logo
ಕನ್ನಡ ಸುದ್ದಿ  /  ಕರ್ನಾಟಕ  /  ಬಸವನಗುಡಿ ಕಡಲೆಕಾಯಿ ಪರಿಷೆ ನವೆಂಬರ್‌ 25, 26ಕ್ಕೆ; ವ್ಯಾಪಾರ ಮಾಡಿ ಖುಷ್ ಖುಷಿಯಾಗಿರಿ, ಶೇಂಗಾ ಬೆಳೆಗಾರರ ಸಂಭ್ರಮ ಹೆಚ್ಚಲು ಇದು ಕಾರಣ

ಬಸವನಗುಡಿ ಕಡಲೆಕಾಯಿ ಪರಿಷೆ ನವೆಂಬರ್‌ 25, 26ಕ್ಕೆ; ವ್ಯಾಪಾರ ಮಾಡಿ ಖುಷ್ ಖುಷಿಯಾಗಿರಿ, ಶೇಂಗಾ ಬೆಳೆಗಾರರ ಸಂಭ್ರಮ ಹೆಚ್ಚಲು ಇದು ಕಾರಣ

Umesh Kumar S HT Kannada

Nov 16, 2024 09:28 PM IST

google News

ಬಸವನಗುಡಿ ಕಡಲೆಕಾಯಿ ಪರಿಷೆ ನವೆಂಬರ್‌ 25, 26ಕ್ಕೆ; ವ್ಯಾಪಾರ ಮಾಡಿ ಖುಷ್ ಖುಷಿಯಾಗಿರಿ, ಶೇಂಗಾ ಬೆಳೆಗಾರರ ಸಂಭ್ರಮ ಹೆಚ್ಚಲು ಇದು ಕಾರಣ ನೋಡಿ. (ಸಾಂಕೇತಿಕ ಚಿತ್ರ)

  • ಬೆಂಗಳೂರಿನ ಇತಿಹಾಸ ಪ್ರಸಿದ್ಧ ಬಸವನಗುಡಿ ಕಡಲೆಕಾಯಿ ಪರಿಷೆ (ಕಳ್ಳೆ ಕಾಯಿ ಪರಿಷೆ) ನವೆಂಬರ್‌ 25, 26ಕ್ಕೆ ನಿಗದಿಯಾಗಿದೆ. ಈ ಬಾರಿ ರೈತರು ವ್ಯಾಪಾರ ಮಾಡಿ ಖುಷ್‌ ಖುಷಿಯಾಗಿರಿ. ಅದೇ ಶೇಂಗಾ ಬೆಳೆಗಾರರ ಸಂಭ್ರಮ ಹೆಚ್ಚಲು ಇದು ಕಾರಣ. ವಿವರ ಇಲ್ಲಿದೆ ಓದಿ.

ಬಸವನಗುಡಿ ಕಡಲೆಕಾಯಿ ಪರಿಷೆ ನವೆಂಬರ್‌ 25, 26ಕ್ಕೆ; ವ್ಯಾಪಾರ ಮಾಡಿ ಖುಷ್ ಖುಷಿಯಾಗಿರಿ, ಶೇಂಗಾ ಬೆಳೆಗಾರರ ಸಂಭ್ರಮ ಹೆಚ್ಚಲು ಇದು ಕಾರಣ ನೋಡಿ. (ಸಾಂಕೇತಿಕ ಚಿತ್ರ)
ಬಸವನಗುಡಿ ಕಡಲೆಕಾಯಿ ಪರಿಷೆ ನವೆಂಬರ್‌ 25, 26ಕ್ಕೆ; ವ್ಯಾಪಾರ ಮಾಡಿ ಖುಷ್ ಖುಷಿಯಾಗಿರಿ, ಶೇಂಗಾ ಬೆಳೆಗಾರರ ಸಂಭ್ರಮ ಹೆಚ್ಚಲು ಇದು ಕಾರಣ ನೋಡಿ. (ಸಾಂಕೇತಿಕ ಚಿತ್ರ)

ಬೆಂಗಳೂರು: ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನ ಸುತ್ತಮುತ್ತ ನಡಯವ ಐತಿಹಾಸಿಕ ಕಡಲೆಕಾಯಿ ಪರಿಷೆ (ಕಳ್ಳೆ ಕಾಯಿ ಪರಿಷೆ) ಈ ಬಾರಿ ನವೆಂಬರ್ 25 ಮತ್ತು 26 ರಂದು ನಡೆಯಲಿದೆ. ಶೇಂಗಾ ಬೆಳೆಗಾರರಿಗೆ ಖುಷಿ ಕೊಡುವ ವಿಚಾರವನ್ನೂ ಸರ್ಕಾರ ಪ್ರಕಟಿಸಿದೆ. ಈ ಬಾರಿ ಶೇಂಗಾ ಬೆಳೆಗಾರರು ಕಡಲೆಕಾಯಿ ಪರಿಷೆಯಲ್ಲಿ ಸುಂಕ ಅಥವಾ ಶುಲ್ಕ ಪಾವತಿಸಬೇಕಾಗಿಲ್ಲ. ಇದು ರೈತ ಸಂತೆಯಾದ ಕಾರಣ ಅವರು ಯಾವುದೇ ಶುಲ್ಕ ಪಾವತಿಸದೇ ವ್ಯಾಪಾರ ಮಾಡಬಹುದು ಎಂದು ಕರ್ನಾಟಕ ಸರ್ಕಾರ ಶನಿವಾರ (ನವೆಂಬರ್ 16) ಘೋಷಿಸಿದೆ. ಮುಜುರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಅಧ್ಯಕ್ಷತೆಯಲ್ಲಿ ನವೆಂಬರ್ 13 ರಂದು ನಡೆದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಬಸವನಗುಡಿ ಕಡಲೆಕಾಯಿ ಪರಿಷೆ ನವೆಂಬರ್‌ 25, 26ಕ್ಕೆ

ಪ್ರತಿ ವರ್ಷದಂತೆ ಈ ಬಾರಿ ಕೂಡ ಕಾರ್ತಿಕ ಮಾಸದ ಕಡೇ ಸೋಮವಾರ (ನವೆಂಬರ್ 25) ಬೆಳಗ್ಗೆ 10 ಗಂಟೆಗೆ ಶಿಷ್ಟಾಚಾರದಂತೆ ಕಡಲೆಕಾಯಿ ಪರಿಷೆ ಶುರುವಾಗಲಿದೆ. ಬೆಂಗಳೂರು ಉಸ್ತುವಾರಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರೆ ಗಣ್ಯರನ್ನು ಆಹ್ವಾನಿಸಲು ಸಭೆ ತೀರ್ಮಾನಿಸಿತು.

ಬಸವನಗುಡಿ ಶ್ರೀ ದೊಡ್ಡಬಸವಣ್ಣನ ದೇವಾಲಯದಲ್ಲಿ ನವೆಂಬರ್ 23 ರಿಂದ ನವೆಂಬರ್ 27 ರ ತನಕ ಇತಿಹಾಸ ಪ್ರಸಿದ್ಧ ಕಡಲೆಕಾಯಿ ಪರಿಷೆ ಮತ್ತು ಜಾತ್ರೆ ನಡೆಯಲಿದೆ. ಹೀಗಾಗಿ ಆರೋಗ್ಯ ನೈರ್ಮಲ್ಯ, ಸ್ವಚ್ಛತೆಗೆ ಕ್ರಮ ತೆಗೆದುಕೊಳ್ಳುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು. ದೊಡ್ಡ ಗಣಪತಿ ದೇವಾಲಯದಿಂದ ಬೇಡರ ಕಣ್ಣಪ್ಪ ದೇವಾಲಯದ ಮುಂಭಾಗದ ತನಕ ಒಳ ಪ್ರವೇಶ ಮತ್ತು ಹೊರ ಹೋಗುವ ದಾರಿ ವ್ಯವಸ್ಥೆಗೆ ಬ್ಯಾರಿಕೇಡ್ ಅಳವಡಿಸಲು ಪೊಲೀಸ್ ಇಲಾಖೆಗೆ ಸೂಚಿಸಲಾಯಿತು. ವಿದ್ಯುತ್ ವ್ಯವಸ್ಥೆಗೆ ಬೆಸ್ಕಾಂ, ನೀರಿನ ವ್ಯವಸ್ತೆಗೆ ಜಲ ಮಂಡಳಿಗೆ ಸೂಚಿಸಲಾಗಿದೆ. ದೇವಾಲಯದ ಒಳ ಮತ್ತು ಹೊರಗಿನ ದೀಪಾಲಂಕಾರದ ಹೊಣೆಗಾರಿಕೆ ಬಿಬಿಎಂಪಿಯದ್ದು. ಸಾರ್ವಜನಿಕ ಶೌಚಾಲಯದ ವ್ಯವಸ್ತೆಯನ್ನೂ ಮಾಡಲು ಸೂಚಿಸಲಾಗಿದೆ. ಬೀದಿದೀಪ ಮತ್ತು ಸಿಸಿಟಿವಿ ವ್ಯವಸ್ಥೆಗೂ ಸಂಬಂಧಪಟ್ಟವರಿಗೆ ಸೂಚಿಸಲಾಗಿದೆ.

ಸಂಚಾರ ವ್ಯವಸ್ಥೆಯಲ್ಲಿ ವ್ಯತ್ಯಯ ಆಗಲಿದೆ; ಆದರೆ, ವ್ಯಾಪಾರ ಸುಂಕ ವಸೂಲಿ ಇರಲ್ಲ

ಶ್ರೀ ದೊಡ್ಡ ಬಸವಣ್ಣ ದೇವಾಲಯದ ಸುತ್ತಮುತ್ತ ವಾಹನ ಸಂಚಾರ, ನಿಲುಗಡೆ ನಿಷೇಧವಿರಲಿದೆ. ತಾತ್ಕಾಲಿಕ ಔಟ್‌ ಪೋಸ್ಟ್‌ ಕೂಡ ಇರಲಿದೆ. ರಾಮಕೃಷ್ಣ ಆಶ್ರಮ ವೃತ್ತದಿಂದ ಹನುಮಂತನಗರ, ಕತ್ರಿಗುಪ್ಪೆ, ಬ್ಯಾಂಕ್ ಕಾಲನಿ, ಗಿರಿನಗರ, ಆವಲಹಳ್ಳಿ, ವಿದ್ಯಾಪೀಠ ಸರ್ಕಲ್‌ ಮುಂತಾದ ಸ್ಥಳಗಳಿಗೆ ಹೋಗುವ ಬಸ್ಸು ಮಾರ್ಗಗಳ ಬದಲಾವಣೆ ಆಗಲಿದೆ. ಪೊಲೀಸರು ಮೂರು ಪಾಳಿಯಲ್ಲಿ ಭದ್ರತಾ ವ್ಯವಸ್ಥೆ ಕಾಪಾಡಲಿದ್ದಾರೆ.

ಪರಿಷೆಗೆ ಬನ್ನಿ ಕೈ ಚೀಲ ತನ್ನಿ: ಪ್ರತಿ ವರ್ಷದಂತೆ ಈ ಬಾರಿ ಕೂಡ ಕಡಲೆಕಾಯಿ ಪರಿಷೆಗೆ ಬರುವಾಗ ಕೈ ಚೀಲ ತನ್ನಿ ಎಂಬ ಸಂದೇಶ ರವಾನಿಸಲು ಬಿಬಿಎಂಪಿ ಸಜ್ಜಾಗಿದೆ. ಪ್ಲಾಸ್ಟಿಕ್ ಕವರ್‌ ನಿಷೇಧಿಸಲಾಗಿದೆ. ಎನ್‌ಜಿಒಗಳ ಸಹಕಾರದೊಂದಿಗೆ ಜಾಗೃತಿ ಮೂಡಿಸುವ ಕೆಲಸ ಶುರುವಾಗಿದೆ.

ಈ ಬಾರಿ ವ್ಯಾಪಾರ ಸುಂಕ ಇರಲ್ಲ: ಈ ಸಲ ಬಸವನಗುಡಿ ದೇವಾಲಯದಲ್ಲಿ ನವೆಂಬರ್ 25, 26ಕ್ಕೆ ಕಡಲೆಕಾಯಿ ಪರಿಷೆ (ಕಳ್ಳೆ ಕಾಯಿ ಪರಿಷೆ) ನಡೆಯಲಿದೆ. ಈ ಎರಡು ದಿನಗಳ ಅವಧಿಯಲ್ಲಿ ಬುಲ್ ಟೆಂಪಲ್ ರಸ್ತೆಯಲ್ಲಿ ಬೀದಿ ಬದಿ ವ್ಯಾಪಾರಕ್ಕೆ ಕೂರುವವರಿಂದ ಸುಂಕ ವಸೂಲಿಗೆ ಟೆಂಡರ್ ಕರೆಯುವ ವಾಡಿಕೆ ಇತ್ತು. ಇದೇ ಮೊದಲ ಬಾರಿಗೆ ಸುಂಕ ವಸೂಲಿಗೆ ಟೆಂಡರ್ ಕರೆಯದಿರಲು ಸರ್ಕಾರ ತೀರ್ಮಾನಿಸಿದೆ. ಒಂದೊಮ್ಮೆ ಅನಧಿಕೃತವಾಗಿ ಯಾರಾದರೂ ಸುಂಕ ವಸೂಲಿ ಮಾಡಿದರೆ ಅಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಕರ್ನಾಟಕ ಸರ್ಕಾರ ಎಚ್ಚರಿಸಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ