logo
ಕನ್ನಡ ಸುದ್ದಿ  /  ಕರ್ನಾಟಕ  /  Ambatanaya Mudradi: ಯಕ್ಷರಂಗದ ಹಿರಿಯ ವಿದ್ವಾಂಸ, ಸಾಹಿತಿ, ಕಲಾವಿದ ಅಂಬಾತನಯ ಮುದ್ರಾಡಿ ವಿಧಿವಶ

Ambatanaya Mudradi: ಯಕ್ಷರಂಗದ ಹಿರಿಯ ವಿದ್ವಾಂಸ, ಸಾಹಿತಿ, ಕಲಾವಿದ ಅಂಬಾತನಯ ಮುದ್ರಾಡಿ ವಿಧಿವಶ

HT Kannada Desk HT Kannada

Feb 21, 2023 11:11 AM IST

ಖ್ಯಾತ ಸಾಹಿತಿ, ಹಿರಿಯ ವಿದ್ವಾಂಸ ಅಂಬಾತನಯ ಮುದ್ರಾಡಿ ಅವರು ಇಂದು ವಿಧಿವಶರಾದರು.

  • Ambatanaya Mudradi: ಯಕ್ಷಗಾನ ಕಲಾವಿದ, ಸಾಹಿತಿ, ವಿದ್ವಾಂಸ ಅಂಬಾತನಯ ಮುದ್ರಾಡಿ ಅವರು ಮಂಗಳವಾರ ಬೆಳಗ್ಗೆ ಅಲ್ಪಕಾಲದ ಅನಾರೋಗ್ಯದ ನಂತರ ವಿಧಿವಶರಾದರು. ಅವರಿಗೆ 88 ವರ್ಷ ವಯಸ್ಸಾಗಿತ್ತು.

ಖ್ಯಾತ ಸಾಹಿತಿ, ಹಿರಿಯ ವಿದ್ವಾಂಸ ಅಂಬಾತನಯ ಮುದ್ರಾಡಿ ಅವರು ಇಂದು ವಿಧಿವಶರಾದರು.
ಖ್ಯಾತ ಸಾಹಿತಿ, ಹಿರಿಯ ವಿದ್ವಾಂಸ ಅಂಬಾತನಯ ಮುದ್ರಾಡಿ ಅವರು ಇಂದು ವಿಧಿವಶರಾದರು. (Social media)

ಮಂಗಳೂರು: ಪ್ರಸಿದ್ಧ ಯಕ್ಷಗಾನ ಕಲಾವಿದ, ಸಾಹಿತಿ, ವಿದ್ವಾಂಸ ಅಂಬಾತನಯ ಮುದ್ರಾಡಿ ಅವರು ಮಂಗಳವಾರ ಬೆಳಗ್ಗೆ ಅಲ್ಪಕಾಲದ ಅನಾರೋಗ್ಯದ ನಂತರ ವಿಧಿವಶರಾದರು. ಅವರಿಗೆ 88 ವರ್ಷ ವಯಸ್ಸಾಗಿತ್ತು. ಪತ್ನಿ, ಮೂವರು ಪುತ್ರರು ಮತ್ತು ಐವರು ಪುತ್ರಿಯರನ್ನು ಅವರು ಅಗಲಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Prajwal Revanna Scandal: ಪ್ರಜ್ವಲ್ ರೇವಣ್ಣ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಜಾರಿ; ಶೀಘ್ರದಲ್ಲೇ ಹಾಸನ ಸಂಸದ ಇರುವ ಸ್ಥಳ ಪತ್ತೆ

Bangalore News:ಮುಂಗಾರಿಗೆ ಅಣಿಯಾಗುತ್ತಿದೆ ಬೆಂಗಳೂರು, ಬಿಬಿಎಂಪಿಯಿಂದ ಸ್ವಚ್ಛ ಕಾರ್ಯ ಚುರುಕು

Summer Effect: ಬಿಸಿಲಿಗೆ ತತ್ತರಿಸಿದ ಕುಕ್ಕುಟೋದ್ಯಮ, ಕೋಳಿ ಉಳಿಸಿಕೊಳ್ಳಲು ಕೂಲರ್‌ ಮೊರೆ, ಚಿಕನ್‌ ಬೆಲೆಯಲ್ಲಿ ಏರಿಕೆ

ಸಿಇಟಿ, ನೀಟ್ ಕುರಿತು ಆಟೊ ಚಾಲಕನೊಂದಿಗೆ ಮಹಿಳೆ ಚರ್ಚೆ; ಪ್ರಯಾಣದಲ್ಲಿನ ಸಂಭಾಷಣೆ ಪೋಸ್ಟ್‌ ವೈರಲ್, ಭಾರಿ ಮೆಚ್ಚುಗೆ

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು ಮುದ್ರಾಡಿಯವರು. ಕೇಶವ ಶೆಟ್ಟಿಗಾರ್‌ ಎಂಬುದು ಅವರ ನಿಜ ನಾಮ. ಯಕ್ಷಗಾನದ ಪ್ರತಿಯೊಂದು ವಿಭಾಗದಲ್ಲೂ ಪರಿಣತಿ ಹೊಂದಿದ್ದ ಅವರು, ಬಹುಮುಖ ಪ್ರತಿಭೆ ಉಳ್ಳವರಾಗಿದ್ದರು.

ಅವರು ಪ್ರಸಂಗ ಕರ್ತರಾಗಿ, ತಾಳಮದ್ದಳೆಯ ಅರ್ಥದಾರಿಯಾಗಿ, ವೇಷಧಾರಿಯಾಗಿಯೂ ಯಕ್ಷಗಾನದಲ್ಲಿ ಗಮನಸೆಳೆದವರು. ಉಡುಪಿಯಲ್ಲಿ ಇತ್ತೀಚೆಗೆ ರಾಜ್ಯಮಟ್ಟದ ಯಕ್ಷಗಾನ ಸಮ್ಮೇಳನವಾದಾಗ ಅವರ ʻಯಕ್ಷಗಾನ ಮತ್ತು ಹರಿಕಥೆ: ಒಂದು ತೌಲನಿಕ ಅಧ್ಯಯನʼ ಎಂಬ ಕೃತಿ ಬಿಡುಗಡೆಯಾಗಿತ್ತು.

ರಾಜ್ಯೋತ್ಸವ ಪುರಸ್ಕಾರ, ಪಾರ್ತಿಸುಬ್ಬ ಪ್ರಶಸ್ತಿ ಸೇರಿ ಹತ್ತು ಹಲವು ಪ್ರಶಸ್ತಿ ಗೌರವವನ್ನು ಪಡೆದವರು ಅವರು. ಕನ್ನಡ ಸಾಹಿತ್ಯ ಪರಿಷತ್‌ನ ಉಡುಪಿ ಜಿಲ್ಲಾ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. 36 ವರ್ಷ ಕಾಲ ಅವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕೆಲಸ ಮಾಡಿ 1993ರಲ್ಲಿ ನಿವೃತ್ತರಾಗಿದ್ದರು.

ಗಮನಿಸಬಹುದಾದ ಸುದ್ದಿಗಳು

ಚಿಕಿತ್ಸೆ ನೀಡಲು ನಿರಾಕರಿಸಿದರೆ ಶಿಸ್ತು ಕ್ರಮ; ಜಿಲ್ಲಾಸ್ಪತ್ರೆಗಳಲ್ಲಿʻಉಚಿತʼ ಸಿಟಿ / MRI ಸ್ಕ್ಯಾನ್‌ ಸರ್ಕಾರದ ಚಿಂತನೆ

Public health: ಚಿಕಿತ್ಸೆ ನೀಡುವುದನ್ನು ನಿರಾಕರಿಸಿದಲ್ಲಿ, ಸಂಬಂಧಪಟ್ಟ ಆಸ್ಪತ್ರೆಯ ವೈದ್ಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿ/ಇತರ, ಸಿಬ್ಬಂದಿಯನ್ನು ನೇರ ಜವಾಬ್ದಾರರನ್ನಾಗಿ ಮಾಡಲಾಗುತ್ತದೆ. ಅದು ಅವರ ದುರ್ನಡತೆ ಎಂದು ಪರಿಗಣಿಸಿ ನಿಯಮಾನುಸಾರ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದರು. ಪೂರ್ಣ ವರದಿ ಓದಲು ಇಲ್ಲಿ ಕ್ಲಿಕ್‌ ಮಾಡಿ

ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ, ಆದೇಶ ಹೊರಡಿಸಿದ ರಾಜ್ಯ ಸರಕಾರ

ಪ್ರವರ್ಗ 2ಎಯ ಕ್ರಮಸಂಖ್ಯೆ 4(a)ಯಿಂದ z ವರೆಗೆ ಈಡಿಗ ಬಿಲ್ಲವ ಸೇರಿದಂತೆ ನಮೂದಾಗಿರುವ ಒಟ್ಟು 26 ಜಾತಿಗಳ ಸಮಗ್ರ ಅಭಿವೃದ್ಧಿಗಾಗಿ ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಷಾಹೀನ್‌ ಪರ್ವೀನ್‌ ಕೆ. ತಿಳಿಸಿದ್ದಾರೆ. ಅವರು ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಈ ಆದೇಶ ಹೊರಡಿಸಲಾಗಿದೆ ಎಂದು ಅವರು ಕರ್ನಾಟಕ ಸರಕಾರದ ನಡಾವಳಿಗಳಲ್ಲಿ ಆದೇಶ ಪ್ರಕಟಿಸಿದ್ದಾರೆ. ವಿವರ ವರದಿಗೆ ಇಲ್ಲಿ ಕ್ಲಿಕ್‌ ಮಾಡಿ

ಕೇದಾರನಾಥ- ಬದರಿನಾಥಕ್ಕೆ ಹೋಗುವ ಪ್ಲಾನ್‌ ಏನಾದರೂ ಇದೆಯಾ? ನೋಂದಣಿ ಮಾಡಿಸ್ಕೊಂಡೇ ಹೋಗಿ, ಇಲ್ಲಿದೆ ಆ ವಿವರ

Devotee registration: ಕೇದಾರನಾಥ- ಬದರಿನಾಥಕ್ಕೆ ಹೋಗುವ ಪ್ಲಾನ್‌ ಏನಾದರೂ ಇದೆಯಾ? ಹಾಗಿದ್ದರೆ ಈ ಸುದ್ದಿ ನಿಮಗಾಗಿ.. ಕೇದಾರನಾಥ- ಬದರಿನಾಥ ದರ್ಶಕರ ನೋಂದಣಿ ಇಂದಿನಿಂದ ಶುರುವಾಗುತ್ತಿದೆ. ನೋಂದಣಿ ಮಾಡಿಸಿಕೊಳ್ಳದೆ ಇದ್ದರೆ ಅಲ್ಲಿಗೆ ಹೋಗುವುದಕ್ಕೆ ಅವಕಾಶ ಸಿಗಲ್ಲ. ನೋಂದಣಿ ಮಾಡಿಸುವುದು ಹೇಗೆ? ಯಾರನ್ನು ಸಂಪರ್ಕಿಸಬೇಕು ಎಂಬಿತ್ಯಾದಿ ಮಾಹಿತಿ ಇಲ್ಲಿದೆ ಕ್ಲಿಕ್‌ ಮಾಡಿ

    ಹಂಚಿಕೊಳ್ಳಲು ಲೇಖನಗಳು