logo
ಕನ್ನಡ ಸುದ್ದಿ  /  ಕರ್ನಾಟಕ  /  Ias Transfer: ಹುದ್ದೆ ನೀಡದೇ ಬಿಎಂಟಿಸಿ ಎಂಡಿ ಸತ್ಯವತಿ ವರ್ಗ, ರಾಮಚಂದ್ರನ್‌ ನೂತನ ಎಂಡಿ

IAS Transfer: ಹುದ್ದೆ ನೀಡದೇ ಬಿಎಂಟಿಸಿ ಎಂಡಿ ಸತ್ಯವತಿ ವರ್ಗ, ರಾಮಚಂದ್ರನ್‌ ನೂತನ ಎಂಡಿ

HT Kannada Desk HT Kannada

Jan 08, 2024 06:57 PM IST

google News

ಬಿಎಂಟಿಸಿ ಎಂಡಿ ಸತ್ಯವತಿ ಅವರನ್ನು ವರ್ಗ ಮಾಡಲಾಗಿದ್ದು, ರಾಮಚಂದ್ರನ್‌ ಅವರನ್ನು ಎಂಡಿಯಾಗಿ ನಿಯೋಜಿಸಲಾಗಿದೆ.

    • BMTC MD ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಜಿ.ಸತ್ಯವತಿ ಅವರಿಗೆ ಯಾವುದೇ ಹುದ್ದೆ ತೋರದೇ ವರ್ಗಾವಣೆ ಮಾಡಲಾಗಿದೆ. ಅವರ ಜಾಗಕ್ಕೆ ಬಿಬಿಎಂಪಿ ವಿಶೇಷ ಆಯುಕ್ತ ರಾಮಚಂದ್ರನ್‌ ಅವರನ್ನು ನಿಯೋಜಿಸಲಾಗಿದೆ. 
ಬಿಎಂಟಿಸಿ ಎಂಡಿ ಸತ್ಯವತಿ ಅವರನ್ನು ವರ್ಗ ಮಾಡಲಾಗಿದ್ದು, ರಾಮಚಂದ್ರನ್‌ ಅವರನ್ನು ಎಂಡಿಯಾಗಿ ನಿಯೋಜಿಸಲಾಗಿದೆ.
ಬಿಎಂಟಿಸಿ ಎಂಡಿ ಸತ್ಯವತಿ ಅವರನ್ನು ವರ್ಗ ಮಾಡಲಾಗಿದ್ದು, ರಾಮಚಂದ್ರನ್‌ ಅವರನ್ನು ಎಂಡಿಯಾಗಿ ನಿಯೋಜಿಸಲಾಗಿದೆ.

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ( BMTC) ಎಂಡಿಯಾಗಿದ್ದ ಹಿರಿಯ ಐಎಎಸ್‌ ಅಧಿಕಾರಿ ಜಿ.ಸತ್ಯವತಿ ಅವರನ್ನು ವರ್ಗಾವಣೆ ಮಾಡಲಾಗಿದೆ. ಒಂದೂವರೆ ವರ್ಷದಿಂದ ನಿಗಮದ ಎಂಡಿಯಾಗಿದ್ದ ಸತ್ಯವತಿ ಅವರಿಗೆ ಯಾವುದೇ ಹುದ್ದೆ ತೋರಿಸದೇ ವರ್ಗ ಮಾಡಲಾಗಿದೆ. ಅವರ ಜಾಗಕ್ಕೆ ಮತ್ತೊಬ್ಬ ಐಎಎಸ್‌ ಅಧಿಕಾರಿ ಸದ್ಯ ಬಿಬಿಎಂಪಿಯಲ್ಲಿ ವಿಶೇಷ ಆರ್ಥಿಕ ಆಯುಕ್ತರಾಗಿರುವ ಆರ್.ರಾಮಚಂದ್ರನ್‌ ಅವರನ್ನು ನೇಮಿಸಲಾಗಿದೆ. ಅವರು ಬಿಬಿಎಂಪಿಯ ವಿಶೇಷ ಆಯುಕ್ತರ ಹುದ್ದೆಯೊಂದಿಗೆ ಹೆಚ್ಚುವರಿಯಾಗಿ ಬಿಬಿಎಂಪಿ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಯನ್ನು ನೋಡಿಕೊಳ್ಳಲಿದ್ದಾರೆ.

ಖಡಕ್‌ ಅಧಿಕಾರಿ ಎಂದೇ ಹೆಸರು ಪಡೆದಿರುವ ಸತ್ಯವತಿ ಅವರು ಕರ್ನಾಟಕ ಮೂಲದವರು. ಬಿಎಂಟಿಸಿಯಲ್ಲಿ ಆರ್ಥಿಕ ಶಿಸ್ತು ಹಾಗೂ ಆಡಳಿತಾತ್ಮಕ ಬದಲಾವಣೆ ತರಲು ನಿರಂತರ ಪ್ರಯತ್ನಿಸುತ್ತಿದ್ದವರು. ಆದರೆ ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ನೌಕರರ ಯೂನಿಯನ್‌ಗಳು ಸತ್ಯವತಿ ಅವರ ವರ್ತನೆ ವಿರುದ್ದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಅವರ ವರ್ಗಾವಣೆಯಾಗಿದೆ ಎಂದು ಹೇಳಲಾಗುತ್ತಿದೆ.

ಬಿಎಂಟಿಸಿಯಲ್ಲಿ ಈ ಹಿಂದೆ ಅವಧಿಪೂರ್ವದಲ್ಲಿಯೇ ಹಲವಾರು ಅಧಿಕಾರಿಗಳನ್ನು ವರ್ಗ ಮಾಡಿದ ಉದಾಹರಣೆಗಳಿವೆ. ಈಗ ಆ ಸಾಲಿಗೆ ಸತ್ಯವತಿ ಅವರೂ ಸೇರ್ಪಡೆಗೊಂಡಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿವೆ.

ಸತ್ಯವತಿ ಅವರು ಕೆಪಿಎಸ್‌ಸಿ ಕಾರ್ಯದರ್ಶಿಯಾಗಿಯೂ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದರು. ಅಲ್ಲಿಯೂ ಅಧ್ಯಕ್ಷರೊಂದಿಗೆ ಸಂಘರ್ಷ ಉಂಟಾಗಿ ಸತ್ಯವತಿ ಅವರನ್ನು ಬಿಎಂಟಿಸಿಗೆ ವರ್ಗ ಮಾಡಲಾಗಿತ್ತು. ಮುಂದಿನ ವರ್ಷ ಸೇವೆಯಿಂದ ನಿವೃತ್ತರಾಗಲಿರುವ ಸತ್ಯವತಿ ಅವರು ಈ ಹಿಂದೆ ಮೈಸೂರು ಜಿಲ್ಲಾಪಂಚಾಯಿತಿ ಸಿಇಒ, ಚಿಕ್ಕಮಗಳೂರು ಹಾಗೂ ಕೋಲಾರ ಡಿಸಿಯಾಗಿಯೂ ಉತ್ತಮ ಕೆಲಸ ಮಾಡಿದ್ದವರು.

ಬಾಗಲಕೋಟೆ ಹಾಗೂ ಬೀದರ್‌ ಡಿಸಿಯಾಗಿ, ಪಿಯು ಮಂಡಳಿ ನಿರ್ದೇಶಕರಾಗಿದ್ದ ಆರ್.ರಾಮಚಂದ್ರನ್‌ ಅವರೂ ಒಳ್ಳೆಯ ಹೆಸರು ಪಡೆದ ಅಧಿಕಾರಿ. ಅವರೀಗ ಬಿಎಂಟಿಸಿ ಎಂಡಿಯಾಗಲಿದ್ದಾರೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ