logo
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ರಸ್ತೆಯಲ್ಲಿ ನಡ್ಕೊಂಡು ಹೋಗುವಾಗ ಎಂದಾದರೂ ನೀವು ಹೀಗೆ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡಿದ್ರಾ! ಇಲ್ನೋಡಿ ವೈರಲ್ ವಿಡಿಯೋ

ಬೆಂಗಳೂರು ರಸ್ತೆಯಲ್ಲಿ ನಡ್ಕೊಂಡು ಹೋಗುವಾಗ ಎಂದಾದರೂ ನೀವು ಹೀಗೆ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡಿದ್ರಾ! ಇಲ್ನೋಡಿ ವೈರಲ್ ವಿಡಿಯೋ

Umesh Kumar S HT Kannada

Nov 22, 2024 12:10 PM IST

google News

ಬೆಂಗಳೂರು ರಸ್ತೆಯಲ್ಲಿ ಪಾದಚಾರಿಯೊಬ್ಬ ವಾಹನಗಳ ನಡುವೆ ನಿಂತುಕೊಂಡಿರುವ ದೃಶ್ಯ. ಬೆಂಗಳೂರು ರಸ್ತೆಯಲ್ಲಿ ನಡ್ಕೊಂಡು ಹೋಗುವಾಗ ಎಂದಾದರೂ ನೀವು ಹೀಗೆ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡಿದ್ರಾ! ಇಲ್ಲಿರುವುದು ವೈರಲ್ ವಿಡಿಯೋದಿಂದ ತೆಗೆದ ದೃಶ್ಯ.

  • ಬೆಂಗಳೂರು ರಸ್ತೆಯಲ್ಲಿ ಸಂಚಾರ ದಟ್ಟಣೆ ಹೊಸದಲ್ಲ. ಪ್ರತಿಯೊಬ್ಬರಿಗೂ ಇದರ ಅನುಭವ ಇದ್ದೇ ಇದೆ. ಆದರೆ ಪಾದಚಾರಿಯಾಗಿ ನಡ್ಕೊಂಡು ಹೋಗುವಾಗ ನೀವು ಎಂದಾದರೂ ಹೀಗೆ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡಿದ್ರಾ! ಇಲ್ನೋಡಿ ವೈರಲ್ ವಿಡಿಯೋ. ಪಾದಚಾರಿ ಸುರಕ್ಷೆ ಎತ್ತಿ ತೋರಿಸುವ ಪೋಸ್ಟ್‌ನ ವಿವರ ಇಲ್ಲಿದೆ.

ಬೆಂಗಳೂರು ರಸ್ತೆಯಲ್ಲಿ ಪಾದಚಾರಿಯೊಬ್ಬ ವಾಹನಗಳ ನಡುವೆ ನಿಂತುಕೊಂಡಿರುವ ದೃಶ್ಯ. ಬೆಂಗಳೂರು ರಸ್ತೆಯಲ್ಲಿ ನಡ್ಕೊಂಡು ಹೋಗುವಾಗ ಎಂದಾದರೂ ನೀವು ಹೀಗೆ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡಿದ್ರಾ! ಇಲ್ಲಿರುವುದು ವೈರಲ್ ವಿಡಿಯೋದಿಂದ ತೆಗೆದ ದೃಶ್ಯ.
ಬೆಂಗಳೂರು ರಸ್ತೆಯಲ್ಲಿ ಪಾದಚಾರಿಯೊಬ್ಬ ವಾಹನಗಳ ನಡುವೆ ನಿಂತುಕೊಂಡಿರುವ ದೃಶ್ಯ. ಬೆಂಗಳೂರು ರಸ್ತೆಯಲ್ಲಿ ನಡ್ಕೊಂಡು ಹೋಗುವಾಗ ಎಂದಾದರೂ ನೀವು ಹೀಗೆ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡಿದ್ರಾ! ಇಲ್ಲಿರುವುದು ವೈರಲ್ ವಿಡಿಯೋದಿಂದ ತೆಗೆದ ದೃಶ್ಯ. (PC - @karnatakaportf)

ಬೆಂಗಳೂರು: ಟ್ರಾಫಿಕ್ ಜಾಮ್ ಬೆಂಗಳೂರು ವಾಹನ ಸವಾರರಿಗೆ ಹೊಸದಲ್ಲ. ಸಂಚಾರ ದಟ್ಟಣೆ ನಡುವೆ ಗಂಟೆಗಟ್ಟಲೆ ಸಿಲುಕಿ ಸಂಕಟ ಅನುಭವಿಸುವ ಆ ಸನ್ನಿವೇಶ ಯಾರಿಗೂ ಬೇಡ. ರಸ್ತೆ ಕಾಮಗಾರಿ, ಮೆಟ್ರೋ ಕಾಮಗಾರಿ ನಡೆಯುವ ಪ್ರದೇಶಗಳಲ್ಲಿ ಇಂತಹ ಸಂಚಾರ ದಟ್ಟಣೆ ಹೆಚ್ಚು. ಅಲ್ಲಿ ವಾಹನ ಚಲಾಯಿಸುವುದೇ ಒಂದು ಸವಾಲು. ಅದೇ ರೀತಿ, ಬೆಂಗಳೂರಿನಲ್ಲಿ ಪಾದಚಾರಿಗಳಿಗೂ ಇಂತಹ ಅನುಭವ ಆಗುವುದಿದೆ. ಅದೆಲ್ಲ ಗಂಟೆಗಟ್ಟಲೆ ಅಲ್ಲ. ಆದರೂ ಈ ವಿಚಾರ ಈಗೇಕೆ ಮುನ್ನೆಲೆಗೆ ಬಂತು ಅಂತೀರಾ, ಮೈಕ್ರೋ ಬ್ಲಾಗಿಂಗ್ ತಾಣ ಎಕ್ಸ್‌ನಲ್ಲಿ ಕರ್ನಾಟಕ ಪೋರ್ಟ್‌ಫೋಲಿಯೋ ಶೇರ್ ಮಾಡಿರುವ ವೈರಲ್ ವಿಡಿಯೋ ಮತ್ತು ಅದರಲ್ಲಿ ನೀಡಿರುವ ವಿವರಣೆ ಕಾರಣ.

ಬೆಂಗಳೂರು ಟ್ರಾಫಿಕ್ ಜಾಮ್‌ ವಾಹನಗಳಿಗಷ್ಟೇ ಎಂದವರು ಯಾರು!

ಕರ್ನಾಟಕ ಪೋರ್ಟ್‌ಫೋಲಿಯಾ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡ ವೈರಲ್ ವಿಡಿಯೋ ಮತ್ತು ಅದರ ವಿವರಣೆ ಗಮನಸೆಳೆದಿದೆ. ಅದು ಹೀಗಿದೆ - "ಬೆಂಗಳೂರು ಸಂಚಾರ ಕೇವಲ ವಾಹನಗಳಿಗೆ ಮಾತ್ರ ಎಂದು ಯಾರು ಹೇಳಿದರು? ಪಾದಚಾರಿಗಳೂ ಈಗ ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಂಡಿದ್ದಾರೆ. ಸಿಗ್ನಲ್‌ಗಳಲ್ಲಿ ವಾಹನಗಳ ಪಕ್ಕದಲ್ಲಿ ನಿಂತು, ರಸ್ತೆ ದಾಟಲು ತಮ್ಮ ಸರದಿಗಾಗಿ ಕಾಯುತ್ತಿದ್ದಾರೆ. ಈ ಸಂಚಾರ ದಟ್ಟಣೆಯ ಬೆಳೆಯುತ್ತಿರುವ ಸವಾಲು ನಗರದಲ್ಲಿ ಸರಿಯಾದ ಪಾದಚಾರಿ ಮೂಲಸೌಕರ್ಯಗಳ ಕೊರತೆಯನ್ನು ಎತ್ತಿ ತೋರಿಸುತ್ತದೆ.

ಬೆಂಗಳೂರಲ್ಲಿ ಫುಟ್‌ಪಾತ್ ಎಲ್ಲಿದೆ?

ಮೊದಲ ಪ್ಯಾರಾದಲ್ಲಿ ಕರ್ನಾಟಕ ಪೋರ್ಟ್‌ಫೋಲಿಯೋ ಪಾದಚಾರಿಗಳ ಸಂಕಷ್ಟವನ್ನು ಹೇಳುತ್ತ, ಪಾದಚಾರಿ ಮೂಲಸೌಕರ್ಯ ಕೊರತೆ ಕಡೆಗೆ ಗಮನಸೆಳೆದಿದ್ದಾರೆ. ಎರಡನೇ ಪ್ಯಾರಾದಲ್ಲಿ “ಫುಟ್‌ಪಾತ್‌ಗಳು ಆಗಾಗ್ಗೆ ಅತಿಕ್ರಮಣಕ್ಕೆ ಒಳಗಾಗುತ್ತದೆ. ಪಾದಚಾರಿ ಸಿಗ್ನಲ್‌ ಕೂಡ ಸರಿಯಾಗಿ ಕೆಲಸ ಮಾಡಲ್ಲ ಅಥವಾ ಇಲ್ಲ. ಬೆಂಗಳೂರು ರಸ್ತೆಯನ್ನು ದಾಟುವುದಕ್ಕೆ ಬಹಳ ತಾಳ್ಮೆ ಬೇಕು. ಅದೇ ರೀತಿ, ರಸ್ತೆ ದಾಟುವ ಪ್ರಯತ್ನವು ಪಾದಚಾರಿಗಳ ಸುರಕ್ಷತೆಯ ಪರೀಕ್ಷೆಯೂ ಹೌದು. ಪಾದಚಾರಿಗಳಿಗೆ ಪ್ರತ್ಯೇಕ ಪಾದಚಾರಿ ಮಾರ್ಗ ಇಲ್ಲದ ಕಾರಣ ವಾಹನ ಸಂಚರಿಸುವ ರಸ್ತೆಯಲ್ಲೇ ಸಂಚರಿಸಬೇಕಾದ ಸ್ಥಿತಿ ಇದೆ. ಇಂತಹ ಸನ್ನಿವೇಶ ಪಾದಚಾರಿಗಳನ್ನು ಅಪಾಯಕ್ಕೆ ಒಡ್ಡುತ್ತದೆ. ಈಗಾಗಲೇ ಅಸ್ತವ್ಯಸ್ತವಾಗಿರುವ ಸಂಚಾರ ವ್ಯವಸ್ಥೆ ಇನ್ನಷ್ಟು ಹದಗೆಡುತ್ತಿರುವುದಕ್ಕೆ ಇದುವೇ ಸಾಕ್ಷಿ” ಎಂದು ಹೇಳಲಾಗಿದೆ.

ಪಾದಚಾರಿ ಸ್ನೇಹಿ ಮಾರ್ಗ ಮತ್ತು ಉಪಕ್ರಮ ಬೇಕು

ಬೆಂಗಳೂರು ರಸ್ತೆಗಳಲ್ಲಿ ಪಾದಚಾರಿಗಳಿಗೆ ಮೀಸಲಾದ ಕ್ರಾಸಿಂಗ್‌ಗಳು, ದೀರ್ಘ ಸಿಗ್ನಲ್ ಅವಧಿಗಳು ಮತ್ತು ಉತ್ತಮ-ನಿರ್ವಹಣೆಯ ಫುಟ್‌ಪಾತ್‌ಗಳಂತಹ ಪಾದಚಾರಿ-ಸ್ನೇಹಿ ಕ್ರಮಗಳ ಅಗತ್ಯ ಇದೆ. ಆದರೆ ಇವು ಎಂದಿಗೂ ಹೆಚ್ಚು ತುರ್ತು ಆಗಿರಲಿಲ್ಲ. ನೈಜ ಸಮರ್ಪಕ ಸಾರಿಗೆ ವ್ಯವಸ್ಥೆಯು ಪ್ರತಿಯೊಬ್ಬ ಪಾದಚಾರಿಯ, ವಾಹನ ಸವಾರರ, ಪ್ರಯಾಣಿಕರ ಸುರಕ್ಷೆ ಮತ್ತು ಸುಗಮ ಚಲನೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಕರ್ನಾಟಕ ಪೋರ್ಟ್‌ಫೋಲಿಯೋ ಆಗ್ರಹಿಸಿದೆ.

ಬೆಂಗಳೂರು ಪಾದಚಾರಿಗಳಿಗೆ ಸುರಕ್ಷಿತ ಅಲ್ಲವೇ? ಪ್ರತಿದಿನ ಪತ್ರಿಕೆಗಳತ್ತ ಕಣ್ಣಾಡಿಸಿದರೆ ಒಂದಾದರೂ ಪಾದಚಾರಿಗೆ ಗುದ್ದಿದ ವಾಹನ ಎಂಬ ಸುದ್ದಿ ಇದ್ದೇ ಇರುತ್ತದೆ. ಕಳೆದ ಮೂರು ವರ್ಷಗಳ ಅಂಕಿಅಂಶಗಳನ್ನು ನೋಡಿದರೆ ಆತಂಕ ಉಂಟಾಗುತ್ತದೆ. 2051ರಿಂದ2023ರವರೆಗೆ ಪಾದಚಾರಿಗಳ ಸಾವಿನ ಸಂಖ್ಯೆಯಲ್ಲಿ ಶೇ.77ರಷ್ಟು ಹೆಚ್ಚಳವಾಗಿದೆ. ಈ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿರುವುದು ಬೆಂಗಳೂರು ಸಂಚಾರಿ ಪೊಲೀಸ್ ವಿಭಾಗ. ಬೆಂಗಳೂರಿನಲ್ಲಿ ಪ್ರತಿದಿನ ಸುಮಾರು 1 ಸಾವಿರ ವಾಹನಗಳ ನೋಂದಣಿಯಾಗುತ್ತವೆ. ಆದರೆ ಮೂಲಭೂತ ಸೌಕರ್ಯಗಳ ಸುಧಾರಣೆ ಮಾತ್ರ ಅಗುತ್ತಿಲ್ಲ. ಬೆಂಗಳೂರು ಸಂಚಾರಿ ಪೊಲೀಸ್ ಇಲಾಖೆ 2021 ರಲ್ಲಿ 161 ಪಾದಚಾರಿಗಳು ಮೃತಪಟ್ಟಿದ್ದರೆ 2023ರಲ್ಲಿ 286 ಕ್ಕೆ ಏರಿಕೆಯಾಗಿದೆ. 2023ರಲ್ಲಿ ಬೆಂಗಳೂರಿನಲ್ಲಿ ಅಪಘಾತಗಳಿಂದ ಮೃತಪಟ್ಟವರಲ್ಲಿ ಶೇ.40 ರಷ್ಟು ಪಾದಚಾರಿಗಳು ಎನ್ನುವುದು ಗಮನಾರ್ಹ ಸಂಗತಿಯಾಗಿದೆ. ರಾಷ್ಟ್ರೀಯ ಅಂಕಿಅಂಶಗಳ ಬ್ಯೂರೋ ಪ್ರಕಾರ 2022ರಲ್ಲಿ ಬೃಹತ್ ಬೆಂಗಳೂರು ಮಹಾನರ ಪಾಲಿಕೆಯ ನಿರ್ಲಕ್ಷ್ಯದಿಂದ ಅತಿ ಹೆಚ್ಚು ಸಾವುಗಳು ಸಂಭವಿಸಿವೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ