logo
ಕನ್ನಡ ಸುದ್ದಿ  /  ಕರ್ನಾಟಕ  /  ಚಿಕ್ಕಪೇಟೆ, ಸಿಟಿ ಮಾರ್ಕೆಟ್, ಕ್ವೀನ್ಸ್ ರಸ್ತೆ ಸುತ್ತಮುತ್ತ ಭಾನುವಾರ ಪವರ್‌ ಕಟ್‌; ಬೆಳಗ್ಗೆ 10 ರಿಂದ ಸಂಜೆ 5ರ ತನಕ ಅಡ್ಜೆಸ್ಟ್ ಮಾಡ್ಕೊಳ್ಳಿ

ಚಿಕ್ಕಪೇಟೆ, ಸಿಟಿ ಮಾರ್ಕೆಟ್, ಕ್ವೀನ್ಸ್ ರಸ್ತೆ ಸುತ್ತಮುತ್ತ ಭಾನುವಾರ ಪವರ್‌ ಕಟ್‌; ಬೆಳಗ್ಗೆ 10 ರಿಂದ ಸಂಜೆ 5ರ ತನಕ ಅಡ್ಜೆಸ್ಟ್ ಮಾಡ್ಕೊಳ್ಳಿ

Umesh Kumar S HT Kannada

Oct 26, 2024 10:26 AM IST

google News

ಬೆಂಗಳೂರಲ್ಲಿ ಈ ಭಾನುವಾರ ಪವರ್ ಕಟ್‌ ಇರಲಿದ್ದು, ಚಿಕ್ಕಪೇಟೆ, ಸಿಟಿ ಮಾರ್ಕೆಟ್, ಕ್ವೀನ್ಸ್ ರಸ್ತೆ ಸುತ್ತಮುತ್ತ ಕರೆಂಟ್ ಇರಲ್ಲ. ನಿಮ್ಮ ಏರಿಯಾದಲ್ಲೂ ಕರೆಂಟ್ ಇದೆಯೋ ಇಲ್ವೋ ಅಂತ ಚೆಕ್ ಮಾಡಲು ಈ ವರದಿ ಗಮನಿಸಿ. (ಸಾಂಕೇತಿಕ ಚಿತ್ರ)

  • Bengaluru Power Cut; ಬೆಂಗಳೂರಿನ ಕೇಂದ್ರ ಭಾಗದ ಜನರಿಗೆ ಈ ಭಾನುವಾರ (ಅಕ್ಟೋಬರ್ 27) ಮತ್ತೊಂದು ಸಂಕಷ್ಟ. ಹೌದು, ಚಿಕ್ಕಪೇಟೆ, ಸಿಟಿ ಮಾರ್ಕೆಟ್, ಕ್ವೀನ್ಸ್ ರಸ್ತೆ ಸುತ್ತಮುತ್ತ ಭಾನುವಾರ ಪವರ್‌ ಕಟ್‌ ಇರಲಿದೆ. ಬೆಳಗ್ಗೆ 10 ರಿಂದ ಸಂಜೆ 5ರ ತನಕ ವಿದ್ಯುತ್ ಪೂರೈಕೆ ವ್ಯತ್ಯಾಸವಾಗಲಿದ್ದು, ಯಾವೆಲ್ಲ ಪ್ರದೇಶದಲ್ಲಿ ಕರೆಂಟ್ ಇರಲ್ಲ ಎಂಬ ಪೂರ್ಣ ಮಾಹಿತಿ ಇಲ್ಲಿದೆ. 

ಬೆಂಗಳೂರಲ್ಲಿ ಈ ಭಾನುವಾರ ಪವರ್ ಕಟ್‌ ಇರಲಿದ್ದು, ಚಿಕ್ಕಪೇಟೆ, ಸಿಟಿ ಮಾರ್ಕೆಟ್, ಕ್ವೀನ್ಸ್ ರಸ್ತೆ ಸುತ್ತಮುತ್ತ ಕರೆಂಟ್ ಇರಲ್ಲ. ನಿಮ್ಮ ಏರಿಯಾದಲ್ಲೂ ಕರೆಂಟ್ ಇದೆಯೋ ಇಲ್ವೋ ಅಂತ ಚೆಕ್ ಮಾಡಲು ಈ ವರದಿ ಗಮನಿಸಿ. (ಸಾಂಕೇತಿಕ ಚಿತ್ರ)
ಬೆಂಗಳೂರಲ್ಲಿ ಈ ಭಾನುವಾರ ಪವರ್ ಕಟ್‌ ಇರಲಿದ್ದು, ಚಿಕ್ಕಪೇಟೆ, ಸಿಟಿ ಮಾರ್ಕೆಟ್, ಕ್ವೀನ್ಸ್ ರಸ್ತೆ ಸುತ್ತಮುತ್ತ ಕರೆಂಟ್ ಇರಲ್ಲ. ನಿಮ್ಮ ಏರಿಯಾದಲ್ಲೂ ಕರೆಂಟ್ ಇದೆಯೋ ಇಲ್ವೋ ಅಂತ ಚೆಕ್ ಮಾಡಲು ಈ ವರದಿ ಗಮನಿಸಿ. (ಸಾಂಕೇತಿಕ ಚಿತ್ರ)

ಬೆಂಗಳೂರು: ಕರ್ನಾಟಕ ರಾಜಧಾನಿ ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಭಾನುವಾರ (ಅಕ್ಟೋಬರ್ 27) ಬೆಳಗ್ಗೆ 10 ರಿಂದ ಸಂಜೆ 5 ಗಂಟೆ ತನಕ ಪವರ್ ಕಟ್ ಇರಲಿದೆ. ಬೆಂಗಳೂರಿನಲ್ಲಿ ವಿಧಾನಸೌಧ, ರಾಜಭವನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತಗ್ ಪೂರೈಕೆ ಸ್ಥಗಿತವಾಗಲಿದೆ. ಕೆಪಿಟಿಸಿಎಲ್ ತನ್ನ 66/11 ಕೆ.ವಿ 'ಸಿ' ಸ್ಟೇಷನ್ ಹಾಗೂ ವಿಕ್ಟೋರಿಯಾ ಸ್ಟೇಷನ್‌ಗಳಲ್ಲಿ ತುರ್ತುನಿರ್ವಹಣಾ ಕಾಮಗಾರಿ ಕೈಗೊಂಡಿರುವ ಕಾರಣ ವಿಕ್ಟೋರಿಯಾ ಆಸ್ಪತ್ರೆ ಹಾಗೂ ವಸಂತ ನಗರ ಸುತ್ತಮುತ್ತ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

ಈ ಭಾನುವಾರ (ಅ.27) ಎಲ್ಲೆಲ್ಲಿ ಕರಂಟ್ ಇರಲ್ಲ

ವಿಕ್ಟೋರಿಯಾ ಆಸ್ಪತ್ರೆ ವ್ಯಾಪ್ತಿಯ ನೆಪ್ರೋ ಇನ್ ಸ್ಟಿಟ್ಯೂಟ್, ಮಿಂಟೋ ಕಣ್ಣಿನ ಆಸ್ಪತ್ರೆ, ಗ್ಯಾಸ್ಟೋ ಎಂಟರಾಲಜಿ ಆಸ್ಪತ್ರೆ, ಅಲೈಡ್ ಆಸ್ಪತ್ರೆ, ಕೆ.ಆರ್. ರಸ್ತೆ, ಎಸ್.ಪಿ. ರಸ್ತೆ, ಎಸ್‌ಜೆಪಿ ರಸ್ತೆ, ಚಿಕ್ಕಪೇಟೆ, ಚಿಕ್ಕಪೇಟೆ ಮುಖ್ಯ ರಸ್ತೆ, ಒಟಿಸಿ ರಸ್ತೆ, ಗೋಡೌನ್‌ ರಸ್ತೆ, ಜೆಸಿ ರಸ್ತೆ, ಜೆಸಿ ರಸ್ತೆ 1ನೇ ಕ್ರಾಸ್, ಎ.ಎಂ. ಲೇನ್, ಕಲಾಸಿಪಾಳ್ಯ ಮುಖ್ಯ ರಸ್ತೆ, ಬಿ.ವಿ.ಕೆ. ಅಯ್ಯಂಗಾರ್ ರಸ್ತೆ, ಗ್ರೇನ್ ಬಜಾರ್‌ಸ್ತೆ, ನಗರ್ತಪೇಟೆ, ತಿಗಳರಪೇಟೆ,ಎನ್.ಆರ್ ರಸ್ತೆ, ಒಟಿಸಿ ರಸ್ತೆಯ ಭಾಗ, ಎಂಟಿಬಿ ರಸ್ತೆ, ಕುಂಬಾರ ಪೇಟೆ ಮುಖ್ಯರಸ್ತೆ, ಶಿವಾಜಿ ರಸ್ತೆ, ಸಿಟಿ ಮಾರುಕಟ್ಟೆ ಕಾಂಪ್ಲೆಕ್ಸ್, ಕೋಟೆ ಬೀದಿ, ಹಳೆ ಕಸಾಯಿಖಾನೆ, ಮಾಮೂಲ್‌ಪೇಟೆ, ಬೆಳ್ಳಿಬಸವಣ್ಣ ದೇವಸ್ಥಾನದಬೀದಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ ಆಗಲಿದೆ.

ಅದೇ ರೀತಿ, ವಸಂತನಗರ ಸುತ್ತಮುತ್ತ ಪ್ರದೇಶಗಳಲ್ಲೂ ಬೆಳಗ್ಗೆ 10 ರಿಂದ ಸಂಜೆ 5 ಗಂಟೆ ತನಕ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಸಿ ಸ್ಟೇಷನ್ ನಿರ್ವಹಣೆ ಕಾಮಗಾರಿ ನಡೆಸುವ ಕಾರಣ, ಶಾಸಕರ ಭವನ, ಕೆಪಿಸಿಸಿ ಕಚೇರಿ, ಕೆಪಿಎಸ್ಸಿ, ಇಂಡಿಯನ್ ಎಕ್ಸ್‌ಪ್ರೆಸ್, ಕನ್ನಿಂಗ್‌ಹ್ಯಾಂ ರಸ್ತೆ, ಆಲಿ ಆಸ್ಕರ್ ರಸ್ತೆ, ಕ್ಲೀನ್ಸ್ ರಸ್ತೆ, ಬೌರಿಂಗ್ ಆಸ್ಪತ್ರೆ, ಇನ್‌ಫ್ಯಾಂಟ್ರಿ ರಸ್ತೆ, ವಿಶ್ವೇಶ್ವರಯ್ಯ ಟವರ್, ಪೊಲೀಸ್ ಆಯುಕ್ತರ ಕಚೇರಿ, ಪಾಯಪ್ಪ ಗಾರ್ಡನ್, ಚಾಂದಿನಿ ಚೌಕ್, ಜನ್ಮಾಭವನ ರಸ್ತೆ, ಮಿಲ್ಲರ್ ಟ್ಯಾಂಕ್ ಬಂಡ್ ರಸ್ತೆ, ಬ್ರಾಡ್ ವೇ ರಸ್ತೆ, ಸ್ಟೇಷನ್ ರಸ್ತೆ, ಕ್ಲೀನ್ಸ್‌ ರಸ್ತೆ, ಮಿಲ್ಲರ್ಸ್ ರಸ್ತೆ, ಸ್ಲಾಟರ್‌ಹೌಸ್, ಜಂಬೂ ಬಜಾರ್ ಚಿಕ್ಕ ಬಜಾರ್ ರಸ್ತೆ, ವೆಂಕಟಪ್ಪ ರಸ್ತೆ, ಮುನಿಸ್ವಾಮಿ ರಸ್ತೆ, ಪಾಯಪ್ಪ ಗಾರ್ಡನ್, ಸಿಮೆಂಟ್ರಿ ರಸ್ತೆ, ಪಾರ್ಕ್‌ ರಸ್ತೆ, ನಳರಸ್ತೆ ಸುತ್ತ ಮುತ್ತ ವಿದ್ಯುತ್‌ ಪೂರೈಕೆ ಇರುವುದಿಲ್ಲ ಎಂದು ಬೆಸ್ಕಾಂ ತಿಳಿಸಿದೆ.

ರಾಯಪುರ, ಬಿನ್ನಿಪೇಟೆ, ಪಾದರಾಯನಪುರ ಸುತ್ತಮುತ್ತ 4 ದಿನ ವಿದ್ಯುತ್ ವ್ಯತ್ಯಯ

ಕೆಪಿಟಿಸಿಎಲ್ ತನ್ನ ನಿರ್ವಹಾಣ ವ್ಯಾಪ್ತಿಯಲ್ಲಿರುವ 66/11 ಕೆ.ವಿ. ಟೆಲಿಕಾಂ ಸ್ಟೇಷನ್‌ನಲ್ಲಿನ ತುರ್ತು ನಿರ್ವಹಣಾ ಕಾಮಗಾರಿಯನ್ನು ನಡೆಸುವ ಕಾರಣ, ಅ.27ರಿಂದ ಅ.30ರವರೆಗೆ ರಾಯಪುರ, ಬಿನ್ನಿಪೇಟೆ, ಪಾದರಾಯನಪುರ ಸುತ್ತಮುತ್ತ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ.

ಇದರಿಂದಾಗಿ, ಬೆಂಗಳೂರು ನಗರದ ಓಬಳೇಶ್ ಕಾಲೋನಿ, ರಾಯಪುರ, ಬಿನ್ನಿಪೇಟೆ, ಪಾದರಾ ಯನಪುರ, ಜೆಜೆಆರ್ ನಗರ, ಗೋಪಾಲನ್ ಮಾಲ್, ಮೈಸೂರು ರಸ್ತೆ 1ನೇ, 2ನೇ, 3ನೇ ಕ್ರಾಸ್, ಜನತಾ ಕಾಲೋನಿ, ಶಾಮಣ್ಣ ಗಾರ್ಡನ್, ರಂಗನಾಥ್ ಕಾಲೋನಿ, ಹೊಸಹಳ್ಳಿ ಮುಖ್ಯ ರಸ್ತೆ, ಅಂಜನಪ್ಪ ಗಾರ್ಡನ್, ದೊರೆ ಸ್ವಾಮಿ ನಗರ,ಎಸ್‌ಡಿ ಮಠ, ಕಾಟನ್ ಪೆಟ್, ಅಕ್ಕಿಪೇಟೆ, ಬಾಲಾಜಿ ಕಾಂಪ್ಲೆಕ್ಸ್, ಸುಲ್ತಾನ್ ಪೇಟೆ, ಚಿಕ್ಕಪೇಟೆ ನಮ್ಮ ಮೆಟ್ರೋ ಸ್ಟೇಷನ್ ಎದುರು, ಗೋಪಾಲನ್ ಅಪಾರ್ಟ್‌ಮೆಂಟ್, ಭುವನೇಶ್ವರಿ ನಗರ, ಪ್ರೆಸ್ಟೀಜ್ ವುಡ್ಸ್ ಅಪಾರ್ಟ್ ಮೆಂಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಾಲ್ಕು ದಿನ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ