logo
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ಹವಾಮಾನ: ಭಾರಿ ಮಳೆಗೆ ನಗರದ 1000ಕ್ಕೂ ಹೆಚ್ಚು ಮನೆ ಜಲಾವೃತ, ಇಂದು ಮಳೆ ಬರುತ್ತಾ?; ಹವಾಮಾನ ಮುನ್ಸೂಚನೆ ವಿವರ ಹೀಗಿದೆ

ಬೆಂಗಳೂರು ಹವಾಮಾನ: ಭಾರಿ ಮಳೆಗೆ ನಗರದ 1000ಕ್ಕೂ ಹೆಚ್ಚು ಮನೆ ಜಲಾವೃತ, ಇಂದು ಮಳೆ ಬರುತ್ತಾ?; ಹವಾಮಾನ ಮುನ್ಸೂಚನೆ ವಿವರ ಹೀಗಿದೆ

Umesh Kumar S HT Kannada

Oct 23, 2024 09:14 PM IST

google News

ಬೆಂಗಳೂರು ಹವಾಮಾನ: ಭಾರಿ ಮಳೆಗೆ ನಗರದ 1000ಕ್ಕೂ ಹೆಚ್ಚು ಮನೆ ಜಲಾವೃತವಾಗಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಇಂದು ಮಳೆ ಬರುತ್ತಾ?; ಹವಾಮಾನ ಮುನ್ಸೂಚನೆ ವಿವರ ಇಲ್ಲಿದೆ. (ಸಾಂಕೇತಿಕ ಚಿತ್ರ)

  • Bengaluru Weather Today: ಬೆಂಗಳೂರು ಮಳೆ ಈ ಬಾರಿ ಹೆಚ್ಚು ಸಂಕಷ್ಟವನ್ನು ತಂದೊಡ್ಡಿದೆ. ಈಗಾಗಲೇ ಹಲವು ಪ್ರದೇಶಗಳು ಜಲಾವೃತವಾಗಿದ್ದು 1000ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಹೀಗಾಗಿ ಇಂದು ಮಳೆ ಬರುತ್ತಾ ಎಂಬ ಕಳವಳ ಹೆಚ್ಚಾಗಿದೆ. ಇಂದು (ಅಕ್ಟೋಬರ್ 22) ಬೆಂಗಳೂರು ಹವಾಮಾನ ಮುನ್ಸೂಚನೆ ವಿವರ ಹೀಗಿದೆ ನೋಡಿ. 

ಬೆಂಗಳೂರು ಹವಾಮಾನ: ಭಾರಿ ಮಳೆಗೆ ನಗರದ 1000ಕ್ಕೂ ಹೆಚ್ಚು ಮನೆ ಜಲಾವೃತವಾಗಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಇಂದು ಮಳೆ ಬರುತ್ತಾ?; ಹವಾಮಾನ ಮುನ್ಸೂಚನೆ ವಿವರ ಇಲ್ಲಿದೆ. (ಸಾಂಕೇತಿಕ ಚಿತ್ರ)
ಬೆಂಗಳೂರು ಹವಾಮಾನ: ಭಾರಿ ಮಳೆಗೆ ನಗರದ 1000ಕ್ಕೂ ಹೆಚ್ಚು ಮನೆ ಜಲಾವೃತವಾಗಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಇಂದು ಮಳೆ ಬರುತ್ತಾ?; ಹವಾಮಾನ ಮುನ್ಸೂಚನೆ ವಿವರ ಇಲ್ಲಿದೆ. (ಸಾಂಕೇತಿಕ ಚಿತ್ರ) (X)

ಬೆಂಗಳೂರು: ಅನಿರೀಕ್ಷಿತ ಮಳೆಗೆ ಬೆಂಗಳೂರು ಮಹಾನಗರ ತತ್ತರಿಸಿಹೋಗಿದೆ. ಕರ್ನಾಟಕದ ರಾಜಧಾನಿಯಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ರಾತ್ರಿಯಾಗುತ್ತಿರುವಂತೆ ತೀವ್ರಗೊಳ್ಳುವ ಮಳೆಯ ಕಾರಣ ತಗ್ಗು ಪ್ರದೇಶಗಳಲ್ಲಿರುವ ಮತ್ತು ಚರಂಡಿ ವ್ಯವಸ್ಥೆ ಸರಿಯಾಗಿಲ್ಲದ ಪ್ರದೇಶಗಳ ಜನರು ನಿದ್ದೆಗೆಡುವಂತಾಗಿದೆ. ವಿಶೇಷವಾಗಿ ಉತ್ತರ ಬೆಂಗಳೂರಿನಲ್ಲಿ ಮಳೆ ಹಾನಿ ಹೆಚ್ಚು ಪ್ರಮಾಣದಲ್ಲಿದೆ. 1000ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿದ್ದು, ಬಹುತೇಕರನ್ನು ಸುರಕ್ಷಿತ ಪ್ರದೇಶಗಳಿಗೆ ಕಳುಹಿಸಿದ್ದಾರೆ. ಅನೇಕರು ತಾವಾಗಿಯೇ ಸಂಬಂಧಿಕರ ಮನೆ, ಸ್ನೇಹಿತರ ಮನೆಗೆ ಹೋಗಿದ್ದಾರೆ. ಶನಿವಾರ, ಭಾನುವಾರ, ಸೋಮವಾರ, ಮಂಗಳವಾರವೂ ಮಳೆ ಸುರಿದ ಕಾರಣ ಕೋಗಿಲು ಮತ್ತು ಇತರೆ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಇಲ್ಲಿ ರಕ್ಷಣಾ ಸಿಬ್ಬಂದಿ ಬೋಟ್ ಬಳಸಿಕೊಂಡು ರಕ್ಷಣಾಕಾರ್ಯ ನಡೆಸಿದ್ದು ಗಮನಸೆಳೆದಿತ್ತು. ಈ ನಡುವೆ, ಬೆಂಗಳೂರಿಗರನ್ನು ಸದ್ಯ ಕಾಡುತ್ತಿರುವ ಪ್ರಶ್ನೆ ಇಂದುು ಮಳೆ ಬರುತ್ತಾ ಎಂಬುದು. ಹಾಗಾಗಿ ಬೆಂಗಳೂರು ಹವಾಮಾನ ಮುನ್ಸೂಚನೆ ಕಡೆಗೆ ಗಮನಹರಿಸುತ್ತಿರುತ್ತಾರೆ.

ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರು ಹವಾಮಾನ; ಇಂದು ಮಳೆ ಬರುತ್ತಾ

ಭಾರತೀಯ ಹವಾಮಾನ ಇಲಾಖೆ ಅಕ್ಟೋಬರ್ 22ರಂದು ಮಧ್ಯಾಹ್ನ ಕೊಟ್ಟ ಮುನ್ಸೂಚನೆ ಪ್ರಕಾರ ಇಂದು ಕೂಡ ರಾಜ್ಯದಲ್ಲಿ ಮಳೆ ಇದೆ. ಕರ್ನಾಟಕದ ದಕ್ಷಿಣ ಒಳನಾಡಿನ ಭಾಗದಲ್ಲಿರುವ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ ಇಂದು (ಅಕ್ಟೋಬರ್ 23) ಕೂಡ ಮಳೆ ಮುಂದುವರಿಯಲಿದೆ. ಮಳೆಯ ತೀವ್ರತೆ ಕಳೆದ ಮೂರು ದಿನಗಳಿಗೆ ಹೋಲಿಸಿದರೆ ಕಡಿಮೆಯಾಗಬಹುದು.

ನಾಳೆ (ಅಕ್ಟೋಬರ್ 24) ಬೆಳಗ್ಗೆ 8.30ರ ತನಕದ ಹವಾಮಾನ ಮುನ್ಸೂಚನೆ ಪ್ರಕಾರ ಬೆಂಗಳೂರು ನಗರದಲ್ಲಿ ಮೋಡಕವಿದ ವಾತಾವರಣ, ಬಹುತೇಕ ಪ್ರದೇಶಗಳಲ್ಲಿ ಗುಡುಗು ಮಿಂಚು ಸಹಿತ ವ್ಯಾಪಕ ಮಳೆ ಇರಲಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೂ ಇದೇ ರೀತಿ ಮೋಡ ಕವಿದ ವಾತಾವರಣ ಇರಲಿದೆ. ಬಹುತೇಕ ಪ್ರದೇಶಗಳಲ್ಲಿ ಗುಡುಗು ಮಿಂಚು ಸಹಿತ ಭಾರಿ ಮಳೆಯಾಗಲಿದೆ. ತಾಪಮಾನ ಗರಿಷ್ಠ 30 ಮತ್ತು ಕನಿಷ್ಠ 20 ಇರಬಹುದು ಎಂದು ವರದಿ ವಿವರಿಸಿದೆ.

ಬೆಂಗಳೂರು ಮಳೆಗೆ 1000ಕ್ಕೂ ಹೆಚ್ಚು ಮನೆ ಜಲಾವೃತ, ಜನಜೀವನ ಅಸ್ತವ್ಯಸ್ತ

ಬೆಂಗಳೂರು ನಗರ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದ್ದು, 1000ಕ್ಕೂ ಹೆಚ್ಚು ಮನೆಗಳಿಗೆ ಮಳೆ ನೀರು ನುಗ್ಗಿದೆ. ಸೋಮವಾರ ರಾತ್ರಿ ಮಳೆಗೆ ಯಲಹಂಕ, ದಾಸರಹಳ್ಳಿ ಭಾಗದಲ್ಲಿ ಹಲವು ಬಡಾವಣೆಗಳಲ್ಲಿ ನೀರು ತುಂಬಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಮಂಗಳವಾರವೂ ಮಳೆ ಮುಂದುವರಿದ ಕಾರಣ ಇಲ್ಲಿನ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಮತ್ತು ಉಳಿದೆಡೆ ಸಂಕಷ್ಟಕ್ಕೆ ಸಿಲುಕಿದವರಿಗೆ ಆಹಾರ ಪೂರೈಸುವ ಕೆಲಸ ನಡೆದಿತ್ತು.

ಬೆಂಗಳೂರು ನಗರ ಜಿಲ್ಲೆಯಲ್ಲಿ ಈ ತಿಂಗಳು ಇದುವರೆಗೆ ಅಂದರೆ ಅಕ್ಟೋಬರ್ 1 ರಿಂದ 22ರ ತನಕದ ಅವಧಿಯಲ್ಲಿ ಒಟ್ಟು 24.1 ಸೆಂಟಿಮೀಟರ್ ಮಳೆಯಾಗಿದೆ. ಇದು 124 ವರ್ಷಗಳ ಅವಧಿಯಲ್ಲಿ 4ನೇ ಗರಿಷ್ಠ ಮಳೆ ಎಂಬ ದಾಖಲೆ ಬರೆದಿದೆ. ಇನ್ನು ಸಂಚಾರದಟ್ಟಣೆ ವಿಚಾರಕ್ಕೆ ಬಂದರೆ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಬಳ್ಳಾರಿ ರಸ್ತೆ, ಸೇರಿ ಪ್ರಮುಖ ರಸ್ತೆಗಳು ಜಲಾವೃತಗೊಂಡು ತಾಸುಗಟ್ಟಲೆ ಸಂಚಾರ ದಟ್ಟಣೆ ಉಂಟಾಯಿತು. ಬೆಂಗಳೂರಿನಲ್ಲಿ ಮೂರು ದಿನಗಳಿಂದ ಬಿಡದೆ ಮಳೆಯಾಗುತ್ತಿರುವ ಕಾರಣ ಆರೆಂಜ್ ಅಲರ್ಟ್‌ ಘೋಷಿಸಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಬುಧವಾರವೂ ಶಾಲೆಗಳಿಗೆ ರಜೆ ಘೋಷಿಸಿದೆ.

ನರಸಾಪುರ ಕೆರೆ, ದೊಡ್ಡಬೊಮ್ಮಸಂದ್ರ ಕೆರೆ ತುಂಬಿ ಕೋಡಿ ಹರಿಯುತ್ತಿದ್ದು, ನೀರುಗಾಲುವೆಗಳು ತುಂಬಿ ಹರಿಯುತ್ತಿರುವ ಕಾರಣ ಬ್ಯಾಟರಾಯನಪುರ ವ್ಯಾಪ್ತಿಯ ಭದ್ರಪ್ಪ ಲೇಔಟ್‌, ಬಾಲಾಜಿ ಲೇಔಟ್‌, ಸುರಭಿ ಲೇಔಟ್‌, ಸೋಮೇಶ್ವರ ಬಡಾವಣೆ, ಬಸವ ಸಮಿತಿ, ಟಾಟಾ ನಗರ, ಚಿಕ್ಕಬೊಮ್ಮಸಂದ್ರ, ಆಂಜನೇಯ ಲೇಔಟ್‌, ವಾಯುನಂದನ ಲೇಔಟ್‌ಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.

ಮಳೆ ಸಂಬಂಧಿಸಿದ ತುರ್ತುಗಳಿಗೆ ಸಹಾಯವಾಣಿ ಸಂಖ್ಯೆ 1533ಕ್ಕೆ ಕರೆ ಮಾಡಬಹುದು ಎಂದು ಬಿಬಿಎಂಪಿ ತಿಳಿಸಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ