ಇಪಿಎಫ್ ಖಾತೆಯಿಂದ ಹಣವನ್ನು ವಾಪಸ್ ಪಡೆಯುವುದೇಗೆ; ಈ ವಿಧಾನವನ್ನ ಅನುಸರಿಸಿ -EPF Withdraw Steps
EPF Withdraw Steps: ನೀವೇನಾದರೂ ನಿಮ್ಮ ಇಪಿಎಫ್ ಖಾತೆಯಿಂದ ಹಣ ವಾಪಸ್ ಪಡೆಯಬೇಕೆಂದುಕೊಂಡರೆ ಪ್ರಮುಖವಾಗಿ ಒಂದಿಷ್ಟು ಅಗತ್ಯ ಮಾಹಿತಿ ತಿಳಿದಿರಬೇಕು. ಜೊತೆಗೆ ಪಿಎಫ್ ಹಣ ವಾಪುಸ್ ಪಡೆಯುವುದು ಹೇಗೆ ಅನ್ನೋದರ ಮಾಹಿತಿಯೂ ಇಲ್ಲಿದೆ.
ಬೆಂಗಳೂರು: ಮೂಲ ವೇತನ ಅಂದರೆ ಬೇಸಿಕ್ ಸ್ಯಾಲರಿ 15 ಸಾವಿರ ಹಾಗೂ ಅದಕ್ಕಿಂತ ಹೆಚ್ಚಿನ ಸಂಬಳವನ್ನು ಪಡೆಯುವ ಉದ್ಯೋಗಿಗಳೆಲ್ಲಾ ಇಪಿಎಫ್‌ಗೆ (EPF) ಅರ್ಹರಾಗಿರುತ್ತಾರೆ. ತಮ್ಮ ಸಂಬಳದ ಕನಿಷ್ಠ 12 ರಷ್ಟು ಕೊಡುಗೆಯನ್ನು ಇಪಿಎಫ್‌ಗೆ ನೀಡಬೇಕಾಗುತ್ತದೆ. ನಿವೃತ್ತಿಯ ವೇಳೆಗೆ ಇದು ದೊಡ್ಡ ಮೊತ್ತವಾಗಿ ನಿಮ್ಮ ಕೈ ಸೇರುತ್ತದೆ. ನೀವು ಇಪಿಎಫ್ ಅನ್ನು ವಾಪಸ್ ಪಡೆಯಬೇಕೆಂದು ಬಯಸಿದರೆ ಅದನ್ನು ನೀವು ಯಾವ ಸಂದರ್ಭದಲ್ಲಿ ಹೇಗೆ ವಿತ್‌ಡ್ರಾ ಮಾಡಿಕೊಳ್ಳಬೇಕು ಅನ್ನೋದನ್ನ ತಿಳಿಯೋಣ.
ಇಪಿಎಫ್ ಸಂಪೂರ್ಣ ಹಣ ಅಥವಾ ಸ್ವಲ್ಪ ಮೊತ್ತವನ್ನು ಪಡೆಯಲು ಅವಕಾಶವಿದೆ. ಆದರೆ ಈ ಹಣವನ್ನು ನೀವು ಡ್ರಾ ಮಾಡಲು ಕೆಲವು ನಿಮಯಗಳು ಅನ್ವಿಯಸುತ್ತವೆ. ಕೇವಲ ಎರಡು ಸಂದರ್ಭಗಳಲ್ಲಿ ಮಾತ್ರ ನೀವು ಈ ಹಣವನ್ನು ವಿತ್‌ಡ್ರಾ ಮಾಡಲು ಸಾಧ್ಯವಿದೆ. ಒಬ್ಬ ವ್ಯಕ್ತಿ ಒಂದು ತಿಂಗಳಿಗಿಂತ ಹೆಚ್ಚು ಕಾಲ ನಿರುದ್ಯೋಗಿಯಾಗಿದ್ದರೆ ಅವನು ಅಥವಾ ಅವನಳು ಒಟ್ಟು ಭವಿಷ್ಯ ನಿಧಿಯ ಶೇಕಡಾ 75 ರಷ್ಟು ಹಣವನ್ನು ವಾಪಸ್ ಪಡೆಯಬಹುದು. ನಿರುದ್ಯೋಗದ ಅವಧಿ 2 ತಿಂಗಳಿಗಿಂತ ಹೆಚ್ಚಿದ್ದರೆ ಇನ್ನುಳಿದ ಶೇಕಡಾ 25 ರಷ್ಟು ಹಣವನ್ನೂ ವಾಪಸ್ ಪಡೆಯಬಹುದು.
ಆನ್‌ಲೈನ್‌ನಲ್ಲಿ ಪಿಎಫ್ ಹಣ ವಾಪಸ್ ಪಡೆಯಬೇಕಾದರೆ ನೀವು ಕೆಲಸ ಬಿಟ್ಟು 2 (45 ದಿನಗಳಿಗಿಂತ ಅಧಿಕ) ತಿಂಗಳಾಗಿರಬೇಕು. ಎರಡು ತಿಂಗಳೊಳಗೆ ಅರ್ಜಿ ಸಲ್ಲಿಸಲು ಅವಕಾಶ ಇರೋದಿಲ್ಲ. ಇಪಿಎಫ್ ಹಣವನ್ನು ವಿತ್‌ಡ್ರಾ ಮಾಡಲು ನಿಮ್ಮ ಮೊಬೈಲ್ ನಂಬರ್ ಕಡ್ಡಾಯವಾಗಿ ಪಿಎಫ್ ಅಕೌಂಟ್, ಆಧಾರ್ ಸಂಖ್ಯೆಗೆ ಲಿಂಕ್ ಆಗಿರಬೇಕು. ಆನ್‌ಲೈನ್‌ನಲ್ಲಿ ಇಪಿಎಫ್ ಹಣವನ್ನು ವಾಪಸ್ ಪಡೆಯುವ ವಿಧಾನವನ್ನು ನೋಡೋಣ.
ಆನ್‌ಲೈನ್‌ನಲ್ಲಿ ಇಪಿಎಫ್ ಹಣವನ್ನು ವಾಪಸ್ ಪಡೆಯುವ ವಿಧಾನ
- ಇಪಿಎಫ್‌ಒ ಪೋರ್ಟಲ್‌ಗೆ ಭೇಟಿ ನೀಡಿ. ನಿಮ್ಮ ಯುಎಎನ್ ಮತ್ತು ಪಾಸ್‌ವರ್ಡ್ ಬಳಿಸಿ ಲಾಗ್‌ಇನ್ ಆಗಬೇಕು. ಆ ನಂತರ ಕ್ಯಾಪ್ಚಾ ಕೋಡ್ ಅನ್ನು ನಮೂದಿಸಬೇಕು ಅಥವಾ ನೇರ ಲಿಂಕ್ https://unifiedportal-mem.epfindia.gov.in/memberinterface/ ಭೇಟಿ ನೀಡಿ
- ಮ್ಯಾನೇಜ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಆಧಾರ್, ಪಾನ್ ಹಾಗೂ ಬ್ಯಾಂಕ್ ಮಾಹಿತಿ ಸರಿಯಾಗಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಿ
- ನಿಮ್ಮ ಯುಎಎನ್ ನಂಬರ್ ಗೊತ್ತಿಲ್ಲದಿದ್ದರೆ Know Your UAN ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಿಮ್ಮ ಯುಎಎನ್ ನಂಬರ್ ತಿಳಿದುಕೊಳ್ಳಿ.
- ಯುಎಎನ್ ನಂಬರ್ ಖಾತ್ರಿಯಾದ ನಂತರ ಆನ್‌ಲೈನ್ ಕ್ಲೈಮ್ ವಿಭಾಗಕ್ಕೆ ಹೋಗಿ ಲಾಗಿ ಮಾಡಿದಾಗ ನೀವು ಆನ್‌ಲೈನ್ ಸೇವೆಗಳು ವಿಭಾಗದಲ್ಲಿ ಫಾರ್ಮ್ -31, 19, 10ಸಿ ಹಾಗೂ 10 ಡಿ ಕಾಣುತ್ತದೆ. ಇಲ್ಲಿ ಪಿಫ್‌ಗಾಗಿ ಫಾರ್ಮ್ 19 ಸೆಲೆಕ್ಟ್ ಮಾಡಿಕೊಳ್ಳಿ
- ನಿಮ್ಮ ಸರಿಯಾದ ಬ್ಯಾಂಕ್ ಖಾತೆಯ ಸಂಖ್ಯೆಯನ್ನು ಪರಿಶೀಲನಾ ಪ್ರಕ್ರಿಯೆಯನ್ನು ನಮೂದಿಸಬೇಕು
- ನೀವು ಒಮ್ಮೆ ನಿಮ್ಮ ವಿವರಗಳನ್ನು ಪೂರ್ಣಗೊಳಿಸಿದ ನಂತರ ದಾಖಲೆಗಳನ್ನು ಪರಿಶೀಲಿಸಿದ ನಂತರ ಅಂತಿಮವಾಗಿ ಆನ್‌ಲೈನ್ ಕ್ಲೈಮ್ ಮುಂದುವರೆಯಿಸಿ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ಆ ಬಳಿಕ ಡ್ರಾಪ್‌ಡೌನ್ ಮೆನು ಕಾಣುತ್ತದೆ. ಅದರಲ್ಲಿ ನಿಮ್ಮ ಪಿಎಫ್ ಖಾತೆಯಿಂದ ಹಣ ವಾಪಸ್ ಪಡೆಯುತ್ತಿರುವುದಕ್ಕೆ ಕಾರಣವನ್ನು ಆಯ್ಕೆ ಮಾಡಬೇಕು. ಅರ್ಹರಾಗಿರುವ ಆಯ್ಕೆಗಳು ಮಾತ್ರ ನಿಮಗೆ ಪ್ರದರ್ಶನವಾಗುತ್ತವೆ
- ಇದಾದ ಬಳಿಕ ನಿಮ್ಮ ಸಂಪೂರ್ಣ ವಿಳಾಸವನ್ನು ನಮೂದಿಸಬೇಕಾಗುತ್ತದೆ.ಎಲ್ಲಾ ವಿವರಗಳನ್ನು ದೃಢೀಕರಿಸಿದ ನಂತರ ನಿಯಮ ಹಾಗೂ ಷರತ್ತುಗಳನ್ನು ಒಪ್ಪಿಕೊಂಡಿದ್ದರೆ ನೋಂದಾಯಿತ ಮೊಬೈಲ್‌ಗೆ ಒಂದು ಒಟಿಪಿ ಬರುತ್ತದೆ. ಆ ಒಟಿಪಿಯನ್ನು ನಮೂದಿಸಿದ ನಂತರ ನೀವು ಇಪಿಎಫ್ ಹಣವನ್ನು ಪಡೆಯಬೇಕಾದ ಅರ್ಜಿ ಸಲ್ಲಿಕೆಯಾಗುತ್ತದೆ. ನಂತರ ಅರ್ಜಿ ಪರಿಶೀಲನೆ ಪೂರ್ಣಗೊಂಡ ಬಳಿಕ ನಿಮ್ಮ ಖಾತೆಗೆ ಪಿಎಫ್ ಹಣ ಜಮೆಯಾಗಲಿದೆ.
ವಿಭಾಗ