logo
ಕನ್ನಡ ಸುದ್ದಿ  /  ಮನರಂಜನೆ  /  Friday Release: ನಾಳೆ ಯಾವ ಫಿಲ್ಮ್ ನೋಡ್ತಿರಿ? ಕೈವ ಅಥಿ ಐ ಲವ್‌ ಯು ಮರೀಚಿ ಕಂಜ್ಯೂರಿಂಗ್ ಕಣ್ಣಪ್ಪನ್‌ ಸೇರಿದಂತೆ 13+ ಸಿನಿಮಾ ಬಿಡುಗಡೆ

Friday Release: ನಾಳೆ ಯಾವ ಫಿಲ್ಮ್ ನೋಡ್ತಿರಿ? ಕೈವ ಅಥಿ ಐ ಲವ್‌ ಯು ಮರೀಚಿ ಕಂಜ್ಯೂರಿಂಗ್ ಕಣ್ಣಪ್ಪನ್‌ ಸೇರಿದಂತೆ 13+ ಸಿನಿಮಾ ಬಿಡುಗಡೆ

Praveen Chandra B HT Kannada

Dec 07, 2023 07:59 PM IST

google News

ಕೈವ ಅಥಿ ಐ ಲವ್‌ ಯು ಮರೀಚಿ ಕಂಜ್ಯೂರಿಂಗ್ ಕಣ್ಣಪ್ಪನ್‌ ಸೇರಿದಂತೆ 13+ ಸಿನಿಮಾ ನಾಳೆ ಬಿಡುಗಡೆ

    • Movie Releases on December 7 & 8: ಇಂದು ಮತ್ತು ನಾಳೆ ಭಾರತೀಯ ಚಿತ್ರಮಂದಿರಗಳಲ್ಲಿ ಹಲವು ಸಿನಿಮಾಗಳು ಬಿಡುಗಡೆಯಾಗಲಿವೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಕೈವ ಅಥಿ ಐ ಲವ್‌ ಯು ಮರೀಚಿ ಕಂಜ್ಯೂರಿಂಗ್ ಕಣ್ಣಪ್ಪನ್‌ ಸೇರಿದಂತೆ 13ಕ್ಕೂ ಹೆಚ್ಚು ಸಿನಿಮಾಗಳು ಬಿಡುಗಡೆಯಾಗುತ್ತಿವೆ. 
ಕೈವ ಅಥಿ ಐ ಲವ್‌ ಯು ಮರೀಚಿ ಕಂಜ್ಯೂರಿಂಗ್ ಕಣ್ಣಪ್ಪನ್‌ ಸೇರಿದಂತೆ 13+ ಸಿನಿಮಾ ನಾಳೆ ಬಿಡುಗಡೆ
ಕೈವ ಅಥಿ ಐ ಲವ್‌ ಯು ಮರೀಚಿ ಕಂಜ್ಯೂರಿಂಗ್ ಕಣ್ಣಪ್ಪನ್‌ ಸೇರಿದಂತೆ 13+ ಸಿನಿಮಾ ನಾಳೆ ಬಿಡುಗಡೆ

ಬೆಂಗಳೂರು: ಪ್ರತಿಶುಕ್ರವಾರ ಬಂತೆಂದರ ಸಿನಿಮಾ ಪ್ರೇಮಿಗಳಿಗೆ ಹಬ್ಬ. ಈ ವಾರ ಹಲವು ಆಸಕ್ತಿದಾಯಕ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ತೆಲುಗು, ತಮಿಳು, ಮಲಯಾಳಂ, ಕನ್ನಡ ಭಾಷೆಗಳಲ್ಲಿ ಹಲವು ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಕನ್ನಡದಲ್ಲಿ ಕೈವ, ಮರೀಚಿ ಮುಂತಾದ ಸಿನಿಮಾಗಳು ಬಿಡುಗಡೆಯಾಗಲಿವೆ. ಹಾಯ್‌ ನಾನ್ನ ಸಿನಿಮಾವನ್ನೂ ಕನ್ನಡ ಡಬ್ಬಿಂಗ್‌ನಲ್ಲಿ ನೋಡಬಹುದಾಗಿದೆ. ಈ ವಾರ ಬಿಡುಗಡೆಯಾಗುತ್ತಿರುವ ದಕ್ಷಿಣ ಭಾರತ ಮತ್ತು ಉತ್ತರ ಭಾರತದ ಪ್ರಮುಖ ಸಿನಿಮಾಗಳ ವಿವರ ಇಲ್ಲಿದೆ.

ಶುಕ್ರವಾರ ಬಿಡುಗಡೆಯಾಗಲಿರುವ ಕನ್ನಡ ಸಿನಿಮಾಗಳು

- ಕೈವ

- ಅಥಿ ಐ ಲವ್‌ ಯು

- ಮರೀಚಿ

- ಪಂಕಜ್‌ ಕಲ್ಯಾಣ

- ಹಾಯ್‌ ನಾನ್ನ

- ಪಾಲಿಟಿಕ್ಸ್ ಕಲ್ಯಾಣ

ಡಿಸೆಂಬರ್‌ 8ರಂದು ಬಿಡುಗಡೆಯಾಗಲಿರುವ ತೆಲುಗು ಸಿನಿಮಾಗಳು

- ಹಾಯ್‌ ನಾನ್ನ

- ಎಕ್ಸ್ಟ್ರಾ ಆರ್ಡಿನರಿ ಮ್ಯಾನ್‌

- ಆಪರೇಷನ್‌ ವ್ಯಾಲೆಂಟಿನ್‌

- ಚಂಡಿಕಾ

ನಾಳೆ ಬಿಡುಗಡೆಯಾಗಲಿರುವ ತಮಿಳು ಸಿನಿಮಾಗಳು

- ಕಂಜ್ಯೂರಿಂಗ್ ಕಣ್ಣಪ್ಪನ್‌

- ಥೀ ಇವನ್‌

- ವಿವೇಶಿನಿ

- ಅವಲ್‌ ಪೇರ್‌ ರಜ್ನಿ

ಇದೇ ಸಮಯದಲ್ಲಿ ಅಲವಂಧನ್‌ ಮತ್ತು ಮುತ್ತು ಎಂಬ ಎರಡು ಹಳೆಯ ಸಿನಿಮಾವನ್ನು ಮತ್ತೆ ರಿಲೀಸ್‌ ಮಾಡಲು ಉದ್ದೇಶಿಸಲಾಗಿತ್ತು. ಕೆಲವು ವರದಿಗಳ ಪ್ರಕಾರ ಮುತ್ತು ಮರುರಿಲೀಸ್‌ ಕ್ಯಾನ್ಸಲ್‌ ಆಗಿದೆ.

ಹಿಂದಿ ಸಿನಿಮಾಗಳು

ಹಾಯ್‌ ನಾನ್ನ (ಹಿಂದಿ ಆವೃತ್ತಿ)

ಎಕ್ಸ್‌ಟ್ರಾ ಆರ್ಡಿನರಿ ಮ್ಯಾನ್‌

ಚಂಡಿಕಾ (ಹಿಂದಿ ಡಬ್ಬಿಂಗ್‌)

ಮಲಯಾಳಂ ಸಿನಿಮಾ

ಓ ಸಿಂಡ್ರೆಲ್ಲಾ

ಕೈವ

ಇದು ಕನ್ನಡದ ಬಹುನಿರೀಕ್ಷಿತ ಸಿನಿಮಾ. ಬೆಂಗಳೂರು ಕರಗದ ನಡುವೆ ಹುಟ್ಟಿಕೊಂಡ ಪ್ರೇಮಕಥೆಯ ಹಿನ್ನಲೆ ಇರುವುದರಿಂದ ಈ ಸಿನಿಮಾದ ಮೇಲೆ ತುಸು ಹೆಚ್ಚೇ ನಿರೀಕ್ಷೆ ಇದೆ. ರವೀಂದ್ರಕುಮಾರ್ ನಿರ್ಮಾಣದ, ಜಯತೀರ್ಥ ನಿರ್ದೇಶನದ ಹಾಗೂ ಧನ್ವೀರ್ ನಾಯಕರಾಗಿ ನಟಿಸಿರುವ " ಕೈವ" ಚಿತ್ರವು ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ದಿನಕರ್ ತೂಗುದೀಪ್ ಪ್ರಮುಖಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದಿನಕರ್ ತೂಗುದೀಪ, ರಾಘು ಶಿವಮೊಗ್ಗ ಸೇರಿದಂತೆ ಐದು ಜನ ನಿರ್ದೇಶಕರು ಈ ಚಿತ್ರದಲ್ಲಿ ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಶ್ವೇತಪ್ರಿಯ ಛಾಯಾಗ್ರಹಣ ಮಾಡಿದ್ದಾರೆ. ಇದನ್ನೂ ಓದಿ: ಕೈವ ಸಿನಿಮಾದ ಸಂಕ್ರಾಂತಿ ಸಂಜೇಲಿ ಹಚ್ಚಿಟ್ಟ ದೀಪ ಹಾಡಿನ ಲಿರಿಕ್ಸ್‌ ಇಲ್ಲಿದೆ ನೋಡಿ; ಓ ದೇವರೆ ನೀನಿದ್ದರೆ ನೋಡು

ಅಥಿ ಐ ಲವ್‌ ಯು

ಒಂದು ದಿನ ನಡೆಯುವ ಕಥೆಯನ್ನು ಇಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ಇತ್ತೀಚೆಗೆ ಟಗರು ಪಲ್ಯವೂ ಒಂದು ದಿನದ ಕಥೆ ಹೊಂದಿತ್ತು. ಅಥಿ ಮತ್ತು ವಸಂತ್‌ ಎಂಬ ಎರಡು ಪಾತ್ರಗಳು ಮಾತ್ರ ತೆರೆಯ ಮೇಲೆ ಕಾಣಿಸಲಿದೆ. ಉಳಿದ ಪಾತ್ರಗಳ ಹಿನ್ನಲೆ ಧ್ವನಿ ಮಾತ್ರ ಇರಲಿದೆ. ಹೀಗಾಗಿ, ಇದು ವಿಭಿನ್ನ ಸಿನಿಮಾವಾಗಿ ಗಮನ ಸೆಳೆಯಲಿದೆ. ಇದು ಸಸ್ಪೆನ್ಸ್‌ ಥ್ರಿಲ್ಲರ್‌ ಸಿನಿಮಾ.

ಮರೀಚಿ

ನಟ ವಿಜಯ ರಾಘವೇಂದ್ರ ನಟನೆಯ ಮರೀಚಿ ಸಿನಿಮಾ ನಾಳೆ ಬಿಡುಗಡೆಯಾಗಲಿದೆ. ವಿಜಯ್‌ ರಾಘವೇಂದ್ರ ಅವರು ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇದು ಮಿಸ್ಟರಿ ಕಂ ಕ್ರೈಂ ಥ್ರಿಲ್ಲರ್‌ ಸಿನಿಮಾ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ