Bengaluru City: ಬೆಂಗಳೂರಿನ ಬಹುತೇಕ ಬಡಾವಣೆಗಳಲ್ಲಿ ಇಂದು ಕಾವೇರಿ ನೀರು ಸ್ಥಗಿತ; ಯಾಕೆ, ಎಲ್ಲಿಲ್ಲಿ ನೀರು ವ್ಯತ್ಯಯ, ಇಲ್ಲಿದೆ ಮಾಹಿತಿ
Jul 13, 2023 09:42 AM IST
ಬೆಂಗಳೂರಿನಲ್ಲಿ ಇಂದು ಕಾವೇರಿ ನೀರು ಸ್ಥಗಿತ
- Cauvery Water supply disruption: ದುರಸ್ತಿ ಕಾಮಗಾರಿ ಸಲುವಾಗಿ ಜುಲೈ 13 ರಂದು ಬೆಂಗಳೂರಿಗೆ ನೀರು ಸ್ಥಗಿತವಾಗಲಿದೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬೆಂಗಳೂರು ಜಲಮಂಡಳಿ) ಮಾಹಿತಿ ನೀಡಿದೆ.
ಬೆಂಗಳೂರು: ಇಂದು (ಜುಲೈ 13) ನಗರದ ಹಲವೆಡೆ ದುರಸ್ತಿ ಕಾರ್ಯಗಳು ನಡೆಯಲಿರುವ ಕಾರಣ, ಬೆಂಗಳೂರು ನಗರದ ಕೆಲವು ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ತೊಂದರೆ ಉಂಟಾಗಲಿದೆ. ಕಾವೇರಿ 1, ಮತ್ತು 2ನೇ ಹಂತದಲ್ಲಿ ಪಂಪ್ ಹೌಸ್‌ಗಳಲ್ಲಿ ದುರಸ್ತಿ ಕಾಮಗಾರಿ ಮತ್ತು ಕಾವೇರಿ 4ನೇ ಹಂತದಲ್ಲಿ ಎರಡು ಪಂಪ್ಗಳ ದುರಸ್ತಿ ಕಾರ್ಯ ನಡೆಯಲಿದೆ. ಹಾಗಾಗಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ತಿಳಿಸಿದೆ.
ಜಲರೇಚಕ ಯಂತ್ರಗಾರಗಳ ದುರಸ್ತಿ ಕಾರ್ಯ ಹಾಗೂ ಕವಾಟಗಳ ದುರಸ್ತಿ ಕಾಮಗಾರಿ ನಡೆಯುವ ಸಲುವಾಗಿ ಕಾವೇರಿ ಹಂತದ 1ನೇ ಘಟ್ಟದ 2 ಪಂಪ್ ಹೌಸ್ಗಳನ್ನು ಸ್ಥಗಿತಗೊಳಿಸಲಾಗಿದೆ. ಈ ಕಾರಣದಿಂದ ಜುಲೈ 13ರಂದು ದಿನವಿಡೀ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಹಾಗಾಗಿ ಸಾರ್ವಜನಿಕರು, ಜಲಮಂಡಳಿ ಗ್ರಾಹಕರು ನೀರಿಗೆ ಮುಂಜಾಗ್ರತಾ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಬಿಡಬ್ಲ್ಯುಎಸ್ಎಸ್ಬಿ ಮಾಹಿತಿ ನೀಡಿದೆ.
ಎಲ್ಲಿಲ್ಲಿ ನೀರು ಪೂರೈಕೆಗೆ ವ್ಯತ್ಯಯ
ನೇತಾಜಿನಗರ, ಕೆಪಿ ಅಗ್ರಹಾರ, ನ್ಯೂ ಬಿನ್ನಿ ಲೇಔಟ್, ರಾಘವೇಂದ್ರ ಕಾಲೋನಿ, ಟಿಪ್ಪುನಗರ, ಆನಂದಪುರ, ಚಾಮರಾಜಪೇಟೆ, ರಾಮಚಂದ್ರ ಅಗ್ರಹಾರ, ಆದರ್ಶನಗರ, ಕನ್ನಿಯಾರ್ ಕಾಲೋನಿ, ನಂಜಾಂಬ ಅಗ್ರಹಾರ, ವಾಲ್ಮೀಕಿನಗರ, ಅಂಜನಪ್ಪ ಗಾರ್ಡನ್, ಬಿನ್ನಿ ಲೇಔಟ್, ವಿದ್ಯಾಪೀಠ, ಶ್ರೀನಿವಾಸನಗರ, ಐಟಿಐ ಲೇಔಟ್, ಕೇಂಬ್ರಿಡ್ಜ್ ಲೇಔಟ್, ಗೌತಂಪುರ, ರಾಜೇಂದ್ರ ನಗರ, ರಾಜೇಂದ್ರ ನಗರ ಸ್ಲಂ, ವೆಂಕಟಸ್ವಾಮಿ ರೆಡ್ಡಿ ಲೇಔಟ್, ಮಲ್ಲಪ್ಪ ರೆಡ್ಡಿ ಲೇಔಟ್, ಗುರುರಾಜ ಲೇಔಟ್.
ಅಷ್ಟೇ ಅಲ್ಲ, ಚಿಕ್ಕಲಸಂದ್ರ, ಗೌಡನಪಾಳ್ಯ, ಮಂಜುನಾಥನಗರ, ಸಾರ್ವಭೌಮ ನಗರ, ಉದಯನಗರ, ಉತ್ತರಹಳ್ಳಿ, ರಾಮಾಂಜನೇಯನಗರ, ಪಿಪಿ ಲೇಔಟ್, ಜೆಕೆ, ಅರೆಹಳ್ಳಿ ಸೋಮೇಶ್ವರ ನಗರ, ಸಾರಕ್ಕಿ, ಹೊಂಬೇಗೌಡ ನಗರ, ಸಿದ್ದಾಪುರ, ವಿಲ್ಸನ್ ಗಾರ್ಡನ್, ಲಕ್ಕಸದ್ರ, ಜೆಪಿ ನಗರ, ಕೆಂಗೇರಿ, ವಿಜಯನಗರ, ಗೋವಿಂದರಾಜನಗರ, ಲಗ್ಗೆರೆ, ಕಾಮಾಕ್ಷಿಪಾಳ್ಯ, ಪೀಣ್ಯ, ದಾಸರಹಳ್ಳಿ, ಜಾಲಹಳ್ಳಿ, ಯಲಹಂಕ, ಹೆಬ್ಬಾಳ, ಮಹಾಲಕ್ಷ್ಮಿ ಲೇಔಟ್, ಬಸವೇಶ್ವರನಗರ ಮತ್ತು ನಂದಿನಿ ಲೇಔಟ್ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.