The Buckingham Murders OTT: ಒಟಿಟಿಗೆ ಬಂತು ಕರೀನಾ ಕಪೂರ್ ನಟಿಸಿದ ಕ್ರೈಂ ಥ್ರಿಲ್ಲರ್ ದಿ ಬಕಿಂಗ್‌ಹ್ಯಾಮ್ ಮರ್ಡರ್ಸ್; ವೀಕ್ಷಣೆ ಎಲ್ಲಿ
The Buckingham Murders OTT: ನಟಿ ಕರೀನಾ ಕಪೂರ್ ಪಾಲಿಗೆ 'ದಿ ಬಕಿಂಗ್‌ಹ್ಯಾಮ್ ಮರ್ಡರ್ಸ್' ಚಿತ್ರ ತುಂಬ ವಿಶೇಷ. ಏಕೆಂದರೆ ಈ ಚಿತ್ರದ ಮೂಲಕ ನಿರ್ಮಾಪಕರಾಗಿಯೂ ಬಡ್ತಿ ಪಡೆದಿದ್ದರು ಕರೀನಾ. ಈಗ ಇದೇ ಸಿನಿಮಾ ಚಿತ್ರಮಂದಿರಗಳ ಬಳಿಕ ಒಟಿಟಿಗೆ ಆಗಮಿಸುತ್ತಿದೆ.
The Buckingham Murders OTT: ಕರೀನಾ ಕಪೂರ್ ಖಾನ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಕ್ರೈಮ್ ಥ್ರಿಲ್ಲರ್ ಜಾನರ್‌ನ 'ದಿ ಬಕಿಂಗ್‌ಹ್ಯಾಮ್ ಮರ್ಡರ್ಸ್ ಸಿನಿಮಾ ಇದೀಗ ಒಟಿಟಿ ಅಂಗಳಕ್ಕೆ ಕಾಲಿಡಲು ಸಜ್ಜಾಗಿದೆ. ಸೆಪ್ಟೆಂಬರ್ 13 ರಂದು ಚಿತ್ರಮಂದಿರದಲ್ಲಿ ಬಿಡುಗಡೆಯಾಗಿದ್ದ ಈ ಸಿನಿಮಾ, ಬಾಕ್ಸ್ ಆಫೀಸ್‌ನಲ್ಲಿ ಹೀನಾಯ ಸೋಲನುಭವಿಸಿತ್ತು. ಆದರೆ, ಇದು ಹನ್ಸಲ್ ಮೆಹ್ತಾ ಅವರ ನಿರ್ದೇಶನದಲ್ಲಿ ಮೂಡಿ ಬಂದ ಸಿನಿಮಾ ಎಂಬ ಕಾರಣಕ್ಕೆ ನೋಡಲ್ಪಟ್ಟಿತ್ತು. ಈಗ ಇದೇ ಸಿನಿಮಾ ಒಟಿಟಿಯಲ್ಲಿಯೂ ವೀಕ್ಷಣೆ ಮಾಡಬಹುದು. ಹಾಗಾದರೆ, ಯಾವ ಒಟಿಟಿಯಲ್ಲಿ ಯಾವಾಗಿನಿಂದ ಈ ಸಿನಿಮಾ ಸ್ಟ್ರೀಮ್ ಆಗಲಿದೆ? ಇಲ್ಲಿದೆ ವಿವರ.
ನಟಿ ಕರೀನಾ ಕಪೂರ್ ಪಾಲಿಗೆ 'ದಿ ಬಕಿಂಗ್‌ಹ್ಯಾಮ್ ಮರ್ಡರ್ಸ್' ಚಿತ್ರ ತುಂಬ ವಿಶೇಷ. ಏಕೆಂದರೆ ಈ ಚಿತ್ರದ ಮೂಲಕ ನಿರ್ಮಾಪಕರಾಗಿಯೂ ಬಡ್ತಿ ಪಡೆದಿದ್ದರು ಕರೀನಾ. ಕರೀನಾ ಜತೆಗೆ ಕೀತ್ ಅಲೆನ್, ರಣವೀರ್ ಬ್ರಾರ್, ಪ್ರಬ್ಲೀನ್ ಸಂಧು ಸೇರಿ ಇನ್ನೂ ಹಲವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. 50 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಿಸಲಾಗಿದ್ದ ಈ ಸಿನಿಮಾ, ಸೆ. 13ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಭಾರತದಲ್ಲಿ 10.54 ಕೋಟಿ ಮತ್ತು ವಿಶ್ವಾದ್ಯಂತ 15.84 ಕೋಟಿ ವ್ಯವಹಾರ ಮಾಡಿತ್ತು.
'ದಿ ಬಕಿಂಗ್‌ಹ್ಯಾಮ್ ಮರ್ಡರ್ಸ್' ಕಥೆ
ಚಿತ್ರದಲ್ಲಿ ಬ್ರಿಟಿಷ್-ಭಾರತೀಯ ಗೂಢಚಾರಿ ಜಸ್ಮೀತ್ ಭಾಮ್ರಾ ಎಂಬ ಪಾತ್ರದಲ್ಲಿ ಕರೀನಾ ಕಪೂರ್ ಕಾಣಿಸಿಕೊಂಡಿದ್ದಾರೆ. ಹೀಗಿರುವಾಗಲೇ ಮಗುವೊಂದು ನಾಪತ್ತೆಯಾಗುತ್ತದೆ. ನಂತರ ಆ ಮಗುವನ್ನು ಕೊಲೆ ಮಾಡಿರುವುದು ಬೆಳಕಿಗೆ ಬರುತ್ತದೆ. ಇದೇ ಕೇಸ್ ಜಸ್ಮೀತ್‌ಗೆ ವಹಿಸಲಾಗುತ್ತದೆ. ಸಿನಿಮಾ ಸಾಗಿದಂತೆ, ಒಂದಷ್ಟು ರೋಚಕತೆಗಳು ಬಿಚ್ಚಿಕೊಳ್ಳುತ್ತ ಸಾಗುತ್ತವೆ. ಅಚ್ಚರಿಯ ವಿಚಾರ ಏನೆಂದರೆ, ಇಂಥದ್ದೇ ಪ್ರಸಂಗದಲ್ಲಿ ತನ್ನ ಮಗಳನ್ನೂ ಜಸ್ಮೀತ್ ಕಳೆದುಕೊಂಡಿರುತ್ತಾಳೆ. ಅದಕ್ಕಾಗಿಯೇ ತನ್ನೊಳಗೆಯೇ ಆಕೆ ಹೋರಾಡುತ್ತಿರುತ್ತಾಳೆ.
ಯಾವ ಒಟಿಟಿಯಲ್ಲಿ, ಯಾವಾಗಿಂದ?
ಹನ್ಸಲ್ ಮೆಹ್ತಾ ನಿರ್ದೇಶನದಲ್ಲಿ ಮೂಡಿಬಂದಿರುವ ದಿ ಬಕಿಂಗ್‌ಹ್ಯಾಮ್ ಮರ್ಡರ್ಸ್ ಸಿನಿಮಾ, ಈಗ ಒಟಿಟಿಗೆ ಆಗಮಿಸಲು ಸಜ್ಜಾಗಿದೆ. ಇದೇ ಶುಕ್ರವಾರದಿಂದ (ನವೆಂಬರ್ 8) ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ಈ ಸಿನಿಮಾ ಸ್ಟ್ರೀಮಿಂಗ್ ಆರಂಭಿಸಲಿದೆ. ಸೌತ್‌ನ ಇನ್ನುಳಿದ ಭಾಷೆಗಳಾದ ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳಿಗೂ ಡಬ್ ಆಗಿ ಸ್ಟ್ರೀಮ್ ಆಗುವ ಸಾಧ್ಯತೆ ಇದೆ.
ಚಿತ್ರೋತ್ಸವಗಳಲ್ಲಿ ಪ್ರದರ್ಶನ
ಕರೀನಾ ಕಪೂರ್ ಜೊತೆಗೆ ಏಕ್ತಾ ಕಪೂರ್ ಅವರ ಬಾಲಾಜಿ ಟೆಲಿಫಿಲ್ಮ್ಸ್ 'ದಿ ಬಕಿಂಗ್‌ಹ್ಯಾಮ್ ಮರ್ಡರ್ಸ್ ಸಿನಿಮಾವನ್ನು ಸಹ ನಿರ್ಮಾಣ ಮಾಡಿದೆ. ಚಿತ್ರಕಥೆಯನ್ನು ಅಸೀಮ್ ಅರೋರಾ, ಕಶ್ಯಪ್ ಕಪೂರ್ ಮತ್ತು ರಾಘವ್ ರಾಜ್ ಕಕ್ಕರ್ ಬರೆದಿದ್ದಾರೆ. ಥಿಯೇಟರ್‌ಗಳಲ್ಲಿ ಬಿಡುಗಡೆಯ ಮೊದಲು, ಈ ಸಿನಿಮಾ "ಬ್ರಿಟೀಷ್ ಫಿಲ್ಮ್ ಇಸ್ಟಿಟ್ಯೂಟ್ ಲಂಡನ್ ಫಿಲ್ಮ್ ಫೆಸ್ಟಿವಲ್ 2023" ಮತ್ತು 'MAMI ಸಿನಿಮೋತ್ಸವ 2023' ರಲ್ಲಿ ಪ್ರದರ್ಶಿಸಲಾಯಿತು.
ನೆಟ್‌ಫ್ಲಿಕ್ಸ್‌ನಲ್ಲಿ ಈ ವಾರದ ಸಿನಿಮಾಗಳು
- ಲವ್ ವಿಲೇಜ್ ಸೀಸನ್ 2 (ಜಪಾನೀಸ್ ವೆಬ್ ಸರಣಿ) - ನವೆಂಬರ್ 5
- ಮೀಟ್ ಮಿ ನೆಕ್ಸ್ಟ್ ಕ್ರಿಸ್ಮಸ್ (ಇಂಗ್ಲಿಷ್ ಸಿನಿಮಾ) - ನವೆಂಬರ್ 6
- ಪೆಡ್ರೊ ಪರಮೊ (ಸ್ಪ್ಯಾನಿಷ್ ಸಿನಿಮಾ) - ನವೆಂಬರ್ 6
- ಲವ್ ಈಸ್ ಬ್ಲೈಂಡ್: ಅರ್ಜೆಂಟೀನಾ (ಸ್ಪ್ಯಾನಿಷ್ ವೆಬ್ ಸರಣಿ) - ನವೆಂಬರ್ 6
- 10 ಡೇಸ್ ಆಫ್ ಎ ಕ್ಯೂರಿಯಸ್ ಮ್ಯಾನ್ (ಟರ್ಕಿಶ್ ಸಿನಿಮಾ)- ನವೆಂಬರ್ 7
- ಬಾರ್ನ್ ಫಾರ್ ದಿ ಸ್ಪಾಟ್‌ಲೈಟ್ (ಮ್ಯಾಂಡರಿನ್ ವೆಬ್ ಸರಣಿ) - ನವೆಂಬರ್ 7
- ಕೌಂಟ್ ಡೌನ್: ಪಾಲ್ ವರ್ಸಸ್ ಟೈಸನ್ (ಇಂಗ್ಲಿಷ್ ವೆಬ್ ಸರಣಿ) - ನವೆಂಬರ್ 7
- ಔಟರ್ ಬ್ಯಾಂಕ್ಸ್ ಸೀಸನ್ 4- ಭಾಗ 2 (ಇಂಗ್ಲಿಷ್ ವೆಬ್ ಸರಣಿ) - ನವೆಂಬರ್ 7
- ದೇವರ (ತೆಲುಗು ಸಿನಿಮಾ)- ನವೆಂಬರ್ 8
- ವಿಜಯ್ 69 (ಹಿಂದಿ ಸಿನಿಮಾ)- ನವೆಂಬರ್ 8
- ಬ್ಯಾಕ್ ಅಂಡರ್ ಸೀಜ್ (ಸ್ಪ್ಯಾನಿಷ್ ವೆಬ್ ಸರಣಿ) - ನವೆಂಬರ್ 8
- ಇನ್ವೆಸ್ಟಿಗೇಶನ್ ಏಲಿಯನ್ (ಇಂಗ್ಲಿಷ್ ವೆಬ್ ಸರಣಿ) - ನವೆಂಬರ್ 8
- Mr. ಪ್ಲಾಂಕ್ಟನ್ (ಕೊರಿಯನ್ ವೆಬ್ ಸರಣಿ) - ನವೆಂಬರ್ 8
- ದಿ ಕೇಜ್ (ಫ್ರೆಂಚ್ ವೆಬ್ ಸರಣಿ) - ನವೆಂಬರ್ 8
- ಅನ್ಝೋಲೋ: ದಿ ಗಾನ್ ಗರ್ಲ್ (ಇಂಗ್ಲಿಷ್ ಸಿನಿಮಾ) - ನವೆಂಬರ್ 8
- ಇಟ್ ಎಂಡ್ ವಿಥ್ ಅಸ್ (ಇಂಗ್ಲಿಷ್ ಸಿನಿಮಾ)- ನವೆಂಬರ್ 9
- ಆರ್ಕೇನ್ ಸೀಸನ್ 2 (ಇಂಗ್ಲಿಷ್ ವೆಬ್ ಸರಣಿ) - ನವೆಂಬರ್ 9
ವಿಭಾಗ