logo
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ಸ್ಯಾಂಕಿ ಲೇಕ್‌ಗಿರೋ ಅಭಿವೃದ್ಧಿ ಭಾಗ್ಯ ನನಗೆ ಏಕಿಲ್ಲ? ಕೇಳಿಸದೇ ಪುರಾತನ ಹಲಸೂರು ಕೆರೆಯ ನೋವಿನ ಕರೆ

ಬೆಂಗಳೂರು ಸ್ಯಾಂಕಿ ಲೇಕ್‌ಗಿರೋ ಅಭಿವೃದ್ಧಿ ಭಾಗ್ಯ ನನಗೆ ಏಕಿಲ್ಲ? ಕೇಳಿಸದೇ ಪುರಾತನ ಹಲಸೂರು ಕೆರೆಯ ನೋವಿನ ಕರೆ

Praveen Chandra B HT Kannada

Jan 15, 2024 09:11 AM IST

ಬೆಂಗಳೂರು ಪುರಾತನ ಹಲಸೂರು ಕೆರೆ

    • ಒಂದು ಕಾಲದ ಪ್ರವಾಸಿ ತಾಣ ಬೆಂಗಳೂರಿನ ಹೃದಯ ಭಾಗದಲ್ಲಿರುವ ಹಲಸೂರು ಕೆರೆಯ ಪರಿಸ್ಥಿತಿ ಇಂದು ಹೇಗಿದೆ? ಸ್ಯಾಂಕಿ ಕೆರೆ ಅಭಿವೃದ್ದಿಯಾಗುವುದಾದರೆ ಈ ಕೆರೆಗೆ ಆ ಭಾಗ್ಯ ಏಕಿಲ್ಲ? ಹಲಸೂರು ಕೆರೆಯಲ್ಲಿ ಚಿತ್ರೀಕರಣಗೊಂಡ ಸಿನಿಮಾಗಳಿಗೆ ಲೆಕ್ಕವೇ ಇಲ್ಲ, ಬೆಂಗಳೂರಿನ ಹೃದಯ ಭಾಗದಲ್ಲಿರುವ ಹಲಸೂರು ಕೆರೆಯ ಪರಿಸ್ಥಿತಿ ಇಂದು ಹೇಗಿದೆ? (ವಿಶೇಷ ವರದಿ: ಎಚ್.ಮಾರುತಿ)
ಬೆಂಗಳೂರು ಪುರಾತನ ಹಲಸೂರು ಕೆರೆ
ಬೆಂಗಳೂರು ಪುರಾತನ ಹಲಸೂರು ಕೆರೆ (wikipedia)

ಬೆಂಗಳೂರಿನ ಹೃದಯ ಭಾಗದಲ್ಲಿರುವ ಹಲಸೂರು ಕೆರೆ ಯಾರಿಗೆ ಗೊತ್ತಿಲ್ಲ? ಬೆಂಗಳೂರು ನಿರ್ಮಾತೃ ಕೆಂಪೇಗೌಡ ಈ ಕೆರೆಯ ಸಮೀಪದಲ್ಲಿ ಗೋಪುರವನ್ನು ನಿರ್ಮಿಸಿದ್ದಾನೆ. ಇಲ್ಲಿ ಚಿತ್ರೀಕರಣವಾದ ವಿವಿಧ ಬಾಷೆಗಳ ಚಲನ ಚಿತ್ರಗಳಿಗೆ ಲೆಕ್ಕವಿಲ್ಲ. ದಶಕಗಳ ಹಿಂದೆ ಈ ಕೆರೆ ಪ್ರವಾಸಿ ತಾಣವೂ ಆಗಿತ್ತು. ಈಗಲೂ ಇಲ್ಲಿಗೆ ಪ್ರತಿನಿತ್ಯ ಸಾವಿರಾರು ಮಂದಿ ವಾಯು ವಿಹಾರಕ್ಕೆ ಆಗಮಿಸುತ್ತಾರೆ. ಮಕ್ಕಳ ಆಟದ ತಾಣವೂ ಹೌದು. ಇಂದು ಈ ಕೆರೆಗೆ ಒದಗಿ ಬಂದಿರುವ ದುಸ್ಥಿತಿ ನೋಡಿದರೆ ಇದು ಕೆರೆಯೇ ಎಂದು ಮರುಕ ಉಂಟಾಗದೆ ಎಂಬ ಭಾವನೆ ಮೂಡದೆ ಇರದು.

ಟ್ರೆಂಡಿಂಗ್​ ಸುದ್ದಿ

Bus Accident: ಫ್ಲೈ ಓವರ್‌ಗೆ ಹಾರಿದ ಸಾರಿಗೆ ಬಸ್‌ ಪ್ರಯಾಣಿಕರು ಪಾರಾಗಿದ್ದೇ ರೋಚಕ; ನೆಲಮಂಗಲದಲ್ಲಿ ಸಿನಿಮಾ ಸ್ಟಂಟ್ ನಂತೆ ಸಂಭವಿಸಿದ ಅಪಘಾತ

Hassan Scandal: 100 ಕೋಟಿ ರೂ. ಆಫರ್ ವಿಚಾರವನ್ನು ಎಸ್‌ಐಟಿ ನೋಡಿಕೊಳ್ಳುತ್ತೆ, ದೇವರಾಜೇಗೌಡ ಜೈಲಲ್ಲೇ ಇರ್ತಾರೆ: ಗೃಹ ಸಚಿವ

Hassan Scandal : ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ವಾರೆಂಟ್‌ ಹೊರಡಿಸಿದ ಬೆಂಗಳೂರು ನ್ಯಾಯಾಲಯ

Wildlife News: ಹುಲಿ ಉಗುರು ಪ್ರಕರಣ, ವನ್ಯಜೀವಿಗಳ ಅಂಗಾಂಗ ಹಸ್ತಾಂತರ ಇನ್ನಷ್ಟು ವಿಳಂಬ ಸಾಧ್ಯತೆ

ಡೇಂಜರ್‌ ಜೋನ್‌ನಲ್ಲಿ ಪುರಾತನ ಕೆರೆ

ಈ ಕೆರೆಯ ಸುತ್ತ ಗಗನಚುಂಬಿ ಕಟ್ಟಡಗಳು ತಲೆ ಎತ್ತಿದ್ದು, ಈ ಪುರಾತನ ಕೆರೆ ಇಂದು ಡೇಂಜರ್ ಜೋನ್ ನಲ್ಲಿದೆ. ಈ ಕೆರೆಯ ಅಭಿವೃದ್ದಿಯಾಗಲೆಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಅನುದಾನದ ಕೊರತೆ ಎದುರಾಗಿದ್ದು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಹಲಸೂರು ಕೆರೆಯ ಸುತ್ತ ತಂತಿ ಬೇಲಿ ನಿರ್ಮಾಣವಾಗಬೇಕಿದೆ. ಗುರುದ್ವಾರದ ಕಡೆಗೆ ಸಾಗುವ ಮಾರ್ಗದಲ್ಲಿ ಹಲಸೂರು ಕೆರೆ ವಿನಾಶದ ಅಂಚಿನಲ್ಲಿದೆ. ಕೆರೆಯ ಮುಖ್ಯ ಪ್ರವೇಶ ದ್ವಾರದ ಮುಂಬಾಗದಲ್ಲಿ ರಸ್ತೆ ಹಾಳಾಗಿದೆ. ಸೂಕ್ತ ಭದ್ರತೆ ಇಲ್ಲದಿರುವುದರಿಂದ ಕೆರೆಯ ಮುಖ್ಯ ದ್ವಾರದ ಬಳಿಯೇ ಕಸದ ರಾಶಿ ಸುರಿಯಲಾಗುತ್ತಿದೆ. ಅನೇಕ ಬಾರಿ ಕೆರೆಗೂ ಕಸದ ಬ್ಯಾಗ್‌ಗಳನ್ನು ಎಸೆದಿರುವ ಉದಾಹರಣೆಗಳೂ ಉಂಟು.

ಈ ಕೆರೆಯ ಸುತ್ತ ಹಾಳಾಗಿರುವ ತಂತಿ ಬೇಲಿಯನ್ನು ಸರಿಪಡಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 70 ಲಕ್ಷ ರೂ.ಗಳಿಗೆ ಟೆಂಡರ್ ಆಹ್ವಾನಿಸಿದೆ. ಜನವರಿ 9ರಂದು ಟೆಂಡರ್ ಆಹ್ವಾನಿಸಿದ್ದು ಜ. 29 ಅಂತಿಮ ದಿನವಾಗಿರುತ್ತದೆ. ಆದರೆ ಹಾಳಾಗಿರುವ ಭಾಗವನ್ನು ಸರಿಪಡಿಸಲು ಈ ಮೊತ್ತ ಸಾಕಾಗುವುದಿಲ್ಲ.

ಈ ಕೆರೆಗೆ ಹೊಂದಿಕೊಂಡಿರುವ ವಿವೇಕಾನಂದ ಉದ್ಯಾನವನವೂ ದುಸ್ಥಿತಿಯಲ್ಲಿದೆ. ಇಲ್ಲಿಗೆ ಆಗಮಿಸುವ ನೂರಾರು ಮಕ್ಕಳು ತೊಂದರೆ ಎದುರಿಸಬೇಕಾಗಿದೆ. ಸರಿಯಾಗಿ ನಡೆದಾಡಲು ಸೂಕ್ತ ಪಾದಾಚಾರಿ ಮಾರ್ಗವಿಲ್ಲ. ಆಟದ ಮೈದಾನ ಹಾಳಾಗಿದ್ದು, ನಿಷ್ಪ್ರಯೋಜಕವಾಗಿದೆ.

4 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಹಲಸೂರು ಕೆರೆ ಅಭಿವೃದ್ಧಿಪಡಿಸಲಾಗುವುದು. ಇಲ್ಲಿಆಗಬೇಕಿರುವ ಕಾಮಗಾರಿಗಳನ್ನು ಶೀಘ್ರವೇ ಪ್ರಾರಂಭಿಸಲಾಗುವುದು. ಮುಂದಿನ ದಿನಗಳಲ್ಲಿ 9 ಕೋಟಿ ರೂ.ಗಳ ವೆಚ್ಚದಲ್ಲಿ ಕೆರೆ ಅಭಿವೃದ್ದಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ಈ ನಿಟ್ಟಿನಲ್ಲಿ ಬಿಬಿಎಂಪಿ ಯೋಜನೆಯನ್ನು ಸಿದ್ದಪಡಿಸುತ್ತಿದೆ ಎಂದು ಸ್ಥಳೀಯ ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಹೇಳುತ್ತಾರೆ. ಮುಂದಿನ 3-4 ವರ್ಷಗಳಲ್ಲಿ 30-40 ಕೋಟಿ ರೂಗಳ ವೆಚ್ಚದಲ್ಲಿ ಹಲಸೂರು ಕೆರೆಯನ್ನು ಅಭಿವೃದ್ದಿಪಡಿಸುವ ಉದ್ದೇಶ ಹೊಂದಲಾಗಿದೆ ಎಂದು ಶಾಸಕರು ತಿಳಿಸಿದ್ದಾರೆ.

ಗುರುದ್ವಾರ ಕಡೆ ಸಾಗುವ ಮಾರ್ಗದಲ್ಲಿ ಕೆರೆ ಹಾಳಾಗಿರುವ ಸಂಬಂಧ ಈಗಾಗಲೇ ಬಿಬಿಎಂಪಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದ್ದು, ತಡಮಾಡದೆ ಸಮಸ್ಯೆಯನ್ನು ಬಗೆಹರಿಸಲು ಸೂಚನೆ ನೀಡಲಾಗಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ. ಸ್ಯಾಂಕಿ ಕೆರೆ ಮಾದರಿಯಲ್ಲಿ ಹಲಸೂರು ಕೆರೆಯನ್ನು ಅಭಿವೃದ್ದಿಪಡಿಸಬೇಕಾಗಿದೆ. ಸ್ಯಾಂಕಿ ಕೆರೆಗೆ ಹಾಕಿರುವ ರೀತಿಯಲ್ಲೇ ಇಲ್ಲಿಯೂ ತಂತಿಬೇಲಿಯನ್ನು ಹಾಕಬೇಕು ಎಂದು ಸ್ಥಳೀಯರು ಆಗ್ರಹಪಡಿಸಿದ್ದಾರೆ.

ಗಣ್ಯರು ಇರುವ ಪ್ರದೇಶಗಳ ಕೆರೆಗಳ ಅಭಿವೃದ್ಧಿಗೆ ಒತ್ತು

ಭಾರತಿನಗರ ನಿವಾಸಿಗಳ ವೇದಿಕೆ ಅಧ್ಯಕ್ಷ ಎನ್.ಎಸ್. ರವಿ ಪ್ರತಿಕ್ರಿಯಿಸಿ ಬೆಂಗಳೂರು ಪೂರ್ವ ಭಾಗವನ್ನು ಸರಕಾರಗಳು ಉಪೇಕ್ಷಿಸುತ್ತಾ ಬಂದಿವೆ. ಸ್ಯಾಂಕಿ ಕೆರೆಗೆ ಒದಗಿಸಿರುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಹಲಸೂರು ಕೆರೆಗೂ ಒದಗಿಸಬೇಕು. ಸಚಿವರು ಮತ್ತು ಗಣ್ಯರು ವಾಸಿಸುತ್ತಾರೆ ಹಾಗೂ ಅವರು ವಾಯು ವಿಹಾರ ನಡೆಸಲು ಆಗಮಿಸುತ್ತಾರೆ ಎಂಬ ಕಾರಣಕ್ಕೆ ಸ್ಯಾಂಕಿ ಕೆರೆ ಅಭಿವೃದ್ದಿಗೆ ಒತ್ತು ನೀಡುತ್ತಾ ಬರಲಾಗಿದೆಯೆ ಎಂದೂ ಅವರು ಪ್ರಶ್ನಿಸುತ್ತಾರೆ.

ಬಿಬಿಎಂಪಿ ಮೂಲಗಳ ಪ್ರಕಾರ ಹಲಸೂರು ಕೆರೆ ಅಭಿವೃದ್ದಿಗೆ 3.10 ಕೋಟಿ ರೂ. ಬಿಡುಗಡೆಗೆ ಕ್ರಮ ಜರುಗಿಸಲಾಗಿದೆ. ಹಾಗೆಯೇ ಹೊಸಕೆರೆಹಳ್ಳಿ ಕೆರೆಗೆ ತಂತಿ ಬೇಲಿ ನಿರ್ಮಿಸಲು 1 ಕೋಟಿ ರೂ. ಕನ್ನಳ್ಳಿ ಕೆರೆಗೆ ರೂ. 1.50 ಕೋಟಿ ಮತ್ತು ಕೋನಸಂದ್ರ ಕೆರೆ ಅಭಿವೃದ್ದಿಗೆ 2 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ