logo
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ಹೊರವರ್ತುಲ ರಸ್ತೆ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಯಾವಾಗ, 100 ದಿನಗಳ ಗಡುವು ಮುಗಿದ ಕೂಡಲೇ ಡಿಸಿಎಂಗೆ ವರ್ತಕರ ಸಂಘದ ಪ್ರಶ್ನೆ

ಬೆಂಗಳೂರು ಹೊರವರ್ತುಲ ರಸ್ತೆ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಯಾವಾಗ, 100 ದಿನಗಳ ಗಡುವು ಮುಗಿದ ಕೂಡಲೇ ಡಿಸಿಎಂಗೆ ವರ್ತಕರ ಸಂಘದ ಪ್ರಶ್ನೆ

Umesh Kumar S HT Kannada

Feb 09, 2024 03:21 PM IST

ಬೆಂಗಳೂರು ಹೊರವರ್ತುಲ ರಸ್ತೆ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಯಾವಾಗ ಎಂದು 100 ದಿನಗಳ ಗಡುವು ಮುಗಿದ ಕೂಡಲೇ ಡಿಸಿಎಂಗೆ ವರ್ತಕರ ಸಂಘ ನೆನಪಿನ ಇಮೇಲ್ ಕಳುಹಿಸಿದೆ.

  • ಬೆಂಗಳೂರು ಹೊರವರ್ತುಲ ರಸ್ತೆ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಯಾವಾಗ ಎಂದು 100 ದಿನಗಳ ಗಡುವು ಮುಗಿದ ಕೂಡಲೇ ವರ್ತಕರ ಸಂಘ ಉಪಮುಖ್ಯಮಂತ್ರಿಯನ್ನು ಪ್ರಶ್ನಿಸಿದೆ. (ವರದಿ- ಎಚ್.ಮಾರುತಿ, ಬೆಂಗಳೂರು)

ಬೆಂಗಳೂರು ಹೊರವರ್ತುಲ ರಸ್ತೆ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಯಾವಾಗ ಎಂದು 100 ದಿನಗಳ ಗಡುವು ಮುಗಿದ ಕೂಡಲೇ ಡಿಸಿಎಂಗೆ ವರ್ತಕರ ಸಂಘ ನೆನಪಿನ ಇಮೇಲ್ ಕಳುಹಿಸಿದೆ.
ಬೆಂಗಳೂರು ಹೊರವರ್ತುಲ ರಸ್ತೆ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಯಾವಾಗ ಎಂದು 100 ದಿನಗಳ ಗಡುವು ಮುಗಿದ ಕೂಡಲೇ ಡಿಸಿಎಂಗೆ ವರ್ತಕರ ಸಂಘ ನೆನಪಿನ ಇಮೇಲ್ ಕಳುಹಿಸಿದೆ.

ಬೆಂಗಳೂರು ಹೊರವರ್ತುಲ ರಸ್ತೆಗಳಲ್ಲಿ ವಾಹನ ದಟ್ಟಣೆಯನ್ನು ಕಡಿಮೆ ಮಾಡಲು 100 ದಿನಗಳಲ್ಲಿ ಪರಿಹಾರ ಮಾರ್ಗಸೂಚಿ ರಚಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಕ್ಟೋಬರ್ 7ರಂದು ನಲ್ಲಿ ಭರವಸೆ ನೀಡಿದ್ದರು. ಆದರೆ ನೂರು ದಿನ ಕಳೆದಿದ್ದು ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ.

ಟ್ರೆಂಡಿಂಗ್​ ಸುದ್ದಿ

ಪ್ರವೀಣ್ ನೆಟ್ಟಾರು ಹತ್ಯೆ ಕೇಸ್‌; ಸಕಲೇಶಪುರದಲ್ಲಿ ಮೂವರನ್ನು ಬಂಧಿಸಿದ ಎನ್‌ಐಎ ಅಧಿಕಾರಿಗಳು, ಇಬ್ಬರು ಆರೋಪಿಗಳು, ಅವರ ಆಶ್ರಯದಾತ ಬಂಧಿತರು

ಬೆಂಗಳೂರು ಸಂಚಾರ ಸಲಹೆ; ನಾಗವಾರ ಮೇಲ್ಸೇತುವೆ ಬಳಿ ಇಂದಿನಿಂದ ಸರ್ವೀಸ್‌ ರಸ್ತೆ ಬಂದ್‌, ಟೈಮಿಂಗ್ಸ್ ಮತ್ತು ಇತರೆ ವಿವರ

ಮಂಗಳೂರು ಖಾಸಗಿ ಮೆಡಿಕಲ್ ಕಾಲೇಜು ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ಮೊಬೈಲ್ ಇಟ್ಟು ಚಿತ್ರೀಕರಣಕ್ಕೆ ಯತ್ನ; ಆರೋಪಿ ಬಂಧನ

ಬೆಂಗಳೂರಿನಲ್ಲಿ ಸತತ ಎರಡನೇ ದಿನವೂ ಮಳೆ, ತೊಂದರೆ ಅನುಭವಿಸಿದರೂ ಮಳೆಯಾಗಿದ್ದಕ್ಕೆ ಖುಷಿಪಟ್ಟ ನಾಗರಿಕರು

ವಾಹನ ದಟ್ಟಣೆ ಇದ್ದ ಹಾಗೆಯೇ ಇದೆ ಎಂದು ಹೊರವರ್ತುಲ ರಸ್ತೆ ಕಂಪನಿಗಳ ಸಂಘವು (ಒಆರ್‌ಆರ್‌ಸಿಎ) ಉಪ ಮುಖ್ಯಮಂತ್ರಿಗಳಿಗೆ ನೆನಪಿನ ಓಲೆ ಕಳುಹಿಸಿದೆ. 17 ಕಿಮೀ ಉದ್ದದ ಹೊರವರ್ತುಲ ರಸ್ತೆಯಲ್ಲಿ ಸುಮಾರು 500ಕ್ಕೂ ಹೆಚ್ಚು ಟೆಕ್ ಪಾರ್ಕ್ ಮತ್ತು ಮಾಹಿತಿ ತಂತ್ರಜ್ಞಾನ ಕಂಪನಿಗಳು ಹರಡಿಕೊಂಡಿದ್ದು, 10 ಲಕ್ಷ ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ.

ಕಾಡುಬೀಸನಹಳ್ಳಿಯಲ್ಲಿ ಸಂವಾದ ನಡೆಸಿದ್ದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್

ಹಾಳಾದ ರಸ್ತೆಗಳು ಮತ್ತು ವಾಹನ ದಟ್ಟಣೆ ಪ್ರಮುಖ ಸಮಸ್ಯೆ ಎಂದು ಉಪ ಮುಖ್ಯಮಂತ್ರಿಗಳಿಗೆ ದೂರು ಸಲ್ಲಿಸಲಾಗಿತ್ತು. ಇದೇ ಕಾರಣಕ್ಕೆ ಶಿವಕುಮಾರ್ ಹೊರ ವರ್ತುಲ ರಸ್ತೆಯ ಸಂಚಾರ ದಟ್ಟಣೆ ನಿವಾರಣೆಗೆ ಹೊರವರ್ತುಲ ರಸ್ತೆ ಕಂಪನಿಗಳ ಸಂಘದ (ಒಆರ್‌ಆರ್‌ಸಿಎ) ಸದಸ್ಯರೊಂದಿಗೆ ಅಕ್ಟೋಬರ್ 7 ರಂದು ಕಾಡುಬೀಸನಹಳ್ಳಿಯಲ್ಲಿ ಸಂವಾದ ಸಭೆ ನಡೆಸಿದ್ದರು.

ಹೆಚ್ಚು ಸಂಚಾರ ದಟ್ಟಣೆ ಉಂಟಾಗುವ ಸ್ಥಳಗಳನ್ನು ಈಗಾಗಲೇ ಗುರುತಿಸಲಾಗಿದೆ. ಸಂಚಾರಕ್ಕೆ ಇರುವ ಸಮಸ್ಯೆಗಳನ್ನು ಮೊದಲು ನಿವಾರಿಸಲಾಗುವುದು. ರಸ್ತೆ ಗುಂಡಿ ಸಮಸ್ಯೆ ಸರಿಪಡಿಸಲಾಗುವುದು. ಸಂಚಾರ ದಟ್ಟಣೆಗೆ ಕಾರಣವಾಗಿರುವ ಅನಧಿಕೃತ ಅಂಗಡಿಗಳನ್ನು ಗುರುತಿಸಿ ಮೂರು ತಿಂಗಳಲ್ಲಿ ತೆರವುಗೊಳಿಸಲಾಗುವುದು ಎಂದು ಭರವಸೆ ನೀಡಿದ್ದರು.

ಬೆಂಗಳೂರಿನ ಐದನೇ ಒಂದು ಭಾಗದಷ್ಟು ಆದಾಯ ಹೊರ ವರ್ತುಲ ರಸ್ತೆಯ ಉದ್ದಿಮೆಗಳಿಂದಲೇ ಬರುತ್ತಿದೆ. ಈ ಕಂಪನಿಗಳ ನೌಕರರರಿಗೆ, ಆ ಭಾಗದ ನಿವಾಸಿಗಳಿಗೆ ತೊಂದರೆ ಉಂಟಾಗದಂತೆ ಸಮಸ್ಯೆ ನಿವಾರಿಸಲಾಗುವುದು. ಜನರ ಸಮಯವನ್ನು ರಸ್ತೆಗಳಲ್ಲಿ ವ್ಯರ್ಥವಾಗಲು ಬಿಡುವುದಿಲ್ಲ ಎಂದು ಹೇಳಿದ್ದರು.

ನವಂಬರ್ 2 ಮತ್ತು ಡಿಸೆಂಬರ್ 20ರಂದು ಬಿಬಿಎಂಪಿ ವಿಶೇಷ ಆಯುಕ್ತರು ಒಆರ್‌ಆರ್‌ಸಿಎ ಸದಸ್ಯರೊಂದಿಗೆ ಎರಡು ಸಭೆಗಳನ್ನು ನಡೆಸಿದ್ದರು. ಈ ಸಭೆಯಲ್ಲಿ ವಾಹನ ದಟ್ಟಣೆ ಪರಿಹರಿಸಲು ಫ್ಲೈಓವರ್‌ಗಳನ್ನು ನಿರ್ಮಿಸಬೇಕು ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಸಲಹೆ ನೀಡಿದ್ದರು. ಆದರೆ ಶಿವಕುಮಾರ್ ಅವರು ರಸ್ತೆಗಳ ಉತ್ತಮ ನಿರ್ವಹಣೆ, ಭಾರಿ ವಾಹನಗಳು ಹಗಲಿನಲ್ಲಿ ಹೊರವರ್ತುಲ ರಸ್ತೆಗಳಿಗೆ ಬಾರದಂತೆ ನೋಡಿಕೊಳ್ಳುವುದು, ರಸ್ತೆಯಲ್ಲಿ ಪಾರ್ಕಿಂಗ್‌ ಕಡ್ಡಾಯವಾಗಿ ನಿಷೇಧ ಮಾಡಲು ಅಧಿಕಾರಿಗಳಿಗೆ ಸಲಹೆ ನೀಡಿದ್ದರು.

ಒಆರ್‌ಆರ್‌ಸಿಎ ಬೇಡಿಕೆಗಳು

1) ಬೆಳಿಗ್ಗೆ 7ರಿಂದ ರಾತ್ರಿ 10ವರೆಗೆ ಹೊರವರ್ತುಲ ರಸ್ತೆಯಲ್ಲಿ ಭಾರಿ ವಾಹನಗಳನ್ನು ನಿರ್ಬಂಧಿಸಬೇಕು.

2) ವರ್ತೂರು ಮತ್ತು ಪಣತ್ತೂರು ಸುತ್ತಮುತ್ತಲ ಪ್ರದೇಶಗಳ ನಿವಾಸಿಗಳಿಗೆ ಮೂಲಸೌಕರ್ಯ ಒದಗಿಸಲು ಕಾರ್ಯಪಡೆ ರಚಿಸಬೇಕು.

3) ಮೆಟ್ರೊ ಜಾಲವನ್ನು ಶೀಘ್ರವಾಗಿ ಕಲ್ಪಿಸಬೇಕು ಮತ್ತು ಮೆಟ್ರೊ ಫೀಡರ್‌ ಸೇವೆ ಒದಗಿಸಬೇಕು.

4) ಎಲ್ಲ ರಸ್ತೆಗಳಲ್ಲಿ ಅಕ್ರಮ ಪಾರ್ಕಿಂಗ್‌ ನಿಷೇಧಿಸಬೇಕು. ಸೇವಾ ರಸ್ತೆಗಳ ಒತ್ತುವರಿ ತೆರವು ಮಾಡಬೇಕು.

5) ನವೆಂಬರ್‌ ಒಳಗೆ ರಸ್ತೆ ಗುಂಡಿಗಳನ್ನು ಮುಚ್ಚಬೇಕು

ಈ ಐದು ಅಂಶಗಳ ಬೇಡಿಕೆಯ ಮನವಿಯನ್ನು ಒಆರ್‌ಆರ್‌ಸಿಎ ಮತ್ತೊಮ್ಮೆ ಉಪ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದೆ. ಇದೀಗ ನೂರು ದಿನಗಳು ಕಳೆದಿದ್ದು ಭರವಸೆ ಭರವಸೆಯಾಗಿಯೇ ಉಳಿದಿದೆ.

    ಹಂಚಿಕೊಳ್ಳಲು ಲೇಖನಗಳು