logo
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಲ್ಲಿ ಈಗ ನಗರ ಮೀಟರ್ ಟ್ಯಾಕ್ಸಿ ಹವಾ; ಅಗ್ರಿಗೇಟರ್‌ಗಳ ಕಮಿಷನ್‌ ಬೇಡಿಕೆಗೆ ಬೇಸತ್ತ ಟ್ಯಾಕ್ಸಿ ಚಾಲಕರು

ಬೆಂಗಳೂರಲ್ಲಿ ಈಗ ನಗರ ಮೀಟರ್ ಟ್ಯಾಕ್ಸಿ ಹವಾ; ಅಗ್ರಿಗೇಟರ್‌ಗಳ ಕಮಿಷನ್‌ ಬೇಡಿಕೆಗೆ ಬೇಸತ್ತ ಟ್ಯಾಕ್ಸಿ ಚಾಲಕರು

Umesh Kumar S HT Kannada

Nov 16, 2024 06:37 PM IST

google News

ಬೆಂಗಳೂರಲ್ಲಿ ಈಗ ನಗರ ಮೀಟರ್ ಟ್ಯಾಕ್ಸಿ ಹವಾ; ಅಗ್ರಿಗೇಟರ್‌ಗಳ ಕಮಿಷನ್‌ ಬೇಡಿಕೆಗೆ ಬೇಸತ್ತ ಟ್ಯಾಕ್ಸಿ ಚಾಲಕರು ಹೊಸ ವ್ಯವಸ್ಥೆ ಕಡೆಗೆ ಒಲವು ತೋರಿಸತೊಡಗಿದ್ದಾರೆ. (ಸಾಂಕೇತಿಕ ಚಿತ್ರ)

  • ಬೆಂಗಳೂರು ಟ್ಯಾಕ್ಸಿ/ ಕ್ಯಾಬ್ ಸೇವೆಗಳಲ್ಲಿ ಈಗ ಸದ್ದಿಲ್ಲದೇ ಬದಲಾವಣೆ ಸಾಗಿದೆ. ಆಪ್ ಆಧಾರಿತ ಸೇವೆಗಳಿಗೆ ಪೈಪೋಟಿ ನೀಡುವಂತೆ ಚಾಲಕರು ಮೀಟರ್ ಆಧಾರಿತ ಸೇವೆ ಕಡೆಗೆ ಒಲವು ತೋರಿಸತೊಡಗಿದ್ದಾರೆ. ಬೆಂಗಳೂರಲ್ಲಿ ಈಗ ನಗರ ಮೀಟರ್ ಟ್ಯಾಕ್ಸಿ ಹವಾ ಕಾಣತೊಡಗಿದೆ. ಅಗ್ರಿಗೇಟರ್‌ಗಳ ಕಮಿಷನ್‌ ಬೇಡಿಕೆಗೆ ಬೇಸತ್ತ ಟ್ಯಾಕ್ಸಿ ಚಾಲಕರು ಬದಲಾವಣೆಗೆ ಮುನ್ನುಡಿ ಬರೆಯತೊಡಗಿದ್ದಾರೆ. 

ಬೆಂಗಳೂರಲ್ಲಿ ಈಗ ನಗರ ಮೀಟರ್ ಟ್ಯಾಕ್ಸಿ ಹವಾ; ಅಗ್ರಿಗೇಟರ್‌ಗಳ ಕಮಿಷನ್‌ ಬೇಡಿಕೆಗೆ ಬೇಸತ್ತ ಟ್ಯಾಕ್ಸಿ ಚಾಲಕರು ಹೊಸ ವ್ಯವಸ್ಥೆ ಕಡೆಗೆ ಒಲವು ತೋರಿಸತೊಡಗಿದ್ದಾರೆ. (ಸಾಂಕೇತಿಕ ಚಿತ್ರ)
ಬೆಂಗಳೂರಲ್ಲಿ ಈಗ ನಗರ ಮೀಟರ್ ಟ್ಯಾಕ್ಸಿ ಹವಾ; ಅಗ್ರಿಗೇಟರ್‌ಗಳ ಕಮಿಷನ್‌ ಬೇಡಿಕೆಗೆ ಬೇಸತ್ತ ಟ್ಯಾಕ್ಸಿ ಚಾಲಕರು ಹೊಸ ವ್ಯವಸ್ಥೆ ಕಡೆಗೆ ಒಲವು ತೋರಿಸತೊಡಗಿದ್ದಾರೆ. (ಸಾಂಕೇತಿಕ ಚಿತ್ರ) (Canva)

ಬೆಂಗಳೂರು: ಕ್ಯಾಬ್, ಟ್ಯಾಕ್ಸಿ ಹುಡುಕಿ ಪ್ರಯಾಣಿಸುವುದೇ ದೊಡ್ಡ ಸವಾಲು. ಓಲಾ, ಉಬರ್‌, ರಾಪಿಡೋ ಹೀಗೆ ಹತ್ತಾರು ಆಪ್‌ ಆಧಾರಿತ ಕ್ಯಾಬ್, ಟ್ಯಾಕ್ಸಿಗಳಿದ್ದರೂ, ಸಮಯಕ್ಕೆ ಸಿಗಲ್ಲ. ಸಿಕ್ಕರೂ ಕೆಲವೊಮ್ಮೆ ಹೆಚ್ಚುವರಿ ದರ ಪಾವತಿಸಬೇಕು. ಇದು ಪ್ರಯಾಣಿಕರ ಸಮಸ್ಯೆಯಾದರೆ, ಕ್ಯಾಬ್‌/ ಟ್ಯಾಕ್ಸಿ ಚಾಲಕರದ್ದು ಬೇರೆಯೇ ಸಮಸ್ಯೆ ಇದೆ. ಅವರ ಆದಾಯದ ಪಾಲನ್ನು ಈ ವೇದಿಕೆಗಳು ಕಸಿಯುತ್ತಿವೆ ಎಂಬ ಭಾವನೆ ವ್ಯಾಪಕವಾಗಿದೆ. ಈ ನಡುವೆ, ಕೆಲವು ಕ್ಯಾಬ್ ಚಾಲಕರು ಆಪ್ ಆಧಾರಿತ ಕ್ಯಾಬ್‌/ ಟ್ಯಾಕ್ಸಿ ಸೇವೆ ಬಿಟ್ಟು ಮೀಟರ್ ಆಧಾರಿತ ಸೇವೆ ಒದಗಿಸುವುದಕ್ಕೆ ಒಲವು ತೋರಿಸಿದ್ದಾರೆ. ಈಗಾಗಲೆ ನಗರ ಮೀಟರ್ ಆಟೋ ಎಂಬ ವೇದಿಕೆಯಡಿ ಒಂದಷ್ಟು ಆಟೋ ಚಾಲಕರು ಈ ಸೇವೆ ಒದಗಿಸತೊಡಗಿದ್ದಾರೆ. ಇದೆ ರೀತಿ ಈಗ ಕ್ಯಾಬ್ ಚಾಲಕರು ಕೂಡ ನಗರ ಮೀಟರ್ ಟ್ಯಾಕ್ಸಿ ಶುರು ಮಾಡಿದ್ದಾರೆ. ಈ ಬಳಗ ಸೇರುವ ಕ್ಯಾಬ್‌ ಚಾಲಕರ ಸಂಖ್ಯೆ ಏರುತ್ತಿರುವುದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಬೆಂಗಳೂರಲ್ಲಿ ಈಗ ನಗರ ಮೀಟರ್ ಟ್ಯಾಕ್ಸಿ; ಏನಿದು

ಕರ್ನಾಟಕ ಸರ್ಕಾರ ಇತ್ತೀಚೆಗೆ ಪರಿಷ್ಕರಿಸಿರುವ ದರ ನಿಯಮಾವಳಿಗೆ ಅನುಗುಣವಾಗಿ ಈ ನಗರ ಮೀಟರ್ ಟ್ಯಾಕ್ಸಿ ದರವೂ ಇದ್ದು, ವಾಹನದ ಮೌಲ್ಯ ಮತ್ತು ವೆಚ್ಚವನ್ನು ಆಧರಿಸಿ ಕನಿಷ್ಠ ದರಗಳನ್ನು ನಿಗದಿ ಪಡಿಸಿಕೊಂಡಿದೆ. ಹೊಸ ನಿಯಮ ಪ್ರಕಾರ, 10 ಲಕ್ಷ ರೂಪಾಯಿಗಿಂತ ಕಡಿಮೆ ಮೌಲ್ಯದ ಟ್ಯಾಕ್ಸಿಗಳು ಮೊದಲ 4 ಕಿ.ಮೀ ಅಂತರದ ಪ್ರಯಾಣಕ್ಕೆ ಕನಿಷ್ಠ 100 ರೂಪಾಯಿ ದರ ನಿಗದಿ ಮಾಡಿವೆ. ನಂತರ ಪ್ರತಿ ಕಿಲೋ ಮೀಟರ್‌ಗೆ 24 ರೂಪಾಯಿ. ಈ ನಿಯಮದ ಹೊರತಾಗಿಯೂ ಅಗ್ರಿಗೇಟರ್‌ ವೇದಿಕೆಗಳು ಚಾಲ್ತಿಗೆ ತಂದಿರುವ ಡೈನಾಮಿಕ್ ಬೆಲೆ ಮಾದರಿ ಪ್ರಾಬಲ್ಯ ಹೆಚ್ಚಿದೆ. ಚಾಲಕರಿಂದ ಅಗ್ರಿಗೇಟರ್‌ಗಳು ಕಮಿಷನ್ ವಸೂಲಿ ಮಾಡುವುದು ಹೆಚ್ಚಾದಾಗ, ಅದನ್ನು ಸರಿದೂಗಿಸಲು ಹೆಚ್ಚಿನ ದರವನ್ನು ಪ್ರಯಾಣಿಕರಿಂದ ವಸೂಲಿ ಮಾಡ್ತಾರೆ ಎಂದು ವರದಿ ವಿವರಿಸಿದೆ.

ಸಿಇಒ ನಿರಂಜನಾರಾಧ್ಯ ಎನ್ ನೇತೃತ್ವದ ಬ್ರಾಂಡ್ ಪ್ರೈಡ್ ಮೊಬಿಲಿಟಿ, ಮೀಟರ್ ಕ್ಯಾಬ್‌ಗಳ ಪರಿವರ್ತನೆಯನ್ನು ಸುಗಮಗೊಳಿಸುತ್ತಿದೆ. ಕಮಿಷನ್-ಮುಕ್ತ ಮಾದರಿಯನ್ನು ಅಳವಡಿಸಿಕೊಳ್ಳಲು ಸಿದ್ಧವಾಗಿರುವ 200 ಚಾಲಕರೊಂದಿಗೆ ಕೆಲಸ ಮಾಡುತ್ತದೆ.

"ಕ್ಯಾಬ್ ಅಗ್ರಿಗೇಟರ್‌ಗಳು ವಿಧಿಸುವ ಹೆಚ್ಚಿನ ಕಮಿಷನ್ ದರಗಳ ಬಗ್ಗೆ ಬಹಳಷ್ಟು ಕ್ಯಾಬ್ ಚಾಲಕರು ಕಳವಳ ವ್ಯಕ್ತಪಡಿಸುತ್ತಿರುವುದನ್ನು ಗಮನಿಸಿದ್ದೇವೆ. ಇದು ಅವರ ಒಟ್ಟಾರೆ ಗಳಿಕೆಯ ಮೇಲೆ ಪರಿಣಾಮ ಬೀರುತ್ತದೆ. ಒಂದು ರೈಡ್‌ಗೆ 600 ರೂಪಾಯಿ ವೆಚ್ಚವಾದಾಗ, ಚಾಲಕನಿಗೆ 400 ರಿಂದ 420 ರೂಪಾಯಿವರೆಗೆ ಮಾತ್ರ ಸಿಗುತ್ತದೆ. ಇದಕ್ಕಾಗಿಯೇ ನಾವು ಮೀಟರ್ ಟ್ಯಾಕ್ಸಿಗಳಿಗೆ ಬದಲಾವಣೆ ಮಾಡಿಕೊಳ್ಳಲು ಸಿದ್ಧರಾಗಿರುವ ಮತ್ತು ಸರ್ಕಾರ-ನಿಗದಿತ ದರಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸಲು ಸಿದ್ಧರಿರುವ ಕ್ಯಾಬ್ ಚಾಲಕರ ಸಣ್ಣ ಗುಂಪಿನೊಂದಿಗೆ ಕೆಲಸ ಮಾಡುತ್ತಿದ್ದೇವೆ. ಇದು ಚಾಲಕರು ಸಂಪೂರ್ಣ ಗಳಿಕೆಯನ್ನು ಶೂನ್ಯ ಕಮಿಷನ್ ಮಾದರಿಯಲ್ಲಿ ಇಟ್ಟುಕೊಳ್ಳುವುದನ್ನು ಖಚಿತಪಡಿಸುತ್ತದೆ”ಎಂದು ನಿರಂಜನಾರಾಧ್ಯ ತಿಳಿಸಿದ್ದಾಗಿ ವರದಿ ವಿವರಿಸಿದೆ.

ಮೀಟರ್ ಟ್ಯಾಕ್ಸಿ ಹವಾ; ಬದಲಾಗುತ್ತಿದ್ದಾರೆ ಟ್ಯಾಕ್ಸಿ ಚಾಲಕರು

ಬೆಂಗಳೂರು ನಗರದಲ್ಲಿ ಹೆಚ್ಚಿನ ಚಾಲಕರು ಈಗ ಮೀಟರ್‌ ಟ್ಯಾಕ್ಸಿ ವ್ಯವಸ್ಥೆಯ ಕಡೆಗೆ ಒಲವು ತೋರಿಸುತ್ತಿದ್ದಾರೆ. ಇದರೊಂದಿಗೆ ಬೆಂಗಳೂರಿನ ರೈಡ್-ಹೇಲಿಂಗ್ ಮಾರುಕಟ್ಟೆಯು ಗಮನಾರ್ಹ ರೂಪಾಂತರಕ್ಕೆ ಒಳಗಾಗುವ ನಿರೀಕ್ಷೆಯಿದೆ. ಬ್ರಾಂಡ್ ಪ್ರೈಡ್ ಕಡಿಮೆ ಬೆಲೆಯಲ್ಲಿ ಮೀಟರ್‌ಗಳನ್ನು ನೀಡಲು ಮೀಟರ್ ಪೂರೈಕೆದಾರರೊಂದಿಗೆ ಸಹಕರಿಸುತ್ತಿದೆ. ಚಾಲಕರಿಗೆ ಬದಲಾವಣೆಯನ್ನು ಸುಲಭಗೊಳಿಸುತ್ತದೆ. ಸಾಂಪ್ರದಾಯಿಕ ಟ್ಯಾಕ್ಸಿಗಳು ಮತ್ತು ಅಪ್ಲಿಕೇಶನ್-ಆಧಾರಿತ ಸೇವೆಗಳೆರಡೂ ಈಗ ಪ್ರಯಾಣಿಕರಿಗೆ ಪೈಪೋಟಿ ನೀಡುತ್ತವೆ. ಉತ್ತಮ ಬೆಲೆ ಮತ್ತು ಹೆಚ್ಚು ಪಾರದರ್ಶಕ, ದಕ್ಷ ಸೇವೆಯನ್ನು ಒದಗಿಸುವುದರ ಮೇಲೆ ಕೇಂದ್ರೀಕರಿಸುತ್ತವೆ ಎಂಬುದು ಗ್ರಾಹಕರ ನಿರೀಕ್ಷೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ