logo
ಕನ್ನಡ ಸುದ್ದಿ  /  Karnataka  /  Bengaluru News: M. Chidananda Murthy Auditorium Inaugurated In Govindarajanagara Constituency

Bengaluru News: ಎಂ.ಚಿದಾನಂದ ಮೂರ್ತಿ ಸಭಾಂಗಣ ಲೋಕಾರ್ಪಣೆ; ಸಾಧನೆ ಸ್ಮರಣೆಗೆ ಸಾಧಕರ ಹೆಸರು ನಾಮಕರಣ ಎಂದ ಸಚಿವ ಸೋಮಣ್ಣ

HT Kannada Desk HT Kannada

Jan 19, 2023 12:07 PM IST

ಡಾ.ಎಂ.ಚಿದಾನಂದ ಮೂರ್ತಿ ಅವರ ಪತ್ನಿ ವಿಶಾಲಕ್ಷ್ಮೀ ಚಿದಾನಂದಮೂರ್ತಿ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಸಚಿವ ವಿ.ಸೋಮಣ್ಣ, ಹಿರಿಯ ಸಾಹಿತಿ ವೀರಣ್ಣ, ಪ್ರತಿಷ್ಠಾನದ ಅಧ್ಯಕ್ಷೆ ಶೈಲಜಾ ಸೋಮಣ್ಣ, ಕನ್ನಡಪರ ಹೋರಾಟಗಾರ ಪಾಲನೇತ್ರ ಉದ್ಘಾಟನೆಯ ವೇದಿಕೆಯಲ್ಲಿದ್ದರು.

  • Bengaluru News: ನಾಡಿನ ಹಿರಿಯ ಸಂಶೋಧಕ, ಸಾಹಿತಿ, ಚಿಂತಕ ದಿವಂಗತ ಡಾ.ಎಂ.ಚಿದಾನಂದಮೂರ್ತಿ ಅವರ ಸಾಧನೆಯನ್ನು ಸ್ಮರಿಸುವುದಕ್ಕೆ ಮತ್ತು ಸಂಸ್ಕೃತಿಯನ್ನು ಉಳಿಸುವುದಕ್ಕಾಗಿ ಸಭಾಂಗಣಕ್ಕೆ ಅವರ ಹೆಸರನ್ನು ನಾಮಕರಣಮಾಡಲಾಗಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.

ಡಾ.ಎಂ.ಚಿದಾನಂದ ಮೂರ್ತಿ ಅವರ ಪತ್ನಿ ವಿಶಾಲಕ್ಷ್ಮೀ ಚಿದಾನಂದಮೂರ್ತಿ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಸಚಿವ ವಿ.ಸೋಮಣ್ಣ, ಹಿರಿಯ ಸಾಹಿತಿ ವೀರಣ್ಣ, ಪ್ರತಿಷ್ಠಾನದ ಅಧ್ಯಕ್ಷೆ ಶೈಲಜಾ ಸೋಮಣ್ಣ, ಕನ್ನಡಪರ ಹೋರಾಟಗಾರ ಪಾಲನೇತ್ರ ಉದ್ಘಾಟನೆಯ ವೇದಿಕೆಯಲ್ಲಿದ್ದರು.
ಡಾ.ಎಂ.ಚಿದಾನಂದ ಮೂರ್ತಿ ಅವರ ಪತ್ನಿ ವಿಶಾಲಕ್ಷ್ಮೀ ಚಿದಾನಂದಮೂರ್ತಿ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಸಚಿವ ವಿ.ಸೋಮಣ್ಣ, ಹಿರಿಯ ಸಾಹಿತಿ ವೀರಣ್ಣ, ಪ್ರತಿಷ್ಠಾನದ ಅಧ್ಯಕ್ಷೆ ಶೈಲಜಾ ಸೋಮಣ್ಣ, ಕನ್ನಡಪರ ಹೋರಾಟಗಾರ ಪಾಲನೇತ್ರ ಉದ್ಘಾಟನೆಯ ವೇದಿಕೆಯಲ್ಲಿದ್ದರು.

ಬೆಂಗಳೂರಿನ ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದ ಪಾಲಿಕೆ ಸೌಧದ ಸಭಾಂಗಣಕ್ಕೆ ನಾಡೋಜ ಡಾ.ಎಂ.ಚಿದಾನಂದ ಮೂರ್ತಿ ಹೆಸರು ನಾಮಕರಣ ಮಾಡಿ, ಇಂದು ಲೋಕಾರ್ಪಣೆ ಮಾಡಲಾಗಿದೆ.

ಟ್ರೆಂಡಿಂಗ್​ ಸುದ್ದಿ

Vijayapura News: ವಿಜಯಪುರ ಜಿಲ್ಲೆಯ ಲಚ್ಯಾಣ ಜಾತ್ರೆಯ ರಥದಡಿ ಸಿಲುಕಿ ಇಬ್ಬರು ಭಕ್ತರ ಸಾವು

Bangalore News: ಬೆಂಗಳೂರಲ್ಲಿ ಅನಧಿಕೃತ ಬಡಾವಣೆಗಳ ಅಬ್ಬರ, ನಿವೇಶನ ಖರೀದಿಸುವಾಗ ಇರಲಿ ಎಚ್ಚರ

Arecanut News: ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘಕ್ಕೆ ಯುವ ಮುಖ, ಹೊಸ ಅಧ್ಯಕ್ಷರ ಯೋಜನೆಗಳು ಏನೇನು?

Hassan Sex Scandal: ಪ್ರಜ್ವಲ್‌ ನಂತರ ತಂದೆ ಎಚ್‌ಡಿರೇವಣ್ಣ ವಿರುದ್ದ ಲೈಂಗಿಕ ದೌರ್ಜನ್ಯ ದೂರು, ಮೊಕದ್ದಮೆ ದಾಖಲು

ಡಾ.ಎಂ.ಚಿದಾನಂದ ಮೂರ್ತಿ ಅವರ ಪತ್ನಿ ವಿಶಾಲಕ್ಷ್ಮೀ ಚಿದಾನಂದಮೂರ್ತಿ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಸಚಿವ ವಿ.ಸೋಮಣ್ಣ, ಹಿರಿಯ ಸಾಹಿತಿ ವೀರಣ್ಣ, ಪ್ರತಿಷ್ಠಾನದ ಅಧ್ಯಕ್ಷೆ ಶೈಲಜಾ ಸೋಮಣ್ಣ, ಕನ್ನಡಪರ ಹೋರಾಟಗಾರ ಪಾಲನೇತ್ರ ಉದ್ಘಾಟನೆಯ ವೇದಿಕೆಯಲ್ಲಿದ್ದರು.

ನಾಡಿನ ಹಿರಿಯ ಸಂಶೋಧಕ, ಸಾಹಿತಿ, ಚಿಂತಕ ದಿವಂಗತ ಡಾ.ಎಂ.ಚಿದಾನಂದಮೂರ್ತಿ ಅವರ ಸಾಧನೆಯನ್ನು ಸ್ಮರಿಸುವುದಕ್ಕೆ ಮತ್ತು ಸಂಸ್ಕೃತಿಯನ್ನು ಉಳಿಸುವುದಕ್ಕಾಗಿ ಪಾಲಿಕೆ ಸಭಾಂಗಣಕ್ಕೆ ಅವರ ಹೆಸರನ್ನು ನಾಮಕರಣಮಾಡಲಾಗಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ಸಭಾಂಗಣ ಲೋಕಾರ್ಪಣೆ ಬಳಿಕ ಹೇಳಿದರು.

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿಯೊಂದು ಕಾಮಗಾರಿ ಯೋಜನೆಗಳಿಗೆ ರಾಷ್ಟ್ರ ಮತ್ತು ರಾಜ್ಯಕ್ಕೆ ಸೇವೆ ಸಲ್ಲಿಸಿದ ಮಹನೀಯರುಗಳು ಹೆಸರುಗಳನ್ನು ನಾಮಕರಣ ಮಾಡಲಾಗಿದೆ.

ಶ್ರೀ ಬಸವೇಶ್ವರ, ದಾಸಶೇಷ್ಠ ಕನಕದಾಸ, ಸಂಗೊಳ್ಳಿ ರಾಯಣ್ಣ, ನಾಡಪ್ರಭು ಕೆಂಪೇಗೌಡರು, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ಸ್ವಾಮಿ ವಿವೇಕಾನಂದ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಶ್ರೀ ಶಿವಕುಮಾರ ಸ್ವಾಮೀಜಿ, ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ, ಪೇಜಾವರ ಶ್ರೀ ,ನಾಡೋಜ ಚಿದಾನಂದಮೂರ್ತಿ ಮಹನೀಯರ ಹೆಸರನ್ನು ಶಾಶ್ವತವಾಗಿ ಸ್ಮರಿಸಿಕೊಳ್ಳಲು ಮತ್ತು ಮುಂದಿನ ಪೀಳಿಗೆಗೆ ಮಹನೀಯರ ಆದರ್ಶವನ್ನು ಪಾಲಿಸಲು, ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಪ್ರಜೆಯಾಗಲಿ ಎಂಬ ಕಾರಣಕ್ಕೆ ಈ ರೀತಿ ನಾಮಕರಣ ಮಾಡಲಾಗಿದೆ ಎಂದು ಸಚಿವರು ವಿವರಿಸಿದರು.

ರಾಷ್ಟ್ರಕ್ಕೆ ಉಪಯುಕ್ತ ಸಂಶೋಧನೆ ಮಾಡಿರುವ ಡಾ.ಎಂ. ಚಿದಾನಂದಮೂರ್ತಿ ಅವರ ಹೆಸರು ಚಿರಸ್ಥಾಯಿಯಾಗಿ ಉಳಿಯಬೇಕು ಎಂಬ ಉದ್ದೇಶದಿಂದ ಸಭಾಂಗಣಕ್ಕೆ ಅವರ ಹೆಸರು ನಾಮಕರಣ ಮಾಡಲಾಗಿದೆ.

ಡಾ.ಎಂ. ಚಿದಾನಂದಮೂರ್ತಿ ಅವರು ವಾಸ್ತವಾಂಶಕ್ಕೆ ಹೆಚ್ಚು ಒತ್ತು ನೀಡಿ ಸಂಶೋಧನೆಯನ್ನು ಮಾಡಿದವರು. ರಾಜ್ಯದ ಮೂಲೆ,ಮೂಲೆಗೆ ತೆರಳಿ ಕನ್ನಡ ನಾಡಿನ ಇತಿಹಾಸವನ್ನು ಸಂಶೋಧನೆ ಮಾಡಿದ್ದಾರೆ.

ಮಾಗಡಿರೋಡ್ ಪೊಲೀಸ್ ಠಾಣೆಯನ್ನು ನವೀಕರಣ ಮಾಡಲಾಗಿದೆ. ಡಿ.ಸಿ.ಪಿ.ಕಚೇರಿಯನ್ನು ಮಾಗಡಿರೋಡ್‌ನಲ್ಲಿ ಪ್ರಾರಂಭಿಸಲಾಗಿದೆ. ಎರಡು ಸಾವಿರ ವಿದ್ಯಾರ್ಥಿಗಳಿಗೆ ಅವಕಾಶ ಇರುವ ಪ್ರಥಮ ದರ್ಜೆ ಕಾಲೇಜು ಹಾಗೂ 1 ಕಿ.ಮೀ. ಉದ್ದದ ಮೇಲು ಸೇತುವೆ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣವನ್ನು ಜನವರಿ 29ರಂದು ಲೋಕಾರ್ಪಣೆ ಮಾಡಲಾಗುವುದು ಎಂದು ಹೇಳಿದರು.

ದಾಸರಹಳ್ಳಿ ವಾರ್ಡಿನ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮುಂದಿನ ತಿಂಗಳು 16ರಂದು ಉದ್ಘಾಟನೆ ಆಗಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು ಪಾಲ್ಗೊಳ್ಳುವರು. ನಾಯಂಡಹಳ್ಳಿಯ 200 ಹಾಸಿಗೆಯ ಆಸ್ಪತ್ರೆಗೆ ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಹೆಸರು ನಾಮಕರಣ ಮಾಡಲಾಗುವುದು ಎಂದು ಸಚಿವರು ಹೇಳಿದರು.

ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಎಚ್.ಜಯರಾಮ್, ಕೆ.ಉಮೇಶ್ ಶೆಟ್ಟಿ,ಮೋಹನ್ ಕುಮಾರ್, ದಾಸೇಗೌಡ,ಜಯರತ್ನ ಮತ್ತು ಇತರೆ ಮುಖಂಡರು,ಕಾರ್ಯಕರ್ತರು ಪಾಲ್ಗೊಂಡಿದ್ದರು.

    ಹಂಚಿಕೊಳ್ಳಲು ಲೇಖನಗಳು