ಬೆಂಗಳೂರು ಒನ್ ಕೇಂದ್ರಗಳಲ್ಲಿ ಇ-ಖಾತಾ ಪಡೆಯಿರಿ, ದರ ಕೇವಲ 45 ರೂಪಾಯಿ, ಆನ್‌ಲೈನ್- ಆಫ್‌ಲೈನ್‌ನಲ್ಲಿ ಇ-ಖಾತೆ ಪಡೆಯಲು ಇಲ್ಲಿದೆ ಮಾರ್ಗದರ್ಶಿ
Nov 12, 2024 02:51 PM IST
ಬೆಂಗಳೂರು ಒನ್ ಕೇಂದ್ರಗಳಲ್ಲಿ ಇ-ಖಾತಾ ಪಡೆಯಿರಿ, ದರ ಕೇವಲ 45 ರೂಪಾಯಿ
- ಬೆಂಗಳೂರು ಪ್ರಾಪರ್ಟಿ ಮಾಲೀಕರು ಬೆಂಗಳೂರು ಒನ್ ಕೇಂದ್ರಗಳಲ್ಲಿಯೂ ಇಖಾತೆಯನ್ನು ಪಡೆಯಲು ಬಿಬಿಎಂಪಿಯು ಅವಕಾಶ ನೀಡಿದೆ. ಕೇವಲ 45 ರೂ. ಶುಲ್ಕ ನೀಡಿ ಇಖಾತೆ ಪಡೆಯಬಹುದು. ಬಿಬಿಎಂಪಿಗೆ ಅಂತಿಮ ಇ ಖಾತೆ ಪಡೆಯು 125 ರೂ. ಶುಲ್ಕ ಪಾವತಿಸಬೇಕು.
ಬೆಂಗಳೂರು: ಬೆಂಗಳೂರು ನಾಗರೀಕರಿಗೆ ಪ್ರಾಪರ್ಟಿ ದಾಖಲೆಗಳನ್ನು ಸುಲಭವಾಗಿ ದೊರಕುವಂತೆ ಮಾಡಲು ಬಿಬಿಎಂಪಿಯು ಹೊಸ ಕಾರ್ಯತಂತ್ರ ಆರಂಭಿಸಿದೆ. ಬೆಂಗಳೂರು ಒನ್ ಕೇಂದ್ರಗಳಲ್ಲಿ ಇ-ಖಾತಾ ಸೇವೆಗಳು ದೊರಕುವಂತೆ ಮಾಡಲಿದೆ. ಕೇವಲ 45 ರೂಪಾಯಿ ನೀಡಿ ಇಲ್ಲಿ ಇ-ಖಾತಾ ಪಡೆಯಬಹುದಾಗಿದೆ.
ಇ-ಖಾತಾ ಪಡೆಯಲು ಶುಲ್ಕ ಎಷ್ಟು?
- ಬೆಂಗಳೂರು ಒನ್ ಕೇಂದ್ರದಲ್ಲಿ 45 ರೂ. ಶುಲ್ಕ ಮತ್ತು ಪ್ರತಿ ದಾಖಲೆಯ ಪುಟ ಸ್ಕ್ಯಾನ್ ಮಾಡಲು 5 ರೂ. ಪಾವತಿಸಬೇಕು.
- ಬಿಬಿಎಂಪಿಗೆ 125 ರೂ.(ಅಂತಿಮ ಇ-ಖಾತಾ ಮುದ್ರಣಕ್ಕೆ ಸಿದ್ಧವಾದಾಗ ಮಾತ್ರ) ಪಾವತಿಸಬೇಕು.
ಯಾವೆಲ್ಲ ದಾಖಲೆ ಪತ್ರಗಳು ಬೇಕು
ಬೆಂಗಳೂರು ಒನ್‌ನಲ್ಲಿ ಇಖಾತೆ ಪಡೆಯಲು ದಾಖಲೆ ಪತ್ರಗಳನ್ನು ತೋರಿಸಿದರೆ ಸಾಕು, ಬೆಂಗಳೂರು ಒನ್ ಕೇಂದ್ರಗಳಲ್ಲಿ ಇಟ್ಟುಕೊಳ್ಳಲು ನೀಡಬಾರದು. ಕೆಳಗಿನ ದಾಖಲೆಗಳ ಪ್ರತಿಯೊಂದಿಗೆ ನೀವು ಬೆಂಗಳೂರು ಒನ್ ಕೇಂದ್ರವನ್ನು ಸಂಪರ್ಕಿಸಬೇಕು(ಅವುಗಳಲ್ಲಿ ಕೆಲವನ್ನು ತೋರಿಸಲು ಮತ್ತು ಸ್ಕ್ಯಾನ್ ಮಾಡಲು ಮಾತ್ರ ಅಲ್ಲಿ ಸಲ್ಲಿಸುವ/ನೀಡುವ ಅಗತ್ಯವಿಲ್ಲ) ಎಂದು ಬಿಬಿಎಂಪಿ ಮಾಹಿತಿ ನೀಡಿದೆ.
(1) ನಿಮ್ಮ ಆಸ್ತಿ ತೆರಿಗೆ ರಶೀದಿ
(2) ನಿಮ್ಮ ಮಾರಾಟ ಅಥವಾ ನೋಂದಾಯಿತ ಪತ್ರ
(3) ಎಲ್ಲಾ ಮಾಲೀಕರ ಆಧಾರ್
(4) ಬೆಸ್ಕಾಂ ಬಿಲ್
(5) ಜಲಮಂಡಳಿ ಬಿಲ್ (ನೀವು ಕಾವೇರಿ ಸಂಪರ್ಕವನ್ನು ಹೊಂದಿದ್ದರೆ)
(6) ಬಿಡಿಎ ಅಥವಾ ಯೋಜನಾ ಪ್ರಾಧಿಕಾರದಿಂದ ಲೇಔಟ್ ಅಥವಾ ಸೈಟ್ ಅನುಮೋದನೆ (ಇದರ ದಾಖಲೆ ಹೊಂದಿದ್ದರೆ)
(7) ಬಿಬಿಎಂಪಿಯಿಂದ ಕಟ್ಟಡ ಯೋಜನೆ ಅನುಮೋದನೆ(ಇದರ ದಾಖಲೆ ಹೊಂದಿದ್ದರೆ)
(8) ಡಿಸಿ ಪರಿವರ್ತನೆ (ಇದರ ದಾಖಲೆ ಹೊಂದಿದ್ದರೆ)
(9) ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(BDA) ಅಥವಾ ಕರ್ನಾಟಕ ಹೌಸಿಂಗ್ ಬೋರ್ಡ್(KHB) ಅಥವಾ ಯಾವುದೇ ಸರ್ಕಾರಿ ಪ್ರಾಧಿಕಾರದಿಂದ ಹಂಚಿಕೆ ಪತ್ರ (ಇದು ನಿಮ್ಮ ಪ್ರಕರಣಕ್ಕೆ ಅನ್ವಯಿಸಿದರೆ ಮತ್ತು ನೀವು ಇದರ ದಾಖಲೆ ಹೊಂದಿದ್ದರೆ)
ನೀವು ಮೇಲಿನ ದಾಖಲೆಗಳನ್ನು ಬೆಂಗಳೂರು ಒನ್ ಕೇಂದ್ರಕ್ಕೆ ಸಲ್ಲಿಸುವ ಅಗತ್ಯವಿಲ್ಲ. ಆದರೆ ಆನ್‌ಲೈನ್ ವಿವರಗಳನ್ನು ಸಲ್ಲಿಸಲು ಅವರಿಗೆ ತೋರಿಸಿ ಮತ್ತು ನಂತರ ಅವುಗಳನ್ನು ಹಿಂದಕ್ಕೆ ಪಡೆದುಕೊಳ್ಳಿ ಎಂದು ಬಿಬಿಎಂಪಿ ತಿಳಿಸಿ
ಬಿಬಿಎಂಪಿ ಇ ಖಾತೆ ಸಹಾಯವಾಣಿ
ಬಿಬಿಎಂಪಿ ಇ ಖಾತೆ ಕುರಿತು ಹೆಚ್ಚಿನ ಮಾಹಿತಿಗೆ ಕರೆ ಮಾಡಬಹುದಾದ ಸಂಖ್ಯೆ: 1533, ಇಮೇಲ್: bbmpekhata@gmail.com
ಬೆಂಗಳೂರಿನಲ್ಲಿ ಇ ಖಾತಾ ತೆರೆಯಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಹೇಗೆ?
ಆನ್‌ಲೈನ್ ಮೂಲಕವೂ ಸುಲಭವಾಗಿ ಇಖಾತೆಗೆ ಅರ್ಜಿ ಸಲ್ಲಿಸಬಹುದು. ಪ್ರಾಪರ್ಟಿ ಮಾಲೀಕರು ಮೊದಲು bbmpeaasthi.karnataka.gov.in ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಮೊಬೈಲ್ ಮತ್ತು ಒಟಿಪಿ ಬಳಸಿ ಲಾಗಿನ್ ಆಗಿ. ನಿಮ್ಮ ಪ್ರಾಪರ್ಟಿಯ ಕರಡು ಇಖಾತಾವನ್ನು ಡೌನ್‌ಲೋಡ್ ಮಾಡಿಕೊಳ್ಳಿ. ಅಂತಿಮ ಇಖಾತಾ ಆನ್‌ಲೈನ್‌ನಲ್ಲಿ ನಾಗರಿಕರು ಹೆಚ್ಚುವರಿ ಮಾಹಿತಿಯನ್ನು ಸೇರಿಸಬೇಕು. ರಿಜಿಸ್ಟ್ರಾರ್ಡ್ ಡೀಡ್, ಆಧಾರ್ ಆಧರಿತ ಇಕೆವೈಸಿ, ಎಸ್‌ಎಎಸ್ ಪ್ರಾಪರ್ಟಿ ಟ್ಯಾಕ್ಸ್ ಅಪ್ಲಿಕೇಷನ್ ನಂಬರ್, ಪ್ರಾಪರ್ಟಿ ಫೋಟೋ, ಎ ಖಾತಾ ಪಡೆಯು ದಾಖಲೆಗಳು, ಎನ್‌ಕ್ಯುಂಬ್ರೆನ್ಸ್ ಸರ್ಟಿಫಿಕೇಟ್ (ಏಳು ದಿನಗಳೊಳಗಿನದ್ದು) ಇತ್ಯಾದಿಗಳನ್ನು ಸೇರಿಸಬೇಕು. ಈ ವೆಬ್‌ಸೈಟ್‌ನಲ್ಲಿ ಯಾವುದಾದರೂ ಪ್ರಾಪರ್ಟಿಗೆ ಅಂತಿಮ ಖಾತೆ ನೀಡದಂತೆಯೂ ತಕರಾರು ಕೂಡ ಸಲ್ಲಿಸಬಹುದು.
ಇ-ಖಾತೆ ಪಡೆಯಲು ಬಿಬಿಎಂಪಿ ಮಾರ್ಗದರ್ಶಿ
ಬಿಬಿಎಂಪಿ ವ್ಯಾಪ್ತಿಯಲ್ಲಿ ಇ-ಖಾತಾ ಪಡೆಯುವ ಸಲುವಾಗಿ ಕನ್ನಡ ಹಾಗೂ ಇಂಗ್ಲೀಷ್ ಭಾಷೆಯ ತರಬೇತಿ ವೀಡಿಯೋವನ್ನು ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಲಾಗಿದ್ದು, ಅದನ್ನು ನೋಡಿಕೊಂಡು ಸ್ವತಃ ಇ-ಖಾತಾಗೆ ಸಲ್ಲಿಸಬಹುದು.