ಕನ್ನಡ ಸುದ್ದಿ  /  ಮನರಂಜನೆ  /  Ramana Avatara Trailer: ಎಲ್ಲರ ಲೈಫ್‌ನ ರಾಮಾಯಣ ಹೇಳಲು ಬಂದ ಮಾಡರ್ನ್‌ ರಾಮ; ‘ರಾಮನ ಅವತಾರ’ ಟ್ರೇಲರ್‌ ಬಿಡುಗಡೆ

Ramana Avatara Trailer: ಎಲ್ಲರ ಲೈಫ್‌ನ ರಾಮಾಯಣ ಹೇಳಲು ಬಂದ ಮಾಡರ್ನ್‌ ರಾಮ; ‘ರಾಮನ ಅವತಾರ’ ಟ್ರೇಲರ್‌ ಬಿಡುಗಡೆ

ನಟ ರಿಷಿ ಇದೀಗ ರಾಮನ ಅವತಾರ ತಾಳಿದ್ದಾರೆ. ಅಂದರೆ ರಾಮನ ಅವತಾರ ಸಿನಿಮಾವನ್ನು ಚಿತ್ರಮಂದಿರಕ್ಕೆ ತರಲು ರೆಡಿಯಾಗಿದ್ದಾರೆ. ಮೇ ರಂದು ಈ ಸಿನಿಮಾ ರಿಲೀಸ್‌ ಆಗಲಿದೆ ಅದಕ್ಕೂ ಮುನ್ನ ಈ ಚಿತ್ರದ ಟ್ರೇಲರ್‌ ಬಿಡುಗಡೆ ಆಗಿದೆ.

Ramana Avatara Trailer: ಎಲ್ಲರ ಲೈಫ್ ನ ರಾಮಾಯಣ ಹೇಳಲು ಬಂದ ರಾಮ; ‘ರಾಮನ ಅವತಾರ’ ಟ್ರೇಲರ್‌ ಬಿಡುಗಡೆ
Ramana Avatara Trailer: ಎಲ್ಲರ ಲೈಫ್ ನ ರಾಮಾಯಣ ಹೇಳಲು ಬಂದ ರಾಮ; ‘ರಾಮನ ಅವತಾರ’ ಟ್ರೇಲರ್‌ ಬಿಡುಗಡೆ

Ramana Avatara Trailer: ಟೀಸರ್, ಹಾಡು ಹಾಗೂ ವಿಭಿನ್ನ ಪ್ರಮೋಷನ್ ವಿಡಿಯೋಗಳ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಸಿನಿಮಾ ರಾಮನ ಅವತಾರ. ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಬೆಂಗಳೂರಿನ ಎಂಎಂ ಲೆಗಸಿಯಲ್ಲಿ ರಾಮನ ಅವತಾರ ಸಿನಿಮಾದ ಮೊದಲ ನೋಟ ಅನಾವರಣ ಮಾಡಲಾಯಿತು. ಈ ವೇಳೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

ಟ್ರೆಂಡಿಂಗ್​ ಸುದ್ದಿ

ನಟ ರಿಷಿ ಮಾತನಾಡಿ, ಈ ಸಿನಿಮಾ ಒಪ್ಪಿಕೊಳ್ಳಲು ಮುಖ್ಯ ಕಾರಣ ಆಪರೇಷನ್ ಅಲಮೇಲಮ್ಮ. ಈ ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ ನೋಡಿ ಆ ರೀತಿ ಎಂಟರ್ಟೈನ್ಮೆಂಟ್ ಸಿನಿಮಾ ಮಾಡಿ ಎನ್ನುತ್ತಿದ್ದರು. ಅದೇ ರೀತಿ ಹಾಸ್ಯಭರಿತ ಚಿತ್ರ ಮಾಡಿ ಎನ್ನುತ್ತಿದ್ದರು. ನನಗೆ ಆಪರೇಷನ್ ಅಲಮೇಲಮ್ಮ ಮ್ಯಾಜಿಕ್ ರಿಪೀಟ್ ಮಾಡುವ ಆಗಿಲ್ಲ. ಆ ಸಮಯದಲ್ಲಿ ಪಂಪಾಪತಿ ಸಿಕ್ಕರು. ಅವರ ಹಾಸ್ಯ ನನಗೆ ಇಷ್ಟವಾಯ್ತು. ರಾಮಾಯಣ ಇಟ್ಟುಕೊಂಡು ಸಿನಿಮಾ ಮಾಡುವ ಕಥೆ ತಂದರು" ಎಂದರು ರಿಷಿ.

ಮುಂದುವರಿದು ಮಾತನಾಡಿ, "2024 ರಲ್ಲಿ ನಡೆಯುವ ಘಟನೆಗೆ ರಾಮಾಯಣ ಮೌಲ್ಯವನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಇದು ಖುಷಿ ಕೊಡುವ ಸಿನಿಮಾ. ಪ್ರತಿಯೊಬ್ಬರು ತಮ್ಮ ಪಾತ್ರಗಳಿಗೆ ಅದ್ಭುತವಾಗಿ ಜೀವ ತುಂಬಿದ್ದಾರೆ. ಸಿನಿಮಾ ಮೇ‌10ರಂದು ರಿಲೀಸ್ ಆಗ್ತಿದೆ. ಹಾಡುಗಳು ನನಗೆ ತುಂಬಾ ಇಷ್ಟ. ಇಡೀ ಸಿನಿಮಾಗೆ ದುಡಿದ ಎಲ್ಲರಿಗೂ ಧನ್ಯವಾದ ತಿಳಿಸಿದರು ರಿಷಿ.

ರಾಮ ಯಾಕೆ ಜೆಂಟಲ್‌ಮೆನ್‌?

ನಿರ್ದೇಶಕ ವಿಕಾಸ್ ಪಂಪಾಪತಿ ಮಾತನಾಡಿ, ಈ ಸಿನಿಮಾ ಕ್ಯಾರೆಕ್ಟರ್ ಜರ್ನಿ ಹೇಳುತ್ತಿದ್ದೇವೆ. ರಾಮ ಪಾತ್ರಧಾರಿ ಅವನಿಗೆ ಅವನೇ ಜೆಂಟಲ್ ಮೆನ್ ಎಂದು ಹೇಳಿಕೊಂಡು ಓಡಾಡುತ್ತಾ ಇರುತ್ತಾನೆ. ಅವನು ಹೇಗೆ ಜೆಂಟಲ್ ಮೆನ್ ಆಗುತ್ತಾನೆ? ಅವನ ಜೀವನದಲ್ಲಿ ನಡೆದ ಘಟನೆಗಳೇನು ಅವನನ್ನು ಹೇಗೆ ಬದಲಾಯಿಸುತ್ತದೆ? ರಾಮನ ಅವತಾರ ಎಂದು ಯಾಕೆ ಇಟ್ಟಿದ್ದೇವೆ? ಎಂಬುದು ಸಿನಿಮಾ ಕುತೂಹಲ. ಸೀತೆ ತರ ಹೆಂಡತಿ, ಲಕ್ಷ್ಮಣ ರೀತಿ ತಮ್ಮ, ರಾವಣನಿಂದ ಆಗುವ ಸಮಸ್ಯೆ? ಈ ರೀತಿ ಸಮಸ್ಯೆಗಳು ಎಲ್ಲರ ಜೀವನದಲ್ಲಿ ನಡೆಯುತ್ತವೆ. ಆ ಘಟನೆಗಳನ್ನು ಚಿತ್ರದಲ್ಲಿ ತೋರಿಸಲಾಗಿದೆ ಎಂದು ಹೇಳಿದರು.

ಮಾಡರ್ನ್‌ ರಾಮಾಯಣ

ನಟಿ ಪ್ರಣೀತಾ ಸುಭಾಷ್ ಮಾತನಾಡಿ, ರಾಮನ ಅವತಾರ ತುಂಬಾ ವಿಶೇಷವಾದ ಸಿನಿಮಾ. ರಾಮಾಯಣ ಎಲ್ಲರಿಗೂ ಗೊತ್ತಿದೆ. ಈ ರಾಮಾಯಣ ಮಾರ್ಡನ್ ಟೇಕ್. ನಾನು ಈ ರೀತಿ ಪ್ರಾಜೆಕ್ಟ್ ಭಾಗವಾಗಿದ್ದು ಖುಷಿ ಕೊಟ್ಟಿದೆ. ರಾಮಾಯಣ ಬಗ್ಗೆ ಅಂದ ತಕ್ಷಣ ಸಿನಿಮಾ ಒಪ್ಪಿಕೊಂಡೆ. ರಿಷಿ ಅವರ ಬೇರೆ ಚಿತ್ರಗಳನ್ನು ನೋಡಿದ್ದೇನೆ. ಶೂಟಿಂಗ್ ಜರ್ನಿ ತುಂಬಾ ಚೆನ್ನಾಗಿತ್ತು ಎಂದು ಹೇಳಿದರು.

ನಟಿ ಶುಭ್ರ ಅಯ್ಯಪ್ಪ ಮಾತನಾಡಿ, ನಿರ್ದೇಶಕರು ನನ್ನ ಪಾತ್ರದ ಹೇಳಿದಾಗ ನಾನು ಎಕ್ಸೈಟ್ ಆದೆ. ಹಳ್ಳಿ ಹುಡುಗಿ ಪಾತ್ರದಲ್ಲಿ ನನ್ನನ್ನು ನಾನು ನೋಡಲು ಕಾತುರನಾಗಿದ್ದೇನೆ. ಸಿನಿಮಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಮೇ 10ಕ್ಕೆ‌ ನಮ್ಮ ಸಿನಿಮಾ ರಿಲೀಸ್ ಆಗುತ್ತಿದೆ. ನಿಮ್ಮ ಬೆಂಬಲ ಇರಲಿ ಎಂದರು.

ರಾಮನ‌ ಅವತಾರ ಟ್ರೇಲರ್ ಪ್ರಾಮಿಸಿಂಗ್ ಆಗಿದೆ. ಟ್ರೇಲರ್ ನಲ್ಲಿ ನಗು, ಅಳು, ಪ್ರೀತಿ-ಪ್ರೇಮ ಎಲ್ಲವೂ ಇದೆ. ಭಿನ್ನ ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿರುವ ರಿಷಿ, ಇತ್ತೀಚೆಗೆ ವೆಬ್​ ಸೀರಿಸ್ ಮೂಲಕವೂ ಮೋಡಿ ಮಾಡಿದ್ದರು. ಅವರೀಗ ಕಾಮಿಡಿ ಕಥೆ ಹೊತ್ತು ನಗಿಸಲು ಬರ್ತಿದ್ದಾರೆ. 'ರಾಮನ ಅವತಾರ' ಸಿನಿಮಾದಲ್ಲಿ ಪ್ರಣೀತಾ ಸುಭಾಷ್ ಹಾಗೂ ಶುಭ್ರ ಅಯ್ಯಪ್ಪ ನಾಯಕಿಯರಾಗಿ ನಟಿಸಿದ್ದಾರೆ. ನಟ ಅರುಣ್ ಸಾಗರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಅಲಮೇಲಮ್ಮ ಚಿತ್ರದ ನಿರ್ಮಾಪಕರ ಸಿನಿಮಾ

'ಆಪರೇಷನ್ ಅಲಮೇಲಮ್ಮ’ ಸಿನಿಮಾ ನಿರ್ಮಾಣ ಮಾಡಿದ್ದ ಅಮರೇಜ್ ಸೂರ್ಯವಂಶಿ ಅವರು ‘ಸ್ಟಾರ್ ಫ್ಯಾಬ್ ಪ್ರೊಡಕ್ಷನ್’​ ಅಡಿಯಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ರೋಮ್ಯಾಂಟಿಕ್ ಕಾಮಿಡಿ ಜಾನರ್‌ ಅಡಿಯಲ್ಲಿ ಈ ಸಿನಿಮಾ ಮೂಡಿ ಬರುತ್ತಿದೆ. ವಿಷ್ಣುಪ್ರಸಾದ್ ಹಾಗೂ ಸಮೀರ್ ದೇಶಪಾಂಡೆ ಛಾಯಾಗ್ರಾಹಣ ಮಾಡಿದ್ದಾರೆ. ಜೂಡಾ ಸ್ಯಾಂಡಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಅಮರನಾಥ್ ಸಂಕಲನ ಚಿತ್ರಕ್ಕಿದೆ.

IPL_Entry_Point