ಬ್ರೇಕ್‌ಫಾಸ್ಟ್‌ಗೆ ಏನ್ಮಾಡೋದು ಅನ್ನೋ ಚಿಂತೆ ಬಿಡಿ, ಸಿಂಪಲ್‌ ಆಗಿ ಕ್ಯಾಬೇಜ್‌ ಪಲಾವ್‌ ಮಾಡ್ಕೊಳ್ಳಿ, ರೆಸಿಪಿ ಇಲ್ಲಿದೆ
ಕನ್ನಡ ಸುದ್ದಿ  /  ಜೀವನಶೈಲಿ  /  ಬ್ರೇಕ್‌ಫಾಸ್ಟ್‌ಗೆ ಏನ್ಮಾಡೋದು ಅನ್ನೋ ಚಿಂತೆ ಬಿಡಿ, ಸಿಂಪಲ್‌ ಆಗಿ ಕ್ಯಾಬೇಜ್‌ ಪಲಾವ್‌ ಮಾಡ್ಕೊಳ್ಳಿ, ರೆಸಿಪಿ ಇಲ್ಲಿದೆ

ಬ್ರೇಕ್‌ಫಾಸ್ಟ್‌ಗೆ ಏನ್ಮಾಡೋದು ಅನ್ನೋ ಚಿಂತೆ ಬಿಡಿ, ಸಿಂಪಲ್‌ ಆಗಿ ಕ್ಯಾಬೇಜ್‌ ಪಲಾವ್‌ ಮಾಡ್ಕೊಳ್ಳಿ, ರೆಸಿಪಿ ಇಲ್ಲಿದೆ

Cabbage Pulao Recipe: ಮನೆಯಲ್ಲಿ ಅಡುಗೆ ಮಾಡ್ಕೊಂಡು ತಿನ್ನೋರಿಗೆ ಪ್ರತಿದಿನ ಬೆಳಗಾದ್ರೆ ಏನಪ್ಪಾ ತಿಂಡಿ ಮಾಡೋದು ಅನ್ನೋ ಚಿಂತೆ. ಅದ್ರಲ್ಲೂ ಈ ಗಡಿಬಿಡಿಯ ಬದುಕಿನಲ್ಲಿ ಗಂಟೆಗಟ್ಟಲೆ ಗ್ಯಾಸ್‌ ಸ್ಟೌ ಮುಂದೆ ನಿಲ್ಲುವಷ್ಟು ಸಮಯ ಯಾರಿಗೂ ಇಲ್ಲ. ನೀವು ಬ್ರೇಕ್‌ಫಾಸ್ಟ್‌ಗೆ ಡಿಫ್ರೆಂಟಾಗಿ, ಬೇಗ ರೆಡಿ ಆಗೋ ತಿಂಡಿ ಹುಡುಕ್ತಾ ಇದ್ರೆ ಕ್ಯಾಬೇಜ್‌ ಪಲಾವ್‌ ಮಾಡ್ಕೊಳ್ಳಿ.

ಸಿಂಪಲ್‌ ಆಗಿ ಕ್ಯಾಬೇಜ್‌ ಪಲಾವ್‌ ಮಾಡ್ಕೊಳ್ಳಿ, ರೆಸಿಪಿ ಇಲ್ಲಿದೆ
ಸಿಂಪಲ್‌ ಆಗಿ ಕ್ಯಾಬೇಜ್‌ ಪಲಾವ್‌ ಮಾಡ್ಕೊಳ್ಳಿ, ರೆಸಿಪಿ ಇಲ್ಲಿದೆ

ನಾಳೆ ಬೆಳಗಿನ ತಿಂಡಿಗೆ ಏನ್‌ ಮಾಡೋದು? ಮಾಡಿದ್ದೇ ಮಾಡಿ, ತಿಂದಿದ್ದೇ ತಿಂದು ಬೇಸರ ಆಗಿದೆ. ನಾಲಿಗೆ ರುಚಿ ಕೆಟ್ಟಿದೆ. ಬಹಳಷ್ಟು ಸಮಯ ವ್ಯಯಿಸಿ ಬ್ರೇಕ್‌ಫಾಸ್ಟ್‌ ರೆಡಿ ಮಾಡೋವಷ್ಟು ತಾಳ್ಮೆನೂ ಇಲ್ಲ ಅಂತಿದ್ರೆ, ನಿಮಗಾಗಿ ನಾವು ಇಲ್ಲೊಂದು ಹೊಸ ರೆಸಿಪಿ ಹೇಳ್ತೀವಿ ನೋಡಿ. ಇದರ ಹೆಸರು ಕ್ಯಾಬೇಜ್‌ ಪಲಾವ್.‌ ನೀವು ಇದನ್ನು ಕ್ಯಾಬೇಜ್‌ ರೈಸ್‌ ಅಂತಲೂ ಕರಿಬೋದು. ಕ್ಯಾಬೇಜ್‌ ತಿನ್ನಲು ಇಷ್ಟವಿಲ್ಲದವರು ಕೂಡ ಈ ರೈಸ್‌ಬಾತ್‌ ಮಾಡಿಕೊಟ್ರೆ ಎರಡೆರಡು ಬಾರಿ ಕೇಳಿ ಹಾಕಿಸಿಕೊಂಡು ತಿಂತಾರೆ. ಬಾಸುಮತಿ ರೈಸ್‌ ಇದ್ರೆ, ಕ್ಯಾಬೇಜ್‌ ಪಲಾವ್‌ ರುಚಿ ಇನ್ನಷ್ಟು ಹೆಚ್ಚೋದು ಪಕ್ಕಾ. ಕ್ಯಾಬೇಜ್‌ ಕರಿ, ಪಲ್ಯ ತಿನ್ನದವರೂ ಕೂಡ ಇದನ್ನು ತಿಂತಾರೆ. ಈ ರೈಸ್‌ಬಾಸ್‌ ಮಕ್ಕಳಿಗೂ ಇಷ್ಟವಾಗುತ್ತೆ.

ಕ್ಯಾಬೇಜ್‌ ಪುಲಾವ್ ರೆಸಿಪಿ

ಬಾಸುಮತಿ ಅಕ್ಕಿ - ಒಂದು ಕಪ್, ಎಲೆಕೋಸು (ಕ್ಯಾಬೇಜ್‌) - ಒಂದು ಕಪ್ (ಹೆಚ್ಚಿದ್ದು), ಈರುಳ್ಳಿ - ಒಂದು, ಟೊಮೆಟೊ - ಒಂದು, ಶುಂಠಿ-ಬೆಳ್ಳುಳ್ಳಿ ಪೇಸ್ಟ್ - ಒಂದು ಚಮಚ, ಮೆಣಸಿನಕಾಯಿ - ಎರಡು, ಎಣ್ಣೆ - ಎರಡು ಚಮಚ, ಜೀರಿಗೆ - ಒಂದು ಚಮಚ, ಲವಂಗ - ಮೂರು, ಏಲಕ್ಕಿ - ಎರಡು, ದಾಲ್ಚಿನ್ನಿ - ಸಣ್ಣ ತುಂಡು, ಬಿರಿಯಾನಿ ಎಲೆಗಳು - ಎರಡು, ನೀರು - ಸಾಕಷ್ಟು, ಕೊತ್ತಂಬರಿ - ಒಂದು ಗೊಂಚಲು, ಉಪ್ಪು - ರುಚಿಗೆ

ತಯಾರಿಸುವ ವಿಧಾನ

ಬಾಸ್ಮತಿ ಅಕ್ಕಿಯನ್ನು ತೊಳೆದು ಅರ್ಧ ಗಂಟೆ ನೀರಿನಲ್ಲಿ ನೆನೆಸಿಡಿ. ಎಲೆಕೋಸನ್ನು ಚಿಕ್ಕದಾಗಿ ಹೆಚ್ಚಿ ಪಕ್ಕಕ್ಕೆ ಇರಿಸಿ. ಪ್ರೆಶರ್ ಕುಕ್ಕರ್ ಅನ್ನು ಒಲೆಯ ಮೇಲೆ ಇಟ್ಟು ಎಣ್ಣೆ ಹಾಕಿ ಬಿಸಿ ಮಾಡಿ. ಎಣ್ಣೆ ಕಾದ ನಂತರ ಜೀರಿಗೆ, ಲವಂಗ, ದಾಲ್ಚಿನ್ನಿ, ಹಸಿರು ಏಲಕ್ಕಿ ಮತ್ತು ಬಿರಿಯಾನಿ ಎಲೆಗಳನ್ನು ಸೇರಿಸಿ ಫ್ರೈ ಮಾಡಿ. ನಂತರ ಹೆಚ್ಚಿಕೊಂಡ ಈರುಳ್ಳಿ, ಹಸಿಮೆಣಸು ಸೇರಿಸಿ. ಈ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ, ಈರುಳ್ಳಿ ಬಣ್ಣ ಬದಲಾಗುವವರೆಗೂ ಹುರಿಯಿರಿ. ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಮಿಕ್ಸ್ ಮಾಡಿ. ಟೊಮೆಟೊಗಳನ್ನು ಚಿಕ್ಕದಾಗಿ ಕತ್ತರಿಸಿ, ಕುಕ್ಕರ್‌ಗೆ ಹಾಕಿ, ಮೃದುವಾಗುವವರೆಗೆ ಕಡಿಮೆ ಉರಿಯಲ್ಲಿ ಬೇಯಿಸಿ. ನಂತರ ಎಲೆಕೋಸು ಸೇರಿಸಿ ಫ್ರೈ ಮಾಡಿ. ಸ್ವಲ್ಪ ಉಪ್ಪು ಸೇರಿಸಿ. ಈ ಎಲ್ಲವನ್ನೂ ಮಿಶ್ರಣ ಮಾಡಿ, ಸ್ವಲ್ಪ ಹೊತ್ತು ಕುದಿಸಿ. ಅದಕ್ಕೆ ತೊಳೆದಿಟ್ಟುಕೊಂಡ ಅಕ್ಕಿ ಸೇರಿಸಿ, ಅಗತ್ಯವಿದ್ದಷ್ಟು ನೀರು, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಮೇಲೆ ಸ್ವಲ್ಪ ಕೊತ್ತಂಬರಿ ಸೊಪ್ಪು ಉದುರಿಸಿ. ಕುಕ್ಕರ್‌ ಮುಚ್ಚಿ 2 ವಿಶಲ್‌ ಕೂಗಿಸಿ. ತಿನ್ನುವಾಗ ಸ್ವಲ್ಪ ತುಪ್ಪ ಸೇರಿಸಿ ತಿಂದರೆ ಆಹಾ, ಕ್ಯಾಬೇಜ್‌ ರೈಸ್‌ ಅಥವಾ ಪಲಾವ್‌ನ ರುಚಿಯನ್ನು ಸವಿದವನೇ ಬಲ್ಲ.

ಕ್ಯಾಬೇಜ್ ಅನ್ನು ನಿಯಮಿತವಾಗಿ ಸೇವಿಸಿದರೆ, ಅದು ಆರೋಗ್ಯಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ನೀಡುತ್ತದೆ. ಇದರಲ್ಲಿ ವಿಟಮಿನ್ ಎ, ಫೋಲೇಟ್ ಮತ್ತು ಫೈಬರ್ ಸಮೃದ್ಧವಾಗಿದೆ, ಆದ್ದರಿಂದ ಜೀರ್ಣಕ್ರಿಯೆಯು ಸರಾಗವಾಗಿ ನಡೆಯುತ್ತದೆ. ಅಲ್ಲದೆ, ಎಲೆಕೋಸು ತಿನ್ನುವುದು ಹೃದಯವನ್ನು ರಕ್ಷಿಸುತ್ತದೆ. ಇದರಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಕ್ಯಾಬೇಜ್‌ ಪಲಾವ್‌ ನಾಲಿಗೆಗೆ ರುಚಿ ಮಾತ್ರವಲ್ಲ ಆರೋಗ್ಯಕ್ಕೂ ಉತ್ತಮ.

(This copy first appeared in Hindustan Times Kannada website. To read more like this please logon to kannada.hindustantime.com )

Whats_app_banner