logo
ಕನ್ನಡ ಸುದ್ದಿ  /  ಕರ್ನಾಟಕ  /  Sankey Tank Lake: ಮಳೆ ಕೊರತೆ, ತಾಪಮಾನ ಹೆಚ್ಚಳ; ಬತ್ತುವ ಹಂತಕ್ಕೆ ಬಂದಿದೆಯಾ ಬೆಂಗಳೂರಿನ ಸ್ಯಾಂಕಿ ಟ್ಯಾಂಕ್ ಕೆರೆ

Sankey Tank Lake: ಮಳೆ ಕೊರತೆ, ತಾಪಮಾನ ಹೆಚ್ಚಳ; ಬತ್ತುವ ಹಂತಕ್ಕೆ ಬಂದಿದೆಯಾ ಬೆಂಗಳೂರಿನ ಸ್ಯಾಂಕಿ ಟ್ಯಾಂಕ್ ಕೆರೆ

Raghavendra M Y HT Kannada

Apr 27, 2024 10:59 PM IST

ಬೆಂಗಳೂರಿನಲ್ಲಿ ಕಡಿಮೆ ಮಳೆ ಹಾಗೂ ಹೆಚ್ಚಾಗುತ್ತಿರುವ ತಾಪಮಾನದ ಪರಿಣಾಮವಾಗಿ ದಶಕಗಳ ಇತಿಹಾಸ ಇರುವ ಸ್ಯಾಂಕಿ ಟ್ಯಾಂಕ್ ಕೆರೆ ಬತ್ತುತ್ತಿದೆ. (ಫೋಟೊ: ಶಿಲ್ಪಾಶ್ರೀ ಹೆಚ್‌ಎಸ್/ಅನಿಕೇತ್)

    • ಒಂದು ಕಾಲದಲ್ಲಿ ಬೆಂಗಳೂರಿನ ಉತ್ತರ ಭಾಗಕ್ಕೆ ಕುಡಿಯುವ ನೀರಿಗೆ ಆಧಾರವಾಗಿದ್ದ ಸ್ಯಾಂಕಿ ಟ್ಯಾಂಕ್ ಕೆರೆ ಬತ್ತುವ ಹಂತಕ್ಕೆ ಬಂದಿದೆ. 1874 ರಲ್ಲಿನ ಜಲಕ್ಷಾಮ ನಿವಾರಣೆಗೆ ನಿರ್ಮಿಸಿದ್ದ ಈ ಕೆರೆ ಇದೀಗ ನೀರಿನ ಸಮಸ್ಯೆಯ ಸಮಯದಲ್ಲೇ ಬತ್ತುವಂತಿದೆ.
ಬೆಂಗಳೂರಿನಲ್ಲಿ ಕಡಿಮೆ ಮಳೆ ಹಾಗೂ ಹೆಚ್ಚಾಗುತ್ತಿರುವ ತಾಪಮಾನದ ಪರಿಣಾಮವಾಗಿ ದಶಕಗಳ ಇತಿಹಾಸ ಇರುವ ಸ್ಯಾಂಕಿ ಟ್ಯಾಂಕ್ ಕೆರೆ ಬತ್ತುತ್ತಿದೆ. (ಫೋಟೊ: ಶಿಲ್ಪಾಶ್ರೀ ಹೆಚ್‌ಎಸ್/ಅನಿಕೇತ್)
ಬೆಂಗಳೂರಿನಲ್ಲಿ ಕಡಿಮೆ ಮಳೆ ಹಾಗೂ ಹೆಚ್ಚಾಗುತ್ತಿರುವ ತಾಪಮಾನದ ಪರಿಣಾಮವಾಗಿ ದಶಕಗಳ ಇತಿಹಾಸ ಇರುವ ಸ್ಯಾಂಕಿ ಟ್ಯಾಂಕ್ ಕೆರೆ ಬತ್ತುತ್ತಿದೆ. (ಫೋಟೊ: ಶಿಲ್ಪಾಶ್ರೀ ಹೆಚ್‌ಎಸ್/ಅನಿಕೇತ್)

ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ (Bangalore Water Problem) ಒಂದೆಡೆಯಾದರೆ ಮತ್ತೊಂದೆಡೆ ದಶಕಗಳ ಇತಿಹಾಸ ಇರುವ ಕೆರೆಯೊಂದು ಬತ್ತುತ್ತಿರುವುದು ನಗರದಲ್ಲಿ ಹೆಚ್ಚುತ್ತಿರುವ ತಾಪಮಾನಕ್ಕೆ ಸಾಕ್ಷಿಯಾಗಿದೆ. 1874 ರಲ್ಲಿ ಬರಗಾಲದ ನೀರಿನ ಕೊರೆತೆಯನ್ನು ನೀಗಿಸಲು ಕರ್ನಲ್ ರಿಚರ್ಡ್ ಹಿರಾಮ್ ಸ್ಯಾಂಕಿ ಅವರು 1882 ರಲ್ಲಿ ಸ್ಯಾಂಕಿ ಟ್ಯಾಂಕ್ ಕೆರೆಯನ್ನು (Sankey Tank Lake) ನಿರ್ಮಿಸಿದ್ದರು. ದಶಕಗಳ ಕಾಲ ಬೆಂಗಳೂರು ಉತ್ತರ ಭಾಗದಲ್ಲಿನ ಜನರಿಗೆ ಕುಡಿಯುವ ನೀರಿಗೆ ಇದೇ ಕೆರೆ ಆಧಾರವಾಗಿತ್ತು. ಆದರೆ ದಿನಗಳು ಕಳೆದಂತೆ ಈ ಕೆರೆಯ ನೀರಿನ ಬಳಕೆಯನ್ನು ನಿಲ್ಲಿಸಲಾಗಿತ್ತು. ಈ ಭಾಗದಲ್ಲಿನ ಅಂತರ್ಜಲ ಮಟ್ಟ ಸ್ಥಿರತೆಗೆ ನೆರೆವಾಗಿದ್ದ ಸ್ಯಾಂಕಿ ಟ್ಯಾಂಕ್ ಕೆರೆ ಇದೀಗ ಬಹುತೇಕ ಒಣಗಿ ಹೋಗಿದೆ. ಕೆಲವೇ ಅಡಿಗಳಷ್ಟು ಮಾತ್ರ ನೀರಿದೆ ಎಂದು ಟೈಮ್ಸ್ ನೌ ವರದಿ ಮಾಡಿದೆ.

ಟ್ರೆಂಡಿಂಗ್​ ಸುದ್ದಿ

SSLC Results 2024: ಚರ್ಚೆಗೆ ಗ್ರಾಸವಾದ ಬೆಂಗಳೂರು ನಗರ, ಸುತ್ತಮುತ್ತಲ ಜಿಲ್ಲೆಗಳ ಕಳಪೆ ಸಾಧನೆ, ಇಲ್ಲಿದೆ ಅಂಕಿಅಂಶ

SSLC Result 2024: ಸದಾ ಓದಿನಲ್ಲಿ ಮುಳುಗಬೇಡಿ; ಪಠ್ಯೇತರ ಚಟುವಟಿಕೆಯಲ್ಲೂ ತೊಡಗಿಸಿಕೊಳ್ಳಿ; ಟಾಪರ್ ಮಾನ್ಯತಾ ಎಸ್ ಮಯ್ಯ

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಬಾಗಲಕೋಟೆ ವಿದ್ಯಾರ್ಥಿನಿ ರಾಜ್ಯಕ್ಕೆ ಪ್ರಥಮ; ವಜ್ರಮಟ್ಟಿಯ ಅಂಕಿತಾಗೆ ಐಎಎಸ್ ಆಗುವ ಕನಸು

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ರೈತನ ಮಗಳು ಅಂಕಿತಾ ಬಸಪ್ಪ ಕೊಣ್ಣೂರು ರಾಜ್ಯಕ್ಕೆ ಪ್ರಥಮ; ಬಡತನದಲ್ಲಿ ಅರಳಿದ ಪ್ರತಿಭೆ

ನಗರದ ಐಐಎಸ್‌ಸಿ, ಸದಾಶಿವನಗರ ಹಾಗೂ ನೆರೆಯ ಪ್ರದೇಶಗಳಲ್ಲಿ ಬೀಳುವ ಮಳೆಯ ನೀರನೇ ಈ ಕೆರೆಗೆ ಆಶ್ರಯವಾಗಿದೆ. ಆದರೆ ಈ ಬಾರಿ ನಗರದಲ್ಲಿ ಅತ್ಯಲ್ಪ ಮಳೆ ಹಾಗೂ ಹೆಚ್ಚುತ್ತಿರುವ ತಾಪಮಾನದಿಂದಾಗಿ ಕೆರೆಯಲ್ಲಿನ ನೀರು ವೇಗವಾಗಿ ಆವಿಯಾಗುತ್ತಿದೆ. ಕೆರೆಯ ಸುತ್ತಮುತ್ತ ಇರುವ ಕಾಂಕ್ರೀಟ್ ಪ್ರದೇಶಗಳು ಹಾಗೂ ಬೋರ್‌ವೆಲ್‌ಗಳ ಮೂಲಕ ಅಂತರ್ಜಲವನ್ನು ಅತಿಯಾಗಿ ಬಳಸುತ್ತಿರುವುದು ಕೆರೆಯಲ್ಲಿ ನೀರಿನ ಮಟ್ಟ ಕಡಿಮೆಯಾಗಲು ಮತ್ತೊಂದು ಕಾರಣ ಎಂದು ಅಧ್ಯಾಪಕರಾದ ರಾಮಚಂದ್ರ ಹೇಳಿದ್ದಾರೆ.

ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ನೂರಾರು ಮಂದಿ ಇಲ್ಲಿ ವಾಕಿಂಗ್ ಮಾಡುತ್ತಾರೆ. ನೀರು ಇರುವ ಕಾರಣ ವಾತಾವರಣ ಕೂಲ್ ಆಗಿರುತ್ತದೆ. ಆದರೆ ಐತಿಹಾಸಿಕ ಕೆರೆ ಬತ್ತುತ್ತಿರುವುದು ವಾಯು ವಿವಾರಿಗಳ ಬೇಸರಕ್ಕೆ ಕಾರಣವಾಗಿದೆ. ಅತಿಯಾದ ಕಾಂಕ್ರೀಟ್ ಬಳಕೆಯಿಂದಾಗಿ ಕೆರೆಗೆ ನೀರು ಹರಿವಿಗೆ ಅಡ್ಡಿಯಾಗಿದೆ. ಕೆರೆ ನಿರ್ವಹಣೆಗೆ ಸರಿಯಾದ ನಿರ್ಧಾರಗಳನ್ನು ಕೈಗೊಳ್ಳುತ್ತಿಲ್ಲ ಎಂದು ಸಿಟಿಜನ್ಸ್ ಫಾರ್ ಸ್ಯಾಂಕಿಯ ಸದಸ್ಯರಾದ ಸುಂದರರಾಜನ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದಶಕಗಳ ಇತಿಹಾಸ ಇರುವ ಸ್ಯಾಂಕಿ ಟ್ಯಾಂಕ್ ಕೆರೆ ಬತ್ತುತ್ತಿರುವುದು ಬೇಸರದ ವಿಚಾರವಾಗಿದೆ.

ಸಂಬಂಧಿತ ಲೇಖನ

    ಹಂಚಿಕೊಳ್ಳಲು ಲೇಖನಗಳು