logo
ಕನ್ನಡ ಸುದ್ದಿ  /  ಕರ್ನಾಟಕ  /  Ksrtc News: ಕರ್ನಾಟಕದ ಸಾರಿಗೆ ಬಸ್‌ಗಳಲ್ಲಿ ಸದ್ಯವೇ ಕ್ಯಾಶ್‌ಲೆಸ್‌ ಸೇವೆ, ಯುಪಿಐ ಮೂಲಕ ಹಣ ಪಾವತಿ

KSRTC News: ಕರ್ನಾಟಕದ ಸಾರಿಗೆ ಬಸ್‌ಗಳಲ್ಲಿ ಸದ್ಯವೇ ಕ್ಯಾಶ್‌ಲೆಸ್‌ ಸೇವೆ, ಯುಪಿಐ ಮೂಲಕ ಹಣ ಪಾವತಿ

Umesha Bhatta P H HT Kannada

Apr 28, 2024 06:42 PM IST

google News

ಸಾರಿಗೆ ಬಸ್‌ಗಳಲ್ಲಿ ಡಿಜಿಟಲ್‌ ಪೇಮಂಟ್‌ ಸೇವೆ ಶುರುವಾಗಲಿದೆ.

    • ಕೆಎಸ್‌ಆರ್‌ಟಿಸಿಯಿಂದ ಸದ್ಯವೇ ಬಸ್‌ ಗಳಲ್ಲಿ ಡಿಜಿಟಲ್‌ ಪೇಮೆಂಟ್ ಸೇವೆ ಆರಂಭ. ಇದಕ್ಕಾಗಿ ಸಿದ್ದತೆ ಮಾಡಿಕೊಳ್ಳುತ್ತಿದೆ ಕೆಎಸ್ಆರ್‌ಟಿಸಿ. 
ಸಾರಿಗೆ ಬಸ್‌ಗಳಲ್ಲಿ ಡಿಜಿಟಲ್‌ ಪೇಮಂಟ್‌ ಸೇವೆ ಶುರುವಾಗಲಿದೆ.
ಸಾರಿಗೆ ಬಸ್‌ಗಳಲ್ಲಿ ಡಿಜಿಟಲ್‌ ಪೇಮಂಟ್‌ ಸೇವೆ ಶುರುವಾಗಲಿದೆ.

ಬೆಂಗಳೂರು: ಕರ್ನಾಟಕ ರಸ್ತೆ ಸಾರಿಗೆ ನಿಗಮವು( KSRTC) ಬಹುದಿನಗಳ ಬೇಡಿಕೆಯಂತೆ ಪ್ರಯಾಣಿಕ ಸ್ನೇಹಿ ವ್ಯವಸ್ಥೆಯನ್ನು ಸದ್ಯದಲ್ಲೇ ಜಾರಿಗೊಳಿಸಿದೆ. ಪ್ರಯಾಣಿಕರು ನಗದು ಹಣ ಕೊಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಕ್ಯಾಶ್‌ಲೆಸ್‌ ಸೇವೆಗೆ ಮುಂದಾಗಿದೆ. ಈಗಾಗಲೇ ಇರುವ ಎಲೆಕ್ಟ್ರಾನಿಕ್‌ ಟಿಕೆಟಿಂಗ್‌ ಮೆಷಿನ್ಸ್(‌ ETM)ಗೆ ಯುನಿಫೈಡ್‌ ಪೇಮೆಂಟ್ಸ್‌ ಇಂಟರ್‌ಫೇಶ್‌( UPI) ಅನ್ನು ಜೋಡಿಸಲಾಗುತ್ತದೆ. ಮೆಷಿನ್‌ ಮೂಲಕವೇ ಹಣ ಪಾವತಿ ಮಾಡಿ ಪ್ರಯಾಣಿಕರು ಸುಲಭವಾಗಿ ಟಿಕೆಟ್‌ ಪಡೆಯಬಹುದು. ಈಗಿರುವಂತೆ ನಗದು ಪಡೆದು ಟಿಕೆಟ್‌ ನೀಡುವ ವ್ಯವಸ್ಥೆಯೂ ಮುಂದುವರಿಯಲಿದೆ. ಜತೆಗೆ ಪ್ರಯಾಣಿಕರು ಡಿಜಿಟಲ್‌ ಪೇಮೆಂಟ್‌ ವ್ಯವಸ್ಥೆಯನ್ನು ಉಪಯೋಗಿಸಿಕೊಳ್ಳಬಹುದು.

ಏನಿದು ವ್ಯವಸ್ಥೆ

ಕೆಎಸ್‌ಆರ್‌ಟಿಸಿ ಈಗಾಗಲೇ ಬಸ್‌ ನಿಲ್ದಾಣಗಳಲ್ಲಿ ಮುಂಗಡ ಬುಕ್ಕಿಂಗ್‌ಗೆ ಯುಪಿಐ ಸೇವೆ ನೀಡಿದೆ. ಡಿಜಿಟಲ್‌ ಮಾರ್ಗದಲ್ಲಿ ಹಣ ಪಾವತಿಸಿ ಟಿಕೆಟ್‌ ಪಡೆಯಬಹುದು. ಆದರೆ ಕೆಎಸ್‌ಆರ್‌ಟಿಸಿಯಲ್ಲೇ ಬಸ್‌ನಲ್ಲಿ ಪ್ರಯಾಣಿಸುವವರು ನಗದು ಪಾವತಿಸಿ ಪ್ರಯಾಣ ಮಾಡಬೇಕು. ಬೆಂಗಳೂರಿನಲ್ಲಿ ಬಿಎಂಟಿಸಿ, ಕಲಬುರಗಿ ಕೇಂದ್ರಿತ ಕೆಕೆಆರ್‌ಟಿಸಿ ಕೂಡ ಡಿಜಿಟಲ್‌ ಸೇವೆ ಶುರು ಮಾಡಿವೆ. ಕೆಆರ್‌ಆರ್‌ಟಿಸಿ ಕೂಡ ಇದಕ್ಕೆ ಸಿದ್ದತೆ ಮಾಡಿಕೊಂಡಿತ್ತು.

ಕರ್ನಾಟಕದ ನಾನಾ ಕೇಂದ್ರಗಳು ಹಾಗೂ ಹೊರ ರಾಜ್ಯಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚರಿಸುವ ಜತೆಗೆ ಬಸ್‌ಗಳ ಸಂಖ್ಯೆ ಅಧಿಕವಾಗಿರುವುದರಿಂದ ಇದಕ್ಕೆ ಸಮಯ ಬೇಕಾಗಿತ್ತು.

ಬೆಂಗಳೂರಿನ ಎಬಿಕ್ಸ್ ಕ್ಯಾಶ್‌ ಲಿಮಿಟೆಡ್‌ ಸಂಸ್ಥೆಯು(‌ EbixCash Ltd) ಇದರ ಗುತ್ತಿಗೆ ಪಡೆದುಕೊಂಡಿತ್ತು. ಈಗಿರುವ ಇಟಿಎಂಗಳ ತಂತ್ರಜ್ಞಾನ ಉನ್ನತೀಕರಿಸಿ, ನಗದು ಪಾವತಿ, ಹಣಕಾಸು ವಹಿವಾಟು ವಿವರ ಸೇರಿದಂತೆ ಎಲ್ಲ ಅಂಶಗಳನ್ನು ಗಮದಲ್ಲಿಟ್ಟುಕೊಂಡು ಎಬಿಕ್ಸ್‌ ಕ್ಯಾಶ್‌ ಸಂಸ್ಥೆಯೂ ತಂತ್ರಜ್ಞಾನ ಉನ್ನತೀಕರಣಗೊಳಿಸುತ್ತಿದೆ.

ಗುತ್ತಿಗೆ ಹಂಚಿಕೆ ಸೇವೆ ಸದ್ಯವೇ ಶುರು

ಎಬಿಕ್ಸ್‌ ಕ್ಯಾಶ್‌ ಲಿಮಿಟೆಡ್‌ ಸಂಸ್ಥೆಯು ಇತ್ತೀಚಿಗೆ ಐದು ವರ್ಷಗಳ ಅವಧಿಯ ಟೆಂಡರ್‌ ಅನ್ನು ನೀಡಲಾಗಿದೆ. ಈಗಾಗಲೇ ಕೆಎಸ್‌ಆರ್‌ಟಿಸಿಯಲ್ಲಿಉವ ಇಂಟಲಿಜೆಂಟ್‌ ಟ್ರಾನ್ಸ್‌ ಪೋರ್ಟ್‌ ಮ್ಯಾನೆಜ್‌ಮೆಂಟ್‌ ಸಿಸ್ಟಂ( ITMS) ಜಾರಿಗೊಳಿಸಿದ್ದ ಎಬಿಕ್ಸ್‌ ಕ್ಯಾಶ್‌ ಸಂಸ್ಥೆಯೇ ಈ ಗುತ್ತಿಗೆಯನ್ನು ಪಡೆದುಕೊಂಡಿದೆ.

ಇದರಡಿ ತಂತ್ರಜ್ಞಾನ ಅಭಿವೃದ್ದಿ, ಅದನ್ನು ಅಳವಡಿಸಿಕೊಡುವಿಕೆ, ನಿರ್ವಹಣೆ ಹಾಗೂ ತಂತ್ರಜ್ಞಾನದ ಸಮರ್ಪಕ ಹಾಗೂ ಸರಳ ಬಳಕೆಗೆ ಪೂರಕವಾಗಿ ಸಂಸ್ಥೆಯು ಸೇವೆ ನೀಡಲಿದೆ. ಈಗಾಗಲೇ ಐಟಿಎಂಎಸ್‌ ಅಡಿ ಇರುವ ಎಲ್ಲಾ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಡಿಜಿಟಲ್‌ ಪೇಮೆಂಟ್‌ ಸೇವೆ ಸಿಗಲಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಯೊಬ್ಬರು ಹೇಳಿದರು.

15 ಸಾವಿರ ಬಸ್‌ಗಳಿಗೆ ವಿಸ್ತರಣೆ

ಈಗಾಗಲೇ ತಂತ್ರಜ್ಞಾನ ಅಳವಡಿಕೆ ಕಾರ್ಯ ನಡೆದಿದೆ. ಮೊದಲ ಹಂತದಲ್ಲಿ 10,245 ಬಸ್‌ಗಳಲ್ಲಿ ಡಿಜಿಟಲ್‌ ಪೇಮೆಂಟ್‌ ವ್ಯವಸ್ಥೆಯಾಗಲಿದ್ದು. ಇದರಲ್ಲಿ 8,000 ಬಸ್‌ಗಳಿಗೆ ಸದ್ಯವೇ ಈ ಸೇವೆ ಸಿಗಲಿದೆ. ಉಳಿಕೆ ಬಸ್‌ಗಳಿಗೆ ಹಂತ ಹಂತವಾಗಿ ಇದನ್ನು ಜಾರಿಗೊಳಿಸಲಾಗುತ್ತದೆ. ಐದು ವರ್ಷದಲ್ಲಿ 15 ಸಾವಿರ ಬಸ್‌ಗಳಲ್ಲಿ ಈ ಸೇವೆ ಇರಲಿದೆ ಎನ್ನುವುದು ಅಧಿಕಾರಿಗಳ ವಿವರಣೆ.

ಒಂದು ಕಡೆ ಡಿಜಿಟಲ್‌ ಪೇಮೆಂಟ್‌ ಸೇವೆಯಿಂದ ಗ್ರಾಹಕರಿಗೆ ಅನುಕೂಲವಾಗಿದೆ.ಮತ್ತೊಂದು ಕಡೆಯಲ್ಲಿ ಕೆಎಸ್‌ಆರ್‌ಟಿಸಿಗೂ ನೆರವಾಗಲಿದೆ. ಏಕೆಂದರೆ ಸೋರಿಕೆ ತಡೆಗಟ್ಟುವುದು, ನಿಖರ ವಹಿವಾಟಿನ ಲೆಕ್ಕ, ಬಸ್‌ಗಳ ಆದಾಯದ ಲೆಕ್ಕಾಚಾರವೂ ಇದರಲ್ಲಿ ನಿಖರವಾಗಿ ಸಿಗಲಿದ್ದು, ಸಂಸ್ಥೆಯ ಬೆಳವಣಿಗೆಗೂ ಸಹಕಾರಿಯಾಗಲಿದೆ ಎಂದು ಹೇಳಲಾಗುತ್ತಿದೆ.

ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.

(This copy first appeared in Hindustan Times Kannada website. To read more like this please logon to kannada.hindustantimes.com)

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ