logo
ಕನ್ನಡ ಸುದ್ದಿ  /  ಕರ್ನಾಟಕ  /  Bangalore Power Cut: ಇಂದು, ನಾಳೆ ಬೆಂಗಳೂರಿನ ನಾನಾ ಬಡಾವಣೆಗಳಲ್ಲಿ ವಿದ್ಯುತ್‌ ಇರೋಲ್ಲ, ಎಲ್ಲೆಲ್ಲಿ ಕಡಿತ ಇರಲಿದೆ

Bangalore Power Cut: ಇಂದು, ನಾಳೆ ಬೆಂಗಳೂರಿನ ನಾನಾ ಬಡಾವಣೆಗಳಲ್ಲಿ ವಿದ್ಯುತ್‌ ಇರೋಲ್ಲ, ಎಲ್ಲೆಲ್ಲಿ ಕಡಿತ ಇರಲಿದೆ

Umesha Bhatta P H HT Kannada

Nov 19, 2024 02:37 PM IST

google News

ಬೆಂಗಳೂರಿನ ನಾನಾ ಬಡಾವಣೆಗಳಲ್ಲಿ ಮಂಗಳವಾರ ಹಾಗೂ ಬುಧವಾರ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

    • ಬೆಂಗಳೂರಿನ ನಾನಾ ಬಡಾವಣೆಗಳಲ್ಲಿ2024 ರ ನವೆಂಬರ್‌ 19 ರಿಂದ 20ರ ಮಂಗಳವಾರ ಹಾಗೂ ಬುಧವಾರದಂದು ವಿದ್ಯುತ್‌ ನಿಲುಗಡೆಯಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ
    • ವರದಿ: ಎಚ್‌.ಮಾರುತಿ. ಬೆಂಗಳೂರು
ಬೆಂಗಳೂರಿನ ನಾನಾ ಬಡಾವಣೆಗಳಲ್ಲಿ ಮಂಗಳವಾರ ಹಾಗೂ ಬುಧವಾರ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
ಬೆಂಗಳೂರಿನ ನಾನಾ ಬಡಾವಣೆಗಳಲ್ಲಿ ಮಂಗಳವಾರ ಹಾಗೂ ಬುಧವಾರ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

Bangalore Power Outrage: ಬೆಂಗಳೂರು ನಗರದ ನಾನಾ ಪ್ರಮುಖ ಬಡಾವಣೆಗಳಲ್ಲಿ ನವೆಂಬರ್‌ 19 ರಿಂದ 20ವರೆಗೆ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಎರಡು ದಿನಗಳಲ್ಲೂ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಸುಮಾರು ಐದು ಗಂಟೆ ಕಾಲ ವಿದ್ಯುತ್‌ ವ್ಯತ್ಯಯವಾಗಲಿದೆ. ಕೆಪಿಟಿಸಿಎಲ್ ವತಿಯಿಂದ ಆಡುಗೋಡಿ, ಆಸ್ಟಿನ್ ಟೌನ್ ಉಪಕೇಂದ್ರಗಳ್ಲಿ ತುರ್ತ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಕೋರಮಂಗಲ ವಿಭಾಗ ವ್ಯಾಪ್ತಿಯಲ್ಲಿನ ಈ ಕೆಳಕಂಡ ಪ್ರದೇಶಗಳಲ್ಲಿ ಇಂದು ಮತ್ತು ನಾಳೆ ಅಂದರೆ 2024 ರ ನವೆಂಬರ್‌ 19 ರಿಂದ 20 ರವರೆಗೆ ಬೆಳಗ್ಗೆ10 ರಿಂದ ಮಧ್ಯಾಹ್ನ 3 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಂಗಳೂರು ವಿದ್ಯುತ್‌ ಸರಬರಾಜು ಕಂಪೆನಿ( ಬೆಸ್ಕಾಂ) ತಿಳಿಸಿದೆ.

ಯಾವ್ಯಾವ ಬಡಾವಣೆ

5ನೇ ಬ್ಲಾಕ್ ಇಂಡಸ್ಟ್ರಿಯಲ್ ಲೇ ಔಟ್, ಕೋರಮಂಗಲ, ಮಡಿವಾಳ ವೆಂಕಟೇಶ್ವರ ಬಡಾವಣೆ, ಚಿಕ್ಕ ಆಡುಗೋಡಿ, ಜೋಗಿ ಕಾಲೋನಿ, ಈಸ್ಟ್ ಲ್ಯಾಂಡ್ ಹೋಲ್ಡಿಂಗ್ ಬಿಲ್ಡಿಂಗ್, ಸೈಂಟ್ ಜಾನ್, ಸ್ಟಾಫ್ ಕ್ವಾಟ್ರಸ್, ಮಾರುತಿನಗರ, ಆಡುಗೋಡಿ 7ನೇ ಮತ್ತು 8ನೇ ಬ್ಲಾಕ್, ಸಿ.ಎ.ಆರ್ ಪೊಲೀಸ್ ಕ್ವಾಟ್ರಸ್, ಆಡುಗೋಡಿ ಮುಖ್ಯ ರಸ್ತೆ, ಸೈಂಟ್ ಜಾನ್ ಆಸ್ಪತ್ರೆ, ಮಡಿವಾಳದಲ್ಲಿ ವ್ಯತ್ಯಯವಾಗಲಿದೆ.

ಮಾರುತಿ ನಗರ, ಡಾಲರ್ಸ್ ಕಾಲೋನಿ, 100 ಫೀಟ್ ರಿಂಗದ ರಸ್ತೆ, ಅರೆಕಲ್ ಕಂಪನಿ, ಬಿ.ಜಿ. ರಸ್ತೆ, ಕೆ.ಹೆಚ್.ಬಿ. ಕಾಲೋನಿ, 5ನೇ ಬ್ಲಾಕ್ ಇಂಡಸ್ಟ್ರಿಯಲ್ ಏರಿಯಾ ಕೋರಮಂಗಲ, ಮೈಕೋ 3ನೇ, 4ನೇ, 5ನೇ, ಮತ್ತು 6ನೇ ಬ್ಲಾಕ್ ಕೋರಮಂಗಲ, ಭುವನಪ್ಪ ಕಾವೇರಿ ಬಡಾವಣೆ, ಕೃಷ್ಣಾ ನಗರ ಇಡಸ್ಟ್ರಿಯಲ್ ಲೇಔಟ್, ಎಸ್.ಜಿ.ಪಾಳ್ಯ, 2ನೇ ಬ್ಲಾಕ್ ಧವನ್ ಜ್ಯೂಯಲರಿ, ಮಡಿವಾಳ ಸಂತೆ, ಸಧ್ಯಾರ್ಥ ಕಾಲೋನಿ, ಹ್ಯಾಪಿ.ಮೈಂಡ್ ಕಂಪನಿ, ವಿಕ್ಟೋರಿಯ ಲೇಔಟ್, ಪಾಮ್ ಗ್ರೂವ್ ರೋಡ್, ಬಾಲಾಜಿ ಥಿಯೆಟರ್, ಅಗ್ರಂ ವಿವೆಕಾನಗರ, ಸಣ್ಣೆಣಹಳ್ಳಿ, ವೊನ್ನರ್ ಪೇಟೆ ವಿದ್ಯುತ್‌ ಇರೋಲ್ಲ.

ಈ ಪ್ರದೇಶಗಳೂ ಉಂಟು

ಆಂಜನೆಯ ಟೆಂಪಲ್ ಸ್ಟ್ರೀಟ್, ಕೆಎಸ್ ಆರ್ ಪಿ ಕ್ವಾಟ್ರಸ್, ಲಿಂಡನ್ ಸ್ಟ್ರೀಟ್, ಪಾಮ್ ಗ್ರೂವು ರೋಡ್, ಕ್ಷೇವಿಯರ್ ಲೇಔಟ್, ಯಲಗುಂಟೆ ಪಾಳ್ಯಮ್, ಏರ್ ಫೋರ್ಸ್, ಲೈಫ್ ಸ್ಟೈಲ್, ಕ್ಯಾಂಬ್ ಲ್ ರೋಡ್ ಜಂಕ್ಷನ್, ರಿಚ್ ಮಂಡ್ ರೋಡ್, ರುದ್ರಪ್ಪ ಗಾರ್ಡನ್, ಎಮ್ ಜಿ ಗಾರ್ಡನ್, ಆಸ್ಟ್ ನ್ ಟೌನ್ ನೀಲಸಂದ್ರ, ಬಜಾರ್ ಸ್ಟ್ರೀಟ್, ಆರ್ ಕೆ ಗಾರ್ಡನ್, ಬೆಂಗಳೂರು ಫರ್ನಿಚರ್, ರೋಸ್ ಗಾರ್ಡನ್, ಒ.ಆರ್.ಸಿ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲೂ ವ್ಯತ್ಯಯ ಆಗಲಿದೆ.

ನಾಳೆ ವಿದ್ಯುತ್ ಕಡಿತ

ವಿದ್ಯುತ್ ನಿರ್ವಹಣಾ ಕಾಮಗಾರಿ ನಿಮಿತ್ತ ನವೆಂಬರ್ 20 ರ ಬುಧವಾರ ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 3.00 ಗಂಟೆಯವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಪ್ರದೇಶಗಳು : ಅರೇಹಳ್ಳಿ, ಇಟ್ಟಮಡು, ಏಜಿಎಸ್ ಲೇಔಟ್, ಚಿಕ್ಕಲಸಂದ್ರ, ಟಿ.ಜಿ. ಲೇಔಟ್, ಭುವನೇಶ್ವರಿನಗರ ಇಸ್ರೋ ಲೇಔಟ್, ಇಸ್ರೋ ಲೇಔಟ್ ಇಂಡಸ್ರ್ಟಿಯಲ್​ ಏರಿಯಾ, ಕುಮಾರಸ್ವಾಮಿ ಬಡಾವಣೆ, ವಿಠ್ಠಲ ನಗರ, ವಿಕ್ರಮ್ ನಗರ, ಯೆಲಚೇನಹಳ್ಳಿ, ರಾಮಾಂಜನೇಯ ನಗರ, ನಂದ ಕುಮಾರ್ ಲೇಔಟ್, ಉತ್ತರಹಳ್ಳಿ ಮೇನ್ ರೋಡ್, ಉದಯ ನಗರ, ಗೌಡನ ಪಾಳ್ಯ, ಟೆಲಿಕಾಂ ಲೇಔಟ್, ಮುನೇಶ್ವರ ನಗರ, ಚಿಕ್ಕಲಸಂದ್ರ ವಿಲೇಜ್, ಕದಿರೇನಹಳ್ಳಿ, ಅಬ್ಬಯ್ಯ ನಾಯ್ಡು ಸ್ಟುಡಿಯೋ ಸುತ್ತಮುತ್ತಲ ಪ್ರದೇಶ, ನಾಯ್ಡು ಲೇಔಟ್, ಎಜಿಎಸ್ ಲೇಔಟ್, ಹನುಮ ಆದಶð ಅಪಾಟ್ðಮೆಂಟ್ 1 & 2, ಹಿಲ್ಸ್ ಲೇಔಟ್, ಕಾಮಾಕ್ಯ ಲೇಔಟ್, ಹೊಸಕೆರೆಹಳ್ಳಿ, ಟಾಟಾ ಪ್ರಮೋಟ್, ಸಪ್ತಗಿರಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.

(ವರದಿ: ಎಚ್‌.ಮಾರುತಿ. ಬೆಂಗಳೂರು)

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ