logo
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಿನ ಟೆಕ್ಕಿಯ ಜಾಬ್ ಆಫರ್ ನೋಡಿ ನೆಟ್ಟಿಗರಿಗೆ ಅಚ್ಚರಿ; 65 ಲಕ್ಷದ ಜೊತೆಗೆ 28 ಲಕ್ಷ ಬೋನಸ್, ಇನ್ನೇನಿದೆ ನೋಡಿ

ಬೆಂಗಳೂರಿನ ಟೆಕ್ಕಿಯ ಜಾಬ್ ಆಫರ್ ನೋಡಿ ನೆಟ್ಟಿಗರಿಗೆ ಅಚ್ಚರಿ; 65 ಲಕ್ಷದ ಜೊತೆಗೆ 28 ಲಕ್ಷ ಬೋನಸ್, ಇನ್ನೇನಿದೆ ನೋಡಿ

Jayaraj HT Kannada

Oct 06, 2024 04:42 PM IST

google News

ಬೆಂಗಳೂರಿನ ಟೆಕ್ಕಿಯ ಜಾಬ್ ಆಫರ್ ನೋಡಿ ನೆಟ್ಟಿಗರಿಗೆ ಅಚ್ಚರಿ; ಬೋನಸ್ ಜೊತೆಗೆ ಇನ್ನೇನಿದೆ ನೋಡಿ

    • ಒಳ್ಳೆಯ ಸಂಬಳದ ಉದ್ಯೋಗ ಬೇಕು ಅಂದ್ರೆ ಅಷ್ಟು ಸುಲಭವಿಲ್ಲ. ಕೆಲವೊಮ್ಮೆ ಅದೃಷ್ಟವಿದ್ದರೆ ದೊಡ್ಡ ಕಂಪನಿಯಿಂದ ಅನಿರೀಕ್ಷಿತ ಆಫರ್‌ ಬಂದುಬಿಡುತ್ತದೆ. ಇಲ್ಲಿ ಕಂಪ್ಯೂಟರ್‌ ಸೈನ್ಸ್‌ ಓದದ ಟೆಕ್ಕಿಯೊಬ್ಬರಿಗೆ ಸಾಫ್ಟ್‌ವೇರ್ ಇಂಜಿನಿಯರ್ ಹುದ್ದೆಗೆ ಬಂದಿರುವ ಆಫರ್‌ ನೆಟ್ಟಿಗರ ಗಮನ ಸೆಳೆದಿದೆ.
ಬೆಂಗಳೂರಿನ ಟೆಕ್ಕಿಯ ಜಾಬ್ ಆಫರ್ ನೋಡಿ ನೆಟ್ಟಿಗರಿಗೆ ಅಚ್ಚರಿ; ಬೋನಸ್ ಜೊತೆಗೆ ಇನ್ನೇನಿದೆ ನೋಡಿ
ಬೆಂಗಳೂರಿನ ಟೆಕ್ಕಿಯ ಜಾಬ್ ಆಫರ್ ನೋಡಿ ನೆಟ್ಟಿಗರಿಗೆ ಅಚ್ಚರಿ; ಬೋನಸ್ ಜೊತೆಗೆ ಇನ್ನೇನಿದೆ ನೋಡಿ

ಬೆಂಗಳೂರಿನ ಟೆಕ್ಕಿಯೊಬ್ಬ ಕೆಲಸಕ್ಕಾಗಿ ಭರ್ಜರಿ ಆಫರ್‌ ಪಡೆದಿದ್ದಾನೆ. ಹೆಚ್ಚೇನು ಪ್ರಸಿದ್ಧವಲ್ಲದ ಕಾಲೇಜಿನಲ್ಲಿ ಇಂಜಿನಿಯರಿಂಗ್‌ ಮುಗಿಸಿರುವ ಟೆಕ್ಕಿಗೆ ಗೂಗಲ್‌ನಿಂದ ಬಂದಿರುವ ಈ ಜಾಬ್‌ ಆಫರ್‌ ಆನ್‌ಲೈನ್‌ನಲ್ಲಿ ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ. ಆಫರ್‌ ಜೊತೆಗೆ ಭರ್ಜರಿ ಸಂಬಳ, ಬೋನಸ್‌ ಕೂಡಾ ಕೊಡುವುದಾಗಿ ಕಂಪನಿ ಆಫರ್‌ ಲೆಟರ್‌ನಲ್ಲಿ ಹೇಳಿದೆ. ಮಲ್ಟಿನ್ಯಾಷನಲ್‌ ಹಣಕಾಸು ಸಂಸ್ಥೆಯಾಗಿರುವ ಜೆಪಿ ಮೋರ್ಗಾನ್‌ನಲ್ಲಿ ಡೆವಲಪರ್ ಆಗಿರುವ ಕಾರ್ತಿಕ್ ಜೋಲಾಪರಾ, ಅಪರಿಚಿತ ವ್ಯಕ್ತಿಗೆ ಬಂದಿರುವ ಆಫರ್‌ ಕುರಿತು ಹೇಳಿಕೊಂಡಿದ್ದಾರೆ.

ಆಫರ್‌ ಲೆಟರ್ ಕುರಿತು ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಜೋಲಾಪರಾ, ಇದು "ಕ್ರೇಜಿ ಆಫರ್‌" ಎಂದು ಬರೆದಿದ್ದಾರೆ. ಆಫರ್‌ ಸ್ಕ್ರೀನ್‌ಶಾಟ್ ಪೋಸ್ಟ್ ಮಾಡಿದ್ದು, ಟೆಕ್ ಲೋಕದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಅಷ್ಟಕ್ಕೂ ಕಂಪ್ಯೂಟರ್‌ ಸೈನ್ಸ್‌ ಓದದ ವ್ಯಕ್ತಿಗೆ ಬಂದಿರುವ ಈ ಆಫರ್‌ನಲ್ಲಿ ಏನೇನಿದೆ ಎಂಬುದನ್ನು ನೋಡಿಬಿಡಿ.

ಆಫರ್‌ನಲ್ಲಿ ಏನೇನಿದೆ ಗೊತ್ತಾ?

ಈ ಆಫರ್‌ ಬಂದಿರುವುದು Googleನಿಂದ. ಹಿರಿಯ ಸಾಫ್ಟ್‌ವೇರ್ ಇಂಜಿನಿಯರ್ ಹುದ್ದೆಗಾಗಿ ಈ ಆಫರ್‌ ನೀಡಲಾಗಿದೆ. ಕಂಪನಿಯು ವ್ಯಕ್ತಿಗೆ ವಾರ್ಷಿಕ 65 ಲಕ್ಷ ರೂಪಾಯಿ ವೇತನ ಪ್ಯಾಕೇಜ್ ನೀಡುವುದಾಗಿ ಹೇಳಿದೆ. ಇಷ್ಟೇ ಆಗಿದ್ದರೆ ಗಮನ ಸೆಳೆಯುತ್ತಿರಲಿಲ್ಲ. ಇದರೊಂದಿಗೆ ಹೆಚ್ಚುವರಿ ಲಾಭದಾಯಕ ಆಫರ್‌ ಕೂಡಾ ನೀಡಲಾಗಿದೆ. 9 ಲಕ್ಷ ರೂ ವಾರ್ಷಿಕ ಬೋನಸ್, 19 ಲಕ್ಷ ರೂಪಾಯಿ ಸೈನಿಂಗ್‌ ಬೋನಸ್ ಮತ್ತು ಸ್ಥಳಾಂತರಕ್ಕಾಗಿ 5 ಲಕ್ಷ ರೂ ಬೋನಸ್ ನೀಡುವುದಾಗಿ ಆಫರ್‌ನಲ್ಲಿ ಹೇಳಿರುವುದು ಹೆಚ್ಚು ಗಮನ ಸೆಳೆದಿದೆ. ಅಂದರೆ ಮೊದಲ ವರ್ಷದಲ್ಲೇ ಬರೋಬ್ಬರಿ 1.64 ಕೋಟಿ ರೂಪಾಯಿಗಳ ಪ್ಯಾಕೇಜ್ ಸಿಕ್ಕಂತಾಗುತ್ತದೆ.‌

ಕಂಪ್ಯೂಟರ್ ವಿಜ್ಞಾನದಲ್ಲಿ ಯಾವುದೇ ಔಪಚಾರಿಕ ಪದವಿಯನ್ನು ಪಡೆಯದ ಇಂಜಿನಿಯರಿಂಗ್‌ ಪದವೀಧರನಿಗೆ ಸಿಕ್ಕಿರುವ ಈ ಆಫರ್ ಸಿಕ್ಕಿರುವುದು ಹಲವರ ಅಚ್ಚರಿಗೆ ಕಾರಣವಾಗಿದೆ. ಅದು ಟೈರ್‌ 3 ಸಂಸ್ಥೆಯಿಂದ ಪದವಿ ಪಡೆದಿರುವ ವ್ಯಕ್ತಿಗೆ ಬಂದಿರುವ ದೊಡ್ಡ ಆಫರ್‌ ಹೆಚ್ಚು ಗಮನ ಸೆಳೆದಿದೆ.

ನೆಟ್ಟಿಗರಲ್ಲಿ ಚರ್ಚೆ

ಈ ಆಫರ್‌ ಕುರಿತು ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ಕೆಲವು ಬಳಕೆದಾರರು ಆಫರ್‌ನ ಮಹತ್ವವನ್ನು ಒಪ್ಪಿಕೊಂಡಿದ್ದಾರೆ. ಸಾಂಪ್ರದಾಯಿಕ ಶೈಕ್ಷಣಿಕ ಹಿನ್ನೆಲೆ ಇಲ್ಲದ ಹಲವರು ಇಂಥಾ ಆಫರ್‌ ಪಡೆಯುತ್ತಾರೆ ಎಂದಿದ್ದಾರೆ. “ಇದೇ ರೀತಿ ಕಡಿಮೆ ಅನುಭವ ಹೊಂದಿರುವವರು ಅದಕ್ಕಿಂತ ಹೆಚ್ಚಿನ ಆಫರ್ ಪಡೆದಿರುವುದನ್ನು ನಾನು ನೋಡಿದ್ದೇನೆ. ಇದೇನೂ ದೊಡ್ಡ ವಿಷಯವಲ್ಲ,” ಎಂದು ಒಬ್ಬರು ಹೇಳಿದ್ದಾರೆ. “ಕಂಪ್ಯೂಟರ್‌ ಸೈನ್ಸ್‌ ಹಿನ್ನೆಲೆ ಇಲ್ಲದೆ, 3 ದರ್ಜೆಯ ಕಾಲೇಜಿನಿಂದ ಪದವಿ ಪಡೆದವರಿಗೆ ಈ ಆಫರ್‌ ಸಿಕ್ಕಿರುವುದು ಆಕರ್ಷಕವಾಗಿದೆ" ಎಂದು ಮತ್ತೊಬ್ಬರು ಹೇಳಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ