Mysore News: ಚೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ, ವಿದ್ಯುತ್ ತಂತಿ ತುಳಿದು ಮೈಸೂರು ರೈತ ಸಾವು; ಜೀವ ಬಿಟ್ಟ ಎರಡು ಜಾನುವಾರು
ಕನ್ನಡ ಸುದ್ದಿ  /  ಕರ್ನಾಟಕ  /  Mysore News: ಚೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ, ವಿದ್ಯುತ್ ತಂತಿ ತುಳಿದು ಮೈಸೂರು ರೈತ ಸಾವು; ಜೀವ ಬಿಟ್ಟ ಎರಡು ಜಾನುವಾರು

Mysore News: ಚೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ, ವಿದ್ಯುತ್ ತಂತಿ ತುಳಿದು ಮೈಸೂರು ರೈತ ಸಾವು; ಜೀವ ಬಿಟ್ಟ ಎರಡು ಜಾನುವಾರು

ಮಳೆ ಹಾಗೂ ಗಾಳಿಯ ವಾತಾವರಣದಿಂದ ಮೈಸೂರು ಜಿಲ್ಲೆಯಲ್ಲಿ ವಿದ್ಯುತ್‌ ತಂತಿ ತುಳಿದ ರೈತ ಹಾಗೂ ಎರಡು ಜಾನುವಾರು ಮೃತಪಟ್ಟಿವೆ. ಈ ಸಂಬಂದ ಚೆಸ್ಕಾಂ ವಿರುದ್ದ ಆಕ್ರೋಶವನ್ನು ರೈತರು ಹೊರ ಹಾಕಿದ್ಧಾರೆ.

ಮೈಸೂರು ಜಿಲ್ಲೆಯ ಎಚ್‌ಡಿಕೋಟೆ ತಾಲ್ಲೂಕಿನ ಮೊತ್ತ ಗ್ರಾಮದಲ್ಲಿ ವಿದ್ಯುತ್‌ ತಂತಿ ತುಳಿದು ಮೃತಪಟ್ಟ ರೈತ ಶೇಖರ್ .
ಮೈಸೂರು ಜಿಲ್ಲೆಯ ಎಚ್‌ಡಿಕೋಟೆ ತಾಲ್ಲೂಕಿನ ಮೊತ್ತ ಗ್ರಾಮದಲ್ಲಿ ವಿದ್ಯುತ್‌ ತಂತಿ ತುಳಿದು ಮೃತಪಟ್ಟ ರೈತ ಶೇಖರ್ .

ಮೈಸೂರು: ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ಕಂಪೆನಿಯ(ಚೆಸ್ಕಾಂ) ಅಧಿಕಾರಿಗಳು ಹಾಗೂ ಸಿಬ್ಬಂದಿ ನಿರ್ಲಕ್ಷ್ಯದಿಂದಾಗಿ ರೈತನೊಬ್ಬ ವಿದ್ಯುತ್‌ ತಂತಿ ತುಳಿದು ಮೃತಪಟ್ಟಿರುವ ಘಟನೆ ಮೈಸೂರು ಜಿಲ್ಲೆ ಎಚ್ ಡಿ ಕೋಟೆ ತಾಲೂಕಿನ ಮೊತ್ತ ಗ್ರಾಮದಲ್ಲಿ ಶುಕ್ರವಾರ ಸಂಜೆ ನಡೆದಿದೆ. ಚೆಸ್ಕಾಂ ಅಧಿಕಾರಿಗಳ ವಿರುದ್ದ ಮೊತ್ತ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದರು. ಘಟನೆ ಸಂಬಂಧ ಎಚ್‌ಡಿಕೋಟೆ ತಾಲ್ಲೂಕಿನ ಅಂತರಸಂತೆ ಠಾಣೆಯಲ್ಲಿ ನಿರ್ಲಕ್ಷ್ಯದ ಆಧಾರದ ಮೇಲೆ ಚೆಸ್ಕಾಂ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ದ ಪ್ರಕರಣ ದಾಖಲಿಸಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಇದೇ ರೀತಿ ವಿದ್ಯುತ್‌ ತಂತಿ ತಗುಲಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಚೆಸ್ಕಾಂ ವ್ಯಾಪ್ತಿಯಲ್ಲಿ ನಡೆದಿತ್ತು, ಮಳೆಗಾಲದ ಜತೆಗೆ ಗಾಳಿಯೂ ಇರುವುದರಿಂದ ಅಲ್ಲಲ್ಲಿ ವಿದ್ಯುತ್‌ ತಂತಿ ಕಡಿದು ಬಿದ್ದು ಅನಾಹುತ ಆಗುತ್ತಿವೆ.

ಘಟನೆ ಆಗಿದ್ದು ಹೇಗೆ

ಜಮೀನು ಕೆಲಸಕ್ಕೆಂದು ಹೋಗಿ ವಾಪಾಸ್‌ ಬರುತ್ತಿದ್ದಾಗ ಮೊತ್ತ ಗ್ರಾಮದ ಶೇಖರ್ (45) ವಿದ್ಯುತ್‌ ತಂತಿ ತುಳಿದು ಮೃತಪಟ್ಟಿದ್ದಾರೆ. ಮೊತ್ತ ಗ್ರಾಮದ ನಿವಾಸಿಗಳಾದ ದೊರೆ ಸೋಮಪ್ಪ, ಅವರ ಪುತ್ರ ಶೇಖರ್ ಅವರು ಎಂದಿನಂತೆ ತಮ್ಮ ಜಮೀನಿನಿಂದ ಎತ್ತುಗಳನ್ನು ಹೊಡೆದುಕೊಂಡು ಮನೆಗೆ ಬರುತ್ತಿದ್ದರು. ಈ ವೇಳೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಒಂದು ಎತ್ತು ಒಂದು ಹಸು, ರೈತ ಶೇಖರ್ ಸ್ಥಳದಲ್ಲೇ ಮೃತಪಟ್ಟರು.

ಎಂದಿನಂತೆ ಶೇಖರ್ ಬೆಳಿಗ್ಗೆ ತಮ್ಮ ಜಮೀನಿಗೆ ಹಸುಗಳನ್ನು ಮೇಯಿಸಲು ಹೊಡೆದುಕೊಂಡು ಹೋಗಿದ್ದರು. ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ಎರಡು ಹಸುಗಳು ದಾಟಿವೆ, ಇನ್ನೆರಡು ಹಸುಗಳು ಮತ್ತು ರೈತ ಶೇಖರ್ ದಾಟುವ ಸಂದರ್ಭದಲ್ಲಿ ವಿದ್ಯುತ್ ಸ್ಪರ್ಶಿಸಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಗ್ರಾಮಸ್ಥರ ಆಕ್ರೋಶ

ಸ್ಥಳಕ್ಕೆ ಅಂತರಸಂತೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಘಟನೆಗೆ ಚೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ ಕಾರಣ ಎಂದು ಗ್ರಾಮಸ್ಥರು ಆಕ್ರೋಶ ಹೊರ ಹಾಕಿದರು. ಘಟನೆ ಸಂಬಂಧ ಅಂತರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳೆ ದುರ್ಮರಣ

ರಸ್ತೆ ಬದಿ ನಿಂತಿದ್ದ ಬೈಕ್‌ಗಳು, ಪಾದಾಚಾರಿಗಳಿಗೆ ಅಪರಿಚಿತ ಕಾರು ಡಿಕ್ಕಿ, ಓರ್ವ ಮಹಿಳೆ ಸ್ಥಳದಲ್ಲೇ ಮೃತಪಟಟು ಐವರಿಗೆ ಗಂಭೀರ ಗಾಯವಾಗಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ದೊಡ್ಡಕವಲಂದೆ ಗ್ರಾಮದ ಚಾಮರಾಜನಗರ-ನಂಜನಗೂಡು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ನಂಜನಗೂಡು ತಾಲ್ಲೂಕಿನ ಹನುಮನಪುರ ಗ್ರಾಮದ ಲಕ್ಷ್ಮಣ ಎಂಬುವವರ ಪತ್ನಿ ಮಂಜುಳಾ (32) ಮೃತ ದುರ್ದೈವಿ.

ಲಕ್ಷ್ಮಣ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ದೊಡ್ಡಕವಲಂದೆ ಗ್ರಾಮದ ಬ್ಯಾಂಕಿಗೆ ಖಾತೆ ತೆರೆಯಲು ತೆರಳಿದ್ದರು. ಈ ವೇಳೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ನಂಜನಗೂಡು ಕಡೆಯಿಂದ ಚಾಮರಾಜನಗರ ಕಡೆಗೆ ಅತಿ ವೇಗವಾಗಿ ಬಂದ ಕಾರು ರಸ್ತೆ ಬದಿಯಲ್ಲಿ ನಿಂತಿದ್ದ ಬೈಕ್, ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಜನರಿಗೆ ಡಿಕ್ಕಿ ಹೊಡೆದಿದೆ. ಮಂಜುಳ ಎಂಬ ಮಹಿಳೆ ಸ್ಥಳದಲ್ಲೇ ಮೃತಪಟ್ಟರೆ ಲಕ್ಷ್ಮಣ, ಸಿಂಧು, ಶಿವಮಲ್ಲು, ನೇಹರ್, ರಾಜಪ್ಪ ಹಾಗೂ ಮೃತ ಮಹಿಳೆಯ ಮಕ್ಕಳಿಗೂ ಗಂಭೀರ ಗಾಯಗಳಾಗಿವೆ. ಡಿಕ್ಕಿ ಹೊಡೆದ ಅಪರಿಚಿತ ಕಾರಿನ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಗಾಯಾಳುಗಳನ್ನು ನಂಜನಗೂಡು ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ದೊಡ್ಡ ಕವಲಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Whats_app_banner