ರೇಣುಕಾಸ್ವಾಮಿ ಕೊಲೆ ಪ್ರಕರಣ; ನಟ ದರ್ಶನ್‌, ಪವಿತ್ರಾಗೌಡ ಸೇರಿ ಎಲ್ಲ ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ಆಗಸ್ಟ್‌ 28ರವರೆಗೆ ವಿಸ್ತರಣೆ-court news bengaluru court extends judicial custody of actor darshan thoogudeepa and other accused till august 28 mrt ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ರೇಣುಕಾಸ್ವಾಮಿ ಕೊಲೆ ಪ್ರಕರಣ; ನಟ ದರ್ಶನ್‌, ಪವಿತ್ರಾಗೌಡ ಸೇರಿ ಎಲ್ಲ ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ಆಗಸ್ಟ್‌ 28ರವರೆಗೆ ವಿಸ್ತರಣೆ

ರೇಣುಕಾಸ್ವಾಮಿ ಕೊಲೆ ಪ್ರಕರಣ; ನಟ ದರ್ಶನ್‌, ಪವಿತ್ರಾಗೌಡ ಸೇರಿ ಎಲ್ಲ ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ಆಗಸ್ಟ್‌ 28ರವರೆಗೆ ವಿಸ್ತರಣೆ

Darshan Thoogudeepa; ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಿತ್ರ ನಟ ದರ್ಶನ್‌ ತೂಗುದೀಪ, ಪವಿತ್ರಾಗೌಡ ಸೇರಿ ಎಲ್ಲ ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ಆಗಸ್ಟ್‌ 28ರವರೆಗೆ ವಿಸ್ತರಣೆಯಾಗಿದೆ. ಶೀಘ್ರದಲ್ಲೇ ಚಾರ್ಜ್‌ ಶೀಟ್‌ ಸಲ್ಲಿಕೆಯಾಗುವ ನಿರೀಕ್ಷೆ ಇದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. (ವರದಿ- ಎಚ್.ಮಾರುತಿ, ಬೆಂಗಳೂರು)

ರೇಣುಕಾಸ್ವಾಮಿ ಕೊಲೆ ಪ್ರಕರಣ; ನಟ ದರ್ಶನ್‌, ಪವಿತ್ರಾಗೌಡ ಸೇರಿ ಎಲ್ಲ ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ಆಗಸ್ಟ್‌ 28ರವರೆಗೆ ವಿಸ್ತರಣೆಯಾಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣ; ನಟ ದರ್ಶನ್‌, ಪವಿತ್ರಾಗೌಡ ಸೇರಿ ಎಲ್ಲ ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ಆಗಸ್ಟ್‌ 28ರವರೆಗೆ ವಿಸ್ತರಣೆಯಾಗಿದೆ.

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಖ್ಯಾತ ನಟ ದರ್ಶನ್‌ ತೂಗುದೀಪ (Darshan Thoogudeepa) ಮತ್ತು ಅವರ ಸ್ನೇಹಿತೆ ಪವಿತ್ರಾ ಗೌಡ ಮತ್ತು ಇತರ 15 ಮಂದಿಯ ನ್ಯಾಯಾಂಗ ಬಂಧನ ಅವಧಿಯನ್ನು ಬೆಂಗಳೂರಿನ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಆಗಸ್ಟ್‌ 28ರವರೆಗೆ ವಿಸ್ತರಿಸಿದೆ. ದರ್ಶನ್‌ ಸೇರಿದಂತೆ ಎಲ್ಲ ಆರೋಪಿಗಳ ಬಂಧನ ಅವಧಿ ಆಗಸ್ಟ್‌ 14, ಬುಧವಾರಕ್ಕೆ ಅಂತ್ಯವಾಗಿತ್ತು.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕಾಮಾಕ್ಷಿಪಾಳ್ಯ ಪೊಲೀಸರು ಜೂನ್‌ ತಿಂಗಳಲ್ಲೇ ದರ್ಶನ್‌ ಮತ್ತು ಇತರರನ್ನು ಬಂಧಿಸಿದ್ದರು. ಬುಧವಾರ ಇವರೆಲ್ಲರನ್ನೂ ವಿಡಿಯೋ ಕಾನ್ಫರೆನ್ಸ್‌ ಮೂಲಕ ನ್ಯಾಯಾದೀಶರ ಮುಂದೆ ಹಾಜರುಪಡಿಸಲಾಗಿತ್ತು. ಇವರ ಬಂಧನ ಅವಧಿಯನ್ನು ಮುಂದುವರೆಸಬೇಕೆಂದು ಕಾಮಾಕ್ಷಿಪಾಳ್ಯ ಪೊಲೀಸರು ನ್ಯಾಯಾಲಯಕ್ಕೆ ಮನವರಿಕೆ ಕೊಟ್ಟ ನಂತರ ಇವರ ಬಂಧನ ಅವಧಿಯನ್ನು ವಿಸ್ತರಿಸಲಾಗಿದೆ.

ರೇಣುಕಾಸ್ವಾಮಿ ಕೊಲೆ ಕೇಸ್‌; ನಿರ್ಣಾಯಕ ಸಾಕ್ಷ್ಯಗಳ ಸಂಗ್ರಹ

ಈ ಕೊಲೆ ಪ್ರಕರಣದದಲ್ಲಿ ಬಂಧಿತರಾಗಿರುವ ಎಲ್ಲರ ಪಾತ್ರ ಇರುವ ಬಗ್ಗೆ ತನಿಖಾಧಿಕಾರಿಗಳು ಸಾಕಷ್ಟು ಸಾಕ್ಷ್ಯಗಳನ್ನು ಕಲೆ ಹಾಕಿದ್ದಾರೆ ಎಂದು ತಿಳಿದು ಬಂದಿದೆ. ವಿಧಿವಿಜ್ಞಾನ ಪ್ರಯೋಗಾಲಯದ ವರದಿಗಳು ಮತ್ತು ವಿಶ್ಲೇಷಣೆಗಳು, ಮೊಬೈಲ್‌ ಕರೆಗಳ ರೆಕಾರ್ಡ್‌, ಕೊಲೆ ನಡೆದ ಸಂದರ್ಭದಲ್ಲಿ ಆರೋಪಿಗಳು ಧರಿಸಿದ್ದ ಉಡುಪುಗಳು, ಮತ್ತಿತರ ನಿರ್ಣಾಯಕ ಸಾಕ್ಷ್ಯಗಳನ್ನು ಕಲೆ ಹಾಕಲಾಗಿದೆ ಎಂದು ತಿಳಿದು ಬಂದಿದೆ.

ದರ್ಶನ್‌ ಮತ್ತು ಇತರ 12 ಮಂದಿ ಆರೋಪಿಗಳು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಂಧಿಗಳಾಗಿದ್ದರೆ ಇತರ ನಾಲ್ವರು ತುಮಕೂರಿನ ಕಾರಾಗೃಹದಲ್ಲಿದ್ದಾರೆ. ಕಾರ್ತೀಕ್‌, ನಿಖಿಲ್‌ ನಾಯಕ್‌, ಕೇಶವಮೂರ್ತಿ ಮತ್ತು ರವಿಶಂಕರ್‌ ಅವರನ್ನು ಅಪ್ರೂವರ್‌ ಮಾಡುವ ಸಾಧ್ಯತೆಗಳಿವೆ ಎಂದು ಬಲ್ಲ ಮೂಲಗಳು ಖಚಿತಪಡಿಸಿವೆ.

ಹಣಕಾಸಿನ ವ್ಯವಹಾರಕ್ಕೆ ಸಂಬಂಧಪಟ್ಟಂತೆ ನಾವೇ ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ್ದಾಗಿ ಜೂನ್‌ 10ರಂದು ಕಾರ್ತೀಕ್‌, ನಾಯಕ್‌ ಕೇಶವಮೂರ್ತಿ ಮತ್ತು ಅಖಿಲ ಕರ್ನಾಟಕ ದರ್ಶನ್‌ ಅಭಿಮಾನಿಗಳ ಸಂಘದ ಅಧ್ಯಕ್ಷ ರಾಘವೇಂದ್ರ ಅವರು ನ್ಯಾಯಾಲಯದ ಮುಂದೆ ಶರಣಾಗಿದ್ದರು. ಆದರೆ ತನಿಖೆಯನ್ನು ತೀವ್ರಗೊಳಿಸಿದಾಗ ಈ ನಾಲ್ವರು ಸುಳ್ಳು ಹೇಳುತ್ತಿದ್ದಾರೆ ಎನ್ನುವುದು ಖಚಿತವಾಗಿತ್ತು. ನಂತರ ದರ್ಶನ್‌ ಮತ್ತು ಇತರರನ್ನು ಬಂಧಿಸಲಾಗಿತ್ತು.

ಶೀಘ್ರವೇ ಆರೋಪ ಪಟ್ಟಿ ಸಲ್ಲಿಕೆ ಸಾಧ್ಯತೆ

ತನಿಖಾಧಿಕಾರಿಗಳು ಚಾರ್ಜ್‌ ಶೀಟ್‌ ಅನ್ನು ಸಿದ್ದಪಡಿಸಿದ್ದು, ಕೆಲವೇ ದಿನಗಳಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ. ಆದರೆ ಇದುವರೆಗೂ ದರ್ಶನ್‌ ಪರ ವಕೀಲರು ಜಾಮೀನಿಗೆ ಅರ್ಜಿ ಸಲ್ಲಿಸಿಲ್ಲ ಎನ್ನುವುದು ಕುತೂಹಲ ಮೂಡಿಸಿದೆ.

ಪೊಲೀಸರ ಪ್ರಕಾರ ದರ್ಶನ್‌ ಅಭಿಮಾನಿಯೂ ಆಗಿದ್ದ 33 ವರ್ಷದ ರೇಣುಕಾಸ್ವಾಮಿ, ಪವಿತ್ರಾಗೌಡ ಅವರಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದರು. ಇದರು ದರ್ಶನ್‌ಗೆ ಕೋಪ ತರಿಸಿತ್ತು. ಚಿತ್ರದುರ್ಗದಿಂದ ರೇಣುಕಾಸ್ವಾಮಿ ಅವರನ್ನು ಕರೆಯಿಸಿಕೊಂಡು ಅವರ ಹತ್ಯೆ ಮಾಡಲಾಗಿದೆ. ಜೂನ್‌ 9ರಂದು ರೇಣುಕಾಸ್ವಾಮಿ ಅವರ ಶವವನ್ನು ಸುಮನಹಳ್ಳಿಯ ಅಪಾರ್ಟ್‌ ಮೆಂಟ್‌ ಸಮೀಪ ಇರುವ ಮೋರಿಯಲ್ಲಿ ಎಸೆಯಲಾಗಿತ್ತು. ರೇಣುಕಾಸ್ವಾಮಿ ಅವರನ್ನು ಚಿತ್ರದುರ್ಗದಿಂದ ರಾಘವೇಂದ್ರ ಕರೆದುಕೊಂಡು ಬಂದಿದ್ದರು. ರಾಜರಾಜೇಶ್ವರಿ ನಗರದ ಶೆಡ್‌ ವೊಂದರಲ್ಲಿ ರೇಣುಕಾಸ್ವಾಮಿ ಅವರನ್ನು ಕೂಡಿಹಾಕಿ ಹಿಂಸಿಸಿ ಹತ್ಯೆ ಮಾಡಲಾಗಿತ್ತು.

ಪ್ರಯೋಗಾಲಯದ ವರದಿ ಪ್ರಕಾರ ಶಾಕ್‌ ಟ್ರೀಟ್ ಮೆಂಟ್‌ ಮತ್ತು ದೇಹದ ವಿವಧ ಭಾಗಗಳಲ್ಲಿ ವಿಪರೀತ ಗಾಯಗಳಾಗಿದ್ದರಿಂದ ರೇಣುಕಾಸ್ವಾಮಿ ಮೃತಪಟ್ಟಿದ್ದರು. ಈ ಪ್ರಕರಣದಲ್ಲಿ ನಂಬರ್‌- 1 ಆರೋಪಿಯಾಗಿರುವ ಪವಿತ್ರಾಗೌಡ ಅವರೇ ರೇಣುಕಾಸ್ವಾಮಿ ಅವರ ಅಪಹರಣ ಹಿಂಸೆ ಮತ್ತು ಕೊಲೆಗೆ ಕಾರಣವಾಗಿದ್ದಾರೆ.

(ವರದಿ- ಎಚ್. ಮಾರುತಿ, ಬೆಂಗಳೂರು)