logo
ಕನ್ನಡ ಸುದ್ದಿ  /  ಕರ್ನಾಟಕ  /  Thoogudeepa Darshan; ಚಿತ್ರದುರ್ಗ ರೇಣುಕಾಸ್ವಾಮಿ ಹತ್ಯೆ ಕೇಸ್‌, ಜಾಮೀನು ಅರ್ಜಿ ಸಲ್ಲಿಸಲು ಕೊನೆಗೂ ತೂಗುದೀಪ ದರ್ಶನ್ ನಿರ್ಧಾರ

Thoogudeepa Darshan; ಚಿತ್ರದುರ್ಗ ರೇಣುಕಾಸ್ವಾಮಿ ಹತ್ಯೆ ಕೇಸ್‌, ಜಾಮೀನು ಅರ್ಜಿ ಸಲ್ಲಿಸಲು ಕೊನೆಗೂ ತೂಗುದೀಪ ದರ್ಶನ್ ನಿರ್ಧಾರ

Umesh Kumar S HT Kannada

Sep 07, 2024 07:07 AM IST

google News

ಚಿತ್ರದುರ್ಗ ರೇಣುಕಾಸ್ವಾಮಿ (ಬಲ ಚಿತ್ರ) ಹತ್ಯೆ ಕೇಸ್‌, ಜಾಮೀನು ಅರ್ಜಿ ಸಲ್ಲಿಸಲು ಕೊನೆಗೂ ತೂಗುದೀಪ ದರ್ಶನ್ (ಎಡ ಚಿತ್ರ) ನಿರ್ಧಾರ ಮಾಡಿದ್ದು, ವಕಾಲತ್ತು ಅರ್ಜಿಗೆ ಸಹಿ ಹಾಕಿದ್ದಾರೆ.

  • Chitradurga Renukaswamy murder case; ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಅರ್ಜಿ ಸಲ್ಲಿಸಲು ಕೊನೆಗೂ ದರ್ಶನ್ ನಿರ್ಧಾರ ಮಾಡಿದ್ದಾರೆ. ಹೀಗಾಗಿ ವಕಾಲತ್ತು ಅರ್ಜಿಗೆ ಸಹಿ ಹಾಕಿದ್ದು, ಜಾಮೀನು ಅರ್ಜಿ ಸಲ್ಲಿಕೆಗೆ ಸಿದ್ಧತೆ ನಡೆದಿದೆ. ಸೋಮವಾರ (ಸೆ.9) ನ್ಯಾಯಾಂಗ ಬಂಧನದ ಅವಧಿ ಅಂತ್ಯವಾಗಲಿದೆ. (ವರದಿ - ಎಚ್. ಮಾರುತಿ, ಬೆಂಗಳೂರು)

ಚಿತ್ರದುರ್ಗ ರೇಣುಕಾಸ್ವಾಮಿ (ಬಲ ಚಿತ್ರ) ಹತ್ಯೆ ಕೇಸ್‌, ಜಾಮೀನು ಅರ್ಜಿ ಸಲ್ಲಿಸಲು ಕೊನೆಗೂ ತೂಗುದೀಪ ದರ್ಶನ್ (ಎಡ ಚಿತ್ರ) ನಿರ್ಧಾರ ಮಾಡಿದ್ದು, ವಕಾಲತ್ತು ಅರ್ಜಿಗೆ ಸಹಿ ಹಾಕಿದ್ದಾರೆ.
ಚಿತ್ರದುರ್ಗ ರೇಣುಕಾಸ್ವಾಮಿ (ಬಲ ಚಿತ್ರ) ಹತ್ಯೆ ಕೇಸ್‌, ಜಾಮೀನು ಅರ್ಜಿ ಸಲ್ಲಿಸಲು ಕೊನೆಗೂ ತೂಗುದೀಪ ದರ್ಶನ್ (ಎಡ ಚಿತ್ರ) ನಿರ್ಧಾರ ಮಾಡಿದ್ದು, ವಕಾಲತ್ತು ಅರ್ಜಿಗೆ ಸಹಿ ಹಾಕಿದ್ದಾರೆ.

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ತೂಗುದೀಪ ಮತ್ತು ಇತರ ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ಸೆಪ್ಟೆಂಬರ್ 9, ಸೋಮವಾರ ಅಂತ್ಯವಾಗಲಿದೆ. ಹಾಗಾಗಿ ದರ್ಶನ್ ಜಾಮೀನು ಕೋರಿ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ ಎಂಬ ಖಚಿತ ಮಾಹಿತಿ ಲಭ್ಯವಾಗಿದೆ.

ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸುಧೀರ್ಘ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ ಬೆನ್ನಲ್ಲೇ ಸೆಪ್ಟೆಂಬರ್ 5ರಂದು ದರ್ಶನ್ ಪತ್ನಿ ವಿಜಯಲಕ್ಷ್ಮೀ ಮತ್ತು ಸಹೋದರ ದಿನಕರ್ ತೂಗುದೀಪ ಅವರು ಬಳ್ಳಾರಿ ಜೈಲಿನಲ್ಲಿರುವ ದರ್ಶನ್ ಅವರನ್ನು ಭೇಟಿ ಮಾಡಿ ಜಾಮೀನು ಅರ್ಜಿ ಕುರಿತು ಚರ್ಚೆ ನಡೆಸಿದ್ದಾರೆ.

ಜಾಮೀನು ಅರ್ಜಿ ಸಲ್ಲಿಸಲು ಕೊನೆಗೂ ತೂಗುದೀಪ ದರ್ಶನ್ ನಿರ್ಧಾರ

ಈ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ದರ್ಶನ್ ಈವರೆಗೂ ಜಾಮೀನು ಕೋರಿ ಅರ್ಜಿ ಸಲ್ಲಿಸಿರಲಿಲ್ಲ. ಆದರೆ ಈ ಬಾರಿ ಜಾಮೀನು ಕೋರಿ ಅರ್ಜಿ ಸಲ್ಲಿಸಲು ನಿರ್ಧರಿಸಿದ್ದಾರೆ. ವಕೀಲರ ಸಲಹೆಯಂತೆ ದರ್ಶನ್ ತಮ್ಮ ಜಾಮೀನು ಅರ್ಜಿಯ ವಕಾಲತ್ತು ನಮೂನೆಗೆ ಸಹಿ ಮಾಡಿ ಕೊಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆರೋಪಪಟ್ಟಿಯ ಪ್ರತಿಯನ್ನು ನ್ಯಾಯಾಲಯದಿಂದ ಪಡೆದ ಬಳಿಕ ಜಾಮೀನು ಕೋರಿ ಅರ್ಜಿ ಸಲ್ಲಿಸಲಾಗುತ್ತದೆ ಎಂದು ದರ್ಶನ್ ಪರ ವಕೀಲರು ತಿಳಿಸಿದ್ದಾರೆ.

ಈ ಮಧ್ಯೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಐದನೇ ಆರೋಪಿಯಾಗಿರುವ ನಂದೀಶ್ ಕುಟುಂಬದವರು ವಕೀಲರನ್ನು ನೇಮಿಸಿಕೊಳ್ಳಲು ಪರದಾಡುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅವರ ಕುಟುಂಬದ ಸದಸ್ಯರು ಇತ್ತೀಚೆಗೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರನ್ನು ಭೇಟಿ ಮಾಡಿ, ವಕೀಲರನ್ನು ನೇಮಿಸಿಕೊಳ್ಳಲು ಹಣಕಾಸಿನ ನೆರವು ನೀಡುವಂತೆ ಮನವಿಮಾಡಿಕೊಂಡಿದ್ದಾರೆ.

ನಂದೀಶ್ ಕುಟುಂಬದಿಂದ ನೆರವು ಯಾಚನೆ

ಬಡ ಕುಟುಂಬದ ನಮಗೆ ನಂದೀಶ್ ದುಡಿಮೆ ಆಧಾರವಾಗಿತ್ತು. ಈಗ ಅದೂ ಇಲ್ಲವಾಗಿದೆ. ನಂದೀಶ್‌ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದು ಚಿಕಿತ್ಸೆ ಕೊಡಿಸಲು ಸಾಧ್ಯವಾಗದ ಪರಿಸ್ಥಿತಿ ಇದೆ. ನಂದೀಶ್‌ಗೆ ಜಾಮೀನು ಕೊಡಿಸಲು ವಕೀಲರನ್ನು ನೇಮಿಸಿಕೊಳ್ಳಲು ಆರ್ಥಿಕ ಚೈತನ್ಯವಿಲ್ಲ. ಆದ್ದರಿಂದ ನನ್ನ ತಮ್ಮನನ್ನು ಜೈಲಿನಿಂದ ಬಿಡುಗಡೆ ಮಾಡಿಸಿಕೊಡಿ ಎಂದು ನಂದೀಶ್ ಅಕ್ಕ ನಂದಿನಿ ಅವರು ವಿಜಯಲಕ್ಷ್ಮೀ ಅವರನ್ನು ಕೇಳಿ ಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ವಿಜಯಲಕ್ಷ್ಮೀ ಅವರ ಸೂಚನೆಯಂತೆ ದರ್ಶನ್ ಆಪ್ತರು ನಂದೀಶ್ ಕುಟುಂಬದ ಸದಸ್ಯರನ್ನು ಸಂಪರ್ಕಿಸಿ ಮಾಹಿತಿ ಪಡೆದು, ವಕೀಲರ ನೇಮಕಕ್ಕೆ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ.

ಆರೋಪ ಪಟ್ಟಿ ಸಲ್ಲಿಸುವುದಕ್ಕೂ ಮೊದಲೇ ಆರೋಪಿ ನಂಬರ್ ಒನ್ ಆಗಿರುವ ಪವಿತ್ರ ಗೌಡ ಮತ್ತು ಇತರ ಆರೋಪಿಗಳು ಜಾಮೀನು ಅರ್ಜಿ ಸಲ್ಲಿಸಿದ್ದರಾದರೂ ತಿರಸ್ಕೃತವಾಗಿದ್ದವು. ಈ ಭೀಕರ ಹತ್ಯೆ ಪ್ರಕರಣದಲ್ಲಿ ಆರೋಪಿ ನಂಬರ್ 2 ಆಗಿರುವ ದರ್ಶನ್ ಅವರ ಪಾತ್ರ ಸ್ಪಷ್ಟವಾಗಿ ಗೋಚರಿಸುತ್ತಿದೆ. ಅವರಿಗೆ ಜಾಮೀನು ಸಿಗಲಿದೆಯೇ ಎಂದು ಚರ್ಚೆಯೂ ಆರಂಭವಾಗಿದೆ.

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಕೇಸ್‌ ಹಿನ್ನೆಲೆ

ಎರಡು ದಿನಗಳ ಹಿಂದಯಷ್ಟೇ ಈ ಪ್ರಕರಣದ ತನಿಖೆ ನಡೆಸಿದ್ದ ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ಪೊಲೀಸರು ದರ್ಶನ್, ಅವರ ಆಪ್ತ ಗೆಳತಿ ಪವಿತ್ರಾಗೌಡ ಸೇರಿದಂತೆ 17 ಮಂದಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ವಿಜಯನಗರ ಎಸಿಪಿ ಚಂದನ್ ನೇತೃತ್ವದಲ್ಲಿ ಈ ಪ್ರಕರಣದ ತನಿಖೆ ನಡೆದಿತ್ತು.

ಪೊಲೀಸರು 3,991 ಪುಟಗಳ ಪ್ರಾಥಮಿಕ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದು ಮೂವರು ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆ, ಎಂಟು ವರದಿಗಳು, 231ಕ್ಕೂ ಹೆಚ್ಚು ಸಾಕ್ಷಾದಾರರ ಹೇಳಿಕೆಗಳ ದೋಷಾರೋಪ ಪಟ್ಟಿ ಇದಾಗಿದೆ.

ನಿರೀಕ್ಷೆಯಂತೆ ಪವಿತ್ರಾಗೌಡ ಮೊದಲ ಆರೋಪಿಯಾಗಿದ್ದರೆ, ದರ್ಶನ್ ಎರಡನೇ ಆರೋಪಿಯಾಗಿದ್ದಾರೆ. ಎಫ್‌ ಎಸ್ ಎಲ್ ವರದಿ, ಡಿ ಎನ್ ಎ ವರದಿ, ಮರಣೋತ್ತರ ಪರೀಕ್ಷಾ ವರದಿ, ಸ್ಥಳ ಮಹಜರು, ಮೊಬೈಲ್ ದತ್ತಾಂಶದ ರಿಟ್ರೀವ್ ಪ್ರಕ್ರಿಯೆಯಲ್ಲಿ ದೊರೆತ ಮಾಹಿತಿಗಳನ್ನೂ ಸೇರಿಸಿ ದೋಷಾರೋಪ ಪಟ್ಟಿ ಸಿದ್ಧಪಡಿಸಲಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ