logo
ಕನ್ನಡ ಸುದ್ದಿ  /  ಕರ್ನಾಟಕ  /  ಸೆ 15 ರಿಂದ ಡಿಜಿಟಲ್ ಪಾಸ್ ತೋರಿಸಿ ಬಿಎಂಟಿಸಿಯಲ್ಲಿ ಪ್ರಯಾಣಿಸಿ; ಬಿಎಂಟಿಸಿ ಡಿಜಿಟಲ್ ಪಾಸ್ ಖರೀದಿ ತುಂಬ ಸುಲಭ, ಸಿಂಪಲ್ ಸ್ಟೆಪ್ಸ್ ಹೀಗಿದೆ

ಸೆ 15 ರಿಂದ ಡಿಜಿಟಲ್ ಪಾಸ್ ತೋರಿಸಿ ಬಿಎಂಟಿಸಿಯಲ್ಲಿ ಪ್ರಯಾಣಿಸಿ; ಬಿಎಂಟಿಸಿ ಡಿಜಿಟಲ್ ಪಾಸ್ ಖರೀದಿ ತುಂಬ ಸುಲಭ, ಸಿಂಪಲ್ ಸ್ಟೆಪ್ಸ್ ಹೀಗಿದೆ

Umesh Kumar S HT Kannada

Aug 30, 2024 10:01 PM IST

google News

ಬೆಂಗಳೂರಿನಲ್ಲಿ ಸೆ 15 ರಿಂದ ಡಿಜಿಟಲ್ ಪಾಸ್ ತೋರಿಸಿ ಬಿಎಂಟಿಸಿಯಲ್ಲಿ ಪ್ರಯಾಣಿಸಿ (ಕಡತ ಚಿತ್ರ)

  • How to get BMTC Digital Pass; ಬೆಂಗಳೂರಿನಲ್ಲಿ ಸೆ 15 ರಿಂದ ಡಿಜಿಟಲ್ ಪಾಸ್ ತೋರಿಸಿ ಬಿಎಂಟಿಸಿಯಲ್ಲಿ ಪ್ರಯಾಣಿಸಿ. ಹೌದು ಬಿಎಂಟಿಸಿ ಇದನ್ನು ದೃಢೀಕರಿಸಿದ್ದು, ದೈನಿಕ, ಸಾಪ್ತಾಹಿಕ, ಮಾಸಿಕ ಪಾಸ್‌ಗಳನ್ನು ಡಿಜಿಟಲ್‌ ಪಾಸ್‌ಗಳನ್ನಾಗಿ ಮಾಡುತ್ತಿರುವುದಾಗಿ ಹೇಳಿದೆ. ಡಿಜಿಟಲ್ ಪಾಸ್ ಖರೀದಿಸುವುದು ಹೇಗೆ? ಅದರ ಸಿಂಪಲ್‌ ಸ್ಟೆಪ್ಸ್ ಹೀಗಿದೆ.

ಬೆಂಗಳೂರಿನಲ್ಲಿ ಸೆ 15 ರಿಂದ ಡಿಜಿಟಲ್ ಪಾಸ್ ತೋರಿಸಿ ಬಿಎಂಟಿಸಿಯಲ್ಲಿ ಪ್ರಯಾಣಿಸಿ (ಕಡತ ಚಿತ್ರ)
ಬೆಂಗಳೂರಿನಲ್ಲಿ ಸೆ 15 ರಿಂದ ಡಿಜಿಟಲ್ ಪಾಸ್ ತೋರಿಸಿ ಬಿಎಂಟಿಸಿಯಲ್ಲಿ ಪ್ರಯಾಣಿಸಿ (ಕಡತ ಚಿತ್ರ) (BMTC)

ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರಿನ ಸಾರಿಗೆ ಸಂಪರ್ಕದ ಪ್ರಮುಖ ಸಂಸ್ಥೆಯಾಗಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಸೆಪ್ಟೆಂಬರ್ 15 ರಿಂದ ದೈನಂದಿನ, ಸಾಪ್ತಾಹಿಕ ಮತ್ತು ಮಾಸಿಕ ಪಾಸ್‌ಗಳ ವಿತರಣೆಗಾಗಿ ಸಂಪೂರ್ಣ ಡಿಜಿಟಲ್ ಮೋಡ್‌ಗೆ ಪರಿವರ್ತನೆಗೊಳ್ಳಲು ಸಜ್ಜಾಗಿದೆ. ಬಿಎಂಟಿಸಿ ಅಧಿಕಾರಿಗಳ ಪ್ರಕಾರ, ಪೇಪರ್‌ಲೆಸ್ ಮತ್ತು ಸಂಪರ್ಕರಹಿತ ಪಾಸ್ ಖರೀದಿಯ ಅನುಭವ ಕ್ರಮವು ಜಗಳ-ಮುಕ್ತ, ನಗದು ರಹಿತ, ಪ್ರಯಾಣಿಕರ ಅನುಕೂಲವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.

ಪ್ರಸ್ತುತ, ಬಿಎಂಟಿಸಿಯು ಪೂರ್ವ-ಮುದ್ರಿತ ಮತ್ತು ಡಿಜಿಟಲ್ ಸ್ವರೂಪಗಳಲ್ಲಿ ಪ್ರಯಾಣಿಕರಿಗೆ ಪಾಸ್‌ಗಳನ್ನು ವಿತರಿಸುತ್ತಿದೆ. ಇನ್ನು ಮುಂದೆ ಅಂದರೆ ಸೆಪ್ಟೆಂಬರ್ 15 ರಿಂದ ಪ್ರಯಾಣಿಕರು ತಮ್ಮ ಪಾಸ್‌ಗಳನ್ನು ಟುಮೋಕ್‌ (Tummoc) ಮೊಬೈಲ್ ಅಪ್ಲಿಕೇಶನ್‌ನ ಮೂಲಕ ಪ್ರತ್ಯೇಕವಾಗಿ ಖರೀದಿಸಬೇಕಾಗುತ್ತದೆ. ಇದು ಬಹಳ ಸುಲಭವಾಗಿದ್ದು, ಮೊಬೈಲ್‌ನಲ್ಲೇ ಎಲ್ಲವನ್ನೂ ಮಾಡಬಹುದಾಗಿದೆ.

ಕಂಡಕ್ಟರ್‌ಗಳು ನಿರ್ವಹಿಸುವ ಎಲೆಕ್ಟ್ರಾನಿಕ್ ಟಿಕೆಟಿಂಗ್ ಯಂತ್ರದ ಮೂಲಕ ದಿನದ ಪಾಸ್‌ಗಳು ಇನ್ನೂ ಲಭ್ಯವಿರುತ್ತವೆ. ಆದರೆ ಟುಮೋಕ್‌ ಅಪ್ಲಿಕೇಶನ್ ಮೂಲಕ ಡಿಜಿಟಲ್ ಮೋಡ್ ಪ್ರಮಾಣಿತವಾಗುತ್ತದೆ ಎಂದು ಬಿಎಂಟಿಸಿ ಹೇಳಿದೆ.

ಬಿಎಂಟಿಸಿ ಡಿಜಿಟಲ್ ಪಾಸ್ ಖರೀದಿ ತುಂಬ ಸುಲಭ, ಸಿಂಪಲ್ ಸ್ಟೆಪ್ಸ್ ಹೀಗಿದೆ

1) ಡಿಜಿಟಲ್ ಪಾಸ್ ಪಡೆಯಲು ಬೇಕಾದ ಟುಮೋಕ್ (Tummoc) ಅಪ್ಲಿಕೇಶನ್ ಅನ್ನು ಪ್ರಯಾಣಿಕರು Google Play Store ನಿಂದ ಡೌನ್‌ಲೋಡ್ ಮಾಡಬೇಕು

2) ಆಪ್‌ ಡೌನ್‌ಲೋಡ್ ಆದ ಬಳಿಕ ಅದರಲ್ಲಿ ಪ್ರಯಾಣಿಕರು ತಮ್ಮ ವಿವರಗಳನ್ನು ದಾಖಲಿಸಿ ನೋಂದಾಯಿಸಿಕೊಳ್ಳಬೇಕು.

3) ನಂತರ, ತಮ್ಮ ಆದ್ಯತೆಯ ಪಾಸ್ (ದೈನಂದಿನ, ಸಾಪ್ತಾಹಿಕ ಅಥವಾ ಮಾಸಿಕ) ಆಯ್ಕೆಮಾಡಿ, ಅಗತ್ಯ ವಿವರಗಳನ್ನು ಭರ್ತಿ ಮಾಡಬೇಕು.

4) ಫೋಟೋವನ್ನು ಅಪ್‌ಲೋಡ್ ಮಾಡಿ ಮತ್ತುಪಾಸ್ ಆಯ್ಕೆಯನ್ನು ದೃಢೀಕರಿಸಬೇಕು.

5) ಪಾವತಿಯು ಯಶಸ್ವಿಯಾಗಿ ಪೂರ್ಣಗೊಂಡ ನಂತರ, ಡಿಜಿಟಲ್ ಪಾಸ್‌ ಲಭ್ಯವಾಗುತ್ತದೆ.

ಬಿಎಂಟಿಸಿ ಬಸ್ ಪ್ರಯಾಣದ ವೇಳೆ ಇದು ನೆನಪಿರಲಿ

ಪ್ರಯಾಣಿಕರು ಪ್ರಯಾಣಿಸುವಾಗ ಆಯ್ದ ಗುರುತಿನ ಚೀಟಿಯನ್ನು ಕೊಂಡೊಯ್ಯಬೇಕಾಗುತ್ತದೆ ಮತ್ತು ತಮ್ಮ ಮೊಬೈಲ್ ಫೋನ್ ಬಳಸಿ ಬಸ್‌ನಲ್ಲಿ ಅಂಟಿಸಲಾದ QR ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ತಮ್ಮ ಪಾಸ್ ಅನ್ನು ಪರಿಶೀಲಿಸಬಹುದು. ವಾಹನಗಳಲ್ಲಿ ಅಂಟಿಸಿರುವ ಕ್ಕೂ ಆರ್ ಕೋಡ್‌ನ್ನು ಮೊಬೈಲ್ ಮೂಲಕ ಸ್ಕ್ಯಾನ್ ಮಾಡಿ, ಪಾಸಿನ ಮಾನ್ಯತೆಯನ್ನು ಚಾಲನಾ ಸಿಬ್ಬಂದಿಗಳಿಗೆ ತೋರಿಸಬೇಕು.

ಹೆಚ್ಚಿನ ಮಾಹಿತಿಗೆ mybmtc.karnataka.gov.in ವೆಬ್‌ಸೈಟ್ ಗಮನಿಸಬಹುದು. ಅಥವಾ ಬೆಂಗಳೂರಿನ ಬಿಎಂಟಿಸಿ ಕಚೇರಿಯನ್ನು ಸಂರ್ಪಕ ಮಾಡಬಹು ಎಂದು ಬಿಎಂಟಿಸಿ ಹೇಳಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ