logo
ಕನ್ನಡ ಸುದ್ದಿ  /  ಕರ್ನಾಟಕ  /  ಆತ್ಮೀಯರೆ, ನನ್ನದೊಂದು ನವೋದ್ಯಮದ ಐಡಿಯಾ ಇದೆ, ಕೈ ಜೋಡಿಸ್ತೀರಾದರೆ ಮಾತನಾಡಿ; ಬೆಂಗಳೂರು ಆಟೋ ಚಾಲಕ ಸ್ಯಾಮುಯೆಲ್ ಕ್ರಿಸ್ಟಿ ಪೋಸ್ಟರ್ ವೈರಲ್‌

ಆತ್ಮೀಯರೆ, ನನ್ನದೊಂದು ನವೋದ್ಯಮದ ಐಡಿಯಾ ಇದೆ, ಕೈ ಜೋಡಿಸ್ತೀರಾದರೆ ಮಾತನಾಡಿ; ಬೆಂಗಳೂರು ಆಟೋ ಚಾಲಕ ಸ್ಯಾಮುಯೆಲ್ ಕ್ರಿಸ್ಟಿ ಪೋಸ್ಟರ್ ವೈರಲ್‌

Umesh Kumar S HT Kannada

Nov 19, 2024 01:09 PM IST

google News

ಆತ್ಮೀಯರೆ, ನನ್ನದೊಂದು ನವೋದ್ಯಮದ ಐಡಿಯಾ ಇದೆ, ಕೈ ಜೋಡಿಸ್ತೀರಾದರೆ ಮಾತನಾಡಿ ಎಂಬ ಬೆಂಗಳೂರು ಆಟೋ ಚಾಲಕ ಸ್ಯಾಮುಯೆಲ್ ಕ್ರಿಸ್ಟಿ ಅವರ ಪೋಸ್ಟರ್ ವೈರಲ್‌ ಆಗಿದೆ

  •  ಬೆಂಗಳೂರ ಆಟೋ ಚಾಲಕರು ಬಹಳ ಸೃಜನಶೀಲರು. ಇತ್ತೀಚಿನ ಸುದ್ದಿ ಇದು. “ಆತ್ಮೀಯರೆ, ನನ್ನದೊಂದು ನವೋದ್ಯಮದ ಐಡಿಯಾ ಇದೆ, ಕೈ ಜೋಡಿಸ್ತೀರಾದರೆ ಮಾತನಾಡಿ” ಎಂದು ಬೆಂಗಳೂರು ಆಟೋ ಚಾಲಕ ಸ್ಯಾಮುಯೆಲ್ ಕ್ರಿಸ್ಟಿ ತನ್ನ ಆಟೋದಲ್ಲಿ ಹಾಕಿಕೊಂಡಿದ್ದ ಪೋಸ್ಟರ್ ವೈರಲ್‌ ಆಗಿದೆ. ಅದರ ವಿವರ ಇಲ್ಲಿದೆ.

ಆತ್ಮೀಯರೆ, ನನ್ನದೊಂದು ನವೋದ್ಯಮದ ಐಡಿಯಾ ಇದೆ, ಕೈ ಜೋಡಿಸ್ತೀರಾದರೆ ಮಾತನಾಡಿ ಎಂಬ ಬೆಂಗಳೂರು ಆಟೋ ಚಾಲಕ ಸ್ಯಾಮುಯೆಲ್ ಕ್ರಿಸ್ಟಿ ಅವರ ಪೋಸ್ಟರ್ ವೈರಲ್‌ ಆಗಿದೆ
ಆತ್ಮೀಯರೆ, ನನ್ನದೊಂದು ನವೋದ್ಯಮದ ಐಡಿಯಾ ಇದೆ, ಕೈ ಜೋಡಿಸ್ತೀರಾದರೆ ಮಾತನಾಡಿ ಎಂಬ ಬೆಂಗಳೂರು ಆಟೋ ಚಾಲಕ ಸ್ಯಾಮುಯೆಲ್ ಕ್ರಿಸ್ಟಿ ಅವರ ಪೋಸ್ಟರ್ ವೈರಲ್‌ ಆಗಿದೆ (Reddit)

ಬೆಂಗಳೂರು: ಬದುಕಿನಲ್ಲಿ ಏನಾದರೂ ಸಾಧಿಸಬೇಕು ಎಂದರೆ ಕನಸು ಕಾಣಬೇಕು. ಆ ಕನಸನ್ನೇ ಉಸಿರಾಗಿಸಿಕೊಳ್ಳಬೇಕು. ಅದೇ ದಿಶೆಯಲ್ಲಿ ಸಾಗಬೇಕು. ಯಾವುದೇ ನವೋದ್ಯಮಿಗಳ ಬದುಕನ್ನು ಗಮನಿಸಿದರೂ ಇದು ಮನವರಿಕೆಯಾಗುತ್ತದೆ. ಬೆಂಗಳೂರು ಅಂದ್ರೆ ಕೇಳಬೇಕಾ, ನವೋದ್ಯಮಗಳ ತವರು. ಬೆಂಗಳೂರು ಗಮನಿಸುವಂತಹ ಅನೇಕ ಸನ್ನಿವೇಶಗಳನ್ನು ನಿತ್ಯ ಬದುಕಿನಲ್ಲಿ ಕಾಣಬಹುದು. ಸೋಷಿಯಲ್ ಮೀಡಿಯಾ ಇರುವ ಕಾರಣ ಇದು ಬಹುಬೇಗ ಜನಮನಸೆಳೆಯುತ್ತಿದೆ. ವಿಶೇಷವಾಗಿ ಸಾರ್ವಜನಿಕ ಸಾರಿಗೆಗಳಲ್ಲಿ ಇಂತಹ ಸನ್ನಿವೇಶ ಹೆಚ್ಚು. ಈ ಬಾರಿ ವೈರಲ್ ಆಗಿರುವುದು ಆಟೋ ಚಾಲಕನೊಬ್ಬ ತನ್ನ ಆಟೋ ರಿಕ್ಷಾದಲ್ಲಿ ಅಂಟಿಸಿಕೊಂಡಿದ್ದ ಪೋಸ್ಟರ್‌. ಅದರಲ್ಲಿ ಆತ, “ಆತ್ಮೀಯರೆ, ನನ್ನದೊಂದು ನವೋದ್ಯಮದ ಐಡಿಯಾ ಇದೆ, ಕೈ ಜೋಡಿಸ್ತೀರಾದರೆ ನನ್‌ ಜತೆ ಮಾತನಾಡಿ” ಎಂದು ಬರೆದುಕೊಂಡಿದ್ದ.

ಆತ್ಮೀಯರೆ, ನನ್ನದೊಂದು ನವೋದ್ಯಮದ ಐಡಿಯಾ ಇದೆ, ಕೈ ಜೋಡಿಸ್ತೀರಾದರೆ ನನ್‌ ಜತೆ ಮಾತನಾಡಿ

ಆಟೋ ಚಾಲಕ ಸ್ಯಾಮುವೆಲ್ ಕ್ರಿಸ್ಟಿ ತನ್ನ ಆಟೋದಲ್ಲಿ ಹಾಕಿಕೊಂಡ ಪೋಸ್ಟರ್‌ನ ಫೋಟೋ ತೆಗೆದ ಪ್ರಯಾಣಿಕರೊಬ್ಬರು ರೆಡ್ಡಿಟ್‌ನಲ್ಲಿ ಅದನ್ನು ಹಂಚಿಕೊಂಡಿದ್ದಾರೆ. ಸ್ಯಾಮುವೆಲ್‌ ಕ್ರಿಸ್ಟಿ ಪದವೀಧರನಾಗಿದ್ದು, ತನ್ನದೇ ಆದ ನವೋದ್ಯಮದ ಕನಸು ಕಂಡಿದ್ದಾರೆ. ಇದಕ್ಕೆ ಹೂಡಿಕೆದಾರರನ್ನು ಹುಡುಕುತ್ತಿದ್ದಾರೆ ಎಂಬುದು ಪೋಸ್ಟ್‌ನ ಸಾರಾಂಶ. 

ಆಟೋದಲ್ಲಿರುವ ಪೋಸ್ಟರ್‌ನಲ್ಲಿರುವುದು ಇಷ್ಟು-  “ಹಾಯ್ ಪ್ರಯಾಣಿಕರೇ, ನನ್ನ ಹೆಸರು ಸ್ಯಾಮ್ಯುಯೆಲ್ ಕ್ರಿಸ್ಟಿ. ನಾನು ಪದವೀಧರ. ನನ್ನ ನವೋದ್ಯಮ ಸಾಕಾರಗೊಳಿಸಲು ಹಣವನ್ನು ಸಂಗ್ರಹಿಸಲು ನೋಡುತ್ತಿದ್ದೇನೆ. ನಿಮಗೆ ಆಸಕ್ತಿ ಇದ್ದರೆ, ದಯವಿಟ್ಟು ನನ್ನೊಂದಿಗೆ ಮಾತನಾಡಿ”. 

ರೆಡ್ಡಿಟ್‌ ಬಳಕೆದಾರರು ಪ್ರತಿಕ್ರಿಯೆ ಹೀಗಿತ್ತು

ಆಟೋ ಡ್ರೈವರ್‌ನ ವಿಶಿಷ್ಟ ನಿಧಿಸಂಗ್ರಹಣೆ ವಿಧಾನವು ರೆಡ್ಡಿಟ್‌ನಲ್ಲಿ ಹಲವಾರು ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ. ಇದು ಅಂತಹ ಉದ್ಯಮಶೀಲ ಪ್ರಯತ್ನಗಳ ಬಗ್ಗೆ ಬೆಂಗಳೂರಿನ ಮಿಶ್ರ ಭಾವನೆಗಳನ್ನು ಪ್ರತಿಬಿಂಬಿಸುತ್ತದೆ. ಒಬ್ಬ ಬಳಕೆದಾರ ಚಾಲಕನ ಪ್ರಯತ್ನವನ್ನು ಶ್ಲಾಘಿಸಿದ್ದು, "ಇದು ಉತ್ತಮ ಪ್ರಯತ್ನ ಎಂದು ನಾನು ಭಾವಿಸುತ್ತೇನೆ. ಅವನು ಏನಾದರೂ ಒಳ್ಳೆಯದನ್ನು ಮಾಡುತ್ತಿದ್ದಾನೆ ಮತ್ತು ಆಶಿಸುತ್ತೇನೆ ಅವನು ಯಶಸ್ವಿಯಾಗುತ್ತಾನೆ!" ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರ, "ಅವನು ಆಸಕ್ತಿ ಹೊಂದಿದ್ದರೆ, ನಾನು ಅವನಿಗೆ ಸಹಾಯ ಮಾಡಬಲ್ಲೆ" ಎಂದು ಬರೆದಿದ್ದಾರೆ.

ಅನೇಕರು ಅವರಿಗೆ ಯಶಸ್ಸನ್ನು ಹಾರೈಸಿದರೆ, ಇತರರು ಸಂದೇಹದಿಂದ ಪೋಸ್ಟ್ ಹಾಕಿದ್ಧಾರೆ. "ದೇವರು ಅವನನ್ನು ಆಶೀರ್ವದಿಸಲಿ" ಎಂದು ಒಬ್ಬರು ಕಾಮೆಂಟ್ ಮಾಡಿದರೆ, "ಇದೊಂದು ಹಗರಣವೂ ಆಗಿರಬಹುದು, ಬೆಂಗಳೂರಿನಲ್ಲಿ ಆಟೋ ಚಾಲಕರು ದೊಡ್ಡ ವಂಚಕರು." ಎಂದು ಮತ್ತೊಬ್ಬರು ಎಚ್ಚರಿಸಿದ್ದಾರೆ.

ಬೆಂಗಳೂರಿನಲ್ಲಿ ಆಟೋ ಚಾಲಕರ ಬಗ್ಗೆ ಆರೋಪಗಳು, ಟೀಕೆಗಳು ಏನೇ ಇರಬಹುದು. ಆದರೆ ಅವರು ನವೀನ ಆಲೋಚನೆಗಳೊಂದಿಗೆ ಗಮನಸೆಳೆಯುತ್ತಿರುವುದು ಕೂಡ ವಾಸ್ತವ. ಇತ್ತೀಚೆಗೆ ಒಬ್ಬ ಆಟೋ ಚಾಲಕ, ತನ್ನ ಆಟೋದಲ್ಲಿ, "ಆಟೋ ಕನ್ನಡಿಗನೊಂದಿಗೆ ಕನ್ನಡ ಕಲಿಯಿರಿ" ಎಂಬ ಪೋಸ್ಟರ್‌ ಪ್ರದರ್ಶಿಸಿ ಗಮನಸೆಳೆದಿದ್ದ. ಅದು ಇಂಗ್ಲಿಷ್‌ಗೆ ಅನುವಾದಿಸಲಾದ ಸಾಮಾನ್ಯ ಕನ್ನಡ ವಾಕ್ಯಗಳನ್ನು ಒಳಗೊಂಡಿತ್ತು. ಅನ್ಯಭಾಷಿಕರು ಪ್ರಯಾಣಿಸುವಾಗ ಸ್ಥಳೀಯ ಭಾಷೆಯನ್ನು ಕಲಿಯಲು ಸಹಾಯ ಮಾಡುವುದು ಇದರ ಉದ್ದೇಶ.

ಈ ಚಿಂತನಶೀಲ ಉಪಕ್ರಮವು ತನ್ನ ವೈವಿಧ್ಯಕ್ಕೆ ಹೆಸರಾದ ಬೆಂಗಳೂರು ಮಹಾನಗರದಲ್ಲಿ ಭಾಷಾ ಸಾಮರಸ್ಯವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಇದನ್ನು ಬಳಿಕ ಅನೇಕರು ಅನುಸರಿಸಿದ್ದು, ಪೊಲೀಸರು ಕೂಡ ಈ ರೀತಿ ಪೋಸ್ಟರ್‌ ಅನ್ನು ಪ್ರಕಟಿಸಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದು ಸೋಷಿಯಲ್ ಮೀಡಿಯಾಗಳಲ್ಲಿ ಗಮನಸೆಳೆದಿದೆ. ಆಟೋ ಚಾಲಕನ ಪೋಸ್ಟರ್ ಅನ್ನು ಪ್ರಯಾಣಿಕರು ಎಕ್ಸ್‌ನಲ್ಲಿ ಹಂಚಿಕೊಂಡಿದ್ದರು. ಅಲ್ಲಿ ಅದುಬಹುಬೇಗ ವೈರಲ್ ಆಯಿತು. ಸಾಮಾಜಿಕ ಮಾಧ್ಯಮ ಬಳಕೆದಾರರು ಚಾಲಕನ ಪ್ರಯತ್ನವನ್ನು ಶ್ಲಾಘಿಸಿದರು, ಭಾಷಾ ಅಂತರವನ್ನು ಕಡಿಮೆ ಮಾಡಲು ಇದು ಚತುರ ಮತ್ತು ಸ್ನೇಹಪರ ವಿಧಾನ ಎಂದು ಕರೆದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ