ಬಾಕ್ಸ್ ಆಫೀಸ್‌ನಲ್ಲಿ ಗೆದ್ದನಾ ಸತ್ಯ- ಕಲ್ಕಿ? ಉಪೇಂದ್ರ UI ಸಿನಿಮಾದ ಎರಡನೇ ದಿನದ ಕಲೆಕ್ಷನ್ ಎಷ್ಟು?
Dec 22, 2024 10:42 AM IST
ಉಪೇಂದ್ರ UI ಸಿನಿಮಾದ ಎರಡನೇ ದಿನದ ಕಲೆಕ್ಷನ್ ಎಷ್ಟು?
- ಸಿನಿಮಾಗಳ ಕಲೆಕ್ಷನ್ ಮಾಹಿತಿ ಒದಗಿಸುವ sacnilk ವೆಬ್‌ತಾಣದಿಂದ ಅಧಿಕೃತ ಮಾಹಿತಿ ಹೊರಬಿದ್ದಿದೆ. ಜತೆಗೆ ಎರಡನೇ ದಿನ ಈ ಸಿನಿಮಾ ಗಳಿಸಿದ ಕಲೆಕ್ಷನ್ ಎಷ್ಟು ಎಂಬುದನ್ನು ತಿಳಿಸಿದೆ. ಚಿತ್ರಕ್ಕೆ ರಾಜ್ಯಾದ್ಯಂತ ಯಾವೆಲ್ಲ ಜಿಲ್ಲೆಗಳಲ್ಲಿ ಪ್ರೇಕ್ಷಕರ ಆಕ್ಯುಪೆನ್ಸಿ ಹೇಗಿದೆ ಎಂಬ ವಿವರವೂ ಲಭ್ಯವಾಗಿದೆ. ಹೀಗಿದೆ ಎರಡನೇ ದಿನದ ಕಲೆಕ್ಷನ್ ರಿಪೋರ್ಟ್.
UI Box Office Collection Day 2: ಸ್ಯಾಂಡಲ್‌ವುಡ್ ನಟ ಉಪೇಂದ್ರ ನಟಿಸಿ, ನಿರ್ದೇಶಿಸಿದ ಯುಐ ಸಿನಿಮಾಕ್ಕೆ ಪಾಸಿಟಿವ್ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಡಿಸೆಂಬರ್ 20ರಂದು ವಿಶ್ವದಾದ್ಯಂತ ಕನ್ನಡ ಸೇರಿ ಹಲವು ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಿತ್ತು. ಮುಂಗಡ ಬುಕ್ಕಿಂಗ್‌ನಿಂದಲೂ ಸದ್ದು ಮಾಡಿದ್ದ ಈ ಸಿನಿಮಾಕ್ಕೆ ಕರ್ನಾಟಕ, ಭಾರತ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಕಲೆಕ್ಷನ್ ವಿಚಾರದಲ್ಲಿಯೂ ಈ ಸಿನಿಮಾ ಮುಂದಡಿ ಇರಿಸಿದೆ. ಇತ್ತೀಚಿನ ಕೆಲ ತಿಂಗಳಿಂದ ಕಲೆಕ್ಷನ್ ವಿಚಾರದಲ್ಲಿ ಕನ್ನಡ ಬೇರೊಂದು ಸಿನಿಮಾಕ್ಕೂ ಈ ಮಟ್ಟದ ಯಶಸ್ಸು ಸಿಕ್ಕಿರಲಿಲ್ಲ. ಅದನ್ನು ಈಗ ಯುಐ ಪಡೆದುಕೊಂಡಿದೆ. ಮೊದಲ ದಿನದಂತೆ, ಎರಡನೇ ದಿನವೂ ಗಳಿಕೆಯಲ್ಲಿ ಮುಂದಡಿ ಇರಿಸಿದೆ.
ಯುಐ ಸಿನಿಮಾ ಉಪೇಂದ್ರ ಅಭಿಮಾನಿಗಳಿಗೆ ತುಂಬ ವಿಶೇಷ. 2015ರಲ್ಲಿ ಉಪ್ಪಿ 2 ಸಿನಿಮಾ ಬಳಿಕ ಅವರ ನಿರ್ದೇಶನದ ಬೇರಾವ ಸಿನಿಮಾ ತೆರೆಕಂಡಿಲ್ಲ. ಈಗ ಸುದೀರ್ಘ 9 ವರ್ಷಗಳ ನಂತರ ಯುಐ ಸಿನಿಮಾ ರಿಲೀಸ್ ಆಗಿದೆ. ನಟನೆಗಿಂತ ಅವರ ನಿರ್ದೇಶನಕ್ಕೆ ಹೆಚ್ಚು ಅಭಿಮಾನಿಗಳಿದ್ದಾರೆ. ಆ ಅಭಿಮಾನಿಗಳ ಆಸೆಯನ್ನೂ ಯುಐ ಸಿನಿಮಾ ಮೂಲಕ ಪೂರೈಸಿದ್ದಾರೆ. ನೆಗೆಟಿವ್ ಕಾಮೆಂಟ್‌ಗಳಿಗಿಂತ ಪಾಸಿಟಿವ್ ಟಾಕ್ ಮೂಲಕವೇ ಸಿನಿಮಾ ದಿನದಿಂದ ದಿನಕ್ಕೆ ಹೆಚ್ಚೆಚ್ಚು ಪ್ರೇಕ್ಷಕರು ಚಿತ್ರಮಂದಿರಕ್ಕೆ ಆಗಮಿಸುತ್ತಿದ್ದಾರೆ.
ರಾಜ್ಯದಲ್ಲಿ ಹೇಗಿತ್ತು ಎರಡನೇ ದಿನದ ಪ್ರತಿಕ್ರಿಯೆ
ಸಿನಿಮಾಗಳ ಕಲೆಕ್ಷನ್ ಮಾಹಿತಿ ಒದಗಿಸುವ sacnilk ವೆಬ್‌ತಾಣದಿಂದ ಅಧಿಕೃತ ಮಾಹಿತಿ ಹೊರಬಿದ್ದಿದೆ. ಜತೆಗೆ ಎರಡನೇ ದಿನ ಈ ಸಿನಿಮಾ ಗಳಿಸಿದ ಕಲೆಕ್ಷನ್ ಎಷ್ಟು ಎಂಬುದನ್ನು ತಿಳಿಸಿದೆ. ಚಿತ್ರಕ್ಕೆ ರಾಜ್ಯಾದ್ಯಂತ ಯಾವೆಲ್ಲ ಜಿಲ್ಲೆಗಳಲ್ಲಿ ಪ್ರೇಕ್ಷಕರ ಆಕ್ಯುಪೆನ್ಸಿ ಹೇಗಿದೆ ಎಂಬ ವಿವರವೂ ಲಭ್ಯವಾಗಿದೆ. ಯುಐ ಸಿನಿಮಾಕ್ಕೆ ಬೆಳಗಿನ ಶೋಗಳಿಗೆ 21.42% ಆಕ್ಯುಪೆನ್ಸಿ ಇದ್ದರೆ, ಮಧ್ಯಾಹ್ನದ ಶೋಗಳಿಗೆ 34.79% ಪ್ರೇಕ್ಷಕರ ಆಗಮನವಾಗಿದೆ. ಅದೇ ರೀತಿ ಸಂಜೆ ಶೋಗಳಿಗೆ 37.39% ರಷ್ಟಿದ್ದರೆ, ರಾತ್ರಿ ಶೋಗಳಿಗೆ ಭರ್ತಿ 56.87% ಆಕ್ಯುಪೆನ್ಸಿ ಇದೆ.
ಕರ್ನಾಟಕದ ಜಿಲ್ಲೆಗಳಲ್ಲಿ ಹೇಗಿದೆ ಪ್ರತಿಕ್ರಿಯೆ?
ಬೆಂಗಳೂರಿನಲ್ಲಿ 458 ಶೋಗಳ ಪೈಕಿ ರಾತ್ರಿ ಶೋಗಳಿಗೆ ಹೆಚ್ಚಿನ ಪ್ರೇಕ್ಷಕರು ಆಗಮಿಸಿದ್ದಾರೆ. ಶೇ. 88. 50 ಆಕ್ಯುಪೆನ್ಸಿ ಸಿಕ್ಕರೆ, ಹುಬ್ಬಳ್ಳಿಯಲ್ಲಿ (25 ಶೋ) 76%, ಮಂಗಳೂರಿನಲ್ಲಿ (27 ಶೋ) 37%, ಕಲಬುರಗಿ (15 ಶೋ) 94%, ಬೆಳಗಾವಿ (12 ಶೋ) 56%, ಮೈಸೂರಿನಲ್ಲಿ (54 ಶೋ) 97%, ಶಿವಮೊಗ್ಗ (19 ಶೋ) 96%, ಕುಂದಾಪುರ (14 ಶೋ) 86%, ತುಮಕೂರಿನಲ್ಲಿ 99%, ಮಣಿಪಾಲದಲ್ಲಿ 40%, ರಾಯಚೂರಿನಲ್ಲಿ 96% ಹೈದರಾಬಾದ್‌ನಲ್ಲಿ 45%, ಮುಂಬೈನಲ್ಲಿ (1 ಶೋ) 17% ಆಕ್ಯುಪೆನ್ಸಿ ಹೊಂದಿದೆ. ಅಂದರೆ, ಅಷ್ಟೊಂದು ಪ್ರಮಾಣದ ಮಂದಿ ಸಿನಿಮಾ ವೀಕ್ಷಣೆ ಮಾಡಿದೆ.
ಯುಐ ಚಿತ್ರದ ಎರಡನೇ ದಿನದ ಕಲೆಕ್ಷನ್ ಎಷ್ಟು?
ಕನ್ನಡದ ಜತೆಗೆ ತೆಲುಗು, ತಮಿಳು, ಹಿಂದಿ ಬೆಂಗಾಲಿ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆ ಆಗಿರುವ ಯುಐ ಸಿನಿಮಾ ಮೊದಲ ದಿನ sacnilk ವೆಬ್‌ತಾಣದ ಮಾಹಿತಿ ಪ್ರಕಾರ ಮೊದಲ ದಿನ 6.95 ಕೋಟಿ ಕಲೆಕ್ಷನ್ ಮಾಡಿತ್ತು. ಅದರಂತೆ ಎರಡನೇ ದಿನವೂ 6.50 ಕೋಟಿ ಗಳಿಕೆ ಮಾಡಿದೆ. ಈ ಮೂಲಕ ಎರಡು ದಿನಗಳಲ್ಲಿ 13.45 ಕೋಟಿ ಗಳಿಕೆ ಕಂಡಂತಾಗಿದೆ. ಇತ್ತ ವಿತರಕರ ವಲಯದಲ್ಲಿ ಮೊದಲ ದಿನ 15 ಕೋಟಿ ಎರಡನೇ ದಿನ 17 ಕೋಟಿ ಗಳಿಕೆ ಕಂಡಿದೆ ಎಂದು ಹೇಳಲಾಗುತ್ತಿದೆ. ಒಟ್ಟಾರೆಯಾಗಿ, 32 ಕೋಟಿ ಗಳಿಸಿದೆ ಎನ್ನಲಾಗುತ್ತಿದೆ.
ಲಹರಿ ಫಿಲಂಸ್ ಹಾಗೂ ವೀನಸ್ ಎಂಟರ್‌ಪ್ರೈಸಸ್ ಬ್ಯಾನರ್‌ನಲ್ಲಿ ಜಿ. ಮನೋಹರನ್ ಹಾಗೂ ಕೆ.ಪಿ. ಶ್ರೀಕಾಂತ್ ಯುಐ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ಉಪೇಂದ್ರಗೆ ಜೋಡಿಯಾಗಿ ರೀಷ್ಮಾ ನಾಣಯ್ಯ ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ.