logo
ಕನ್ನಡ ಸುದ್ದಿ  /  ಕರ್ನಾಟಕ  /  Magadi News; ಬೇಟೆ ಹುಡುಕಿ ಬೀದಿಗಿಳಿದ ಮೂರು ಚಿರತೆಗಳ ಪೇಟೆ ಸಂಚಾರ ಸಿಸಿ ಕ್ಯಾಮೆರಾದಲ್ಲಿ ದಾಖಲು, ಆತಂಕದಲ್ಲಿ ಬೀದಿಗಿಳಿಯದ ಜನ

Magadi News; ಬೇಟೆ ಹುಡುಕಿ ಬೀದಿಗಿಳಿದ ಮೂರು ಚಿರತೆಗಳ ಪೇಟೆ ಸಂಚಾರ ಸಿಸಿ ಕ್ಯಾಮೆರಾದಲ್ಲಿ ದಾಖಲು, ಆತಂಕದಲ್ಲಿ ಬೀದಿಗಿಳಿಯದ ಜನ

Umesh Kumar S HT Kannada

Aug 31, 2024 10:26 PM IST

google News

ಬೇಟೆ ಹುಡುಕಿ ಬೀದಿಗಿಳಿದ ಮೂರು ಚಿರತೆಗಳ ಪೇಟೆ ಸಂಚಾರ ಸಿಸಿ ಕ್ಯಾಮೆರಾದಲ್ಲಿ ದಾಖಲು

  • 3 Leopards Spotted in Magadi; ರಾಮನಗರ ಜಿಲ್ಲೆಯ ಮಾಗಡಿ ಪಟ್ಟಣದಲ್ಲಿ ಮೂರು ಚಿರತೆಗಳು ಬೇಟೆ ಹುಡುಕಿ ಬೀದಿಗಿಳಿದಿವೆ. ಅವುಗಳ ಪೇಟೆ ಸಂಚಾರ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ಆತಂಕದಲ್ಲಿ ಜನ ಬೀದಿಗೆ ಇಳಿದಿಲ್ಲ. ಚಿರತೆಗಳ ಸೆರೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಪ್ರಯತ್ನಿಸಿದ್ದಾರೆ. 

ಬೇಟೆ ಹುಡುಕಿ ಬೀದಿಗಿಳಿದ ಮೂರು ಚಿರತೆಗಳ ಪೇಟೆ ಸಂಚಾರ ಸಿಸಿ ಕ್ಯಾಮೆರಾದಲ್ಲಿ ದಾಖಲು
ಬೇಟೆ ಹುಡುಕಿ ಬೀದಿಗಿಳಿದ ಮೂರು ಚಿರತೆಗಳ ಪೇಟೆ ಸಂಚಾರ ಸಿಸಿ ಕ್ಯಾಮೆರಾದಲ್ಲಿ ದಾಖಲು

ಮಾಗಡಿ: ರಾಮನಗರ ಜಿಲ್ಲೆಯ ಭಾಗವಾಗಿರುವ ಮಾಗಡಿಯಲ್ಲಿ ಚಿರತೆಗಳು ಕಾಣಿಸಿಕೊಂಡಿದ್ದು, ಅವುಗಳ ಸಂಚಾರ ಸಿಸಿ ಕ್ಯಾಮೆರಾಗಳಲ್ಲಿ ದಾಖಲಾಗಿದೆ. ಕಳೆದ ಎರಡು ಮೂರು ದಿನಗಳ ಅವಧಿಯಲ್ಲಿ ಈ ಚಿರತೆಗಳು ರಾತ್ರಿ ಹೊತ್ತು ನಗರದಲ್ಲಿ ಕಂಡುಬಂದಿದ್ದು, ನಗರವಾಸಿಗಳ ಆತಂಕ ಹೆಚ್ಚಿಸಿದೆ. ಸಾಧ್ಯವಾದಷ್ಟೂ ರಾತ್ರಿ ಸಂಚಾರ ಕಡಿಮೆ ಮಾಡಿ ಎಂದು ಅರಣ್ಯ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಚಿರತೆಗಳು ಪಟ್ಟಣಕ್ಕೆ ಆಹಾರ ಅರಸಿಕೊಂಡುಬಂದಿರುವ ಸಾಧ್ಯತೆ ಇದ್ದು, ಸಾಕುಪ್ರಾಣಿಗಳನ್ನು ಹೊರಗೆ ಬಿಡದಂತೆ ಅಧಿಕಾರಿಗಳು ಸಾರ್ವಜನಿಕರನ್ನು ಎಚ್ಚರಿಸಿದ್ದಾರೆ.

ಕ್ಯಾಮೆರಾ ಕಣ್ಣಿಗೆ ಸಿಕ್ಕ ಮೂರು ಚಿರತೆಗಳು

ಆಹಾರ ಆರಿಸಿ ಪಟ್ಟಣಕ್ಕೆ ಒಂದಲ್ಲ ಮೂರು ಚಿರತೆಗಳು ಬಂದಿರುವುದು ಕ್ಯಾಮೆರಾ ಕಣ್ಣಿಗೆ ಸೆರೆ ಸಿಕ್ಕಿವೆ. ಸಿಸಿ ಕ್ಯಾಮೆರಾದಲ್ಲಿ ಚಿರತೆ ಓಡಾಡುವ ದೃಶ್ಯ ಸೆರೆಯಾಗಿದ್ದು, ನಾಗರಿಕರಲ್ಲಿ ಆತಂಕ ಮೂಡಿಸಿದೆ.

ಎರಡು ದಿನಗಳಿಂದ ಮಾಗಡಿ ಪಟ್ಟಣದಲ್ಲಿ ಚಿರತೆ ಹಾವಳಿ ಕಂಡುಬಂದಿದ್ದು, ಮಾಗಡಿ ಪಟ್ಟಣದ ಬಾಗೇಗೌಡರ ಬಡಾವಣೆ ಹಾಗೂ 13ನೇ ವಾರ್ಡಿನಲ್ಲಿ ಚಿರತೆಗಳು ಕಾಣಸಿಕ್ಕಿವೆ. ಇವುಗಳು ಆಹಾರ ಅರಸಿ ಮನೆಗಳ ಹತ್ತಿರವೇ ಸುಳಿದಾಡುತ್ತಿವೆ. ಇದು ಜನರ ಕಳವಳ ಹೆಚ್ಚಿಸಿವೆ. ನಿನ್ನೆ ರಾತ್ರಿ (ಆಗಸ್ಟ್ 30) 13ನೇ ವಾರ್ಡಿನಲ್ಲಿ ಮೂರು ಚಿರತೆ ಒಂದೇ ಕಡೆ ಸಾಕು ಪ್ರಾಣಿಯನ್ನು ತಿನ್ನಲು ಹೊಂಚು ಹಾಕಿದ್ದ ದೃಶ್ಯ ಅಲ್ಲಿದ್ದ ಮನೆಯ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಈ ವಿಡಿಯೋ ವೈರಲ್ ಆಗಿದ್ದು, ಜನರಲ್ಲಿ ಕಳವಳ ಹೆಚ್ಚಿಸಿದೆ.

ಚಿರತೆ ಸೆರೆ ಹಿಡಿಯಲು ಬೋನು ಇಟ್ಟ ಅರಣ್ಯ ಇಲಾಖೆ

ಸಿಸಿಟಿವಿ ವಿಡಿಯೋ ದೃಶ್ಯ ಜನರ ಆತಂಕ ಹೆಚ್ಚಿಸಿದ್ದು ಆ ಮೂರು ಚಿರತೆಗಳನ್ನು ಕೂಡಲೇ ಸೆರೆಹಿಡಿಯಬೇಕು ಎಂದು ಜನ ಆಗ್ರಹಿಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಇದಕ್ಕೆ ಸ್ಪಂದಿಸಿ ಕೂಡಲೇ ಕಾರ್ಯಪ್ರವೃತ್ತರಾಗಿದ್ದಾರೆ. ಇದಕ್ಕಾಗಿ ಬೋನು ಇಟ್ಟಿರುವ ಅಧಿಕಾರಿಗಳು, ರಾತ್ರಿ ವೇಳೆ ನಾಗರಿಕರು ಓಡಾಡುವಾಗ ಎಚ್ಚರದಿಂದ ಇರುವಂತೆ ತಿಳಿಸಿದ್ದಾರೆ.

ಮಾಗಡಿಯ ಬಾಗೇಗೌಡರ ಬಡಾವಣೆಯಲ್ಲಿ ಚಿರತೆ ಸೆರೆಗಾಗಿ ಬೋನನ್ನು ಇರಿಸಲಾಗಿದೆ. ಚಿರತೆ ಓಡಾಡಿದ್ದ ಬಡಾವಣೆಗಳಲ್ಲಿ ರಾತ್ರಿ ಸಮಯದಲ್ಲಿ ಸಿಬ್ಬಂದಿ ಗಸ್ತು ತಿರುಗಿ ಚಿರತೆ ಕಾಣಿಸಿಕೊಂಡರೆ ಪಟಾಕಿ ಹೊಡೆದು ಓಡಿಸುವ ಕೆಲಸ ಮಾಡಲಾಗುತ್ತದೆ. ಆದರೆ ಚಿರತೆಗಳನ್ನು ಸೆರೆಹಿಡಿಯುವುದು ಸಾಧ್ಯವಾಗುವುದಿಲ್ಲ. ಒಂದೊಮ್ಮೆಅವು ಬೋನಿಗೆ ಬಿದ್ದರಷ್ಟೆ ಸೆರೆಹಿಡಿಯಬಹುದು. ಇಲ್ಲದಿದ್ದರೆ, ಅರವಳಿಕೆ ತಜ್ಞರು ಅವಶ್ಯಕವಾಗಿ ಬೇಕಾಗಿದ್ದು ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಗಮನಹರಿಸಿದ್ದಾಗಿ ಸ್ಥಳೀಯರು ತಿಳಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ