logo
ಕನ್ನಡ ಸುದ್ದಿ  /  ಕರ್ನಾಟಕ  /  ಅಂಬೇಡ್ಕರ್ ವಿವಾದ; ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಬಿಜೆಪಿ ನಾಯಕ ಸಿಟಿ ರವಿ ಅವಾಚ್ಯ ಪದ ಬಳಸಿದ ಆರೋಪ; ಗಮನಸೆಳೆದ 5 ಅಂಶಗಳು

ಅಂಬೇಡ್ಕರ್ ವಿವಾದ; ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಬಿಜೆಪಿ ನಾಯಕ ಸಿಟಿ ರವಿ ಅವಾಚ್ಯ ಪದ ಬಳಸಿದ ಆರೋಪ; ಗಮನಸೆಳೆದ 5 ಅಂಶಗಳು

Umesh Kumar S HT Kannada

Dec 19, 2024 05:52 PM IST

google News

ಅಂಬೇಡ್ಕರ್ ವಿವಾದ; ವಿಧಾನ ಪರಿಷತ್ ಕಲಾಪ ಮುಂದೂಲ್ಪಟ್ಟ ಸಂದರ್ಭದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (ಬಲ ಚಿತ್ರ) ವಿರುದ್ಧ ಬಿಜೆಪಿ ನಾಯಕ ಸಿಟಿ ರವಿ (ಎಡ ಚಿತ್ರ) ಅವಾಚ್ಯ ಪದ ಬಳಸಿದ ಆರೋಪ ವ್ಯಕ್ತವಾಗಿದೆ.

  • Ambedkar Row: ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಪ್ರತಿಭಟನೆ ವ್ಯಕ್ತವಾದ ಬಳಿಕ ವಿಧಾನ ಪರಿಷತ್ ಕಲಾಪ ಮುಂದೂಡಲ್ಪಟ್ಟ ಸಂದರ್ಭದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಬಿಜೆಪಿ ನಾಯಕ ಸಿಟಿ ರವಿ ಅವಾಚ್ಯ ಪದ ಬಳಸಿದ ಆರೋಪ ವ್ಯಕ್ತವಾಗಿದೆ. ಅಂಬೇಡ್ಕರ್ ವಿವಾದ ನಡುವೆ ಈಗ ಸಿಟಿ ರವಿ ಆಡಿದ್ದರೆನ್ನಲಾದ ಹಗುರ ಮಾತು ಬಿಜೆಪಿ ನಾಯಕರಿಗೆ ಮತ್ತೊಂದು ತಲೆನೋವಾಗಿದೆ.

ಅಂಬೇಡ್ಕರ್ ವಿವಾದ; ವಿಧಾನ ಪರಿಷತ್ ಕಲಾಪ ಮುಂದೂಲ್ಪಟ್ಟ ಸಂದರ್ಭದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (ಬಲ ಚಿತ್ರ) ವಿರುದ್ಧ ಬಿಜೆಪಿ ನಾಯಕ ಸಿಟಿ ರವಿ (ಎಡ ಚಿತ್ರ) ಅವಾಚ್ಯ ಪದ ಬಳಸಿದ ಆರೋಪ ವ್ಯಕ್ತವಾಗಿದೆ.
ಅಂಬೇಡ್ಕರ್ ವಿವಾದ; ವಿಧಾನ ಪರಿಷತ್ ಕಲಾಪ ಮುಂದೂಲ್ಪಟ್ಟ ಸಂದರ್ಭದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (ಬಲ ಚಿತ್ರ) ವಿರುದ್ಧ ಬಿಜೆಪಿ ನಾಯಕ ಸಿಟಿ ರವಿ (ಎಡ ಚಿತ್ರ) ಅವಾಚ್ಯ ಪದ ಬಳಸಿದ ಆರೋಪ ವ್ಯಕ್ತವಾಗಿದೆ.

Ambedkar Row: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಸಭೆಯಲ್ಲಿ ಡಾ ಬಿಆರ್ ಅಂಬೇಡ್ಕರ್ ಕುರಿತು ನೀಡಿದ ಹೇಳಿಕೆ ವಿರೋಧಿಸಿ ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರು ಪ್ರತಿಭಟನೆ ನಡೆಸಿದರು. ಗದ್ದಲದ ಕಾರಣ ಕಲಾಪ ಮುಂದೂಡಿದ ವೇಳೆ, ಬಿಜೆಪಿ ಸದಸ್ಯ ಸಿಟಿ ರವಿ ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ಮಾತಿನ ಚಕಮಕಿ ನಡೆಯಿತು. ಆಗ ಸಿಟಿ ರವಿ ಅವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅವಾಚ್ಯ ಪದ ಬಳಸಿದರು ಎಂಬ ಆರೋಪ ವ್ಯಕ್ತವಾಗಿದೆ. ಈ ಬಗ್ಗೆ ಕಾಂಗ್ರೆಸ್ ಸದಸ್ಯರು ಸಭಾಪತಿಗಳಿಗೆ ದೂರು ಸಲ್ಲಿಸಿದ್ದು, ಸಿಟಿ ರವಿ ಅವರನ್ನು ಸದಸ್ಯತ್ವದಿಂದ ವಜಾಗೊಳಿಸುವಂತೆ ಆಗ್ರಹಿಸಿದರು.

ವಿಧಾನ ಪರಿಷತ್‌ನಲ್ಲಿ ಏನಾಯಿತು? ಗಮನಸೆಳೆದ 5 ಅಂಶ

1) ಕೇಂದ್ರ ಸಚಿವ ಅಮಿತ್ ಶಾ ಹೇಳಿಕೆ ಖಂಡಿಸಿ ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದರು. ಪರಿಷತ್‌ನಲ್ಲಿ ಪ್ರಶ್ನೋತ್ತರ ಅವಧಿ ಮುಗಿದ ಮೇಲೆ ಶೂನ್ಯ ಅವಧಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ಖಂಡಿಸಿ ಆಡಳಿತ ಪಕ್ಷ ಕಾಂಗ್ರೆಸ್‌ ಸದಸ್ಯರು ಧರಣಿಗೆ ಮುಂದಾದರು. ಕೂಡಲೇ ಅಮಿತ್ ಶಾ ಅವರನ್ನು ಬಂಧಿಸಬೇಕು, ಅವರು ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಸದಸ್ಯರು ಆಗ್ರಹಿಸಿದರು. ಆಗ ಬಿಜೆಪಿ ಸದಸ್ಯರೂ ಪ್ರತಿಭಟನೆಗಿಳಿದು ಆಕ್ಷೇಪ ವ್ಯಕ್ತಪಡಿಸಿದ್ದು, ಗದ್ದಲ ಉಂಟಾಯಿತು. ಕಾರಣ ಪರಿಷತ್ ಕಲಾಪವನ್ನು ಸಭಾಪತಿಯವರು ಮುಂದೂಡಿದರು.

2) ಪರಿಷತ್‌ನಲ್ಲಿ ಬಿಜೆಪಿ ಸದಸ್ಯರು ಕೂಡ ಅಂಬೇಡ್ಕರ್ ಅವರ ಭಾವಚಿತ್ರ ಹಿಡಿದು ಪ್ರತಿಭಟನೆ ನಡೆಸಿದ್ದರು. ಡಾ ಬಿ ಆರ್ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದು ಕಾಂಗ್ರೆಸ್‌ನವರೇ ಹೊರತು ಬಿಜೆಪಿಯವರಲ್ಲ ಎಂದು ಕೂಗಿದರು. ಕಾಂಗ್ರೆಸ್ ಪಕ್ಷ ಆಡಳಿತದಲ್ಲಿದ್ದರೂ ಅಂಬೇಡ್ಕರ್ ಅವರಿಗೆ ಭಾರತ ರತ್ನ ಕೊಡಲಿಲ್ಲ ಎಂದು ಕೂಗಿ ಆಕ್ರೋಶ ಹೊರಹಾಕಿದರು. ಎರಡೂ ಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.

3) ಈ ಸಂದರ್ಭದಲ್ಲಿ ಸದಸ್ಯ ಸಿಟಿ ರವಿ ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮುಖಾಮುಖಿಯಾಗಿದ್ದರು. ಅವರು ಕೇಂದ್ರ ಗೃಹ ಸಚಿವರ ಬಗ್ಗೆ ಹೇಳಿದ ಮಾತಿಗೆ ಕೆರಳಿದ ಸಿಟಿ ರವಿ ಅವರು ರಾಹುಲ್ ಗಾಂಧಿ ಅವರು ಡ್ರಗ್ ಅಡಿಕ್ಟ್ ಎಂದು ಹೇಳಿದ್ದರು. ಅದಕ್ಕೆ ಲಕ್ಷ್ಮೀ ಹೆಬ್ಬಾಳ್ಕರ್ ನೀವು ಅಪಘಾತ ಮಾಡಿರುವ ಕಾರಣ ನಿಮ್ಮನ್ನು ಕೊಲೆಗಡುಕ ಎನ್ನಬಹುದಲ್ಲ ಎಂದು ಹೇಳಿದ್ದರು. ಆಗ ಕೆರಳಿದ ಸಿಟಿ ರವಿ, ಪ್ರಾಸ್ಟಿ*ಟ್‌ ಎಂದು ಕೂಗಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ. ನಿನಗೆ ಹೆಂಡ್ತಿ ಇಲ್ವೇನೋ, ಮಗಳಿಲ್ವೇನೋ, ನಿಮ್ಮ ಮನೆಯಲ್ಲಿ ಹೆಣ್ಮಕ್ಕಳಿಲ್ಲವೇ ನಿಮ್ಮ ತಾಯಿ ಹೆಣ್ಣಲ್ಲವೇ ಎಂದು ಹೆಬ್ಬಾಳ್ಕರ್ ಪ್ರಶ್ನಿಸಿದ್ದಾಗಿ ಹೇಳಲಾಗುತ್ತಿದೆ.

4) ಈ ಘಟನೆ ಬಳಿಕ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಕಾಂಗ್ರೆಸ್ ಸದಸ್ಯರು ಸಭಾಪತಿ ಬಸವರಾಜ್ ಹೊರಟ್ಟಿ ಅವರ ಕೊಠಡಿಗೆ ಹೋಗಿ ದೂರು ಸಲ್ಲಿಸಿದ್ದಾರೆ. ಅಲ್ಲಿ, ಸಭಾಪತಿಯವರು ಪರಿಶೀಲಿಸಿ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದ್ದಾಗಿ ಕಾಂಗ್ರೆಸ್ ಸದಸ್ಯರು ಮಾಧ್ಯಮಕ್ಕೆ ತಿಳಿಸಿದ್ದಾರೆ. ಹೆಬ್ಬಾಳ್ಕರ್ ಹಿಂದೆಯೆ ಇದ್ದೆ. ಆಗ ಹೆಬ್ಬಾಳ್ಕರ್ ಅವರು ಕೊಲೆಗಡುಕ ಅಂತಿದ್ರೆ, ಸಿಟಿ ರವಿ ಅವರು ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಪ್ರಾಸ್ಟಿ*ಟ್‌ ಎಂದು ಕೂಗಿದ್ದಾರೆ ಎಂದು ಸದಸ್ಯ ಯತೀಂದ್ರ ಹೇಳಿದ್ದಾರೆ.

5) ಬೆಳಗಾವಿಯ ಸುವರ್ಣ ಸೌಧದಲ್ಲಿ ವಿಧಾನ ಪರಿಷತ್‌ನಿಂದ ಹೊರ ಬಂದ ಬಿಜೆಪಿ ಸದಸ್ಯ ಸಿಟಿ ರವಿ ಅವರಿಗೆ ಮುತ್ತಿಗೆ ಹಾಕಿ ಹಲ್ಲೆ ನಡೆಸಲು ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರು ಪ್ರಯತ್ನಿಸಿದ್ದರು ಎಂಬ ಆರೋಪ ಕೇಳಿ ಬಂದಿದೆ. ಕೂಡಲೇ ಪೊಲೀಸರು ಅವರನ್ನು ಬಂಧಿಸಿ ಅಲ್ಲಿಂದ ಸ್ಥಳಾಂತರಿಸಿದ್ದಾರೆ. ಹಲ್ಲೆ ಮತ್ತು ಕೊಲೆ ಯತ್ನಕ್ಕೆ ಪ್ರಯತ್ನಿಸಿದರು ಎಂದು ಸಿಟಿ ರವಿ ಸುವರ್ಣ ಸೌಧದ ಕಾರಿಡಾರ್‌ನಲ್ಲಿ ಧರಣಿ ಕುಳಿತು ಪ್ರತಿಭಟನೆ ನಡೆಸಿದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ