ಕೇಕ್‌ನಂತೆ ಮಾರಾಟವಾಗಿದೆ. ಅಮೆರಿಕದಲ್ಲಿ ಇದುವರೆಗೂ ಯಾವುದೇ ಭಾರತೀಯ ಸಿನಿಮಾಗಳಿಗೆ ಇಷ್ಟು ವೇಗವಾಗಿ ಟಿಕೆಟ್ ಮಾರಾಟವಾಗಿರುವ ಉದಾಹರಣೆ ಇಲ್ಲ.

ಪುಷ್ಪ 2 ಸಿನಿಮಾ 6 ಭಾಷೆಗಳಲ್ಲಿ ರಿಲೀಸ್‌ ಆಗುತ್ತಿದೆ. ಈ ಚಿತ್ರವನ್ನು ವಿಶ್ವಾದ್ಯಂತ ಸುಮಾರು 11,500 ಸ್ಕ್ರೀನ್‌ಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್‌ ಮಾಡಿದೆ. ಪುಷ್ಪ-1ರಲ್ಲಿ ಸಮಂತಾ ಐಟಂ ಸಾಂಗ್ ಮಾಡಿದ್ದರೆ, ಪುಷ್ಪ-2ರಲ್ಲಿ ಶ್ರೀಲೀಲಾ ಹೆಜ್ಜೆ ಹಾಕಿರುವುದು ಸಿನಿಮಾದ ಹೈಪ್ ಇನ್ನಷ್ಟು ಹೆಚ್ಚಾಗಿದೆ. ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್‌ ಹಾಗೂ ಸುಕುಮಾರ್‌ ರೈಟಿಂಗ್ಸ್‌ ಬ್ಯಾನರ್‌ ಅಡಿ ಸುಕುಮಾರ್‌ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದ ಹಾಡುಗಳಿಗೆ ದೇವಿ ಶ್ರೀ ಪ್ರಸಾದ್‌ ಸಂಗೀತ ನೀಡಿದ್ದಾರೆ. ಅಲ್ಲು ಅರ್ಜುನ್‌, ರಶ್ಮಿಕಾ ಮಂದಣ್ಣ ಜೊತೆಗೆ ಫಹಾದ್‌ ಫಾಸಿಲ್‌, ಡಾಲಿ ಧನಂಜಯ್‌, ಪ್ರಕಾಶ್‌ ರಾಜ್‌, ಸುನಿಲ್‌, ಅನಸೂಯ ಹಾಗೂ ಇನ್ನಿತರರು ಚಿತ್ರದಲ್ಲಿ ನಟಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ