ಬೆಂಗಳೂರು ಸೇರಿ 14 ಜಿಲ್ಲೆಗಳಲ್ಲಿ ಇಂದು ಹಗುರ ಮಳೆ ಸಾಧ್ಯತೆ; ಕರ್ನಾಟಕ ಹವಾಮಾನದ ಪೂರ್ತಿ ವಿವರ ಇಲ್ಲಿದೆ
Nov 17, 2024 07:12 AM IST
ಕರ್ನಾಟಕ ಹವಾಮಾನ: ಬೆಂಗಳೂರು ನಗರ, ಗ್ರಾಮಾಂತರ ಸೇರಿ 14 ಜಿಲ್ಲೆಗಳಲ್ಲಿ ಸಾಧಾರಣ ಮಳೆ ಸಾಧ್ಯತೆ, ಉಳಿದೆಡೆ ಇಂದಿನ ಹವಾಮಾನ ವಿವರ (ಸಾಂಕೇತಿಕ ಚಿತ್ರ)
Bengaluru Weather Alert: ಬೆಂಗಳೂರು ಸೇರಿ 14 ಜಿಲ್ಲೆಗಳಲ್ಲಿ ಇಂದು ಹಗುರ ಮಳೆಯಾಗುವ ಸಾಧ್ಯತೆ ಇದೆ. ಉಳಿದೆಡೆ ಒಣ ಹವೆ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಹವಾಮಾನ ಮುನ್ಸೂಚನೆ ವರದಿ ವಿವರಿಸಿದೆ. ಕರ್ನಾಟಕ ಹವಾಮಾನದ ಪೂರ್ತಿ ವಿವರ ಇಲ್ಲಿದೆ.
ಬೆಂಗಳೂರು: ಕರ್ನಾಟಕದಲ್ಲಿ ಇಂದು (ನವೆಂಬರ್ 17) ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಸೇರಿ 14 ಜಿಲ್ಲೆಗಳಲ್ಲಿ ಹಗುರವಾಗಿ ಅಥವಾ ಸಾಧಾರಣ ಮಳೆ ಬೀಳಬಹುದು. ಉಳಿದ ಜಿಲ್ಲೆಗಳಲ್ಲಿ ಒಣ ಹವೆ ಇರಲಿದ್ದು, ಕೆಲವು ಪ್ರದೇಶಗಳಲ್ಲಿ ಮುಂಜಾನೆ ದಟ್ಟ ಮಂಜು ಕಾಡಬಹುದು. ಅದೇ ರೀತಿ ಚಳಿಯೂ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಹವಾಮಾನ ಕೇಂದ್ರ ನಿನ್ನೆ (ನವೆಂಬರ್ 16) ಅಪರಾಹ್ನ ಪ್ರಕಟಿಸಿದ ಹವಾಮಾನ ಮುನ್ಸೂಚನೆ ವರದಿ ವಿವರಿಸಿದೆ. ದಿನದ ಹವಾಮಾನ ಗುಣಲಕ್ಷಣಗಳನ್ನು ಗಮನಿಸಿ ಉಲ್ಲೇಖಿಸಿರುವ ಹವಾಮಾನ ಇಲಾಖೆ, “ಮನ್ನಾರ್ ಕೊಲ್ಲಿ ಮತ್ತು ಪಕ್ಕದ ಶ್ರೀಲಂಕಾ ಕರಾವಳಿಯ ಮೇಲೆ ಚಂಡಮಾರುತದ ಪರಿಚಲನೆಯು ಈಗ ಕೊಮೊರಿನ್ ಪ್ರದೇಶದಿಂದ ನೈಋತ್ಯ ಬಂಗಾಳ ಕೊಲ್ಲಿಯವರೆಗೆ ತೊಟ್ಟಿಯಾಗಿ ಕಂಡುಬರುತ್ತದೆ ಮತ್ತು ಸರಾಸರಿ ಸಮುದ್ರ ಮಟ್ಟದಿಂದ 1.5 ಕಿಮೀ ವರೆಗೆ ವಿಸ್ತರಿಸಿದೆ” ಎಂದು ಹೇಳಿದೆ.
ಬೆಂಗಳೂರು ಹವಾಮಾನ: ನ.18ರ ಬೆಳಗ್ಗೆ ತನಕ ಬೆಂಗಳೂರು ನಗರ, ಗ್ರಾಮಾಂತರದ ಕೆಲವೆಡೆ ಮಳೆ
ಬೆಂಗಳೂರು ಪ್ರಾದೇಶಿಕ ಹವಾಮಾನ ಕೇಂದ್ರ ನಿನ್ನೆ (ನವೆಂಬರ್ 16) ಅಪರಾಹ್ನ ಪ್ರಕಟಿಸಿದ ಹವಾಮಾನ ಮುನ್ಸೂಚನೆ ವರದಿ ಪ್ರಕಾರ, ನವೆಂಬರ್ 18ರ ಬೆಳಗ್ಗೆ ತನಕ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳ ಅವಧಿಗೆ, ಸಾಮಾನ್ಯವಾಗಿ ಮೋಡ ಮುಸುಕಿದ ವಾತಾವರಣ ಇರಲಿದೆ. ಹಗುರದಿಂದ ಸಾಧಾರಣ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಕೆಲವು ಕಡೆಗಳಲ್ಲಿ ಮುಂಜಾನೆಯ ಸಮಯದಲ್ಲಿ ಮಂಜು ಇರುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 28 ಮತ್ತು 19 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ನಿನ್ನೆ (ನವೆಂಬರ್ 16) ಸಂಜೆ ಬೆಂಗಳೂರಿನ ವಿವಿಧೆಡೆ ಹಗುರ ಮತ್ತು ಸಾಧಾರಣ ಮಳೆಯಾಗಿರುವುದಾಗಿ ವರದಿಯಾಗಿದೆ.
ಇನ್ನು, ಮುಂದಿನ 48 ಗಂಟೆಗಳ ಅವಧಿಗೆ ಅಂದರೆ ನಾಳೆ (ನವೆಂಬರ್ 18) ಬೆಳಗ್ಗೆ ತನಕ ಈ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಮೋಡ ಮುಸುಕಿದ ವಾತಾವರಣ ಕಾಣಬಹುದು. ಅಲ್ಲದೆ, ಕೆಲವು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಕೆಲವು ಕಡೆಗಳಲ್ಲಿ ಮುಂಜಾನೆಯ ಸಮಯದಲ್ಲಿ ಮಂಜು ಇರುವ ಸಾಧ್ಯತೆ ಇದೆ ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 28 ಮತ್ತು 19 ಡಿಗ್ರಿ ಸೆಲ್ಸಿಯಸ್ ಇರುತ್ತದೆ ಎಂದು ಹವಾಮಾನ ಮುನ್ಸೂಚನೆ ವರದಿ ವಿವರಿಸಿದೆ.
ಕರ್ನಾಟಕ ಹವಾಮಾನ ಇಂದು: ಮಳೆ ಮುನ್ಸೂಚನೆ / ಎಚ್ಚರಿಕೆ
ಬೆಂಗಳೂರು ಪ್ರಾದೇಶಿಕ ಹವಾಮಾನ ಕೇಂದ್ರದ ಹವಾಮಾನ ಮುನ್ಸೂಚನೆ ವರದಿ ಪ್ರಕಾರ, ಇಂದು (ನವೆಂಬರ್ 17) ದಕ್ಷಿಣ ಕನ್ನಡ, ಉಡುಪಿ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಮೈಸೂರು, ಚಾಮರಾಜನಗರ, ಮಂಡ್ಯ, ಕೋಲಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ತುಮಕೂರು ಮತ್ತು ರಾಮನಗರ ಜಿಲ್ಲೆಗಳಲ್ಲಿ ಕೆಲವೆಡೆ ಹಗುರ/ಸಾಧಾರಣ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡು ಮತ್ತು ಉತ್ತರ ಕನ್ನಡ ಬಳ್ಳಾರಿ, ವಿಜಯನಗರ, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಒಣ ಹವೆ ಇರುವ ಸಾಧ್ಯತೆ ಇದೆ.
ಇನ್ನು ನಿನ್ನೆ (ನವೆಂಬರ್ 16) ದಕ್ಷಿಣ ಕನ್ನಡ, ಉಡುಪಿ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಮೈಸೂರು, ಚಾಮರಾಜನಗರ, ಮಂಡ್ಯ, ಕೋಲಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ತುಮಕೂರು ಮತ್ತು ರಾಮನಗರ ಜಿಲ್ಲೆಗಳಲ್ಲಿ ಕೆಲವೆಡೆ ಹಗುರ/ಸಾಧಾರಣ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಕನ್ನಡ ಜಿಲ್ಲೆಯ ಕೆಲವು ಕಡೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಿತ್ತು. ಇದರಂತೆ, ಕೆಲವು ಕಡೆ ಮಳೆಯಾಗಿದೆ. ಉತ್ತರ ಒಳನಾಡು ಮತ್ತು ಬಳ್ಳಾರಿ, ವಿಜಯನಗರ, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಒಣ ಹವೆ ಇತ್ತು.
ಈಶಾನ್ಯ ಮುಂಗಾರು ಕರ್ನಾಟಕದ ಒಳಭಾಗದಲ್ಲಿ ಮತ್ತು ಕರಾವಳಿ ಕರ್ನಾಟಕದ ಮೇಲೆ ವಾರದಲ್ಲಿ ಸಾಮಾನ್ಯವಾಗಿತ್ತು. ಕರ್ನಾಟಕದ ದಕ್ಷಿಣ ಒಳಭಾಗದಲ್ಲಿ ಅನೇಕ ಸ್ಥಳಗಳಲ್ಲಿ ಹಾಗೂ ಕರಾವಳಿ ಕರ್ನಾಟಕದ ಕೆಲವು ಸ್ಥಳಗಳಲ್ಲಿ ಮತ್ತು ಉತ್ತರ ಒಳನಾಡಿನ ಪ್ರತ್ಯೇಕ ಸ್ಥಳಗಳಲ್ಲಿ ಮಳೆಯಾಗಿದೆ. ಮಳೆಯ ಪ್ರಮಾಣ ಹೀಗಿದೆ- ಮಧುಗಿರಿ ಅರ್ಗ್ (ತುಮಕೂರು ಜಿಲ್ಲೆ) 2 ಸೆಂಟಿ ಮೀಟರ್, ಚನ್ನಪಟ್ಟಣ (ಜಿಲ್ಲೆ ರಾಮನಗರ) 2, ಕುಷ್ಟಗಿ (ಜಿಲ್ಲೆ ಕೊಪ್ಪಳ) 1, ಮಾಗಡಿ (ಜಿಲ್ಲೆ ರಾಮನಗರ) 1, ಎಲೆಕ್ಟ್ರಾನಿಕ್ ಸಿಟಿ ಆರ್ಗ್ (ಜಿಲ್ಲೆ ಬೆಂಗಳೂರು ನಗರ) 1, ವೈ ಎನ್ ಹೊಸಕೋಟೆ (ಜಿಲ್ಲೆ ತುಮಕೂರು) 1, ಚಾಮರಾಜನಗರ ಚಾಮರಾಜನಗರ) 1, ಬೆಂಗಳೂರು ನಗರ ಅಬ್ಬಿ (ಬೆಂಗಳೂರು ನಗರ ಜಿಲ್ಲೆ) 1, ನಾಗಮಂಗಲ (ಮಂಡ್ಯ ಜಿಲ್ಲೆ) 1, ಬಂಡೀಪುರ (ಚಾಮರಾಜನಗರ ಜಿಲ್ಲೆ) 1, ಮೈಸೂರು ಪ್ಪೋ (ಮೈಸೂರು ಜಿಲ್ಲೆ) 1, ಕೃಷ್ಣರಾಜಸಾಗರ (ಮಂಡ್ಯ ಜಿಲ್ಲೆ) 1, ಟಿಜಿ ಹಳ್ಳಿ ಎಚ್‌ಎಂಎಸ್ (ಬೆಂಗಳೂರು ನಗರ ಜಿಲ್ಲೆ) 1 ಸೆಂಟಿ ಮೀಟರ್ ಮಳೆಯಾಗಿದೆ.