logo
ಕನ್ನಡ ಸುದ್ದಿ  /  ಕರ್ನಾಟಕ  /  Chamarajanagara: ಮುಂದಿನ ಲೋಕಸಭಾ ಚುನಾವಣೆಗೆ ಗ್ಯಾರಂಟಿ ಕಾರ್ಡ್ ನಮ್ಮ ಅಸ್ತ್ರವಾಗಬೇಕು; ಯತೀಂದ್ರ ಸಿದ್ದರಾಮಯ್ಯ

Chamarajanagara: ಮುಂದಿನ ಲೋಕಸಭಾ ಚುನಾವಣೆಗೆ ಗ್ಯಾರಂಟಿ ಕಾರ್ಡ್ ನಮ್ಮ ಅಸ್ತ್ರವಾಗಬೇಕು; ಯತೀಂದ್ರ ಸಿದ್ದರಾಮಯ್ಯ

HT Kannada Desk HT Kannada

Jun 07, 2023 09:10 AM IST

ಯತೀಂದ್ರ ಸಿದ್ದರಾಮಯ್ಯ

  • 2023ರ ಚುನಾವಣೆ ಜಾತ್ಯಾತೀತ ಹಾಗೂ ಕೋಮುವಾದದ ನಡುವಿನ ಚುನಾವಣೆ ಆಗಿತ್ತು. ಬಿಜೆಪಿಯವರು ಭಾವನಾತ್ಮಕ ವಿಷಯಗಳನ್ನು ಎತ್ತಿಕೊಂಡು ಜನಗಳನ್ನು ಕೆರಳಿಸುತ್ತಿದ್ದರು. ಇದನ್ನರಿತ ಜನರು ಪ್ರಬುದ್ಧತೆಯನ್ನು ತೋರಿ ಕಾಂಗ್ರೆಸ್‌ಗೆ ಮತ ನೀಡಿ ಗೆಲ್ಲಿಸಿದ್ದಾರೆ ಎಂದು ಯತೀಂದ್ರ ಸಿದ್ದರಾಮಯ್ಯ ತಿಳಿಸಿದ್ದಾರೆ.

ಯತೀಂದ್ರ ಸಿದ್ದರಾಮಯ್ಯ
ಯತೀಂದ್ರ ಸಿದ್ದರಾಮಯ್ಯ

ಗುಂಡ್ಲುಪೇಟೆ (ಚಾಮರಾಜನಗರ): ಮುಂದಿನ ಲೋಕಸಭಾ ಚುನಾವಣೆಗೆ (Lok Sabha Election) ಇದೇ ಗ್ಯಾರಂಟಿ ಕಾರ್ಡ್ (Guarantee Card) ನಮ್ಮ ಅಸ್ತ್ರವಾಗಬೇಕು. ಬೂತ್ ಮಟ್ಟದ ಕಾರ್ಯಕರ್ತರು ಮನೆಮನೆಗೂ ತೆರಳಿ ಗ್ಯಾರಂಟಿ ಬಗ್ಗೆ ಜನರಿಗೆ ಸರಿಯಾದ ಅರಿವು ಮೂಡಿಸಬೇಕು ಎಂದು ಮಾಜಿ ಶಾಸಕ ಹಾಗೂ ಸಿಎಂ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಹೇಳಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Hassan Scandal: ಎಸ್‌ಐಟಿ ಅಧಿಕಾರಿಗಳು ಸಿಎಂ, ಡಿಸಿಎಂ ಏಜೆಂಟ್‌ಗಳು, ಪೆನ್‌ಡ್ರೈವ್‌ ಹಂಚಿದವರ ವಿರುದ್ದ ಕ್ರಮ ಏಕಿಲ್ಲ: ಎಚ್‌ಡಿಕೆ ಗಂಭೀರ ಪ್ರ

Mangalore News: ಮಂಗಳೂರು ಮಹಾನಗರದಲ್ಲಿ ನೀರಿನ ರೇಷನಿಂಗ್ ಆರಂಭ, ಎಲ್ಲಿ ಯಾವಾಗ? ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ

ಬೆಂಗಳೂರಲ್ಲಿ ಭಾರಿ ಮಳೆಗೆ ರಸ್ತೆ ತುಂಬ ಹರಿದ ನೀರು, ಬೇಸಿಗೆ ಆಯಿತು, ಮಳೆಗಾಲದ ಸಮಸ್ಯೆ ಕಡೆಗೆ ಮುನ್ನೋಟ ಒದಗಿಸಿದ ಮಳೆರಾಯ

ಬೆಂಗಳೂರು ವಾತಾವರಣ ಕೆಟ್ಟಿದೆ, ಬಾಂಬೆ ಅಥವಾ ಪುಣೆಗೆ ಹೋಗ್ಲಾ ಅಥವಾ ಭಾರತವನ್ನೇ ಬಿಡ್ಲಾ; ಉದ್ಯಮಿ ಅನಂತ್ ಟ್ವೀಟ್ ವೈರಲ್

ಕಾಂಗ್ರೆಸ್‌ ಅಭ್ಯರ್ಥಿಯನ್ನು ಗೆಲ್ಲಿಸಿದ ಹಿನ್ನೆೆಯಲ್ಲಿ ಗುಂಡ್ಲುಪೇಟೆ ಕ್ಷೇತ್ರದ ಮತದಾರರಿಗೆ ಅಭಿನಂದನೆ ಸಲ್ಲಿಸಲು ಗುಂಡ್ಲುಪೇಟೆಯಲ್ಲಿ ನಿನ್ನೆ (ಜೂನ್ 6, ಮಂಗಳವಾರ) ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಯತೀಂದ್ರ ಸಿದ್ದರಾಮಯ್ಯ ಅವರು ಮಾತನಾಡಿದರು.

2023ರ ಚುನಾವಣೆ ಜಾತ್ಯಾತೀತ ಹಾಗೂ ಕೋಮುವಾದದ ನಡುವಿನ ಚುನಾವಣೆ ಆಗಿತ್ತು. ಬಿಜೆಪಿಯವರು ಭಾವನಾತ್ಮಕ ವಿಷಯಗಳನ್ನು ಎತ್ತಿಕೊಂಡು ಜನಗಳನ್ನು ಕೆರಳಿಸುತ್ತಿದ್ದರು. ಇದನ್ನರಿತ ಜನರು ಪ್ರಬುದ್ಧತೆಯನ್ನು ತೋರಿ ಕಾಂಗ್ರೆಸ್‌ಗೆ ಮತ ನೀಡಿ ಗೆಲ್ಲಿಸಿದ್ದಾರೆ ಎಂದು ಯತೀಂದ್ರ ಸಿದ್ದರಾಮಯ್ಯ ತಿಳಿಸಿದ್ದಾರೆ.

ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಏರಿದ ನಮಗೆ ಜವಾಬ್ದಾರಿ ಹೆಚ್ಚಿದೆ. ಬಿಜೆಪಿಯವರು ಅವರ ಆಡಳಿತ ಅವಧಿಯಲ್ಲಿ 600ಕ್ಕೂ ಹೆಚ್ಚು ಆಶ್ವಾಸನೆಗಳನ್ನು ನೀಡಿ ಈಡೇರಿಸಿಲ್ಲ, ಆದರೆ ಕಾಂಗ್ರೆಸ್ ನವರು ನೀಡಿರುವ ಐದು ಪ್ರಣಾಳಿಕೆಗಳನ್ನು ಕೂಡ ಯಾವುದೇ ಕಂಡೀಶನ್ ಇಲ್ಲದೆ ಈಡೇರಿಸುತ್ತಿದೆ. ಮುಂದಿನ ಲೋಕಸಭಾ ಚುನಾವಣೆಗೆ ಇದೇ ಗ್ಯಾರಂಟಿ ಕಾರ್ಡ್ ನಮ್ಮ ಅಸ್ತ್ರವಾಗಬೇಕು. ಬೂತ್ ಮಟ್ಟದ ಕಾರ್ಯಕರ್ತರು ಮನೆಮನೆಗೂ ತೆರಳಿ ಗ್ಯಾರಂಟಿ ಬಗ್ಗೆ ಜನರಿಗೆ ಸರಿಯಾದ ಅರಿವು ಮೂಡಿಸಬೇಕು ಎಂದು ಕರೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಗುಂಡ್ಲುಪೇಟೆ ಶಾಸಕ ಎಚ್ ಎಮ್ ಗಣೇಶ್ ಪ್ರಸಾದ್, ಎಚ್ ಡಿ ಕೋಟೆ ಶಾಸಕ ಅನಿಲ್ ಚಿಕ್ಕಮಾದು, ನಂಜನಗೂಡು ಶಾಸಕ ದರ್ಶನ್ ಧ್ರುವನಾರಾಯಣ್ ಸೇರಿದಂತೆ ಹಲವಾರು ಕಾರ್ಯಕರ್ತರು ಉಪ ಸ್ಥಿತರಿದ್ದರು.

ಗೋ ಹತ್ಯೆ ನಿಷೇಧ ಕಾಯ್ದೆ ಬಗ್ಗೆ ಪರಾಮರ್ಶೆ - ಸಚಿವ ಕೆ ವೆಂಕಟೇಶ್

ಗೋ ಹತ್ಯೆ ನಿಷೇಧ ಕಾಯ್ದೆ ಬಗ್ಗೆ ಪರಾಮರ್ಶಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ . ಈ ಕುರಿತು ಕ್ಯಾಬಿನೆಟ್‌ನಲ್ಲಿ ಚರ್ಚೆ ಮಾಡಲಾಗುವುದು ಎಂದು ಪಶು ಸಂಗೋಪನೆ ಹಾಗೂ ರೇಷ್ಮೆ ಸಚಿವ ಕೆ. ವೆಂಕಟೇಶ್ ತಿಳಿಸಿದ್ದಾರೆ.

ಗುಂಡ್ಲುಪೇಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಾಗಲೇ ಮಾಧ್ಯಮದವರಿಗೆ ಸಿಎಂ ಸಿದ್ದರಾಮಯ್ಯ ಅವರು ಸ್ಪಷ್ಟನೆ ಕೊಟ್ಟಿದ್ದಾರೆ. ಈ ಕಾಯ್ದೆ ಬಗ್ಗೆಯೂ ತಿಳಿಸಿದ್ದಾರೆ. ಅವರೇ ಹೇಳಿದ ಮೇಲೆ ನಾನೇನು ಹೇಳುವುದು ಬಾಕಿ ಇಲ್ಲ ಅಂತ ಹೇಳಿದ್ದಾರೆ.

ಗುಂಡ್ಲುಪೇಟೆ ಕ್ಷೇತ್ರದಲ್ಲಿ ಹಿಂದೆಂದೂ ಕಾಣದಂತಹ ಪ್ರಚಂಡ ಬಹುಮತವನ್ನು ಹೆಚ್ಎಂ ಗಣೇಶ್ ಪ್ರಸಾದ್ ಪಡೆದಿದ್ದಾರೆ. ಹೀಗಾಗಿ ಮಂಗಳವಾರ (ಜೂನ್ 6) ಗುಂಡ್ಲುಪೇಟೆಯಲ್ಲಿ ಬೃಹತ್ ಮಟ್ಟದ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.

2023ರ ಮೇ ನಲ್ಲಿ ನಡೆದಿದ್ದ ರಾಜ್ಯ ವಿಧಾನಸಭೆ ಚುನಾಣೆಯಲ್ಲಿ ಕಾಂಗ್ರೆಸ್ 135 ಸ್ಥಾನಗಳನ್ನು ಗಳಿಸಿದರೆ, ಬಿಜೆಪಿ 65 ಹಾಗೂ ಜೆಡಿಎಸ್ 19 ಕ್ಷೇತ್ರಗಳಲ್ಲಿ ಗೆಲುವು ಪಡೆದಿದ್ದವು.

    ಹಂಚಿಕೊಳ್ಳಲು ಲೇಖನಗಳು