logo
ಕನ್ನಡ ಸುದ್ದಿ  /  ಮನರಂಜನೆ  /  Loveli Movie Update: ‘ಲವ್‌ಲಿ’ ಡಬ್ಬಿಂಗ್‌ ಮುಗಿಸಿದ ವಸಿಷ್ಠ ಸಿಂಹ; ಹಾಡಿನ ಶೂಟಿಂಗ್‌ಗೆ ಲಂಡನ್‌ನತ್ತ ಹಾರಲು ಚಿತ್ರತಂಡ ರೆಡಿ

Loveli Movie Update: ‘ಲವ್‌ಲಿ’ ಡಬ್ಬಿಂಗ್‌ ಮುಗಿಸಿದ ವಸಿಷ್ಠ ಸಿಂಹ; ಹಾಡಿನ ಶೂಟಿಂಗ್‌ಗೆ ಲಂಡನ್‌ನತ್ತ ಹಾರಲು ಚಿತ್ರತಂಡ ರೆಡಿ

HT Kannada Desk HT Kannada

Mar 03, 2023 01:24 PM IST

ಮದುವೆ ಬಳಿಕ ‘ಲವ್‌ಲಿ’ ಡಬ್ಬಿಂಗ್‌ ಕಡೆ ವಾಲಿದ ವಸಿಷ್ಠ ಸಿಂಹ..

    • ವಸಿಷ್ಠ ಸಿಂಹ ನಾಯಕನಾಗಿ ನಟಿಸಿರುವ ಲವ್‌ಲಿ ಸಿನಿಮಾ ಡಬ್ಬಿಂಗ್‌ ಕೆಲಸ ಮುಗಿಸಿದೆ. ಇನ್ನೇನಿದ್ದರೂ ಹಾಡಿನ ಚಿತ್ರೀಕರಣಕ್ಕೆ ಲಂಡನ್‌ಗೆ ಹಾರಲಿದೆ.
ಮದುವೆ ಬಳಿಕ ‘ಲವ್‌ಲಿ’ ಡಬ್ಬಿಂಗ್‌ ಕಡೆ ವಾಲಿದ ವಸಿಷ್ಠ ಸಿಂಹ..
ಮದುವೆ ಬಳಿಕ ‘ಲವ್‌ಲಿ’ ಡಬ್ಬಿಂಗ್‌ ಕಡೆ ವಾಲಿದ ವಸಿಷ್ಠ ಸಿಂಹ..

Loveli Movie Update: ವಸಿಷ್ಠ ಸಿಂಹ ನಟನೆಯ ಬಹು ನಿರೀಕ್ಷಿತ ಚಿತ್ರ ‘ಲವ್ ಲಿ’. ಆರಂಭದಿಂದಲು ಸಿನಿ ಪ್ರೇಕ್ಷಕರ ಗಮನ ಸೆಳೆಯುತ್ತಿರುವ ಈ ಚಿತ್ರಕ್ಕೆ ಚೇತನ್ ಕೇಶವ್ ಆಕ್ಷನ್ ಕಟ್ ಹೇಳಿದ್ದಾರೆ. ಕಮರ್ಶಿಯಲ್ ರೊಮ್ಯಾಂಟಿಕ್ ಲವ್ ಸ್ಟೋರಿ ಸಬ್ಜೆಕ್ಟ್ ಒಳಗೊಂಡ ಈ ಚಿತ್ರ ಅದ್ದೂರಿಯಾಗಿ ನಿರ್ಮಾಣವಾಗುತ್ತಿದ್ದು, ಸದ್ಯ ಚಿತ್ರೀಕರಣ ಕಂಪ್ಲೀಟ್ ಮಾಡಿರುವ ಚಿತ್ರತಂಡ ಡಬ್ಬಿಂಗ್ ನಲ್ಲಿ ನಿರತವಾಗಿದೆ.

ಟ್ರೆಂಡಿಂಗ್​ ಸುದ್ದಿ

ಮಲಯಾಳಂನ ಮಂಜುಮ್ಮೆಲ್‌ ಬಾಯ್ಸ್‌ ಸಿನಿಮಾ ನಿಜಕ್ಕೂ ಚೆನ್ನಾಗಿದೆಯಾ? ಅಥವಾ ಬರೀ ಹೈಪಾ? ಹೀಗಿದೆ ಚಿತ್ರ ವಿಮರ್ಶೆ

Sathyam: ಸತ್ಯಂ ಚಿತ್ರದಲ್ಲಿ ತುಳುನಾಡ ದೈವದ ಕಥೆ; ಸೆನ್ಸಾರ್‌ ಪಾಸ್‌, ಶೀಘ್ರದಲ್ಲಿ ಚಿತ್ರಮಂದಿರದಲ್ಲಿ ‘ಗಣಪ’ನ ಸಿನಿಮಾ

Kangaroo Review: ಕ್ರೈಂ ಥ್ರಿಲ್ಲರ್‌ನಲ್ಲಿ ಮೇಳೈಸಿದ ಹಾರರ್‌ ಅನುಭವ! ಕಾಂಗರೂ ಚಿತ್ರದಲ್ಲಿ ಕಾಡಲಿದೆ ಕರುಳು ಬಳ್ಳಿಯ ಕಥೆ

ಶಕುಂತಲಾದೇವಿ ಕೈಗೂ ಸಿಗ್ತು ಪೆನ್‌ಡ್ರೈವ್‌; ಪ್ರಜ್ವಲ್‌ ರೇವಣ್ಣ ವಿದ್ಯಮಾನದ ಸಮಯದಲ್ಲಿ ಅಲರ್ಟ್‌ ಆದ್ರು ಸೀರಿಯಲ್‌ ಡೈರೆಕ್ಟರ್‌

ಲಂಡನ್ ನಲ್ಲಿ ಸೆರೆ ಹಿಡಿಯುವ ಸಾಂಗ್‌ವೊಂದನ್ನು ಹೊರತು ಪಡಿಸಿ ಚಿತ್ರದ ಚಿತ್ರೀಕರಣ ಕಂಪ್ಲೀಟ್ ಮಾಡಿರುವ ‘ಲವ್ ಲಿ’ ಟೀಂ ಕಳೆದ ಏಳು ದಿನದಿಂದ ಡಬ್ಬಿಂಗ್ ನಲ್ಲಿ ತೊಡಗಿದೆ. ವಸಿಷ್ಠ ಸಿಂಹ, ಸ್ಟೆಫಿ ಪಟೇಲ್, ದತ್ತಣ್ಣ, ರಂಗಾಯಣ ರಘು, ಅಚ್ಯುತ್ ಕುಮಾರ್, ವಂಶಿಕಾ, ಸೂರಜ್ ಚಿತ್ರದ ಡಬ್ಬಿಂಗ್ ಪೋಷನ್ ಕಂಪ್ಲೀಟ್ ಮಾಡಿದ್ದಾರೆ. ಐದು ದಿನಗಳ ಡಬ್ಬಿಂಗ್ ಕೆಲಸ ಬಾಕಿ ಇದೆ ಎಂದು ನಿರ್ದೇಶಕ ಚೇತನ್ ಕೇಶವ್ ಮಾಹಿತಿ ಹಂಚಿಕೊಂಡಿದ್ದಾರೆ.

‘ಲವ್ ಲಿ’ ಚೇತನ್ ಕೇಶವ್ ಅವರ ಮೊದಲ ಸಿನಿಮಾ ವೆಂಚರ್. ಕಮರ್ಶಿಯಲ್ ರೊಮ್ಯಾಂಟಿಕ್ ಲವ್ ಸ್ಟೋರಿ ಜೊತೆಗೆ ರೌಡಿಸಂ ಕಥಾಹಂದರ ಒಳಗೊಂಡ ಈ ಚಿತ್ರದಲ್ಲಿ ವಸಿಷ್ಠ ಸಿಂಹ ಡಿಫ್ರೆಂಟ್ ಶೇಡ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ನಾಯಕಿಯಾಗಿ ಸ್ಟೆಫಿ ಪಟೇಲ್ ನಟಿಸುತ್ತಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಸಿನಿಮಾ ಸ್ಯಾಂಪಲ್ ಗಳು ಭರವಸೆ ಮೂಡಿಸಿದ್ದು, ಅದ್ದೂರಿಯಾಗಿ ಸಿನಿಮಾ ನಿರ್ಮಾಣ ಮಾಡಲಾಗಿದೆ. ಚಿತ್ರೀಕರಣ ಕಂಪ್ಲೀಟ್ ಮಾಡಿರುವ ಚಿತ್ರತಂಡ ಡಬ್ಬಿಂಗ್ ಕೆಲಸ ಮುಗಿಯುತ್ತಿದ್ದಂತೆ ಹಾಡಿನ ಚಿತ್ರೀಕರಣಕ್ಕೆ ಲಂಡನ್ ತೆರೆಳಲಿದೆ.

ಸುಬ್ಬಲಕ್ಷ್ಮಿ ಸಂಸಾರ ಸೀರಿಯಲ್ ಖ್ಯಾತಿಯ ಸಮೀಕ್ಷಾ, ಸಾಧುಕೋಕಿಲ, ದತ್ತಣ್ಣ, ಅಚ್ಯುತ್ ಕುಮಾರ್, ವಂಶಿಕಾ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೂರಜ್ ಒಳಗೊಂಡ ದೊಡ್ಡ ತಾರಾಬಳಗ ‘ಲವ್ ಲಿ’ ಚಿತ್ರದಲ್ಲಿದೆ. ಎಂ.ಆರ್ ರವೀಂದ್ರ ಕುಮಾರ್ ನಿರ್ಮಾಣದಲ್ಲಿ ಮೂಡಿ ಬರ್ತಿರುವ ಈ ಸಿನಿಮಾಗೆ ಅಶ್ವಿನ್ ಕೆನಡಿ ಕ್ಯಾಮೆರಾ ವರ್ಕ್, ಹರೀಶ್ ಕೊಮ್ಮೆ ಸಂಕಲನ, ಅನೂಪ್ ಸೀಳಿನ್ ಸಂಗೀತ ನಿರ್ದೇಶನವಿದೆ.

ಇದನ್ನೂ ಓದಿ

Raghavendra Rajkumar: ನೈಜ ಘಟನೆ ಆಧರಿತ '13' ಚಿತ್ರದಲ್ಲಿ ರಾಘಣ್ಣ; ತಂಡದ ಸಮಾಜ ಸೇವೆಯೇ ಈ ಚಿತ್ರಕ್ಕೆ ಪ್ರಚಾರ‌

ಕೆ.ನರೇಂದ್ರಬಾಬು ಅವರ ನಿರ್ದೇಶನದ '13' ಚಿತ್ರದ ಟೀಸರ್ ರಾಜ್ಯದ 32 ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಯಿತು. ಅಲ್ಲದೆ ದುಬೈ, ಸಿಂಗಪೂರ್ ಸೇರಿದಂತೆ ಅನೇಕ ದೇಶಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಿದೆ. ಇತ್ತೀಚೆಗೆ ನಡೆದ ಸಮಾರಂಭದಲ್ಲಿ ವಿಶೇಷವಾಗಿ ಎಲ್ಲಾ ಜಿಲ್ಲೆಗಳಿಂದ ಆಗಮಿಸಿದ್ದ ಅಪ್ಪು ಅಭಿಮಾನಿಗಳೇ ಸೇರಿ '13' ಚಿತ್ರದ ಟೀಸರ್ ರಿಲೀಸ್ ಮಾಡಿದರು. ಪೂರ್ಣ ವಿವರಕ್ಕೆ ಇಲ್ಲಿ ಕ್ಲಿಕ್‌ ಮಾಡಿ

Kichcha Sudeep: ‘ಬಿ’ಗಿಯಾಗ್ ಕೂತ್ಕೋಳಿ ‘ರಂ’ಪಾಟ ಶುರುವಾಗಕ್ ಸ್ವಲ್ಪ ಸಮಯ ಬೇಕು ‘ಬಾ’ಡೂಟದ್ ಜೊತೆ ಬರ್ತೀವಿ; ಇದು ಕಿಚ್ಚನ ಸಿನಿಮಾ ಅಪ್‌ಡೇಟ್

Billa Ranga Baasha: ವಿಕ್ರಾಂತ್‌ ರೋಣ ಸಿನಿಮಾ ಬಿಡುಗಡೆ ಆಗಿ ಹತ್ರತ್ರ 8 ತಿಂಗಳಾಗುತ್ತ ಬಂತು. ಅಲ್ಲಿಂದ ಇಲ್ಲಿಯವರೆಗೂ ಕಿಚ್ಚ ಸುದೀಪ್‌ ಅವರ ಮುಂದಿನ ಸಿನಿಮಾ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಯಾವ ಸಿನಿಮಾದಲ್ಲಿ ಸುದೀಪ್‌ ನಟಿಸಲಿದ್ದಾರೆ? ಆ ಸಿನಿಮಾ ನಿರ್ದೇಶಕರು ಯಾರು? ನಿರ್ಮಾಣ ಸಂಸ್ಥೆ ಯಾವುದು? ಈ ಪ್ರಶ್ನೆಗಳಿಗೆ ಉತ್ತರ ಸಿಕ್ಕಿರಲಿಲ್ಲ. ಆದರೆ, ರೋಣನ ಸೂತ್ರಧಾರಿ ಅನೂಪ್‌ ಭಂಡಾರಿ ಜತೆಗೇ ಸುದೀಪ್‌ ಸಿನಿಮಾ ಮಾಡಲಿದ್ದಾರೆ ಎಂಬ ಟಾಕ್‌ ಮಾತ್ರ ಗಾಂಧಿನಗರದಲ್ಲಿ ಜೋರಾಗಿತ್ತು. ಅದೀಗ ನಿಜವಾಗಿದೆ. ‘ಬಿಲ್ಲ ರಂಗ ಬಾಷಾ’ ಸಿನಿಮಾ ಶೀಘ್ರದಲ್ಲಿ ಸೆಟ್ಟೇರಲಿದೆ! ಪೂರ್ಣ ವಿವರಕ್ಕೆ ಇಲ್ಲಿ ಕ್ಲಿಕ್‌ ಮಾಡಿ

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು