logo
ಕನ್ನಡ ಸುದ್ದಿ  /  ಕರ್ನಾಟಕ  /  ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 3 ದಿನದ ನಿಮ್ಮ ಚಟುವಟಿಕೆ ಹೀಗಿರಲಿ; ಗೋಷ್ಠಿ, ಸಂವಾದ, ಪುಸ್ತಕ ಖರೀದಿ, ಪ್ರವಾಸ

ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 3 ದಿನದ ನಿಮ್ಮ ಚಟುವಟಿಕೆ ಹೀಗಿರಲಿ; ಗೋಷ್ಠಿ, ಸಂವಾದ, ಪುಸ್ತಕ ಖರೀದಿ, ಪ್ರವಾಸ

Umesha Bhatta P H HT Kannada

Dec 20, 2024 07:30 AM IST

google News

ಮಂಡ್ಯ ಸಾಹಿತ್ಯ ಸಮ್ಮೇಳನಕ್ಕಾಗಿ ಕನ್ನಡಾಭಿಮಾನಿಗಳು ಆಗಮಿಸಿದ್ದು, ಇಡೀ ನಗರ ಬೆಳಕಿನಿಂದ ಜಗಮಗಿಸುತ್ತಿದೆ.

  • Mandya Sahitya Sammelana: ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬರುತ್ತೀದ್ದೀರಾ, ಮೂರು ದಿನದ ಸಮ್ಮೇಳನದಲ್ಲಿ ನಿಮ್ಮ ಚಟುವಟಿಕೆ, ಯೋಜನೆಗಳು ಹೇಗಿರಬೇಕು ಎನ್ನುವ ಗೈಡ್‌ ಇಲ್ಲಿದೆ.

ಮಂಡ್ಯ ಸಾಹಿತ್ಯ ಸಮ್ಮೇಳನಕ್ಕಾಗಿ ಕನ್ನಡಾಭಿಮಾನಿಗಳು ಆಗಮಿಸಿದ್ದು, ಇಡೀ ನಗರ ಬೆಳಕಿನಿಂದ ಜಗಮಗಿಸುತ್ತಿದೆ.
ಮಂಡ್ಯ ಸಾಹಿತ್ಯ ಸಮ್ಮೇಳನಕ್ಕಾಗಿ ಕನ್ನಡಾಭಿಮಾನಿಗಳು ಆಗಮಿಸಿದ್ದು, ಇಡೀ ನಗರ ಬೆಳಕಿನಿಂದ ಜಗಮಗಿಸುತ್ತಿದೆ.

ಸಕ್ಕರೆ ನಾಡು ಮಂಡ್ಯದಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಆಯೋಜನೆಗೊಂಡಿದೆ. ಇದಕ್ಕಾಗಿ ಕರ್ನಾಟಕ ಮಾತ್ರವಲ್ಲದೇ ಹೊರ ಭಾಗದಿಂದಲೂ ಕನ್ನಡ ಅಭಿಮಾನಿಗಳು ಆಗಮಿಸುತ್ತಾರೆ. ಅದರಲ್ಲೂ ಸಮ್ಮೇಳನದಲ್ಲಿ ಭಾಗವಹಿಸುವ ಖುಷಿಯೇ ಬೇರೆ. ಸಮ್ಮೇಳನದ ನೆಪದಲ್ಲಿ ಒಂದಷ್ಟು ಪುಸ್ತಕಗಳ ಖರೀದಿ, ಸ್ನೇಹಿತರೊಂದಿಗೆ ಒಡನಾಟ,ಗೋಷ್ಠಿಗಳಲ್ಲಿ ಪ್ರಮುಖ ವಿಷಯಗಳ ಕುರಿತು ಹಿರಿಯರು, ತಜ್ಞರ ಮಾತು ಆಲಿಸುವುದು, ಸಂವಾದದಲ್ಲಿ ಭಾಗಿಯಾಗುವುದು, ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳುವುದು, ನಿಮಗೆ ಇಷ್ಟವಾದ ಬರಹಗಾರರು, ಸಾಹಿತಿಗಳನ್ನು ಹತ್ತಿರದಿಂದ ಕಂಡು ಅವರೊಂದಿಗೆ ಕೆಲ ಹೊತ್ತು ಕಳೆಯುವುದಕ್ಕೆ ಸಮ್ಮೇಳನಗಳು ವೇದಿಕೆಗಳು. ಯಾವುದೇ ಊರಿನಲ್ಲಿ ಸಮ್ಮೇಳನ ನಡೆದಾಗ ಆ ಭಾಗದ ಊರುಗಳು, ತಾಣಗಳನ್ನು ನೋಡುವುದು ಇದ್ದೇ ಇದೆ. ಮಂಡ್ಯ ಪ್ರವಾಸೋದ್ಯಮದಲ್ಲೂ ವಿಭಿನ್ನ ತಾಣಗಳನ್ನು ಹೊಂದಿರುವ ಜಿಲ್ಲೆ. ಹೀಗೆ ನೀವು ಮೂರು ದಿನ ವೀಕ್ಷಿಸಬಹುದಾದ, ಸಮ್ಮೇಳನದಲ್ಲಿ ಸವಿಯಬಹುದಾದ ಮಾಹಿತಿ ಇಲ್ಲಿದೆ.

ಇದನ್ನೂ ಓದಿರಿ: Mandya Sahitya Sammelana: ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನ ಹೈಟೆಕ್‌, ಆಪ್‌ ಪ್ರಚಾರ; ಸಾಫ್ಟ್‌ವೇರ್‌ ಎಂಜಿನಿಯರ್‌ ಶಾಸಕ ದರ್ಶನ್‌ ಯೋಜನೆ

  • ಸಮ್ಮೇಳನದಲ್ಲಿ ಈ ಬಾರಿ ಮೂರು ದಿನವೂ ಕವಿಗೋಷ್ಠಿಗಳಿವೆ. ಮೊದಲ ಬಾರಿಗೆ ದೃಷ್ಟಿವಿಕಲಚೇತನರ ಕವಿಗೋಷ್ಠಿ ನಡೆಯಲಿದೆ.ನಾಡಿನ ನಾನಾ ಭಾಗಗಳಿಂದ ಅಂಧ ಕವಿಗಳು ತಮ್ಮ ಒಳಗಣ್ಣನ್ನು ತೆರೆದು ರಚಿಸಿದ ಕವನಗಳನ್ನು ಕೇಳಬಹುದು.
  • ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕ ಖರೀದಿಗೂ ಅವಕಾಶಗಳಿವೆ. ಎರಡು ನೂರಕ್ಕೂ ಹೆಚ್ಚು ಪ್ರಕಾಶಕರು ಇಲ್ಲಿಗೆ ತಮ್ಮ ಹೊಸ ಪ್ರಕಟಣೆ, ಹಳೆಯ ಪ್ರಕಟಣೆಯ ಪುಸ್ತಕದೊಂದಿಗೆ ಬರಲಿದ್ದಾರೆ. ನಿಮಗೆ ಇಷ್ಟವಾದ ಪುಸ್ತಕಗಳನ್ನು ಖರೀದಿ ಮಾಡಿಕೊಳ್ಳಬಹುದು. ಅದರಲ್ಲೂ ಕರ್ನಾಟಕ ಸರ್ಕಾರದ ಅಕಾಡೆಮಿ, ಪ್ರಾಧಿಕಾರಗಳ ಪುಸ್ತಕ ಮಳಿಗೆ, ಪ್ರಮುಖ ಪ್ರಕಾಶನದ ಮಳಿಗೆಗಳು ಇರಲಿವೆ. ಸಮ್ಮೇಳನ ಸಮಯದಲ್ಲಿ ರಿಯಾಯಿತಿ ದರದಲ್ಲೂ ಪುಸ್ತಕಗಳು ಸಿಗಲಿವೆ

    ಇದನ್ನೂ ಓದಿರಿ: Mandya Food: ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಬನ್ನಿ, ರಾಗಿಮುದ್ದೆ, ಮೊಸಪ್ಪಿನ ಸಾರು, ಉಪ್ಸಾರು, ಹುರುಳಿಕಾಳು ಬಸ್ಸಾರು ಸವಿಯಿರಿ
  • ಮಂಡ್ಯದ ಸಾಹಿತ್ಯ ಸಮ್ಮೇಳನಕ್ಕೆ ಪ್ರಮುಖ ಸಾಹಿತಿಗಳು ಬರುತ್ತಿದ್ದಾರೆ. ಅದರಲ್ಲೂ ಹೊಸ ತಲೆಮಾರಿನ ಲೇಖಕರು, ಹಿರಿಯರು, ಪ್ರಸಿದ್ದ ಸಾಹಿತಿಗಳೂ ಆಗಮಿಸುತ್ತಿದ್ದಾರೆ. ಪ್ರಮುಖ ಗೋಷ್ಠಿಗಳಿದ್ದು ಅದರಲ್ಲಿ ಆಸಕ್ತಿ ಇರುವ ಗೋಷ್ಠಿಗಳಲ್ಲಿ ಭಾಗಿಯಾಗಬಹುದು. ನಿಮಗಿಷ್ಟವಾದ ಸಾಹಿತಿ ಜತೆ ಕೆಲ ಹೊತ್ತು ಒಡನಾಡಿ, ಅವರೊಂದಿಗೆ ಸೆಲ್ಫಿ, ಹಸ್ತಾಕ್ಷರವನ್ನು ಪಡೆದುಕೊಳ್ಳಬಹುದು. ಇದಕ್ಕೆ ಈ ಬಾರಿಯೂ ಸಾಕಷ್ಟು ಅವಕಾಶಗಳುಂಟು
  • ಮಂಡ್ಯ ಎಂದರೆ ಕಬ್ಬು, ಬೆಲ್ಲ, ಸಕ್ಕರೆಯ ಊರು. ಇಲ್ಲಿ ಕಬ್ಬು ಪ್ರಮುಖ ಬೆಳೆ. ಇಲ್ಲಿ ಸಕ್ಕರೆ ಕಾರ್ಖಾನೆಗಳಿಗಿಂತ ಆಲೆಮನೆಗಳೇ ಜಾಸ್ತಿ. ಪ್ರತಿ ಊರದಲ್ಲೂ ಒಂದೊಂದು ಆಲೆ ಮನೆ ಇದ್ದೇ ಇರುತ್ತದೆ. ಆ ಬೆಲ್ಲದ ರುಚಿ, ಘಮಲು ಎಂಥವರನ್ನು ಖುಷಿಯಾಗಿಸುತ್ತದೆ. ಆಲದ ಮನೆಗಳಿಗೆ ಹೋಗಿ ಬೆಲ್ಲದ ಸವಿ ನೋಡಿ ಖರೀದಿ ಮಾಡಿಕೊಂಡು ಹೋಗಲು ಅವಕಾಶವೂ ಇದೆ. ಕಬ್ಬು ಬೆಲ್ಲವಾಗುವ ಕ್ರಮವನ್ನು ಹತ್ತಿರದಿಂದ ನೋಡಬಹುದು. ಮಂಡ್ಯ ನಗರದ ಸಮೀಪವೇ ಆಲೆಮನೆಗಳನ್ನು ನೋಡಲು ವ್ಯವಸ್ಥೆ ಮಾಡಿಕೊಳ್ಳಬಹುದು.
  • ಮಂಡ್ಯ ಜಿಲ್ಲೆಯಲ್ಲಿ ಪ್ರವಾಸಿ ತಾಣಗಳ ದೊಡ್ಡ ಪಟ್ಟಿಯೇ ಇದೆ. ಎಲ್ಲವನ್ನೂ ನೋಡಲು ಆಗುವುದಿಲ್ಲ. ಆದರೆ ಈವರೆಗೂ ನೋಡದ ಪ್ರವಾಸಿ ತಾಣವನ್ನು ನೋಡಿಕೊಂಡು ಬರಬಹುದು. ಅದರಲ್ಲೂ ಐತಿಹಾಸಿಕ ತಾಣಗಳು ಹೆಚ್ಚು ಇಷ್ಟವಾಗಬಹುದು. ಮಂಡ್ಯ ಕಾವೇರಿ ಹರಿಯುವ ಜಿಲ್ಲೆ, ಕಾವೇರಿ ತೀರದ ತಾಣಗಳೂ ಸಾಕಷ್ಟಿವೆ. ಕಾವೇರಿ ನದಿಯತ್ತಲೂ ಪ್ರವಾಸ ಹೋಗಬಹುದು.

    ಇದನ್ನೂ ಓದಿರಿ: Mandya Sahitya Sammelana: ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನ,30 ಕೋಟಿ ರೂ. ಖರ್ಚು ಮೀರದಂತೆ ಪಾರದರ್ಶಕ ವ್ಯವಸ್ಥೆಗೆ ಸೂಚನೆ

ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ದಿನ ಏನೇನು ಗೋಷ್ಠಿಗಳಿವೆ

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಡಿಸೆಂಬರ್ 20, 21, 22 ರಂದು ಒಟ್ಟು 3 ದಿನಗಳ ಕಾಲ ನಡೆಯಲಿದ್ದು, ಡಿಸೆಂಬರ್ 20 ರಂದು ಸಮಾನಂತರ ವೇದಿಕೆ - 1ರಲ್ಲಿ ನಡೆಯುವ ಕಾರ್ಯಕ್ರಮಗಳ ವಿವರ ಇಂತಿದೆ :

ಮಧ್ಯಾಹ್ನ 2 ರಿಂದ 2.30 ರವರೆಗೆ ಡಿಸೆಂಬರ್ 20 ರಂದು ಸಮಾನಂತರ ವೇದಿಕೆ - 1ರಲ್ಲಿ ಕನ್ನಡ ಪುಸ್ತಕೋದ್ಯಮದ ಸವಾಲುಗಳು ಮತ್ತು ಪರಿಹಾರಗಳು ವಿಷಯದ ಬಗ್ಗೆ ಗೋಷ್ಠಿ - 1 ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗದಗ ವಿದ್ಯಾನಿಧಿ ಪ್ರಕಾಶನ ಜಯದೇವ ಮೆಣಸಗಿ ಅವರು ವಹಿಸಲಿದ್ದು, ಸ್ವಪ್ನ ಬುಕ್ ಹೌಸ್ ದೊಡ್ಡೇಗೌಡ ಅವರು ಆಶಯ ನುಡಿ ನುಡಿಯಲಿದ್ದಾರೆ.

ಕೆ.ಎಲ್. ರಾಜಶೇಖರ್ ಅವರು ಮುದ್ರಣ ಕ್ಷೇತ್ರದ ತಲ್ಲಣಗಳು ವಿಷಯದ ಬಗ್ಗೆ, ಅಕ್ಷತಾ ಹುಂಚದಕಟ್ಟೆ -ಕನ್ನಡ ಪುಸ್ತಕಗಳು ಮತ್ತು ಓದುಗ ಬಳಗ, ವಸುಧೇಂದ್ರ - ಭವಿಷ್ಯದ ಪುಸ್ತಕೋದ್ಯಮ, ಅಶೋಕ ಕುಮಾರ್ - ಪ್ರಕಾಶಕರು ಹಾಗೂ ಮುದ್ರಕರು : ಸವಾಲುಗಳು ಮತ್ತು ಪರಿಹಾರಗಳು ವಿಷಯದ ಬಗ್ಗೆ ವಿಷಯ ಮಂಡನೆ ಮಾಡಲಿದ್ದಾರೆ.

ಗೋಷ್ಠಿ - 2 : ಮಧ್ಯಾಹ್ನ 3. 30 ರಿಂದ 6 ಗಂಟೆಯವರೆಗೆ ಸಂಕೀರ್ಣ ನೆಲೆಗಳು - 1 ವಿಷಯದ ಬಗ್ಗೆ ಗೋಷ್ಠಿ - 2 ನಡೆಯಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಿಂತಕರು, ಹಿರಿಯ ಲೇಖಕರು ಡಾ ಎಲ್ ಹನುಮಂತಯ್ಯ ಅವರು ವಹಿಸಲಿದ್ದು, ಪ್ರಾಧ್ಯಾಪಕರು ಡಾ ಜೆ ಕರಿಯಪ್ಪ ಮಾಳಿಗೆ ಅವರು ಆಶಯ ನುಡಿ ನುಡಿಯಲಿದ್ದಾರೆ.

ಅನುವಾದ ಸಾಹಿತ್ಯ ವಿಷಯದ ಬಗ್ಗೆ - ಕೆ ಮಲರ್ ವಿಳಿ ಅವರು, ಹಾಸ್ಯ ಸಾಹಿತ್ಯ - ವೈ.ವಿ. ಗುಂಡೂರಾವ್, ಸಾಹಿತ್ಯ ವಿಮರ್ಶೆಯ ದಿಕ್ಕು - ಡಾ. ಶಿವಾನಂದ ವಿರಕ್ತಮಠ, ವೈದ್ಯ ಸಾಹಿತ್ಯ - ಡಾ. ಎ.ಆರ್. ಸೋಮಶೇಖರ ಅವರು ವಿಷಯ ಮಂಡನೆ ಮಾಡಲಿದ್ದಾರೆ.

ಸಂಜೆ 7.30 ಗಂಟೆಯ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ