ಸಿದ್ದೇಗೌಡ್ರು ಕಡೆ ವಾಲುತ್ತಿದೆ ಭಾವನಾ ಮನಸ್ಸು, ಇತ್ತ ಗಂಡನ ಅಸಲಿ ಮುಖ ತಿಳಿದು ಭಯಗೊಂಡ ಜಾಹ್ನವಿ; ಲಕ್ಷ್ಮೀ ನಿವಾಸ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಸಿದ್ದೇಗೌಡ್ರು ಕಡೆ ವಾಲುತ್ತಿದೆ ಭಾವನಾ ಮನಸ್ಸು, ಇತ್ತ ಗಂಡನ ಅಸಲಿ ಮುಖ ತಿಳಿದು ಭಯಗೊಂಡ ಜಾಹ್ನವಿ; ಲಕ್ಷ್ಮೀ ನಿವಾಸ ಧಾರಾವಾಹಿ

ಸಿದ್ದೇಗೌಡ್ರು ಕಡೆ ವಾಲುತ್ತಿದೆ ಭಾವನಾ ಮನಸ್ಸು, ಇತ್ತ ಗಂಡನ ಅಸಲಿ ಮುಖ ತಿಳಿದು ಭಯಗೊಂಡ ಜಾಹ್ನವಿ; ಲಕ್ಷ್ಮೀ ನಿವಾಸ ಧಾರಾವಾಹಿ

Lakshmi Nivasa Serial: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ನವೆಂಬರ್‌ 6ರ ಎಪಿಸೋಡ್‌ನಲ್ಲಿ ತನ್ನಿಂದಲೇ ಸಿದ್ದೇಗೌಡ್ರುನನ್ನು ಮನೆಯವರು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಭಾವನಾಗೆ ಬೇಸರವಾಗುತ್ತದೆ. ಈಗಲಾದರೂ ಭಾವನಾ ನನ್ನ ಬಗ್ಗೆ ಯೋಚಿಸುತ್ತಿದ್ದಾರೆ ಎಂದು ತಿಳಿದು ಸಿದ್ದೇಗೌಡ ಖುಷಿಯಾಗುತ್ತಾನೆ.

Lakshmi Nivasa Serial:  ಲಕ್ಷ್ಮೀ ನಿವಾಸ ಧಾರಾವಾಹಿ ಬುಧವಾರದ ಎಪಿಸೋಡ್‌ನಲ್ಲಿ ನನ್ನಿಂದಲೇ ಸಿದ್ದುವನ್ನು ಮನೆಯವರು ಕಡೆಗಣಿಸುತ್ತಿದ್ದಾರೆ ಎಂಬ ಬೇಸರ ಉಂಟಾಗುತ್ತದೆ. ಮತ್ತೊಂದೆಡೆ ಜಾಹ್ನವಿ ಮನೆಯ ವಾಚ್‌ಮನ್‌, ಅವಳಿಗೆ ಗಂಡನ ಬಗ್ಗೆ ತಿಳಿಸುತ್ತಾನೆ.
Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿ ಬುಧವಾರದ ಎಪಿಸೋಡ್‌ನಲ್ಲಿ ನನ್ನಿಂದಲೇ ಸಿದ್ದುವನ್ನು ಮನೆಯವರು ಕಡೆಗಣಿಸುತ್ತಿದ್ದಾರೆ ಎಂಬ ಬೇಸರ ಉಂಟಾಗುತ್ತದೆ. ಮತ್ತೊಂದೆಡೆ ಜಾಹ್ನವಿ ಮನೆಯ ವಾಚ್‌ಮನ್‌, ಅವಳಿಗೆ ಗಂಡನ ಬಗ್ಗೆ ತಿಳಿಸುತ್ತಾನೆ. (PC: Zee Kannada Facebook)

Lakshmi Nivasa Serial: ಸಿದ್ದೇಗೌಡ, ನಾನೇ ಭಾವನಾಗೆ ತಾಳಿ ಕಟ್ಟಿದ್ದು ಎಂದು ನಿಜ ಹೇಳಿ ಅವಳನ್ನು ಮನೆಗೆ ಕರೆ ತಂದಾಗಿನಿಂದ ಜವರೇಗೌಡ ಸೇರಿದಂತೆ ಮನೆಯವರು ಆಕೆಯನ್ನು ಕಡೆಗಣಿಸುತ್ತಿದ್ದಾರೆ. ಸಿದ್ದು ಅತ್ತಿಗೆ ಇದೇ ಸಮಯವನ್ನು ಉಪಯೋಗ ಮಾಡಿಕೊಂಡು ಗಂಡ ಮರಿಗೌಡ, ಮಾವನಿಗೆ ಹತ್ತಿರವಾಗುವಂತೆ ಮಾಡುತ್ತಿದ್ದಾಳೆ.

ಸಿದ್ದೇಗೌಡನ ಬಗ್ಗೆ ಕನಿಕರ ವ್ಯಕ್ತಪಡಿಸುವ ಭಾವನಾ

ಸಿದ್ದೇಗೌಡ ಮದುವೆ ಆದಾಗಿನಿಂದ ನನ್ನ ರಾಜಕೀಯ ಜೀವನದಲ್ಲಿ ಏನೆಲ್ಲಾ ಸಮಸ್ಯೆಯಾಗುತ್ತಿದೆ. ಈ ಎಲೆಕ್ಷನ್‌ನಲ್ಲಿ ನಾನು ಗೆಲ್ಲಲೇಬೇಕು ಎಂದು ಪಣ ತೊಡುತ್ತಾನೆ. ಪ್ರಚಾರಕ್ಕೆ ಸಿದ್ದೇಗೌಡನನ್ನು ಕರೆಯದೆ, ಹಿರಿಯ ಮಗನನ್ನು ಜೊತೆಗೆ ಕರೆದೊಯ್ಯುತ್ತಾನೆ. ಇದರಿಂದ ಸಿದ್ದೇಗೌಡ ಬೇಸರ ವ್ಯಕ್ತಪಡಿಸುತ್ತಾನೆ. ಭಾವನಾ ಕೂಡಾ ಮನೆಯಲ್ಲಿ ನಡೆಯುತ್ತಿರುವುದನ್ನು ಗಮನಿಸುತ್ತಾಳೆ. ಇಷ್ಟು ದಿನ ನನ್ನ ಮನೆಯಲ್ಲಿ ನನಗೆ ಮದುವೆ ಆಗುವುದೋ ಇಲ್ಲವೋ ಎಂಬ ಆತಂಕದಲ್ಲಿದ್ದರು. ಅದರೆ ಈಗ ನಿಮ್ಮ ಮನೆಯಲ್ಲಿ ಯಾಕಾದರೂ ನಿಮ್ಮ ಮದುವೆ ಆಯ್ತೋ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ನೀವು ಒಂದು ತಪ್ಪು ಮಾಡದಿದ್ದರೆ ನಾನು ನೀವು ಇಬ್ಬರೂ ಇಂದು ಖುಷಿಯಾಗಿರಬಹುದಿತ್ತು ಎನ್ನುತ್ತಾಳೆ. ಸಿದ್ದೇಗೌಡ ಏನೂ ಮಾತನಾಡದೆ ಸುಮ್ಮನಾಗುತ್ತಾನೆ.

ಭಾವನಾ ಮಾತು ಕೇಳಿ ಖುಷಿಯಾದ ಸಿದ್ದೇಗೌಡ್ರು

ಭಾವನಾ ಈ ವಿಚಾರವನ್ನು ಗೌಡ್ರು ಬಳಿ ಹೇಳಲು ಕಾಲ್‌ ಮಾಡುತ್ತಾಳೆ. ನಾನು ಈ ಮನೆಗೆ ಬಂದಾಗಿನಿಂದ ಎಲ್ಲರೂ ವಿಚಿತ್ರವಾಗಿ ನಡೆದುಕೊಳ್ಳುತ್ತಿದ್ದಾರೆ. ಎಲ್ಲರೂ ಸಿದ್ದುವನ್ನು ದೂರ ಮಾಡುತ್ತಿದ್ದಾರೆ. ನನ್ನಿಂದಲೇ ಅವರಿಗೆ ಈ ಪರಿಸ್ಥಿತಿ ಬಂತಲ್ಲಾ ಎಂದು ಬೇಸರವಾಗುತ್ತಿದೆ ಎನ್ನುತ್ತಾಳೆ. ಅವಳ ಮಾತು ಕೇಳಿ ಸಿದ್ದೇಗೌಡ ಖುಷಿಯಾಗುತ್ತಾನೆ. ಎಲ್ಲರೂ ದೂರ ತಳ್ಳುತ್ತಿದ್ದಾರೆ ಎಂದಾದಲ್ಲಿ ನೀವು ಅವರಿಗೆ ಹತ್ತಿರವಾಗಿ, ಅವನಿಗೆ ಬೆಂಬಲವಾಗಿ ನಿಲ್ಲಿ, ಗಂಡ ಹೆಂಡತಿ ಸಂಬಂಧ ಸ್ವರ್ಗದಲ್ಲಿ ನಿಶ್ಚಯವಾಗುತ್ತದೆ, ಆ ಹುಡುಗ ನಿಮಗಾಗಿ ಅವನ ಮನೆಯವರನ್ನು ಎದುರು ಹಾಕಿಕೊಳ್ಳುತ್ತಾನೆ ಎಂದಾದಲ್ಲಿ ಅವನು ನಿಮ್ಮನ್ನು ಎಷ್ಟು ಪ್ರೀತಿಸುತ್ತಿದ್ದಾನೆ ಎಂಬುದನ್ನು ನೀವು ಅರ್ಥ ಮಾಡಿಕೊಳ್ಳಿ ಎನ್ನುತ್ತಾನೆ. ಭಾವನಾ ತನ್ನ ಬಗ್ಗೆ ಯೋಚನೆ ಮಾಡಿದ್ದಕ್ಕೆ ಖುಷಿಯಾಗುತ್ತಾನೆ.

ಜಾಹ್ನವಿಯನ್ನು ಭೇಟಿ ಮಾಡಿದ ವಾಚ್‌ಮ್ಯಾನ್

ಇತ್ತ ಜಾಹ್ನವಿ ತರಕಾರಿ ತರಲು ಮಾರ್ಕೆಟ್‌ಗೆ ಹೊರಡುತ್ತಾಳೆ. ದಾರಿಯಲ್ಲಿ ಹಿಂದಿನ ದಿನ ಕಾಲಿಂಕ್‌ ಬೆಲ್‌ ಮಾಡಿ ಹೋದ ವ್ಯಕ್ತಿ ಎದುರಾಗುತ್ತಾನೆ. ಅವನನ್ನು ನೋಡಿ ಜಾಹ್ನವಿ ಭಯಪಡುತ್ತಾಳೆ. ಅದರೆ ಅದು ತಮ್ಮ ಮನೆಯಲ್ಲಿ ಮೊದಲು ವಾಚ್‌ಮನ್‌ ಕೆಲಸ ಮಾಡುತ್ತಿದ್ದವನು ಎಂದು ತಿಳಿದು ಸಮಾಧಾನಗೊಳ್ಳುತ್ತಾಳೆ. ನೀವು ಕೆಲಸ ಬಿಟ್ಟು ಹೋಗಿದ್ದೀರಿ ತಾನೇ ಎಂದು ಕೇಳುತ್ತಾಳೆ. ನಾನು ಕೆಲಸ ಬಿಡಲಿಲ್ಲ, ನಿಮ್ಮ ಯಜಮಾನರು ನನ್ನ ಮೇಲೆ ಹಲ್ಲೆ ಮಾಡಿ ನನ್ನನ್ನು ಕೆಲಸದಿಂದ ತೆಗೆದುಹಾಕಿದರು. ನಿಮಗೆ ನಿಮ್ಮ ಗಂಡನಿಂದಲೇ ಅಪಾಯವಿದೆ ಎನ್ನುತ್ತಾನೆ. ಇದನ್ನು ಕೇಳಿ ಜಾಹ್ನವಿಗೆ ಇನ್ನಷ್ಟು ಭಯವಾಗುತ್ತದೆ.

ಗೌಡ್ರು ಹೇಳಿದಂತೆ ಭಾವನಾ, ಸಿದ್ದೇಗೌಡನ ಬೆಂಬಲಕ್ಕೆ ನಿಲ್ಲುತ್ತಾಳಾ? ಗಂಡನ ಬಗ್ಗೆ ತಿಳಿದ ಜಾಹ್ನವಿ ಮುಂದೇನು ಮಾಡುತ್ತಾಳೆ ಅನ್ನೋದು ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.

‌ಲಕ್ಷ್ಮೀ ನಿವಾಸ ಧಾರಾವಾಹಿ ಪಾತ್ರಧಾರಿಗಳು

ಸಿದ್ದೇಗೌಡ್ರು- ಧನಂಜಯ

ಭಾವನಾ- ದಿಶಾ ಮದನ್

ಲಕ್ಷ್ಮೀ- ನಟಿ ಶ್ವೇತಾ

ಶ್ರೀನಿವಾಸ್‌ - ಅಶೋಕ್ ಜೆಂಬೆ

ಹರೀಶ್‌ - ಅಜಯ್ ರಾಜ್

ಸಿಂಚನ - ರೂಪಶ್ರೀ

ಜಾಹ್ನವಿ - ಚಂದನ ಆನಂತಕೃಷ್ಣ

ಜಯಂತ್‌ - ದೀಪಕ್ ಸುಬ್ರಮಣ್ಯ

ಸಂತೋಷ್‌ - ಮಧು ಹೆಗಡೆ

ವೀಣಾ - ಲಕ್ಷ್ಮೀ ಹೆಗಡೆ

Whats_app_banner